ನಾವು ಜಿಎಸ್ಟಿ ತೆರಿಗೆ ಪದ್ಧತಿ ಶಕೆಗೆ ಪ್ರವೇಶಿಸಿದ್ದೇವೆ ಮತ್ತು ಈ ಕಾನೂನಿನ ಹಲವು ಅಂಶಗಳನ್ನು ನಾವು ಕಲಿಯಬೇಕಿದೆ ಮತ್ತು ಅರ್ಥಮಾಡಿಕೊಳ್ಳಬೇಕಿದೆ. ಅಂತಹ ಹಲವು ಅಂಶಗಳಲ್ಲಿ ಜಿಎಸ್ಟಿಯಲ್ಲಿ “ಹಿಮ್ಮುಖ ಶುಲ್ಕ’’ವೂ ಒಂದಾಗಿದೆ ಮತ್ತು ಇದನ್ನು ಜಿಎಸ್ಟಿ ತಂತ್ರಾಂಶದಲ್ಲಿ ನಿರ್ವಹಿಸಬಹುದಾಗಿದೆ.

ನೋಂದಾಯಿಸಿದೆ ಇರುವ ವಿತರಕರಿಂದ ಆಂತರಿಕ ಪೂರೈಕೆಗೆ ಯಾವ ಹಿಮ್ಮುಖ ಶುಲ್ಕ ಅನ್ವಯವಾಗುತ್ತದೆ?

ಮೊದಲು, ನೋಂದಾಯಿಸದೆ ಇರುವ ವಿತರಕರು ಯಾರು ಎಂದು ಅರ್ಥಮಾಡಿಕೊಳ್ಳೋಣ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಅವರ ಆದಾಯ ಮಿತಿ ನಿಗದಿತ ಪ್ರಮಾಣದಲ್ಲಿ ಕಡಿಮೆ ಇರುವುದರಿಂದ ಜಿಎಸ್ಟಿ ಕಾನೂನು ನೋಂದಣಿ ಕಡ್ಡಾಯಗೊಳಿಸದೆ ಇರುವುದರಿಂದ ನೋಂದಾಯಿಸದೆ ಇರುವವರು “ನೋಂದಾಯಿಸದೆ ಇರುವ ವಿತರಕ’ರಾಗಿದ್ದಾರೆ.
ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ನೋಂದಾಯಿತ ವ್ಯಕ್ತಿಯು ನೋಂದಾಯಿಸದೆ ಇರುವ ವಿತರಕರಿಂದ ಖರೀದಿಸಿದರೆ ತೆರಿಗೆ ಪಾವತಿಸುವ ಬಾಧ್ಯತೆ ಹೊಂದಿರುತ್ತಾರೆ. ಈ ತೆರಿಗೆ ಬಾಧ್ಯತೆಯನ್ನು ಹಿಮ್ಮುಖ ಶುಲ್ಕ ಎಂದು ಕರೆಯಲಾಗುತ್ತದೆ ಮತ್ತು ನೋಂದಾಯಿತ ತೆರಿಗೆದಾರರು ನೇರವಾಗಿ ತೆರಿಗೆ ಇಲಾಖೆಗೆ ಪಾವತಿಸಬೇಕು.
ನೋಂದಾಯಿಸದೆ ಇರುವ ಪೂರೈಕೆದಾರರಿಂದ ನೋಂದಾಯಿಸಿರುವ ವಿತರಕರು ಖರೀದಿಸಿದರೆ ಅದಕ್ಕೆ ಆದಾನ ತೆರಿಗೆ ಪಾವತಿ ಕೇಳಲು ಅವಕಾಶವಿದೆ. ಆದರೆ, ಆದಾನ ತೆರಿಗೆ ಪಾವತಿ ಕೇಳುವ ಮೊದಲು ಕಡ್ಡಾಯವಾಗಿ ತೆರಿಗೆ ಪಾವತಿಸಬೇಕು.

ಇದನ್ನೂ ಓದಿ: ಹಿಮ್ಮುಖ ಶುಲ್ಕದ ಸರಕುಗಳ ಪೂರೈಕೆಯ ಸಮಯ ಯಾವುದು?

ಈ ಕೆಳಗೆ ಪಟ್ಟಿ ಮಾಡಲಾದ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಮತ್ತು ಟ್ಯಾಲಿಯ ಜಿಎಸ್ಟಿ ಸಿದ್ಧ ತಂತ್ರಾಂಶದಲ್ಲಿ ಹಿಮ್ಮುಖ ಶುಲ್ಕ ಸಂಬಂಧಪಟ್ಟ ವ್ಯವಹಾರಗಳು ಹೇಗೆ ಸರಳೀಕೃತಗೊಂಡಿದೆ ಎಂದು ತಿಳಿಯಲು ನಮ್ಮ ವಿಡಿಯೋ ನೋಡಿರಿ.

  1. ನೋಂದಾಯಿಸದೆ ಇರುವ ವಿತರಕರಿಂದ ಖರೀದಿ(ಆಂತರಿಕ ಪೂರೈಕೆಗಳು) ಹೇಗೆ ಮಾಡುವುದು?
  2. ಜಿಎಸ್ಟಿಆರ್ 2ರಲ್ಲಿ ನೋಂದಾಯಿಸದೆ ಇರುವ ವಿತರಕರಿಂದ ಖರೀದಿಸಿದರೆ ಆಗುವ ಪರಿಣಾಮಗಳು
  3. ಜಿಎಸ್ಟಿಆರ್ ನಲ್ಲಿ ತೋರಿಸಿದ ತೋರಿಸುವ ಬಾಧ್ಯತೆಗಳು. ಖಾತೆಯ ಪುಸ್ತಕ ಪಡೆಯಲ್ಲಿ ರಸೀದಿ ನಮೂದು ಮಾಡುವುದು ಹೇಗೆ?
  4. ನೋಂದಾಯಿಸದೆ ಇರುವ ವಿತರಕರಿಂದ ಖರೀದಿ ರದ್ದುಗೊಳಿಸುವುದನ್ನು ನಿರ್ವಹಿಸುವುದು ಹೇಗೆ?


ನೋಂದಾಯಿಸದೆ ಇರುವ ವಿತರಕರಿಂದ ಖರೀದಿ ನಿರ್ವಹಣೆ


ನೋಂದಾಯಿಸದೆ ಇರುವ ವಿತರಕರಿಂದ ಖರೀದಿಯ ರದ್ಧತಿಯ ನಿರ್ವಹಣೆ


ಟ್ಯಾಲಿ ಸಹಾಯಕ್ಕಾಗಿ ನೀವು ಹಂತ ಹಂತದ ಸೂಚನೆಗಳು ವಿಭಾಗಕ್ಕೂ ಭೇಟಿ ನೀಡಬಹುದು.

ನೋಂದಾಯಿಸದೆ ಇರುವ ವಿತರಕರಿಂದ ಮುಂಗಡ ಪಾವತಿ ಮಾಡಿರುವುದನ್ನು ಹೇಗೆ ನಿರ್ವಹಿಸುವುದು ಎನ್ನುವುದನ್ನು ನೀವು ನಮ್ಮ ಮುಂದಿನ ವಿಡಿಯೋ ಲೇಖನದಲ್ಲಿ ನೋಡಬಹುದು.

ಟ್ಯಾಲಿಯ ಜಿಎಸ್ಟಿ ತಂತ್ರಾಂಶವನ್ನು ಮೇಲ್ದರ್ಜೆಗೆ ಏರಿಸುವುದು ಹೇಗೆ ಎಂದು ತಿಳಿಯಲು ಇಲ್ಲಿಗೆ ಭೇಟಿ ನೀಡಿಲ.

ಜಿಎಸ್ಟಿ ಸಿದ್ಧ ತಂತ್ರಾಂಶವನ್ನು ಆನ್ ಲೈನ್ ಮೂಲಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿರಿ.

Are you GST ready yet?

Get ready for GST with Tally.ERP 9 Release 6

159,877 total views, 10 views today

Avatar

Author: Shailesh Bhatt