ಜಿಎಸ್ಟಿ ಕಾನೂನು ಆಗಮಿಸಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ, ಮತ್ತು ಇದರೊಂದಿಗೆ ನಿಮ್ಮಲ್ಲಿಯೂ ಜಿಎಸ್ಟಿ ಕುರಿತು ಸಾಕಷ್ಟು ಪ್ರಶ್ನೆಗಳು ಉಳಿದಿರಬಹುದು “ನನ್ನ ವ್ಯವಸ್ಥೆಯಲ್ಲಿ ಏನು ಬದಲಾವಣೆಯಾಗಬಹುದು, ಅತ್ಯುತ್ತಮವಾಗಿ ಜಿಎಸ್ಟಿ ತಯಾರಿಸಲು ನನ್ನ ತೆರಿಗೆ ಸಲಹೆಗಾರರಿಂದ ಅಥವಾ ವ್ಯವಹಾರ ಪ್ರಕ್ರಿಯೆಗಳಿಂದ ಏನು ಬದಲಾವಣೆಯಾಗಬಹುದು? ಎನ್ನುವ ಪ್ರಶ್ನೆ ನಿಮ್ಮ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಬಹುದು.

ಮುಂಬರುವ ಹೊಸ ಕಾನೂನಿನಿಂದ ಪ್ರಮುಖ ನಿರೀಕ್ಷೆಗಳು ಮತ್ತು ಹೊಸ ನೋವುಗಳನ್ನು ಗುರುತಿಸುವ ಪ್ರಯತ್ನವನ್ನು ಈ ಲೇಖನ ಮಾಡುತ್ತಿದೆ. ಜಿಎಸ್ಟಿ ಕರಡು ಮಸೂದೆಯ ಕುರಿತು ನಾವು ಗಮನ ಹರಿಸಿ ಕಂಡುಕೊಂಡ ಅಂಶಗಳ ಆಧರಿತವಾಗಿ ಇಲ್ಲಿ ವಿಷಯ ಮಂಡಿಸಲಾಗಿದ್ದು, ಮಾರುಕಟ್ಟೆಗೆ ಸರಳವಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಾವು ಗುರುತಿಸಿದ ವಿಷಯಗಳು ಹೊಸ ವ್ಯವಹಾರಗಳ ವರ್ತನೆ ಕುರಿತು ಮಾಹಿತಿ ಸಂಗ್ರಹಿಸಲು ಸಾಧ್ಯವಾಯಿತು.

ನೀವು ಈಗಾಗಲೇ ತಿಳಿದಿರುವಂತೆ, ಜಿಎಸ್ಟಿಯು ಸರಕುಪಟ್ಟಿ ಹೋಲಿಕೆ ಪರಿಕಲ್ಪನೆಯ ಆಧರಿತವಾಗಿದೆ ಮತ್ತು ಈ ಮುಂದಿನ ವಿಷಯಗಳಲ್ಲಿ ಇದು ಮೂಲಭೂತವಾಗಿ ನಿಮ್ಮ ವ್ಯವಹಾರಗಳ ವರ್ತನೆಯನ್ನು ಬದಲಾವಣೆ ಮಾಡಲಿದೆ:

1. ನೀವು “ಸರಕುಪಟ್ಟಿ ಲಗ್ಗತ್ತಿಸುವ ಪಾವತಿ ವ್ಯವಸ್ಥೆಗೆ’’ ಸಾಗಲಿದ್ದೀರಿ ಎಂದು ನಾವು ನಂಬಿದ್ದೇವೆ.

ಜಿಎಸ್ಟಿ ಶಕೆಗಿಂತ ಮೊದಲು; ಸರಕುಪಟ್ಟಿ ಸ್ವೀಕರಿಸಿದ ನಂತರ ವಹಿವಾಟು ನಡೆಸಲು ಮತ್ತು ನಿಮ್ಮ ಪೂರೈಕೆದಾರರಿಗೆ ನಂತರ ಪಾವತಿ ಮಾಡಲು ಅವಕಾಶವಿತ್ತು. ನಿಮ್ಮ ತೆರಿಗೆ ಆದಾಯ ತೆರಿಗೆಸಲ್ಲಿಕೆಗಿಂತ ಮೊದಲು ಸರಕುಪಟ್ಟಿಯಲ್ಲಿ ತೆರಿಗೆ ಪಾವತಿದೊರಕಲು ಸಾಧ್ಯವಿತ್ತು.

ಈಗಿನ ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ಸರಕುಪಟ್ಟಿ ಹೋಲಿಕೆ ಮುಗಿದ ಬಳಿಕವೇ ತೆರಿಗೆ ಪಾವತಿಲಭಿಸುವ ಖಾತ್ರಿ ದೊರಕುತ್ತದೆ. ತೆರಿಗೆ ಪಾವತಿನಿರಾಕರಿಸಲ್ಪಡುತ್ತದೆ ಅಥವಾ ಅದರಲ್ಲಿ ನೀವು ತಪ್ಪು ಮಾಡದೆ ಮೌಲ್ಯ ನಮೋದಿಸುವಿರಿ ಎಂದು ಎಷ್ಟು ಖಚಿತವಾಗಿ ನೀವು ಹೇಳಬಲ್ಲಿರಿ ಎಂಬ ಪ್ರಶ್ನೆಯನ್ನು ನಿಮ್ಮಲ್ಲಿಯೇ ನೀವು ಕೇಳಿಕೊಳ್ಳಿರಿ.
ಹೀಗಾಗಿ, ಈ ಪ್ರಕ್ರಿಯೆ ಹೀಗೆ ಹೋಗುತ್ತದೆ ಎಂದು ನಾವು ಭಾವಿಸುತ್ತೇವೆ. ಮೊದಲನೆಯದಾಗಿ ನಿಮ್ಮ ಪೂರೈಕೆದಾರರು ಸರಕುಪಟ್ಟಿಯನ್ನು ಜಿಎಸ್ಟಿ ವ್ಯವಸ್ಥೆಗೆ ಲಗ್ಗತ್ತಿಸುತ್ತಾರೆ. ನಂತರ, ಅವರು ಲಗ್ಗತ್ತಿಸಿರುವ ಮಾಡಿರುವ ಸರಕುಪಟ್ಟಿಯು ಸಮರ್ಪಕವಾಗಿದೆಯೇ ಎಂದು ಮತ್ತು ನಿಮ್ಮ ದಾಖಲೆಗಳ ಹೋಲಿಕೆ ಮಾಡುವಿರಿ(ಆ ಸರಕು ಪಟ್ಟಿ ನಿಮಗೆ ದೊರಕಿದ ತರುವಾಯ). ಇದನ್ನು ದೃಢೀಕರಿಸಿದ ಬಳಿಕವೇ ನೀವು ನಿಮ್ಮ ಪೂರೈಕೆದಾರರಿಗೆ ಹಣ ಪಾವತಿಸುವಿರಿ. ಈ ಹಾದಿಯಲ್ಲಿ ಕೆಲವು ಪೂರೈಕೆದಾರರು ಕೆಲಸ ಆರಂಭಿಸಲಿದ್ದಾರೆ, ಮುಂದೆ ಇದು ನಿಮ್ಮೆಲ್ಲ ಪೂರೈಕೆದಾರರಿಗೆ ಸಾಮಾನ್ಯ ಪ್ರಕ್ರಿಯೆಯಾಗಲಿದೆ.
ನಿಮ್ಮ ಗ್ರಾಹಕರು ಸಹ ನಿಮಗೆ ಹಣ ಪಾವತಿಸುವ ಮೊದಲು ನೀವು ಎಲ್ಲಾ ಸಂಬಂಧಪಟ್ಟ ದಾಖಲೆಗಳನ್ನು ಲಗ್ಗತ್ತಿಸ ಬಯಸುತ್ತಾರೆ. ಇದರಿಂದ “ಸರಕುಪಟ್ಟಿ ಲಗ್ಗತ್ತಿಸಿದರೆ ಮಾತ್ರ ಪಾವತಿ’’ ಎನ್ನುವುದು ಸಾಮಾನ್ಯ ಪ್ರಕ್ರಿಯೆಯಾಗಲಿದೆ.

'Payment on Invoice Upload’ will become a common phenomenon under GST.Click To Tweet
2. ನೀವು ನಿಯಮಿತವಾಗಿ ಸರಕಾರದ ತೆರಿಗೆ ವ್ಯವಸ್ಥೆ ಜೊತೆ ಸಂವಹನ ನಡೆಸಲಿದ್ದೀರಿ.

ಜಿಎಸ್ಟಿ ಶಕೆ ಆರಂಭಕ್ಕೆ ಮೊದಲು ಸರಕಾರದ ತೆರಿಗೆ ವ್ಯವಸ್ಥೆ ಜೊತೆ ತಿಂಗಳಿಗೆ ಒಂದು ಬಾರಿ ಅಥವಾ ತ್ರೈಮಾಸಿಕದಲ್ಲಿ ಒಮ್ಮೆ ಹೆಚ್ಚಿನ ವ್ಯವಹಾರಗಳು ಸಂವಹನ ನಡೆಸುತ್ತಿದ್ದವು.

ಆದರೆ “ಸರಕುಪಟ್ಟಿ ಲಗ್ಗತ್ತಿಸಿದ ಬಳಿಕ ಪಾವತಿ’’ಯಿಂದಾಗಿ ನೀವು ಜಿಎಸ್ಟಿಯಲ್ಲಿ ಈ ಹಿಂದಿನ ಪ್ರಕ್ರಿಯೆಗಿಂತ ಹಲವು ಬಾರಿ ಪರಸ್ಪರ ಪಾಲ್ಗೊಳ್ಳುವಿಕೆ ಮಾಡಬೇಕಾಗುತ್ತದೆ.
ನೀವು ಸರಕುಪಟ್ಟಿ ಲಗ್ಗತ್ತಿಸುವುದರಿಂದ ಅಥವಾ ನಿಮ್ಮ ಸರಕು ಮತ್ತು ಸೇವಾ ವೃತ್ತಿಪರರು(ಜಿಎಸ್ಟಿಪಿ) ಅಥವಾ ನೀವಿಬ್ಬರು ಸರಕುಪಟ್ಟಿ ಲಗ್ಗತ್ತಿಸುವುದರಿಂದ ಆರಂಭವಾಗುತ್ತದೆ. ಮತ್ತು ನೀವಿಬ್ಬರೂ ಲಗ್ಗತ್ತಿಸುವ ಸಮಯದಲ್ಲಿ, ಒದಗಿಸುವ ಮಾಹಿತಿಯು ಯಾವುದೇ ಗೊಂದಲಕ್ಕೆ ಎಡೆ ಮಾಡದಂತೆ ಹೆಚ್ಚು ಸಮರ್ಪಕವಾಗಿರಬೇಕು.
ಇದರೊಂದಿಗೆ ನೀವು ನಿಮ್ಮ ಖರೀದಿಗೆ ಸರಕುಪಟ್ಟಿಯನ್ನು ಸಮ್ಮತಿಸುವ ಕಾರ್ಯವನ್ನೂ ಮಾಡುತ್ತಿರಬೇಕಾಗುತ್ತದೆ ಮತ್ತು ನಿಮ್ಮ ಪೂರೈಕೆದಾರರಿಗೆ ಪಾವತಿಸುವ ಮೊದಲು ನೀವು ಈ ಕಾರ್ಯ ಮಾಡಬೇಕಾಗುತ್ತದೆ. ಇದರಿಂದಾಗಿ, ನೀವು ಸರಕಾರದ ತೆರಿಗೆ ವ್ಯವಸ್ಥೆ ಜೊತೆಗೆ ಆಗಾಗ ತೊಡಗಿಸುತ್ತಿರಬೇಕಾಗುತ್ತದೆ.

Prepare to engage more frequently with the Government Tax System under GST.Click To Tweet
3. ಕೊನೆಯ ದಿನಾಂಕದಲ್ಲಿ ನಿಮಗೆ ಅತ್ಯಂತ ಅಧಿಕ ಆತಂಕ ಕಾಡಬಹುದು.

ಜಿಎಸ್ಟಿ ಪೂರ್ವ ತೆರಿಗೆ ಶಕೆಯಲ್ಲಿ, ತೆರಿಗೆಯೊಂದಕ್ಕೆ ಕೇವಲ ಒಂದು ಕೊನೆಯ ದಿನಾಂಕ ಮಾತ್ರ ಇತ್ತು. ನೀವು ನಿಮ್ಮ ಜಿಎಸ್ಟಿಪಿಗೆ ಮಾಹಿತಿ ನೀಡಿದರೆ ಅವರು ಆದಾಯ ತೆರಿಗೆಭರ್ತಿ ಮಾಡಿ ಲಗ್ಗತ್ತಿಸುತ್ತಾರೆ, ತಡವಾದ ದಿನಾಂಕದ ತೆರಿಗೆ ಪಾವತಿಸುತ್ತಾರೆ ಮತ್ತು ನಿಮಗೆ ಅಂಗೀಕಾರ ರಸೀದಿಯನ್ನು ತಲುಪಿಸುತ್ತಾರೆ.

ಆದರೆ, ಈಗ ಆದಾಯ ತೆರಿಗೆ ಲಗ್ಗತ್ತಿಸುವುದು, ಹೋಲಿಕೆ, ಮರೆತು ಹೋಗಿರುವುದರ ಅಪ್ಲೋಡ್ ಮತ್ತು ತೆರಿಗೆ ಪಾವತಿಗೆ 10ನೇ, 15ನೇ, 17ನೇ ಮತ್ತು 20ನೇ ದಿನಾಂಕವೆಂದು ಬೇರೆ ಬೇರೆ ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ. ನಿಮ್ಮ ಆದಾಯ ತೆರಿಗೆಯಶಸ್ವಿಯಾಗಿ ಸಲ್ಲಿಕೆಯಾಗಿದೆಯೇ ಅಥವಾ ಇಲ್ಲವೇ ಎನ್ನುವುದರ ಕುರಿತು ಈ ಎಲ್ಲಾ ಕೊನೆಯ ದಿನಾಂಕಗಳಲ್ಲಿ ನಿಮ್ಮ ಆತಂಕ ಹೆಚ್ಚಾಗಲಿದೆ.

ನಾವೆಲ್ಲರು ತಿಂಗಳಿಗೆ ನೂರಾರು, ಸಾವಿರಾರು ಅಥವಾ ಲಕ್ಷ ಲಕ್ಷ ಸರಕುಪಟ್ಟಿಯನ್ನು ಹೊಂದಿರುತ್ತೇವೆ ಮತ್ತು ಜಿಎಸ್ಟಿ ವ್ಯವಸ್ಥೆಯು ಒಟ್ಟಾಗಿ ತಿಂಗಳೊಂದರಲ್ಲಿ ಸ್ವೀಕರಿಸಿದ ಹಲವು ಕೋಟಿ ಸರಕುಪಟ್ಟಿಗಳನ್ನು ನಿರ್ವಹಿಸುವ ಪ್ರಕ್ರಿಯೆ ಮಾಡಬೇಕಾಗುತ್ತದೆ. ಇದರಿಂದ ಈ ವ್ಯವಸ್ಥೆಯು ಸಂಗ್ರಹ ಮಾಡಬೇಕು ಮತ್ತು ಮಾಹಿತಿ ಒದಗಿಸಬೇಕು, ಇದರಿಂದ ಈ ಪ್ರಕ್ರಿಯೆಗೆ, ಅತ್ಯಧಿಕ ಮೊತ್ತದ ಮಾಹಿತಿಯ ಕುರಿತು ಕ್ರಮಕೈಗೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ ಮತ್ತು ಜಿಎಸ್ಟಿ ನಿಯಮದ ಆಧಾರದಲ್ಲಿಯೇ ಯಶಸ್ವಿ ಅಥವಾ ವಿಫಲದ ಫಲಿತಾಂಶ ದೊರಕಬೇಕಿದೆ. ಇಂತಹ ಪರಿಹಾರವನ್ನು ವಿನ್ಯಾಸ ಮಾಡಬೇಕಿದ್ದರೆ ಎರಡು ಪ್ರಮುಖ ಪ್ರಕ್ರಿಯೆಗಳ ಅಗತ್ಯವಿದೆ; ತೆರಿಗೆ ಪಾವತಿದಾರರಿಂದ ಪಡೆಯುವ ಮಾಹಿತಿಗಳನ್ನು ಸಂಸ್ಕರಣೆ ಮೊದಲ ಹಂತವಾಗಿದೆ ಮತ್ತು ಸ್ವೀಕರಿಸಿದ ಮಾಹಿತಿಯ ಕುರಿತು (ಇದನ್ನು ಅಸಮಕಾಲಿಕ ನಡವಳಿಕೆ ಎಂದೂ ಕರೆಯುತ್ತಾರೆ) ಫಲಿತಾಂಶವನ್ನೂ ನೀಡುವುದು ಎರಡನೆಯ ಹಂತವಾಗಿದೆ.

ಇದನ್ನು ಬ್ಯಾಂಕ್ ಖಾತೆಗೆ ಚೆಕ್ ಜಮಾ ಮಾಡುವುದಕ್ಕೆ ಹೋಲಿಸಬಹುದು ಮತ್ತು ಹಣ ಪಾವತಿ ಆಗಿದೆ ಎಂಬ ಸಂದೇಶ ನಮಗೆ ದೊರಕುತ್ತದೆ, ಆದರೆ, ಸಬ್ಜೆಕ್ಟ್ ಟು ಕ್ಲಿಯರಿಂಗ್ ಎಂದು ಅದರಲ್ಲಿ ನಮೋದಿಸಲಾಗಿರುತ್ತದೆ. ಕ್ಲಿಯರೆನ್ಸ್ ಎನ್ನುವುದು ಯಶಸ್ವಿಯಾಗಿದೆಯೇ ಇಲ್ಲವೇ ಎನ್ನುವುದು ನಂತರ ನಿಮಗೆ ತಿಳಿಯುತ್ತದೆ.
ಅಸಮಕಾಲಿಕ ವರ್ತನೆ ಎಂಬುದರ ಅರ್ಥವೇನೆಂದರೆ, ಜಿಎಸ್ಟಿ ವ್ಯವಸ್ಥೆಗೆ ಮಾಹಿತಿಯನ್ನು ಅಪ್ಲೋಡ್ ಮಾಡಿದ ತಕ್ಷಣ ನಿಮ್ಮ ಅಣುಸರಣೆ ಚಟುವಟಿಕೆ ಮುಗಿಯುವುದಿಲ್ಲ. 4 ಕೊನೆಯ ದಿನಾಂಕದಂದು ಸಂಸ್ಕರಣೆ ಪ್ರಕ್ರಿಯೆಯು ದೀರ್ಘಾವಧಿಯಾಗಬಹುದು ಮತ್ತು ಇದರಿಂದ ನಿಮ್ಮ ಆತಂಕ ಹೆಚ್ಚಬಹುದು.

ಸಲ್ಲಿಕೆ ಯಶಸ್ವಿಯಾಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯ ನಿರೀಕ್ಷೆಯಲ್ಲಿ ನೀವು ಇರಬೇಕು ಮತ್ತು ನೀವು ನಿಮ್ಮ ಕಂಪ್ಯೂಟರ್ ಮುಕ್ತಾಯ ಮಾಡಿದ ನಂತರವೂ ಈ ಸಂದೇಶ ಬರಬಹುದು. ಒಟ್ಟಾರೆ ಇದು ನಿಮ್ಮ ಆತಂಕ ಮಟ್ಟವನ್ನು ಹೆಚ್ಚಿಸುವುದು ಗ್ಯಾರಂಟಿ.

4. ಹಲವು ಸ್ಥಳಗಳಲ್ಲಿ ಎಡೆಬಿಡದೆ ಕಾರ್ಯನಿರ್ವಹಿಸುವ ವ್ಯವಸ್ಥೆಯೊಂದನ್ನು ನೀವು ಹೊಂದಿರಬೇಕಾಗುತ್ತದೆ.

ಸಾಮಾನ್ಯವಾಗಿ ಬಹುತೇಕ ವ್ಯವಹಾರಗಳು ಹಲವು ಸ್ಥಳಗಳಿಂದ ಕಾರ್ಯನಿರ್ವಹಿಸುತ್ತಿವೆ. ಇದು ಕನಿಷ್ಠ 2 ಸ್ಥಳಗಳಲ್ಲಿ ಆರಂಭವಾಗುತ್ತದೆ; ಅಂದರೆ, ನಿಮ್ಮ ವ್ಯವಹಾರದ ಸ್ಥಳ ಮತ್ತು ನಿಮ್ಮ ಜಿಎಸ್ಟಿಪಿ ಸ್ಥಳ. ಎಲ್ಲಾದರೂ ನಿಮ್ಮ ವ್ಯವಹಾರವು ಹಲವು ಸ್ಥಳಗಳಿಂದ ಕಾರ್ಯನಿರ್ವಹಿಸುತ್ತಿದ್ದರೆ, ವ್ಯವಹಾರದ ಸಂಕೀರ್ಣತೆ ಮತ್ತಷ್ಟು ಹೆಚ್ಚಾಗಲಿದೆ.

ನೀವು ನಿಮ್ಮ ಪ್ರತಿಯೊಂದು ವ್ಯವಹಾರಕ್ಕೂ ಕೆಲವು ಸರಕುಪಟ್ಟಿಗಳನ್ನು ಲಗ್ಗತ್ತಿಸಬೇಕು. ಮತ್ತು ಸರಕುಪಟ್ಟಿ ಹೋಲಿಕೆ ಮಾಡಬೇಕೆಂದು ನೀವು ನಿರೀಕ್ಷೆಯಲ್ಲಿರುತ್ತೀರಿ. ನಿಮ್ಮ ಜಿಎಸ್ಟಿಎನ್ ನಿಮ್ಮಿಂದ ಮಾಹಿತಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ನೀವು ಈಗಾಗಲೇ ಲಗ್ಗತ್ತಿಸಿರುವ ಸರಕುಪಟ್ಟಿಯಿಂದಲೂ ಮಾಹಿತಿ ಪಡೆಯುತ್ತಾರೆ. ಈ ರೀತಿ ಸಂಗ್ರಹಿಸಿದ ಮಾಹಿತಿ ಆಧಾರದಲ್ಲಿ ನಿಮ್ಮ ಜಿಎಸ್ಟಿಪಿ ಅವರು ಆದಾಯ ತೆರಿಗೆಸಲ್ಲಿಕೆ ಮಾಡುತ್ತಾರೆ.
ಇದು ನೋಡಲು ಕೃತಕಯಂತ್ರ ತರಹ ಕೆಲಸ ಮಾಡುತ್ತದೆ, ಹಲವು ಸ್ಥಳಗಳಿಂದ ಏಕಕಾಲಿಕವಾಗಿ ಇಂತಹ ಕಾರ್ಯ ನಿರ್ವಹಿಸುವಾಗ ನೀವು ಅತ್ಯಂತ ಸಮಗ್ರತೆ ಮತ್ತು ಖಚಿತತೆಯಿಂದ ಅನುಸರಣೆಯ ಮಾಹಿತಿಗಳನ್ನು ದಾಖಲಿಸಬೇಕಾಗುತ್ತದೆ. ಹೀಗಾಗಿ, ಹಲವು ವ್ಯವಸ್ಥೆಗಳ ಮೂಲಕ ನಿಮ್ಮ ಪುಸ್ತಕಗಳು ಮತ್ತು ಅನುಸರಣೆ ಮ್ಯಾಚ್ ಆಗುವುದನ್ನು ಪರಿಶೀಲಿಸಲು ನಿಮ್ಮ ಸಾಮರ್ಥ್ಯ ಹೆಚ್ಚಿರಬೇಕು ಮತ್ತು ಇದು ನಿಜಕ್ಕೂ ಕಠಿಣವಾದ ಸಂಗತಿಯಾಗಿದೆ.

5. ಭರವಸೆಯಿಂದ ಆದಾಯ ತೆರಿಗೆಗೆ ಸಹಿ ಹಾಕಲು ನೀವು ಒಂದು ವ್ಯವಸ್ಥೆಯನ್ನು ಹೊಂದಬೇಕು.

ಆದಾಯ ತೆರಿಗೆಭರ್ತಿ ಮಾಡುವ ಕೊನೆಯ ಹಂತದಲ್ಲಿ ನೀವು ಸಾರಾಂಶವನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು (ಇದರಲ್ಲಿ ವೈಯಕ್ತಿಕ ವ್ಯವಹಾರಗಳ ವಿವರಗಳಿರುವುದಿಲ್ಲ) ಮತ್ತು ಆದಾಯ ತೆರಿಗೆಗೆ ಸಹಿ ಹಾಕಬೇಕು. ಸಹಿ ಹಾಕುವ ಮೊದಲು ಯಾವುದೂ ಬಾಕಿ ಉಳಿದಿಲ್ಲವೆಂದು ಖಚಿತಪಡಿಸಿಕೊಳ್ಳುವುದು ನಿಜಕ್ಕೂ ಕ್ರೌರ್ಯವಾಗಿದೆ ಮತ್ತು ನೀವು ಏನು ಸಲ್ಲಿಸಿರುವಿರೋ ಮತ್ತು ನಿಮ್ಮ ಜಿಎಸ್ಟಿಎನ್ ಏನು ಕಳುಹಿಸಿದ್ದರೋ ಅದರಲ್ಲಿ ಏನೂ ವ್ಯತ್ಯಾಸವಿರುವುದಿಲ್ಲ- ಇವೆಲ್ಲವೂ ಸವಾಲಿನ ಸಂಗತಿಗಳಾಗಿವೆ.
ನೀವು ತಿಳಿದಿರಬೇಕಾದ ಇನ್ನೊಂದು ಪ್ರಮುಖ ಸಂಗತಿಯೆಂದರೆ, ನಿಮ್ಮ ಪೂರೈಕೆದಾರರು ಮತ್ತು ನಿಮ್ಮ ಗ್ರಾಹಕರ ಬಗ್ಗೆಯೂ ನೀವು ಆದಾಯ ತೆರಿಗೆಭರ್ತಿ ಮಾಡುವಾಗ ಸಂಬಂಧಪಟ್ಟ ವಿಭಾಗಗಳಲ್ಲಿ ನಮೋದಿಸಬೇಕು. ಜಿಎಎಸ್ಟಿಎನ್ ವ್ಯವಸ್ಥೆಯು ಅಸಮಕಾಲಿಕವಾಗಿರುವುದರಿಂದ, ಸಂಕಲನ ಇನ್ನೂ ಪ್ರಕ್ರಿಯೆಯಲ್ಲಿರುತ್ತದೆ, ಹೀಗಾಗಿ ಸಾರಾಂಶದಲ್ಲಿ ಕೆಲವೊಂದು ಮಾಹಿತಿಗಳು ನಿಮಗೆ ಲಭ್ಯವಾಗುವುದಿಲ್ಲ.
ಆದಾಯ ತೆರಿಗೆಗೆ ಸಹಿ ಹಾಕಲು ನಿಮಗೆ ವಿಶ್ವಾಸ ಮೂಡಬೇಕಾದರೆ ನೀವು ಎಲ್ಲಾ ಮಾಹಿತಿಗಳನ್ನು ಒಟ್ಟಾಗಿ ಸಮನ್ವಯಗೊಳಿಸಬೇಕು.

6. ವ್ಯವಹಾರ ನಡೆಸಲು ಗಮನ ನೀಡಬೇಕಾದರೆ ನೀವು ಅನುಸರಣೆಯನ್ನು ಅನುಕೂಲಕರವಾಗಿರಿಸಬೇಕು.

ಈ ನೋವಿನ ವಿಷಯವೂ ನಿಮಗೆ ನಿಮ್ಮ ವ್ಯವಹಾರದ ಕುರಿತು ಸಾಕಷ್ಟು ಗೊಂದಲ ಮೂಡಿಸಬಹುದು. ನಿಜವಾಗಿಯೂ, ಎಲ್ಲಾದರೂ ಅತ್ಯುತ್ತಮವಾಗಿ ನಿರ್ವಹಣೆ ಮಾಡದೆ ಇದ್ದರೆ, ಇದೇ ನಿಮ್ಮನ್ನು ಸಾಕಷ್ಟು ಸಮಯ ಬಿಝಿಯಾಗಿಸಬಹುದು ಮತ್ತು ಇದು ನಿಮಗೆ ನಿಮ್ಮ ವ್ಯವಹಾರವನ್ನು ನಡೆಸಲೂ ಅಡ್ಡಿಪಡಿಸಬಹುದು.
ಜಿಎಸ್ಟಿ ವ್ಯವಸ್ಥೆಗೆ ಸಂಬಂಧಪಟ್ಟಂತೆ ಬಾಕಿ ಉಳಿದ ಎಲ್ಲಾ ಚಟುವಟಿಕೆಗಳನ್ನು ಪೂರೈಸಲು “ಒಂದು ಸರಳ ಪಾರದರ್ಶಕ ವ್ಯವಸ್ಥೆ’’ ಇದ್ದಿದ್ದರೆ ಎಂಬ ಬಯಕೆ ನಿಮಗೆ ಉಂಟಾಗಬಹುದು. ಮತ್ತು ಈ ಅನುಸರಣೆಯನ್ನು ಅನುಕೂಲಕರವಾಗಿ ಮಾಡಿಸುವುದು ಟ್ಯಾಲೀಯ ಉದ್ದೇಶವಾಗಿದೆ, ಅದರಿಂದ ನೀವು ನಿಮ್ಮ ವ್ಯವಹಾರದ ಕುರಿತು ಹೆಚ್ಚು ಗಮನ ನೀಡಬಹುದು.
ಜಿಎಸ್ಟಿಯಿಂದ ವ್ಯವಹಾರದ ವರ್ತನೆಯಲ್ಲಿ ಬದಲಾಗುವ ಈ ಆರು ಬದಲಾವಣೆಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿರಿ.
ನಮ್ಮ ಮುಂದಿನ ಲೇಖನದಲ್ಲಿ ನಿಮ್ಮ ವ್ಯವಹಾರದಲ್ಲಿ ಹೆಚ್ಚು ಸಂಕೀರ್ಣತೆ ತರುವ ಸರಕು ಮತ್ತು ಸೇವಾ ವೃತ್ತಿಪರರ(ಜಿಎಸ್ಟಿಪಿ) ಪಾತ್ರದ ಕುರಿತು ಮಾಹಿತಿ ನೀಡಲಿದ್ದೇವೆ. ಇದರ ನಂತರ ನಿಮ್ಮ ಆರನೇ ಬಿಡುಗಡೆಯಾಗಿರುವ ಟ್ಯಾಲಿ ಇಆರ್ ಪಿ 9 ಆರು ವ್ಯವಹಾರದ ಬದಲಾವಣೆಯನ್ನು ನಿಮಗೆ ಸರಳವಾಗಿಸಲಿದೆ ಎಂಬ ಮಾಹಿತಿಯನ್ನು ನೀಡಲಿದೆ.
ಜಿಎಸ್ಟಿ ಕಾನೂನು ಮತ್ತು ನಿಮ್ಮ ವ್ಯವಹಾರದ ಮೇಲೆ ಅದರ ಪರಿಣಾಮದ ಕುರಿತು ತಿಳಿದುಕೊಳ್ಳಲು ಮತ್ತು ನಮ್ಮ ಉತ್ಪನ್ನಗಳ ಕುರಿತು ಮಾಹಿತಿ ಪಡೆದುಕೊಳ್ಳಲು ನಮ್ಮ ಲೇಖನಗಳಿಗೆ ಚಂದಾದಾರರಾಗಿರಿ

Are you GST ready yet?

Get ready for GST with Tally.ERP 9 Release 6

111,117 total views, 304 views today

Avatar

Author: Rakesh Agarwal

Head of Product Management