ಇನ್ನು ಕೆಲವೇ ದಿನಗಳಲ್ಲಿ ನಮ್ಮತ್ತ ಬೃಹತ್ ‘ಪರೋಕ್ಷ ತೆರಿಗೆ’ ರೂಪಾಂತರವು ಆಗಮಿಸಲಿದೆ. ಕಾನೂನು ನಿರೂಪಕರು ಇದಕ್ಕೆ ಪೂರಕವಾದ ವಿಧಿವಿಧಾನಗಳನ್ನು ಪೂರೈಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಮಸೂದೆಯು ಅಂಗೀಕಾರಗೊಂಡಿದೆ.

ಇದು ಮಾರುಕಟ್ಟೆಯಲ್ಲಿ ಅತ್ಯಂತ ಪ್ರಮುಖ ಹಂತ ಮತ್ತು ಭಾರತೀಯ ಮಾರುಕಟ್ಟೆಯನ್ನು ವ್ಯಾಪಾರಸ್ಥರಿಗೆ ಮುಕ್ತವಾಗಿಸುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ವ್ಯಾಪಾರದಲ್ಲಿ ರಾಜ್ಯಗಳ ಗಡಿಯ ಎಲ್ಲೆ ಹೋಗಲಿದೆ ಮತ್ತು ಈಗಿನದ್ದಕ್ಕಿಂತ ಹೆಚ್ಚು ಗ್ರಾಹಕರನ್ನು ಹಾಗೂ ಹೆಚ್ಚು ಪೂರೈಕೆದಾರರನ್ನು ಪಡೆಯಲು ಇದರಿಂದ ಸಾಧ್ಯವಿದೆ. ಕಾನೂನಿನ ನಿಬಂಧನೆಗಳಡಿಯಲ್ಲಿ ಪ್ರಯೋಜನ ಪಡೆಯಲು ಕಡಿಮೆ ಜನರಿಗೆ ಸಾಧ್ಯವಾಗಲಿದೆ ಅಥವಾ ತೆರಿಗೆ ವಂಚನೆ ಕಡಿಮೆಯಾಗಲಿದೆ ಮತ್ತು ಹೆಚ್ಚು ವ್ಯವಹಾರಗಳು ನಡೆಯುವುದರಿಂದ ಮಾರುಕಟ್ಟೆಯಲ್ಲಿ ಸ್ಪರ್ಧೆಯೂ ಇರಲಿದೆ. ಹಲವು ಬಗೆಯ ತೆರಿಗೆಗಳಿಗೆ ಒಳಪಡುವುದಕ್ಕೆ ಬದಲಾಗಿ ಒಂದೇ ತೆರಿಗೆ ಸೂರಿನಡಿಗೆ ಪ್ರವೇಶಿಸುವುದರಿಂದ ಸಾಕಷ್ಟು ಸಮಯ ಮತ್ತು ಅನುಸರಣೆಯ ವೆಚ್ಚ ಉಳಿತಾಯವಾಗಲಿದೆ.
ಇದು ಸಂಭ್ರಮಿಸುವ ಸಮಯವಾಗಿದೆ, ಸಣ್ಣ ವ್ಯಾಪಾರಿಗಳನ್ನು ಹೊರತುಪಡಿಸಿ!

It is indeed time for celebration. Except for the Small Businessman.Click To Tweet

ಸಾಮಾನ್ಯವಾಗಿ ಹೇಳುವುದಾದರೆ ಸಣ್ಣ ವ್ಯಾಪಾರವು ಪ್ರಮುಖವಾಗಿ “ಹೆಚ್ಚು ಪ್ರಾಮಾಣಿಕ” ಮತ್ತು ಸಾಮಾನ್ಯವಾಗಿ “ಹೆಚ್ಚಿನ ಹಣದ ಪ್ರವಹಿಸುವಿಕೆ” ಇಲ್ಲದೆ ತೊಂದರೆ ಅನುಭವಿಸುತ್ತಿರುತ್ತವೆ.

ಸಾಮಾಜಿಕ ಕಳಂಕದ ಭಯದಲ್ಲಿ ಅಥವಾ ಸಮಸ್ಯೆ ಎದುರಾದಾಗ ನಿರ್ವಹಿಸಲು ಸಾಧ್ಯವಾಗದೆ ಅಥವಾ ಅಪ್ರಾಮಾಣಿಕತೆಯಿಂದ ದೊರಕುವ ಪ್ರಯೋಜನವು ಕಡಿಮೆ ಇರುವುದು ಅಥವಾ ಸಾಮಾನ್ಯ ನೈತಿಕ ಪ್ರಜ್ಞೆಯ ತಳಹದಿಯಲ್ಲಿ ಪ್ರಾಮಾಣಿಕತೆಯು ಹೆಚ್ಚುತ್ತದೆ. ಇತರೆ ಯಾವುದೇ ಪ್ರಮುಖ ವ್ಯವಹಾರಗಳಿಗೆ ಹೋಲಿಸಿದರೆ ಅತಿಸಣ್ಣ ಸಾಲದಾರರು ಸಾಲವನ್ನು ಮರುಪಾವತಿ ಮಾಡುವುದರಲ್ಲಿ ಅಗ್ರಗಣ್ಯತೆಯನ್ನು ಪಡೆದಿದ್ದಾರೆ.

ಇದೇ ಸಮಯದಲ್ಲಿ ಸಣ್ಣ ವ್ಯವಹಾರಗಳು ಹಣದ ಪ್ರವಹಿಸುವಿಕೆಯ ಕೊರತೆಯಿಂದ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತವೆ. ಮಾರಾಟ ಮಾಡಿದ ಸರಕಿನ ಹಣ ಬರುವುದು ಒಂದು ವಾರ ತಡವಾದರೂ ಅವರ ನಿಯಮಿತ ಕಾರ್ಯಗಳು ತಳ ಹಿಡಿಯುತ್ತದೆ. ಕುಟುಂಬದಲ್ಲಿ ಮದುವೆ ಇದೆಯೇ? ಸೈಕಲ್ ರಿಪೇರಿಯಾಗಲು ಹಲವು ವಾರಗಳು ಹಿಡಿಯಿತೇ.. ಹೀಗೆ ಸಣ್ಣ ಅಥವಾ ದೊಡ್ಡ ವಿಷಯಗಳಿಂದಲೂ ಸಮಸ್ಯೆ ಅನುಭವಿಸುತ್ತಿವೆ. ವಸ್ತುಗಳಿಗೆ ಉತ್ತಮ ಕ್ರಯ ಅಥವಾ ವಿನಾಯಿತಿ ದೊರಕಿದರೆ ಅವರಿಗೆ ಲಾಭ ಹೆಚ್ಚುತ್ತದೆ, ಮತ್ತು ಅದರಿಂದ ಅವರ ವ್ಯಾಪಾರವು ಕೆಲವು ವಾರಗಳ ಮಟ್ಟಿಗೆ ಸುಧಾರಿಸಬಹುದು. ಉದ್ಯೋಗಿಯ ಕುಟುಂಬದಲ್ಲಿ ಮದುವೆ ಇದೆಯೇ? ಅವರ ಬಯಕೆಗಳೇ ಅವರ ಹಣದ ನಿರ್ವಹಣೆಯನ್ನು ಮಾಡುತ್ತದೆ.

ಸರಕಾರದ ಜಿಎಸ್ಟಿ ಕಾನೂನಿನ ಕರಡು ಮಸೂದೆಯಲ್ಲಿ ಸರಕಾರದ ಈಗಿನ ಹೇಳಿಕೆಯಲ್ಲಿ ಇರುವ ಪ್ರಸ್ತಾಪದ ಪ್ರಕಾರ, ನಿಧಾನವಾಗಿ ಆದರೆ ಖಚಿತವಾಗಿ ಬಹುತೇಕ ಎಲ್ಲಾ ಸಣ್ಣ ವ್ಯವಹಾರಗಳೂ ಜಿಎಸ್ಟಿಯಡಿಗೆ ಬರುವ ದಿನ ದೂರವಿಲ್ಲ. ಇದು ಸರಕಾರದ “ಉದ್ದೇಶ’’ ಅಲ್ಲವಾದರೂ ಅವರ ಉತ್ತಮ ಉದ್ದೇಶದಿಂದ ದೊರಕಿರುವಂತದ್ದಾಗಿದೆ. ಇದು “ಸರಿಪಡಿಸಬಹುದಾದದ್ದು’, ಒಳ್ಳೆಯ ಬದಲಾವಣೆಗಳನ್ನು ಒಪ್ಪಿಕೊಳ್ಳಬಹುದು.

ನೀಡಲಾದ ಸೌಲಭ್ಯದಡಿ ಪೂರೈಕೆದಾರರು ತೆರಿಗೆ ಪಾವತಿಸಿದ್ದರೆ ಮಾತ್ರ ಖರೀದಿದಾರರಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ನ ಪ್ರಯೋಜನ ದೊರಕುತ್ತದೆ, ಆದರೆ, ಇದರ ಒಂದು ತೊಂದರೆಯೇನೆಂದರೆ ಇದು ಸಣ್ಣ ವ್ಯಾಪಾರಿಗಳ ಜೀವನಶೈಲಿಗೆ ತೊಂದರೆಯಾಗಬಹುದು. ಬಹುತೇಕರು ತೆರಿಗೆ ವಂಚನೆ ಅಥವಾ ಪಾವತಿಸದೆ ಇರುವ ಉದ್ದೇಶ ಹೊಂದಿರುವುದಿಲ್ಲ. ಅವರು ಸರಕಾರವನ್ನು ಲಘುವಾಗಿಯೂ ತೆಗೆದುಕೊಳ್ಳುವುದಿಲ್ಲ. ಅವರ ಕೆಲವೊಂದು ತೊಂದರೆಗಳಿಂದ ಪಾವತಿ ಮಾಡುವುದು ವಿಳಂಬವಾಗಬಹುದು. ವಿಳಂಬಕ್ಕೆ ಕಾರಣವಾಗುವ ಕೆಲವು ಅಂಶಗಳನ್ನು ಈ ಕೆಳಗೆ ನೀಡಲಾಗಿದೆ.

“ನನ್ನ ಕೆಲಸಗಾರರಿಗೆ ಮೊದಲು ಸಂಬಳ ನೀಡಬೇಕೋ’ ಅಥವಾ ‘ಸರಕಾರಕ್ಕೆ ವಿಳಂಬವಾಗಿ ಪಾವತಿಸಬೇಕೋ’ ಎಂಬ ಆಯ್ಕೆ, ದ್ವಂದ್ವ ಎದುರಾಗುತ್ತದೆ. ಎಲ್ಲಾದರೂ ಸಂಬಳ ಪಾವತಿಸುವುದು ತಡವಾದರೆ ಅವರಲ್ಲಿ ಆಗಾಗ ವೇತನ ಕೇಳುತ್ತಾರೆ ಅಥವಾ ಅವರು ಕೆಲಸಗಾರರನ್ನು ಕಳೆದುಕೊಳ್ಳಬೇಕಾಗಬಹುದು. ಕೆಲವೊಮ್ಮೆ ಪೂರೈಕೆದಾರರಿಗೆ ಸರಿಯಾದ ಸಮಯದಲ್ಲಿ ಪಾವತಿ ಮಾಡದೆ ಇದ್ದರೆ ತೊಂದರೆಯಾಗಬಹುದು, ಅವರಿಗೆ ಪೂರೈಕೆಯಾಗುವ ಸರಕುಗಳಲ್ಲಿ ವ್ಯತ್ಯಾಸ
ವಾಗಬಹುದು ಮತ್ತು ಅವರು ಖಾಯಂ ಆಗಿ ತನ್ನ ಗ್ರಾಹಕರನ್ನು ಕಳೆದುಕೊಳ್ಳಬೇಕಾಗಬಹುದು. ಹೀಗಾಗಿ, ಸರಕಾರಕ್ಕೆ ದಂಡ ಪಾವತಿಸುವುದು ಹೆಚ್ಚು ಅಪ್ಯಾಯಮಾನವಾಗಬಹುದು ಮತ್ತು ಅವರು ಖಂಡಿತವಾಗಿಯೂ ಪಾವತಿಸುತ್ತಾರೆ.

ಇದಕ್ಕೆ ಸಂಬಂಧಪಟ್ಟ ಮತ್ತು ಹೆಚ್ಚು ಉತ್ತಮವಾದ ಪ್ರಯೋಜನವನ್ನು ಸರಕಾರ ನೀಡಿದೆ. ಅದರ ಹೆಸರು ಅನುಸರಣೆ ರೇಟಿಂಗ್. ಇದರಿಂದ ನೀವು ನಿಮ್ಮ ಪೂರೈಕೆದಾರರು ಉತ್ತಮ ರೇಟಿಂಗ್ ಹೊಂದಿದ್ದಾರೆಯೇ ಅಥವಾ ಕಳಪೆ ರೇಟಿಂಗ್ ಹೊಂದಿದ್ದಾರೆಯೇ ಎಂದು ತಿಳಿದುಕೊಂಡು ಖರೀದಿಸಬಹುದು. ನಿಮ್ಮ ಇನ್ಪುಟ್ ತೆರಿಗೆ ಕ್ರೆಡಿಟ್ ಅನ್ನುವುದು ಸರಕು ಪೂರೈಕೆದಾರರ ಗುಣಮಟ್ಟದ ಮೇಲೆ ನಿಂತಿದೆ. “ಕಳಪೆ’ ರೇಟಿಂಗ್ ಹೊಂದಿರುವ ಪೂರೈಕೆದಾರರಿಂದ ನೀವು ಖರೀದಿಸದೆ ಇರಲು ಪ್ರಯತ್ನಿಸಹುದು. ಹೀಗಾಗಿ, ಪೂರೈಕೆದಾರರು ಕಳಪೆ ರೇಟಿಂಗ್ ಬರದಂತೆ ನೋಡಿಕೊಳ್ಳಲು ಏನೂ ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ನೀವು ಪೂರೈಕೆದಾರರಿಗೆ ಅಥವಾ ಇತರರರಿಗೆ ತಡವಾಗಿ ಹಣ ಪಾವತಿ ಮಾಡಿದರೆ ಅವರು ನಿಮಗೆ ಕಳಪೆ ರೇಟಿಂಗ್ ಕೊಡಬಹುದು.

ಇನ್ನಷ್ಟು ಹೇಳುವುದಾದರೆ ಈ ಪ್ರಯೋಜನಗಳನ್ನು ನೀವು ಜೊತೆಯಾಗಿ ಪಡೆದರೆ ಸಣ್ಣ ವ್ಯವಹಾರಗಳು ಎದುರಿಸುವ ತೊಂದರೆ ಕಡಿಮೆಯಾಗಬಹುದು. ಈಗ ಲಭ್ಯ ಇರುವ “ಗೋಚರಿಸುವ ಮತ್ತು ಸಾರ್ವಜನಿಕ” ಜ್ಞಾನದ ಪ್ರಕಾರ ಸ್ನೋ ಬಾಲ್ ಪರಿಣಾಮ ಉಂಟಾಗಬಹುದು. ನೀವು ಯಾವುದಾದರೂ ತೊಂದರೆ ಎದುರಿಸಿದರೆ, ಮುಂದಿನ ತಿಂಗಳು ನಿಮ್ಮ ಖರೀದಿದಾರರು “ಸುರಕ್ಷಿತ ಆಟ’ ಆಡಬಹುದು ಮತ್ತು ಅವರು ಇತರರಿಂದ ಖರೀದಿಸಬಹುದು(ಈಗ ಮಾರುಕಟ್ಟೆಯು ಮುಕ್ತ ಮಾರುಕಟ್ಟೆಯಾಗಿರುವುದರಿಂದ ಇದು ಸುಲಭ). ಇದು ಸರಳವಾಗಿ ನಿಮ್ಮ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಮತ್ತೆ ಮತ್ತೆ ನಿಮ್ಮ ಪಾವತಿ ವಿಳಂಬವಾಗುತ್ತ ಹೋದರೆ, ನಿಮ್ಮ ರೇಟಿಂಗ್ ಕಡಿಮೆಯಾಗುತ್ತ ಹೋಗುತ್ತದೆ, ನೀವು ಮತ್ತಷ್ಟು ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಅಂತಿಮವಾಗಿ ನೀವು ವ್ಯವಹಾರವನ್ನೇ ಮುಕ್ತಾಯಗೊಳಿಸಬೇಕಾಗಬಹುದು.

ಯಾವುದೇ ಸಮಯದಲ್ಲಿಯೂ ಜಿಎಸ್ಟಿ ಪಾವತಿ ಮಾಡಲು ತುರ್ತು ಹಣ ಸಿದ್ಧಪಡಿಸಿಕೊಳ್ಳಬೇಕು ಮತ್ತು ಕೆಟ್ಟ ಪರಿಣಾಮ ಬೀರುವುದರಿಂದ ಹೊರತಾಗಲೂ ಕಳಪೆ ರೇಟಿಂಗ್ ಬರದಂತೆ ನೋಡಿಕೊಳ್ಳಬೇಕು ಮತ್ತು ಸುಸ್ಥಿರ ಪ್ರಗತಿಗೆ ಹಣಕಾಸಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಈಗ ಜಿಎಸ್ಟಿ ಆಳ್ವಿಕೆಯಲ್ಲಿ ಅವರ ವ್ಯವಹಾರವು ನಡೆಯಲು ಅನುವು ಮಾಡಬೇಕು.

ಮತ್ತು ವಿರೋಧಭಾಸ ಏನೆಂದರೆ, ಜಿಎಸ್ಟಿಯು ಅನುಸರಣೆ ವೆಚ್ಚವನ್ನು ಕಡಿಮೆ ಮಾಡಲಿದೆ
ಸುಳ್ಳು ರಸೀದಿ ಮೂಲಕ ಇನ್ಪುಟ್ ಕ್ರೆಡಿಟ್ ಪಾವತಿ ಬಯಸುವ ಸಂಭಾವ್ಯ ವಂಚಕ ಕ್ಲೇಮ್ ಗಳಿಂದ ಪಾರಾಗಲು ಸರಕಾರವು ಪ್ರತಿ ಹೆಜ್ಜೆಯನ್ನು ಇಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಿನ ಅನುಕೂಲತೆಯಲ್ಲಿ ಪೂರೈಕೆದಾರರು ತಮ್ಮ ಪೂರೈಕೆಯನ್ನು ಜಿಎಸ್ಟಿಎನ್ ನಲ್ಲಿ ನೋಂದಣಿ ಮಾಡಿಸಬೇಕು ಮತ್ತು ಅಂತಹ ಸರಕುಪಟ್ಟಿಯಾದಿಗಳಿಗೆ ಮಾತ್ರ ಇನ್ಪುಟ್ ಕ್ರೆಡಿಟ್ ದೊರಕುತ್ತದೆ ಮತ್ತು ಇದು ಈಗಾಗಲೇ ತೊಂದರೆ ಉಂಟು ಮಾಡಿದೆ. ಎಲ್ಲಾ ವ್ಯವಹಾರಗಳು ಕಡ್ಡಾಯವಾಗಿ ಪೂರ್ಣ ಪ್ರಮಾಣದ ತಮ್ಮ ಬಾಧ್ಯತೆಯ ಜೊತೆಗೆ ಮತ್ತು ತಮ್ಮ ಪಾವತಿಯನ್ನು(ಅಥವಾ ಸರಕಾರವು ಪಾವತಿಯನ್ನು ಸಂಗ್ರಹಿಸುವ/ಬೇಡಿಕೆಯಿರುವ ಹಕ್ಕು) ಒಳಗೊಂಡಿರುವ ತಮ್ಮ ಸರಕುಪಟ್ಟಿಯನ್ನು ಲಗ್ಗತ್ತಿಸುವಂತೆ ಬೇಡಿಕೆ ಇಡುವುದು ಖಂಡಿತ.

ಪ್ರಮುಖವಾಗಿ ನೀಡಿರುವ ವ್ಯವಹಾರವು ಪಾವತಿಸಲು ವಿಫಲವಾದರೆ , ವಿವಿಧ ರಾಜ್ಯಗಳಿಗೆ ಹಂಚಿರುವ ಐಜಿಎಸ್ಟಿಯಲ್ಲಿನ ತೊಂದರೆಗಳೇ ಇಂತಹ ಅಸ್ಥಿರ ಅವಕಾಶಗಳನ್ನು ಕಾನೂನಿಗೆ ತರಲು ಪ್ರಮುಖ ಕಾರಣವಾಗಿದೆ ಎಂಬ ವದಂತಿಗಳಿವೆ. ಇದಕ್ಕೆ ಇರುವ ಪರ್ಯಾಯ ವಿಧಾನಗಳು ಸಹ ಸರಕಾರದ ಮುಂದಿದೆ, ಆದರೆ, ಈಗಿನ ಕರಡು ಮಸೂದೆ ಹೀಗೆಯೇ ಮುಂದುವರೆದರೆ ಮೇಲೆ ಹೇಳಿದಂತಹ ಪರಿಣಾಮಗಳು ಉಂಟಾಗಲಿವೆ. ಆದರೆ, ಅನಧಿಕೃತ ಭಾವನಾತ್ಮಕ ಸಂಗತಿಗಳಿಂದ ಈ ತೊಂದರೆಗಳು ಮುಂದೆ ಸರಿಯಾಗಲಿದೆ ಮತ್ತು ಒಮ್ಮೆ ಈ ಮಸೂದೆ ಆರಂಭಗೊಂಡರೆ ಇಂತಹ ತೊಂದರೆಗಳನ್ನು ಪತ್ತೆಹಚ್ಚಿ ಸರಿಪಡಿಸುವ ನಿರೀಕ್ಷೆಯಿದೆ.

ಇನ್ನೂ, ಇದರಲ್ಲಿ ಮುಂದೆ ಸರಿಪಡಿಸಲಾಗದ ತೊಂದರೆಗಳೂ ಇವೆ. ಇವು ತಾತ್ಕಾಲಿಕವಾಗಿ ಸರಿಯಾಗುವ ಸಂಗತಿಗಳೂ ಅಲ್ಲ. ಸಾಕಷ್ಟು ಸಣ್ಣ ವ್ಯವಹಾರಗಳು “ಯಾಕೆ ಅವರಿಂದ ವ್ಯವಹರಿಸಿ ಅಪಾಯ ಮೈಮೇಲೆ ಎಳೆದುಕೊಳ್ಳುವುದು’ ಎಂಬ ಕಾರಣಕ್ಕೆ ತಪ್ಪಾಗಿ ಬ್ರಾಂಡ್ ಆಗಿವೆ. ಇವುಗಳು ಭವಿಷ್ಯದಲ್ಲಿ ಕಾನೂನು ಬದಲಾದರೂ ಸರಿಯಾಗಲು ಸಾಧ್ಯವಿಲ್ಲ. ಎಲ್ಲಾದರೂ ಸರಕಾರಕ್ಕೆ ತೆರಿಗೆ ವಂಚನೆ ಕಾಣಿಸದೆ ಇದ್ದರೆ, ಸರಕಾರವು ವಂಚನೆಯನ್ನು ಪತ್ತೆಹಚ್ಚುವ ಸಲುವಾಗಿ ಇದನ್ನು ಭವಿಷ್ಯದಲ್ಲಿ ಪರಿಚಯಿಸಬಹುದು.

“ವ್ಯಾಲಿಡ್ ಆಗಿರುವ ರಿಟರ್ನ್’ಗೆ “ಪಾವತಿ’’ಯನ್ನು ಲಿಂಕ್ ಮಾಡಬಾರದೆಂಬ ಬದಲಾವಣೆಯನ್ನು ವಿನಂತಿಸಲಾಗಿದೆ. “ವ್ಯಾಲಿಡ್ ರಿಟರ್ನ್’’ ಎನ್ನುವುದು ಕಂಪ್ಯೂಟರೀಕೃತವಾಗಿ ಸರಿಯಾಗಿರುವುದು ಮತ್ತು ಇದು ತೆರಿಗೆ ಪಾವತಿದಾರರ ಭಾದ್ಯತೆ ಎಂದು ವ್ಯಾಖ್ಯಾನಿಸಲಾಗಿದೆ. ಪೂರೈಕೆದಾರರ “ವ್ಯಾಲಿಡ್ ರಿಟರ್ನ್’’ ಎನ್ನುವುದು ಗ್ರಾಹಕರು ಕ್ಲೇಮ್ ಮಾಡುವ “ಇನ್ಪುಟ್ ಕ್ರೆಡಿಟ್’’ ಮಾತ್ರ (ಇದು ಈಗಾಗಲೇ ಈಗಿನ ಕಾನೂನಿನಲ್ಲಿ ಇದೆ), “ವ್ಯಾಲಿಡ್’’ ಎನ್ನುವುದರ ಬದಲಾಗಿ “ಪೇಯ್ಡ್ ಫಾರ್’’ ಎಂಬ ಬದಲಾವಣೆ ಮಾಡಲಾಗಿದೆ. ಈ ಸಣ್ಣ ಬದಲಾವಣೆಯು ವ್ಯವಹಾರವನ್ನು ಅನ್ ಲಾಕ್ ಮಾಡಲು, ಅನುಸರಣೆಯನ್ನು ಉತ್ತಮಗೊಳಿಸಲು ಮತ್ತು ಜಿಎಸ್ಟಿಯ ರೀತಿ ರಿವಾಜುಗಳಿಂದಾಗಿ ನಾಟಕೀಯವಾಗಿ ತೆರಿಗೆ ವಂಚನೆ ಕಡಿಮೆ ಮಾಡಬಹುದು.

Linking payments to tax credit is not just a ‘flaw’, but a major ‘anomaly’. Click To Tweet

ತೆರಿಗೆ ಪಾವತಿಗೆ ಪೇಮೆಂಟ್ ಅನ್ನು ಸಂಪರ್ಕಿಸುವುದು ಕೇವಲ “ನ್ಯೂನತೆ’ಯಲ್ಲ, ಬದಲಾಗಿ ದೊಡ್ಡ ಅಸಂಗತತೆಯಾಗಿದೆ. ಟ್ವಿಟ್ ಮಾಡಿ

3 ವ್ಯವಹಾರದ ಸರಳ ಕೊಂಡಿಗಳನ್ನು ನೋಡೋಣ. ಕಂಪನಿ “ಎ’’ಯು ಕಂಪನಿ “ಬಿ’’ಯ ಮೇಲೆ 1 ಕೋಟಿ + 20 ಲಕ್ಷ ಜಿಎಸ್ಟಿ ಮೊತ್ತದ ಸರಕುಪಟ್ಟಿಯನ್ನು ನೀಡುತ್ತದೆ. (ಒಟ್ಟು ಮೌಲ್ಯ 1.2 ಕೋಟಿ ರೂ.). ಕಂಪನಿ “ಎ’’ ಕೂಡ 20 ಲಕ್ಷ ರೂ. ಪಾವತಿಸುತ್ತದೆ.
ಈಗ ಕಂಪನಿ “ಬಿ” ಯು ಕಂಪನಿ “ಸಿ’’ಗೆ 1.2 ಕೋಟಿ ರೂ. + 24 ಲಕ್ಷ ಜಿಎಸ್ಟಿ (ಒಟ್ಟು ಮೌಲ್ಯ 1.44 ಕೋಟಿ ರೂ.) ಮೊತ್ತದ ಸರಕುಪಟ್ಟಿಯನ್ನು ನೀಡುತ್ತದೆ. ಕಂಪನಿ “ಬಿ’’ಯು 24 ಲಕ್ಷ ಪಾವತಿಸುವ ಬಾಧ್ಯತೆ ಹೊಂದಿರುತ್ತದೆ ಮತ್ತು 20 ಲಕ್ಷ ಇನ್ಪುಟ್ ಕ್ರೆಡಿಟ್ ಕಳೆಯುತ್ತದೆ ಮತ್ತು ನಂತರ ಸರಕಾರಕ್ಕೆ 4 ಲಕ್ಷ ರೂ. ಪಾವತಿಸುವ ಅವಶ್ಯಕತೆ ಇರುತ್ತದೆ. ಆದರೆ, ಕೆಲವು ಕಾರಣಗಳಿಂದ ಮೊತ್ತವನ್ನು ಪಾವತಿಸಲು ವಿಫಲವಾಗುತ್ತದೆ.
ಕಂಪನಿ “ಸಿ’’ಯು ಈಗ 1.5 ಕೋಟಿ + 30 ಲಕ್ಷ ಜಿಎಸ್ಟಿ (ಒಟ್ಟು ಮೌಲ್ಯ 1.8 ಕೋಟಿ ರೂ.) ಮತ್ತು ಇಲ್ಲಿಗೆ ಈ ಸರಣಿ ಮುಕ್ತಾಯವಾಗುತ್ತದೆ (ಅಂದರೆ, ಕೊನೆಗೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ).
ಕಂಪನಿ “ಸಿ’’ಯು 24 ಲಕ್ಷ ಇನ್ಪುಟ್ ಕ್ರೆಡಿಟ್ ತೆಗೆದ ಬಳಿಕ 30 ಲಕ್ಷ ರೂ. ಪಾವತಿಸುವ ಬಾಧ್ಯತೆ ಹೊಂದಿರುತ್ತದೆ. ಆದಗ್ಯೂ, ಕಂಪನಿ “ಬಿ’’ಯು ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸಲು ವಿಫಲವಾಗಿರುವುದರಿಂದ, ಈ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ನಿರಾಕರಿಸಲಾಗುತ್ತದೆ, ಮತ್ತು ಕಂಪನಿ “ಸಿ’’ಯು ಪೂರ್ತಿ 30 ಲಕ್ಷ ರೂ. ಪಾವತಿಸಬೇಕಾಗುತ್ತದೆ.
ಈಗ, ಎಲ್ಲಾದರೂ ಕಂಪನಿ “ಬಿ’’ಯು ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸಿದ್ದರೆ, ಸರಕಾರವು ಕಂಪನಿಯಿಂದ ಸಂಗ್ರಹಿಸಿದ ಒಟ್ಟು ತೆರಿಗೆ ಮೊತ್ತವು ಕಂಪನಿ “ಎ’’ಯಿಂದ 20 ಲಕ್ಷ ರೂ., ಕಂಪನಿ “ಬಿ’’ಯಿಂದ 4 ಮತ್ತು ಕಂಪನಿ “ಸಿ’’ಯಿಂದ 6 ಒಟ್ಟು ಸೇರಿ 30 ಲಕ್ಷ ಆಗುತ್ತದೆ.
ಕಂಪನಿ ಬಿ ಸರಿಯಾದ ಸಮಯಕ್ಕೆ ಪಾವತಿಸಲು ವಿಫಲವಾದರೂ, ಸರಕಾರವು ಕಂಪನಿ ಎಯಿಂದ 20 ಲಕ್ಷ, ಕಂಪನಿ ಸಿಯಿಂದ 30 ಲಕ್ಷ ಒಟ್ಟಾರೆ 50 ಲಕ್ಷ ಸಂಗ್ರಹಿಸಿದೆ!
ತಕ್ಷಣ, ಕಂಪನಿ ಬಿಯು ಪಾವತಿಸದೆ ಇದ್ದರೆ ಆದಾಯ ಇಲಾಖೆಗೆ ಬೋನಸ್ ಸಿಕ್ಕಂತೆ ಆಗುತ್ತದೆ. ಜೊತೆಗೆ, ಸರಕಾರವು ಕಂಪನಿ ಬಿಯಿಂದ ಒಂಟಿಯಾಗಿ ಅಥವಾ ರಿಕವರಿ ಪ್ರಕ್ರಿಯೆಯಿಂದ 4 ಲಕ್ಷ ರೂ. ಪಾವತಿಸುವಂತೆಯೂ ಹೇಳಿದರೂ ಹೇಳಬಹುದು. ಈ ಮೂಲಕ ಸರಕಾರಕ್ಕೆ ಒಟ್ಟು ಸಂಗ್ರಹವು 50 ಲಕ್ಷ ರೂ.ಗಿಂತಲೂ ಹೆಚ್ಚಾಗುತ್ತದೆ!
ಇಂತಹ ಅಸಂಗತ ಕಾನೂನು ಸುಸ್ಥಿರವಾಗಿರದೆ ಇರಬಹುದು, ತಕ್ಷಣ, ಕಂಪನಿ ಬಿ ಪಾವತಿಸದೆ ಇದ್ದರೂ ದೇಶಕ್ಕೆ ಒಳ್ಳೆಯದಾಗಬಹುದು, ದೇಶದ ಒಟ್ಟು ಆದಾಯವು ಹೆಚ್ಚಾಗಬಹುದು.
ತಕ್ಷಣ, ಕಂಪನಿಗಳು ತೆರಿಗೆ ಪಾವತಿಸದೆ ಇದ್ದರೂ ದೇಶಕ್ಕೆ ಒಳ್ಳೆಯದಾಗಬಹುದು, ದೇಶದ ಒಟ್ಟು ಆದಾಯವು ಹೆಚ್ಚಾಗಬಹುದು. ಟ್ವಿಟ್ ಮಾಡಿರಿ.
ಭಾರತೀಯ ಪ್ರಜೆಯಾಗಿ, ಸರಕಾರವು ಕಾನೂನು ರೂಪಿಸುವಲ್ಲಿ ನೆರವಾಗುವುದು ನಮ್ಮೆಲ್ಲರಿಗೂ ಅತ್ಯಂತ ಮುಖ್ಯವಾದ ಸಂಗತಿಯಾಗಿದೆ. ಇದರ ಪ್ರಯೋಜನವನ್ನು ನಾವು ಪಡೆದುಕೊಳ್ಳಬೇಕು, ಹೊರತು ಅವಶ್ಯಕತೆ ಇಲ್ಲದೆ ಇದ್ದರೂ ಸಮಸ್ಯೆ ಸೃಷ್ಟಿಸಿಕೊಳ್ಳಬಾರದು.
ಈಗಿನ ಕಾನೂನು ಸಹ ಈಗಾಗಲೇ ತೆರಿಗೆ ವಂಚನೆ ತಡೆಯಲು ಸಾಕಷ್ಟು ಭದ್ರತೆ ಮತ್ತು ರಕ್ಷಣೆ ಒದಗಿಸುತ್ತದೆ, ಮತ್ತು ಕೆಲವೊಂದು ಸಣ್ಣಪುಟ್ಟ ವಿಷಯಗಳನ್ನು ಬಗೆಹರಿಸುವುದು (ಉದಾಹರಣೆಗೆ ಐಜಿಎಸ್ಟಿ) ಮಾತ್ರ ಬಾಕಿ ಉಳಿದಿದೆ. ಮತ್ತು ಕೃತಕ ಮತ್ತು ಅಸ್ಥಿರ ಪ್ರೊವಿಷನ್ ಗೆ ಬದಲಾಗಿ ಸರಳವಾದ “ಜಿಎಸ್ಟಿಎನ್ ನಲ್ಲಿ ನೋಂದಾಯಿಸಿದವರಿಗೆ ಮಾತ್ರ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಲಭ್ಯವಿದೆ. ಈಗಿನ ಕಾನೂನು ಸಹ ಸರಕುಪಟ್ಟಿ ನೋಂದಾಯಿಸದೆ ಇದ್ದರೂ ಇನ್ಪುಟ್ ಕ್ರೆಡಿಟ್ ಸೌಲಭ್ಯ ನೀಡುತ್ತದೆ, ಮತ್ತು “ಪಾವತಿ ಲಿಂಕ್’ ಮಾಡುವುದನ್ನು ಕೈಬಿಟ್ಟರೆ ವ್ಯವಹಾರಗಳು ಹೆಚ್ಚು ಸಂತೋಷಗೊಳ್ಳಲಿವೆ.
ನಾವೆಲ್ಲರೂ ಅತ್ಯುತ್ತಮ ಜಿಎಸ್ಟಿ ಕಾನೂನಿಗಾಗಿ ಪ್ರಾಥಿಸೋಣ. ಈ ಕಾನೂನನ್ನು ಮುಕ್ತ ಹೃದಯದಿಂದ ಸ್ವಾಗತಿಸೋಣ ಮತ್ತು ಅದರಿಂದ ಕಷ್ಟಪಡದೆ ಇರೋಣ.
*ಭರತ್ ಗೋಯೆಂಕಾ
ವ್ಯವಸ್ಥಾಪಕ ನಿರ್ದೇಶಕರು, ಟ್ಯಾಲಿ ಸೊಲ್ಯುಷನ್ಸ್ ಪ್ರೈವೇಟ್ ಲಿಮಿಟೆಡ್

Are you GST ready yet?

Get ready for GST with Tally.ERP 9 Release 6

99,586 total views, 25 views today