ನಮ್ಮ ಈ ಹಿಂದಿನ ಬ್ಲಾಗ್ ನಲ್ಲಿ ‘ಪೂರೈಕೆಯನ್ನು ಪರಿಗಣನೆಗೆ ತೆಗೆದುಕೊಳ್ಳದೆ’ ಮತ್ತು ‘ಸೇವೆಯ ಆಮದಿಕರಣದ ಮೇಲೆ‘ ಜಿಎಸ್ಟಿ ಪರಿಣಾಮ ಎಂಬ ವಿಷಯದ ಕುರಿತು ಚರ್ಚಿಸಲಾಗಿತ್ತು.
ಈ ಬ್ಲಾಗ್ ನಲ್ಲಿ ಪರಿಗಣನೆಗೆ ತೆಗೆದುಕೊಳ್ಳದೆ ಈ ಮುಂದಿನ ವ್ಯಕ್ತಿಗಳ ನಡುವೆ ಪೂರೈಕೆಯ ಕುರಿತು ಹೆಚ್ಚು ವಿವರವಾಗಿ ಚರ್ಚಿಸೋಣ.
• ಸಂಬಂಧಪಟ್ಟ ವ್ಯಕ್ತಿ
• ಭಿನ್ನ ವ್ಯಕ್ತಿ

ಸಂಬಂಧಪಟ್ಟ ವ್ಯಕ್ತಿ

ಪ್ರಸಕ್ತ ಸುಂಕ ಮೌಲ್ಯಮಾಪನ ನಿಯಮಗಳಿಗೆ “ಸಂಬಂಧಪಟ್ಟ ವ್ಯಕ್ತಿ”ಯ ವ್ಯಾಖ್ಯಾನವಿದೆ. ಎಲ್ಲಾದರೂ ಸರಕು ಅಥವಾ ಸೇವೆಯು ಈ ಮುಂದಿನಂತೆ ನಡೆದರೆ ಅದನ್ನು ಸಂಬಂಧಪಟ್ಟ ವ್ಯಕ್ತಿಯ ನಡುವೆ ಪೂರೈಕೆ ನಡೆದಿದೆ ಎನ್ನಲಾಗುತ್ತದೆ:

1. ಅಧಿಕಾರಿಗಳು ಅಥವಾ ಇತರೆ ವ್ಯವಹಾರದ ನಿರ್ದೇಶಕರು : ಪೂರೈಕೆಯೊಂದರಲ್ಲಿ ಪೂರೈಕೆದಾರರು ಮತ್ತು ಸ್ವೀಕೃತಿದಾರರು ನಿಜವಾಗಿಯೂ ಬೇರೆ ವ್ಯವಹಾರದ ಅಧಿಕಾರಿಗಳು ಮತ್ತು ನಿರ್ದೇಶಕರಾಗಿರುತ್ತಾರೆ

ಮೇಲೆ ವಿವರಿಸಿದOತೆ, ಶ್ರೀಯುತ ಗಣೇಶ್ ಅವರು ಗಣೇಶ್ ಟ್ರೇಡಿಂಗ್ ಲಿಮಿಟೆಡ್ ನ ನಿರ್ದೇಶಕರು ಮತ್ತು ರಾಕೇಶ್ ಟ್ರೇಡಿಂಗ್ ಕಂಪನಿಯಲ್ಲಿ ಅಧಿಕಾರಿಯಾಗಿದ್ದಾರೆ. ಇದೇ ರೀತಿ, ರಾಕೇಶ್ ಅವರು ರಾಕೇಶ್ ಟ್ರೇಡಿಂಗ್ ಕಂಪನಿಯ ನಿರ್ದೇಶಕರು ಮತ್ತು ಗಣೇಶ್ ಟ್ರೇಡಿಂಗ್ ಕಂಪನಿಯಲ್ಲಿ ಅಧಿಕಾರಿಯಾಗಿದ್ದಾರೆ. ಹೀಗಾಗಿ, ಇವರ ನಡುವಿನ ಪೂರೈಕೆಯನ್ನು ಸಂಬಂಧಪಟ್ಟ ವ್ಯಕ್ತಿಗಳ ನಡುವಿನ ಪೂರೈಕೆ ಎಂದು ಹೇಳಲಾಗುತ್ತದೆ.

2. ವ್ಯವಹಾರದಲ್ಲಿ ನ್ಯಾಯಯುತವಾಗಿ ಗುರುತಿಸಲಾದ ಪಾಲುದಾರರು: ಒಂದೇ ವ್ಯವಹಾರದಲ್ಲಿ ಅಥವಾ ಅಸೋಸಿಯೇಟೆಡ್ ವ್ಯವಹಾರದಲ್ಲಿ ಪೂರೈಕೆದಾರರು ಮತ್ತು ಸ್ವೀಕೃತಿದಾರರು ಪಾಲುದಾರರಾಗಿರುತ್ತಾರೆ.

Legally recognized partners in business
ಮೇಲೆ ಚಿತ್ರಿಸಿದಂತೆ ಶ್ರೀಯುತ ಗಣೇಶ್ ಮತ್ತು ಶ್ರೀಯುತ ರಾಕೇಶ್ ಅವರು ಗಣೇಶ್ ಟ್ರೇಡಿಂಗ್ ಲಿಮಿಟೆಡ್ ಪಾಲುದಾರರು. ಇವರಿಬ್ಬರ ನಡುವಿನ ಯಾವುದೇ ಪೂರೈಕೆಯನ್ನು ಸಂಬಂಧಪಟ್ಟ ವ್ಯಕ್ತಿಗಳ ನಡುವಿನ ಪೂರೈಕೆ ಎಂದೇ ಪರಿಗಣಿಸಲಾಗುತ್ತದೆ.
3.ಉದ್ಯೋಗದಾತರು ಮತ್ತು ಉದ್ಯೋಗಿ: ಉದ್ಯೋಗದಾತರು ಮತ್ತು ಉದ್ಯೋಗಿಯ ನಡುವೆ ಯಾವುದೇ ಸರಕು ಮತ್ತು ಸೇವೆಯ

ಶ್ರೀಯುತ ರಾಕೇಶ್ ಅವರು ಗಣೇಶ್ ಟ್ರೇಡಿಂಗ್ ಲಿಮಿಟೆಡ್ ನ ಉದ್ಯೋಗಿಯಾಗಿದ್ದಾರೆ. ಗಣೇಶ್ ಟ್ರೇಡಿಂಗ್ ಲಿಮಿಟೆಡ್ ನಿಂದ ಶ್ರೀಯುತ ರಾಕೇಶ್ ಗೆ ಯಾವುದೇ ಪೂರೈಕೆಗಳು ನಡೆದರೆ ಅದನ್ನು ಸಂಬಂಧಪಟ್ಟ ವ್ಯಕ್ತಿಗಳ ನಡುವಿನ ಪೂರೈಕೆ ಎನ್ನಲಾಗುತ್ತದೆ.

4. ಪೂರೈಕೆದಾರರು ಅಥವಾ ಸ್ವೀಕೃತಿದಾರರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಂಪನಿಯ ಶೇಕಡ 25ರಷ್ಟು ಪಾಲು ಷೇರನ್ನು ಹೊಂದಿದ್ದರೆ, ನಿಯಂತ್ರಿಸುತ್ತಿದ್ದರೆ ಅಥವಾ ಪಡೆದಿದ್ದರೆ.

ಉದಾಹರಣೆಗೆ, ಪೂರೈಕೆದಾರರ ವ್ಯವಹಾರದಲ್ಲಿ ಸ್ವೀಕೃತಿದಾರರು ಶೇಕಡ 25ರಷ್ಟು ಪಾಲು ಪಡೆದಿದ್ದರೆ.

5. ಇಬ್ಬರಲ್ಲಿ ಒಬ್ಬರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇತರರ ಮೇಲೆ ನಿಯಂತ್ರಣ ಹೊಂದಿದ್ದರೆ: ಎಲ್ಲಾದರೂ ಯಾವುದೇ ಪೂರೈಕೆಯಲ್ಲಿ, ಪೂರೈಕೆದಾರರು ಅಥವಾ ಸ್ವೀಕೃತಿದಾರರು ಇತರ ವ್ಯಕ್ತಿ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಹಿಡಿತ ಹೊಂದಿದ್ದರೆ ಅದನ್ನು ಸಂಬಂಧಪಟ್ಟ ವ್ಯಕ್ತಿಯ ನಡುವಿನ ಪೂರೈಕೆ ಎನ್ನಲಾಗುತ್ತದೆ.

ನೇರ ನಿಯಂತ್ರಣ

One of them directly or indirectly controls the other

ಮೇಲೆ ವಿವರಿಸಿದOತೆ, ಗಣೇಶ್ ಟ್ರೇಡಿಂಗ್ ಲಿಮಿಟೆಡ್, ರಾಕೇಶ್ ಟ್ರೇಡಿಂಗ್ ಲಿಮಿಟೆಡ್ ನ ಷೇರನ್ನು ಹೊಂದಿದೆ.

ಗಣೇಶ್ ಟ್ರೇಡಿಂಗ್ ಕಂಪನಿಯು ರಾಕೇಶ್ ಟ್ರೇಡಿಂಗ್ ಕಂಪನಿಯ ವ್ಯವಹಾರವನ್ನು ನೇರವಾಗಿ ನಿಯಂತ್ರಿಸುವುದರಿಂದ, ಗಣೇಶ್ ಟ್ರೇಡಿಂಗ್ ಲಿಮಿಟೆಡ್ ಮತ್ತು ರಾಕೇಶ್ ಟ್ರೇಡಿಂಗ್ ನಡುವಿನ ಪೂರೈಕೆಯು ಸಂಬಂಧಪಟ್ಟಿರುತ್ತದೆ.

ಪರೋಕ್ಷ ನಿಯಂತ್ರಣ

One of them directly or indirectly controls the other
ಮೇಲೆ ವಿವರಿಸಿದOತೆ ಗಣೇಶ್ ಟ್ರೇಡಿಂಗ್ ಲಿಮಿಟೆಡ್, ರಾಕೇಶ್ ಟ್ರೇಡಿಂಗ್ ಲಿಮಿಟೆಡ್ ನ ಷೇರುಗಳನ್ನು ಹೊಂದಿದೆ. ರಾಕೇಶ್ ಟ್ರೇಡಿಂಗ್ ಲಿಮಿಟೆಡ್, ಮ್ಯಾಕ್ಸ್ ಟ್ರೇಡಿಂಗ್ ಲಿಮಿಟೆಡ್ನ ಷೇರುಗಳನ್ನು ಹೊಂದಿದೆ. ಗಣೇಶ್ ಟ್ರೇಡಿಂಗ್ ಲಿಮಿಟೆಡ್ ಮತ್ತು ಮ್ಯಾಕ್ಸ್ ಟ್ರೇಡಿಂಗ್ ಲಿಮಿಟೆಡ್ ನಡುವಿನ ಯಾವುದೇ ಪೂರೈಕೆಯು ಸಂಬಂಧಪಟ್ಟ ಪೂರೈಕೆಯಾಗಿದೆ. ಯಾಕೆಂದರೆ, ರಾಕೇಶ್ ಟ್ರೇಡಿಂಗ್ ಮೂಲಕ ಗಣೇಶ್ ಟ್ರೇಡಿಂಗ್ ಲಿಮಿಟೆಡ್ ರಾಕೇಶ್ ವ್ಯವಹಾರವನ್ನು ಪರೋಕ್ಷವಾಗಿ ನಿಯಂತ್ರಿಸುತ್ತದೆ.

6. ಇಬ್ಬರನ್ನೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮೂರನೇ ವ್ಯಕ್ತಿ ನಿಯಂತ್ರಿಸುತ್ತಾನೆ: ಯಾವುದೇ ಪೂರೈಕೆಯಲ್ಲಿ, ಪೂರೈಕೆದಾರರು ಮತ್ತು ಸ್ವೀಕೃತಿದಾರರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮೂರನೇ ವ್ಯಕ್ತಿಯಿಂದ ನಿಯಂತ್ರಿಸಲ್ಪಡುತ್ತಾರೆ
ಮೇಲಿನ ಚಿತ್ರದಲ್ಲಿ ಗಣೇಶ್ ಟ್ರೇಡಿಂಗ್ ಕಂಪನಿಯು ರಾಕೇಶ್ ಟ್ರೇಡಿಂಗ್ ಲಿಮಿಟೆಡ್ ಮತ್ತು ಮ್ಯಾಕ್ಸ್ ಟ್ರೇಡಿಂಗ್ನಲ್ಲಿ ಷೇರುಗಳನ್ನು ಹೊಂದಿದೆ. ರಾಕೇಶ್ ಟ್ರೇಡಿಂಗ್ ಲಿಮಿಟೆಡ್ ಮತ್ತು ಮ್ಯಾಕ್ಸ್ ಟ್ರೇಡಿಂಗ್ ಲಿಮಿಟೆಡ್ ನಡುವಿನ ಪೂರೈಕೆಯು ಗಣೇಶ್ ಟ್ರೇಡಿಂಗ್ ಲಿಮಿಟೆಡ್ ನಿಯಂತ್ರಣಕ್ಕೆ ಒಳಪಟ್ಟಿರುವುದರಿಂದ
‘ಸಂಬಂಧಪಟ್ಟ’ ಪೂರೈಕೆಯಾಗಿರುತ್ತದೆ’.

7. ಅವರಿಬ್ಬರೂ ಜೊತೆಯಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮೂರನೇ ವ್ಯಕ್ತಿಯನ್ನುನಿಯಂತ್ರಿಸುತ್ತಾರೆ
Together they directly or indirectly control a third person
ಮೇಲೆ ಚಿತ್ರಿಸಿದಂತೆ, ರಾಕೇಶ್ ಟ್ರೇಡಿಂಗ್ ಕಂಪನಿಯು ಮ್ಯಾಕ್ಸ್ ಟ್ರೇಡಿಂಗ್ ನಲ್ಲಿ ಶೇಕಡ 80ರಷ್ಟು ಷೇರು ಮತ್ತು ಗಣೇಶ್ ಟ್ರೇಡಿಂಗ್ ಲಿಮಿಟೆಡ್ ನಲ್ಲಿ ಶೇಕಡ 30ರಷ್ಟು ಷೇರು ಹೊಂದಿದ್ದಾರೆ.

ಮ್ಯಾಕ್ಸ್ ಟ್ರೇಡಿಂಗ್ ಕಂಪನಿಯು ಗಣೇಶ್ ಟ್ರೇಡಿಂಗ್ ಲಿಮಿಟೆಡ್ ನ ಶೇಕಡ 70ರಷ್ಟು ಷೇರುಗಳನ್ನು ಹೊಂದಿದೆ. ಈಗ, ಜೊತೆಯಾಗಿ ರಾಕೇಶ್ ಟ್ರೇಡಿಂಗ್ ಲಿಮಿಟೆಡ್, ಗಣೇಶ್ ಟ್ರೇಡಿಂಗ್ ಲಿಮಿಟೆಡ್ ನ ನಿಯಂತ್ರಣದಲ್ಲಿದೆ. ಇವರ ನಡುವಿನ ಪೂರೈಕೆಯು ಸಂಬಂಧಪಟ್ಟ ವ್ಯಕ್ತಿಯ ನಡುವಿನ ಪೂರೈಕೆಯಾಗುತ್ತದೆ.

8. ಅವರು ಒಂದೇ ಕುಟುಂಬದ ಸದಸ್ಯರು: ಒಂದೇ ಕುಟುಂಬದ ಸದಸ್ಯರ ನಡುವೆ ನಡೆಯುವ ಪೂರೈಕೆಯನ್ನು ಸಂಬಂಧಪಟ್ಟ ವ್ಯಕ್ತಿಗಳ ನಡುವಿನ ಪೂರೈಕೆ ಎನ್ನಲಾಗುತ್ತದೆ.

ಭಿನ್ನ ವ್ಯಕ್ತಿ

ಒಂದೇ ರಾಜ್ಯದಲ್ಲಿ ಅಥವಾ ಇತರೆ ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ನೋಂದಣಿ ಮಾಡುವ ಅಗತ್ಯವಿರುವ ವ್ಯಕ್ತಿಯನ್ನು, ಅಥವಾ ಒಬ್ಬ ವ್ಯಕ್ತಿಯ ಸಂಸ್ಥೆಯು, ಒಂದು ರಾಜ್ಯದಲ್ಲಿ ನೋಂದಾಯಿಸಿರುವ /ನೋಂದಾಯಿಸಬೇಕಾದ ಮತ್ತು ಇತರೆ ರಾಜ್ಯದಲ್ಲಿರುವ ಮತ್ತೊಂದು ಸಂಸ್ಥೆಯನ್ನು ನೋಂದಾಯಿಸಿರುವ ವ್ಯಕ್ತಿಯನ್ನು ಭಿನ್ನ ವ್ಯಕ್ತಿ ಎನ್ನುತ್ತಾರೆ

ಅವರ ಪ್ರತಿಯೊಂದು ನೋಂದಣಿ ಮತ್ತು ಸಂಸ್ಥೆಯನ್ನು ‘ಭಿನ್ನ ವ್ಯಕ್ತಿಯಾಗಿ’ ಪರಿಗಣಿಸಲಾಗುತ್ತದೆ ಮತ್ತು ಅವರ ನಡುವಿನ ಯಾವುದೇ ಪೂರೈಕೆಗೆ ತೆರಿಗೆ ವಿಧಿಸಬಹುದಾಗಿದೆ.
ಇಷ್ಟು ಮಾತ್ರವಲ್ಲದೆ, ಯಾವುದೇ ದಾಸ್ತಾನು ಸಾಗಣೆ ಅಥವಾ ಶಾಖೆಯ ಸಾಗಣೆಯು ಈ ಮುಂದಿನ ಎರಡು ಪ್ರಕರಣಗಳಲ್ಲಿ ತೆರಿಗೆಗೆ ಒಳಪಡುತ್ತದೆ:
1. ರಾಜ್ಯದೊಳಗೆ ದಾಸ್ತಾನು ಸಾಗಾಣೆ: ಒಂದು ಅಸ್ತಿತ್ವವು, ಒಂದು ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ನೋಂದಣಿ ಮಾಡಿದ್ದರೆ;
ಉದಾಹರಣೆಗೆ:

ಸೂಪರ್ ಕಾರ್ಸ್ ಲಿಮಿಟೆಡ್ ಕರ್ನಾಟಕದಲ್ಲಿರುವ ಕಾರು ತಯಾರಿಕಾ ಕಂಪನಿ. ಈ ಕಂಪನಿಯು ಕರ್ನಾಟಕದಲ್ಲಿ ಇನ್ನೊಂದು ಸರ್ವೀಸ್ ಘಟಕವನ್ನೂ ಹೊಂದಿದೆ. ಸೂಪರ್ ಕಾರ್ಸ್ ಲಿಮಿಟೆಡ್ ತಯಾರಿಕಾ ಮತ್ತು ಸೇವಾ ಘಟಕಕ್ಕೆ ಪ್ರತ್ಯೇಕ ನೋಂದಣಿ ಮಾಡಿಸಿಕೊಂಡಿದೆ.
ಸೂಪರ್ ಕಾರ್ಸ್ ಲಿಮಿಟೆಡ್ ನ ತಯಾರಿಕಾ ಘಟಕ ಮತ್ತು ಸೇವಾ ಘಟಕವು ಭಿನ್ನ ವ್ಯಕ್ತಿ ಎಂದು ಪರಿಗಣಿಸಲ್ಪಡುತ್ತದೆ ಮತ್ತು ಅವೆರಡರ ನಡುವಿನ ಯಾವುದೇ ಪೂರೈಕೆಗೆ ಯಾವುದೇ ಪರಿಗಣನೆ ಇಲ್ಲವಾದರೂ ತೆರಿಗೆ ವಿಧಿಸಲ್ಪಡುತ್ತದೆ.

2. ಅಂತರ್ ರಾಜ್ಯ ದಾಸ್ತಾನು ಸಾಗಾಣೆ: ಎರಡು ಭಿನ್ನ ರಾಜ್ಯಗಳಲ್ಲಿರುವ ಘಟಕಗಳಿಂದ ದಾಸ್ತಾನು ಸಾಗಾಣೆಗೆ ತೆರಿಗೆ ದಾಸ್ತಾನು ವಿಧಿಸಲಾಗುತ್ತದೆ.

ಉದಾಹರಣೆ
ಸೂಪರ್ ಕಾರ್ಸ್ ಲಿಮಿಟೆಡ್ ಕರ್ನಾಟಕದಲ್ಲಿ ತಯಾರಿಕಾ ಘಟಕವನ್ನು ಹೊಂದಿದೆ. ಈ ಕಂಪನಿಯು ದೆಹಲಿಯಲ್ಲಿ ಸೇವಾ ಘಟಕವನ್ನು ಹೊಂದಿದೆ.
ಸೂಪರ್ ಕಾರ್ಸ್ ಲಿಮಿಟೆಡ್ ನ ಕರ್ನಾಟಕದಲ್ಲಿರುವ ತಯಾರಿಕಾ ಘಟಕ ಮತ್ತು ದೆಹಲಿಯಲ್ಲಿರುವ ಸೇವಾ ಘಟಕವನ್ನು ಭಿನ್ನ ವ್ಯಕ್ತಿಯಾಗಿ ಪರಿಗಣಿಸಲಾಗುತ್ತದೆ ಮತ್ತು ಅವರ ನಡುವಿನ ಯಾವುದೇ ಪೂರೈಕೆಗೆ ಯಾವುದೇ ಪರಿಗಣನೆ ಇಲ್ಲದೆ ತೆರಿಗೆ ವಿಧಿಸಲಾಗುತ್ತದೆ

ಗಮನಿಸಿ: ಒಮ್ಮೆ ಸಂಪೂರ್ಣ ನಿಯಮಗಳು ದೊರಕಿದ ನಂತರ ಪೂರೈಕೆಗೆ ತೆರಿಗೆ ವಿಧಿಸುವ ಕುರಿತು ಹೆಚ್ಚು ಸ್ಪಷ್ಟತೆ ದೊರಕಲಿದೆ.

Are you GST ready yet?

Get ready for GST with Tally.ERP 9 Release 6

76,256 total views, 28 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.