ಸ್ಥಿರ ಆಸ್ತಿಯೆಂದರೆ ಕೊಂಡೊಯ್ಯಲಾಗದ ಸ್ವತ್ತಾಗಿದ್ದು, ಅದನ್ನು ಒಡೆಯದೆ ಅಥವಾ ಮಾರ್ಪಾಡು ಮಾಡದೆ ಬೇರೆ ಕಡೆಗೆ ಸಾಗಿಸಲು ಸಾಧ್ಯವಿಲ್ಲ. ಈ ಆಸ್ತಿಯನ್ನು ಭೂಮಿಗೆ ಜೋಡಿಸಲಾಗಿರುತ್ತದೆ. ಉದಾಹರಣೆ: ಭೂಮಿಯ ತುಂಡು ಅಥವಾ ಮನೆಯಾಗಿದೆ.

ಪ್ರಸಕ್ತ ತೆರಿಗೆ ಪದ್ಧತಿಯಲ್ಲ, ಕೊಂಡೊಯ್ಯಲಾಗದ ಸ್ವತ್ತಿನಲ್ಲಿ ತೆರಿಗೆ ವಿಧಿಸಬಹುದಾದ ಸೇವೆ ನೀಡಿದರೆ ಅದಕ್ಕೆ ಸೇವಾ ತೆರಿಗೆ ಪಾವತಿಸಬೇಕು. ಸೇವಾ ತೆರಿಗೆಯು ಕೇಂದ್ರದ ಚಂದಾ ತೆರಿಗೆಯಾಗಿದ್ದು, ರಾಜ್ಯದೊಳಗೆ ಅಥವಾ ಅಂತರ್ ರಾಜ್ಯದಲ್ಲಿ ನೀಡಿದ ಸೇವೆಗಳಿಗೆ ಅನ್ವಯಿಸುತ್ತದೆ.
ಜಿಎಸ್ಟಿ ಪದ್ಧತಿಯಲ್ಲಿ ಪೂರೈಕೆಗೆ ತೆರಿಗೆ ಅನ್ವಯಿಸುತ್ತದೆಯೇ ಎಂದು ತಿಳಿಯಲು ಪೂರೈಕೆಯು ರಾಜ್ಯದೊಳಗೆ ನಡೆದಿರುವುದೇ ಅಥವಾ ಅಂತರ್ ರಾಜ್ಯದೊಳಗೆ ನಡೆದಿರುವುದೇ ಎಂದು ನಿರ್ಧರಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಸೇವೆಯ ಪೂರೈಕೆಯ ಸ್ಥಳವನ್ನು ಖಚಿತವಾಗಿ ನಿರ್ಧರಿಸಲು ಇದರಿಂದ ಸಾಧ್ಯವಿದೆ.

ಕೊಂಡೊಯ್ಯಲಾಗದ ಆಸ್ಥಿ ಅಥವಾ ಸ್ಥಿರ ಸ್ವತ್ತಿಗೆ ಸಂಬಂಧಪಟ್ಟಂತೆ ಸೇವೆಯನ್ನು ಪೂರೈಕೆ ಮಾಡಿರುವ ಸಂದರ್ಭದಲ್ಲಿ ಪೂರೈಕೆಯ ಸ್ಥಳವನ್ನು ನಿರ್ಧರಿಸಲು ನಿರ್ದಿಷ್ಟ ನಿಯಮಗಳು ಇರುತ್ತವೆ. ಈ ನಿಯಮಗಳನ್ನು ಸೇವೆಯ ಪೂರೈಕೆಯ ಸ್ಥಳ ನಿರ್ಧರಿಸುವ ಪ್ರಧಾನ ನಿಯಮಗಳು ಲೇಖನದಲ್ಲಿ ತಿಳಿದುಕೊಳ್ಳಬಹುದು.
ಸ್ಥಿರ ಸ್ವತ್ತಿಗೆ ಸಂಬಂಧಪಟ್ಟಂತೆ ಯಾವ ಸ್ಥಳದಲ್ಲಿ ಸೇವೆಯನ್ನು ನೀಡಲಾಗಿದೆಯೋ, ಅದೇ ಕೊಂಡೊಯ್ಯಲಾಗದ ಸ್ವತ್ತು ಇರುವ ಅಥವಾ ಇರಲು ಉದ್ದೇಶಿಸಲು ಇರುವ ಸ್ಥಳವೇ ಸೇವೆಯ ಪೂರೈಕೆಯ ಸ್ಥಳವಾಗಿರುತ್ತದೆ.

ಸ್ಥಿರ ಸ್ವತ್ತಿಗೆ ಸಂಬಂಧಪಟ್ಟಂತೆ ಯಾವ ಸ್ಥಳದಲ್ಲಿ ಸೇವೆಯನ್ನು ನೀಡಲಾಗಿದೆಯೋ, ಅದೇ ಕೊಂಡೊಯ್ಯಲಾಗದ ಸ್ವತ್ತು ಇರುವ ಅಥವಾ ಇರಲು ಉದ್ದೇಶಿಸಲು ಇರುವ ಸ್ಥಳವೇ ಸೇವೆಯ ಪೂರೈಕೆಯ ಸ್ಥಳವಾಗಿರುತ್ತದೆ.

Place of supply of services provided in relation to an immovable property will be the location at which the immovable property is located or intended to be located.Click To Tweet

ಇಲ್ಲಿ ನಾಲ್ಕು ಸನ್ನಿವೇಶಗಳನ್ನು ಗುರುತಿಸಬಹುದು

1. ಸ್ಥಿರ ಸ್ವತ್ತಿಗೆ ಸಂಬಂಧಪಟ್ಟಂತೆ ನೇರವಾಗಿ ನೀಡಿರುವ ಸೇವೆ

ಆರ್ಕಿಟೆಕ್ಟ್, ಒಳಾಂಗಣ ವಿನ್ಯಾಸಕರು, ಸಮೀಕ್ಷೆದಾರರು, ಎಂಜಿನಿಯರುಗಳು ಇತ್ಯಾದಿ ನೇರವಾಗಿ ಆಸ್ತಿಗೆ ಸೇವೆ ನೀಡಿರುವವರು.

ಉದಾಹರಣೆಗೆ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನೋಂದಾಯಿಸಿರುವ ರಾಜ್ ಹೋಟೆಲ್ಸ್, ಉತ್ತರಾಖಂಡದ ಡೆಹಡ್ರೂನ್ ನಲ್ಲಿ ಹೊಸ ಹೋಟೆಲ್ ಅನ್ನು ನಿರ್ಮಿಸುತ್ತದೆ. ಈ ಹೋಟೆಲಿಗೆ ಉತ್ತರಾಖಂಡದ ಡೆಹಾಡ್ರೂನ್ ನಲ್ಲಿ ನೋಂದಾಯಿಸಿರುವ ರವಿ ಇಂಟಿರೀಯರ್ಸ್ ಒಳಾಂಗಣ ವಿನ್ಯಾಸವನ್ನು ಮಾಡಿದೆ.

ಒಳಾಂಗಣ ವಿನ್ಯಾಸ ಸೇವೆಯ ಪೂರೈಕೆಗಾಗಿ,

ಪೂರೈಕೆದಾರರ ಸ್ಥಳ: ಉತ್ತರಖಂಡಾದ ಡೆಹಡ್ರೂನ್.
ಪೂರೈಕೆಯ ಸ್ಥಳ: ಸ್ವೀಕೃತಿದಾರರ ನೋಂದಾಯಿತ ವ್ಯವಹಾರವಾದ ರಾಜ್ ಹೋಟೆಲ್ಸ್ ಹಿಮಾಚಲದ ಶಿಮ್ಲಾದಲ್ಲಿ ನೋಂದಾಯಿಸಿದ್ದರೂ, ಪೂರೈಕೆಯ ಸ್ಥಳವು ಉತ್ತರಾಖಂಡದ ಡೆಹಡ್ರೂನ್ ಆಗಿರುತ್ತದೆ.
ಇದು ರಾಜ್ಯದೊಳಗಿನ ಪೂರೈಕೆಯಾಗಿರುವುದರಿಂದ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ಅನ್ವಯಿಸುತ್ತದೆ.
Place of Supply of Services_9

2. ಸ್ಥಿರ ಸ್ವತ್ತಿನಲ್ಲಿ ಉಳಿಯುವಿಕೆ

ಹೋಟೆಲ್, ಐಎನ್ಎನ್, ಗೆಸ್ಟ್ ಹೌಸ್, ಹೋಂ ಸ್ಟೇ, ಕ್ಲಬ್, ಕ್ಯಾಂಪ್ ಸೈಟ್, ಹೌಸ್ ಬೋಟ್ ಇತ್ಯಾದಿಗಳಲ್ಲಿ ಉಳಿಯುವ ವ್ಯವಸ್ಥೆ ಮಾಡಿರುವುದು ಇದರಲ್ಲಿ ಸೇರಿದೆ.

ಉದಾಹರಣೆಗೆ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ರಾಜ್ ಹೋಟೆಲ್ಸ್, ಕಚೇರಿ ನಿಮಿತ್ತ ಸೆಮಿನಾರ್ ಗಾಗಿ ರಾಜಸ್ಥಾನದ ಜೈಪುರದ ಶ್ರೀಯುತ ತಾರೀಕ್ ಅವರಿಗೆ ಲಾಡ್ಜಿಂಗ್ ವ್ಯವಸ್ಥೆ ಮಾಡಿರುತ್ತದೆ.

ಪೂರೈಕೆದಾರರ ಸ್ಥಳ: ಹಿಮಾಚಲ ಪ್ರದೇಶ, ಶಿಮ್ಲಾ
ಪೂರೈಕೆಯ ಸ್ಥಳ: ಶಿಮ್ಲಾ, ಹಿಮಾಚಲ ಪ್ರದೇಶ
ಇದು ರಾಜ್ಯದೊಳಗಿನ ಪೂರೈಕೆಯಾಗಿರುವುದರಿಂದ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆ ಅನ್ವಯಿಸುತ್ತದೆ.
Place of Supply of Services_10

3. ಕಾರ್ಯಕ್ರಮವೊಂದನ್ನು ಆಯೋಜಿಸಲು ಸ್ಥಿರ ಆಸ್ತಿಯಲ್ಲಿ ಸೌಕರ್ಯ ನೀಡುವುದು.

ಅಧಿಕೃತ, ಸಾಮಾಜಿಕ, ಸಾಂಸ್ಕೃತಿ, ಧಾರ್ಮಿಕ, ವ್ಯವಹಾ ಸಂಬಂಧಿ ಕಾರ್ಯಕ್ರಮಗಳು ಸೇರಿದಂತೆ ಕಾರ್ಯಕ್ರಮಗಳನ್ನು ಆಯೋಜಿಸಲು ಸೌಕರ್ಯ ಒದಗಿಸುವುದು ಇದರಲ್ಲಿ ಸೇರಿದೆ.

ಉದಾಹರಣೆ: ಹರ್ಯಾಣದ ಗುರ್ ಗಾಂವ್ ನಲ್ಲಿ ನೋಂದಾಯಿತ ಡೀಲರ್ ಆಗಿರುವ ಮುಖೇಶ್ ಆಟೋಮೊಬೈಲ್ಸ್, ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ರಾಜ್ ಹೋಟೆಲ್ಸ್ ನಲ್ಲಿ ಮೂರು ದಿನದ ಅಫಿಶಿಯಲ್ ಕಾನ್ಪರೆನ್ಸ್ ಗಾಗಿ ಕಾನ್ಫೆರೆನ್ಸ್ ಹಾಲ್ ಬುಕ್ ಮಾಡುತ್ತದೆ.

ಪೂರೈಕೆದಾರರ ಸ್ಥಳ: ಶಿಮ್ಲಾ, ಹಿಮಾಚಲ ಪ್ರದೇಶ
ಪೂರೈಕೆಯ ಸ್ಥಳ: ಶಿಮ್ಲಾ, ಹಿಮಾಚಲ ಪ್ರದೇಶ
ಇದು ರಾಜ್ಯದೊಳಗಿನ ಪೂರೈಕೆಯಾಗಿರುವುದರಿಂದ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
Place of Supply of Services_11

4. ಮೇಲೆ ನಮೋದಿಸಿರುವ ಸೇವೆಗಳಿಗೆ ಪೂರಕವಾಗಿರುವ ಯಾವುದೇ ಸೇವೆಗಳು

ಉದಾಹರಣೆಗೆ: ಮುಖೇಶ್ ಆಟೋಮೊಬೈಲ್ಸ್, ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ರಾಜ್ ಹೋಟೆಲ್ಸ್ ನಲ್ಲಿ ಅಫಿಶಿಯಲ್ ಕಾನ್ಪರೆನ್ಸ್ ಗಾಗಿ ಕಾನ್ಫೆರೆನ್ಸ್ ಹಾಲ್ ಬುಕ್ ಮಾಡುತ್ತದೆ. ಇದರೊಂದಿಗೆ ಸಮ್ಮೇಳನಕ್ಕೆ ಬರುವ ಅತಿಥಿಗಳಿಗಾಗಿ ಆಹಾರ ಮತ್ತು ಪಾನೀಯಗಳನ್ನೂ ಆರ್ಡರ್ ಮಾಡುತ್ತದೆ.

ಪೂರೈಕೆದಾರರ ಸ್ಥಳ: ಹಿಮಾಚಲ ಪ್ರದೇಶ, ಶಿಮ್ಲಾ
ಪೂರೈಕೆಯ ಸ್ಥಳ: ಶಿಮ್ಲಾ, ಹಿಮಾಚಲ ಪ್ರದೇಶ
ಇದು ರಾಜ್ಯದೊಳಗಿನ ಪೂರೈಕೆಯಾಗಿರುವುದರಿಂದ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆ ಅನ್ವಯಿಸುತ್ತದೆ.
Place of Supply of Services_12

ಮೇಲೆ ಚರ್ಚಿಸಿದಂತೆ, ಈಗಿನ ತೆರಿಗೆ ಪದ್ಧತಿಯಲ್ಲಿ ಸ್ಥಿರ ಸ್ವತ್ತಿನಲ್ಲಿ ನೀಡಿದ ಸೇವೆಗೆ ಸೇವಾ ತೆರಿಗೆ ವಿಧಿಸಲಾಗುತ್ತದೆ. ಸೇವಾ ತೆರಿಗೆಯು ಕೇಂದ್ರದ ಚಂದಾ ತೆರಿಗೆಯಾಗಿರುವುದರಿಂದ ಸ್ವೀಕರಿಸಿರುವ ಸೇವೆಗೆ ಇನ್ಪುಟ್ ಕ್ರೆಡಿಟ್ ಅನ್ನು ನೀಡಿರುವ ಸೇವೆಗೆ ಪ್ರತಿಯಾಗಿ ರಾಜ್ಯಗಳಿಗೆ ಅನುಗುಣವಾಗಿ ಪಡೆಯಬಹುದು.

ಮೇಲಿನ ಉದಾಹರಣೆಯಲ್ಲಿ ಈಗಿನ ತೆರಿಗೆ ಪದ್ಧತಿಯಲ್ಲಿ ಹರ್ಯಾಣದ ಮುಖೇಶ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್, ಹಿಮಾಚಲ ಪ್ರದೇಶದಲ್ಲಿ ಪಾವತಿಸಿರುವ ತೆರಿಗೆಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಬಹುದು. ಆದರೂ, ಈ ಜಿಎಸ್ಟಿ ಪದ್ಧತಿಯಲ್ಲಿ, ಸ್ಥಿರ ಆಸ್ತಿಯಲ್ಲಿ ಸೇವೆಯನ್ನು ನೀಡಿರುವ ಸ್ಥಳವು ಯಾವ ಸ್ಥಳದಲ್ಲಿ ಸ್ಥಿರ ಆಸ್ತಿ ಇದೆಯೋ ಅದೇ ಸ್ಥಳದಲ್ಲಿ ಅನ್ವಯಿಸುತ್ತದೆ. ಈ ಕಾರಣದಿಂದ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆ ಅನ್ವಯಿಸುತ್ತದೆ.

ಗಮನಿಸಿ, ಒಂದು ರಾಜ್ಯದ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ಕ್ರೆಡಿಟ್ ಬಾಧ್ಯತೆಯನ್ನು ಮತ್ತೊಂದು ರಾಜ್ಯದಲ್ಲಿ ಪಡೆಯುವಂತೆ ಇಲ್ಲ. ಇಂತಹ ಪ್ರಕರಣಗಳಲ್ಲಿ, ಬೇರೊಂದು ರಾಜ್ಯದಲ್ಲಿ ಸ್ಥಿರ ಸ್ವತ್ತಿನಿಂದ ನೋಂದಾಯಿಸಿರುವ ವ್ಯಕ್ತಿಯು ಸೇವೆಯನ್ನು ಪಡೆದರೆ, ಮತ್ತೊಂದು ರಾಜ್ಯದಲ್ಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುವಂತೆ ಇಲ್ಲ. ಹೀಗಾಗಿ, ಜಿಎಸ್ಟಿ ಪದ್ಧತಿಯಲ್ಲಿ ಹರ್ಯಾಣದಲ್ಲಿ ನೋಂದಾಯಿಸಿರುವ ಮುಖೇಶ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ಗೆ ಹಿಮಾಚಲ ಪ್ರದೇಶದಲ್ಲಿ ಪಾವತಿಸಿರುವ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಅವಕಾಶವಿಲ್ಲ.
ಮುಂದಿನ ಲೇಖನ: ಇವೆಂಟ್ ಗಳಿಗೆ ಸಂಬಂಧಪಟ್ಟಂತೆ ಸೇವೆಯ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು.

Are you GST ready yet?

Get ready for GST with Tally.ERP 9 Release 6

95,468 total views, 18 views today