ನಮ್ಮ ಹಿಂದಿನ ಬ್ಲಾಗ್ “ಸರಕು ಮತ್ತು ಸೇವೆಗಳ ಪೂರೈಕೆ: ಇದರ ಅರ್ಥವೇನು” ಎಂಬ ಬರಹದಲ್ಲಿ ಮಾರಾಟ, ಸಾಗಾಣೆ ಮತ್ತು ಇತರೆ ವ್ಯವಹಾರ ನಿರ್ವಹಣೆಗಳ ಸರಬರಾಜಿಗೆ ಸಂಬಂಧಪಟ್ಟ ವಿಷಯಗಳ ಕುರಿತು ನಾವು ವಿವರವಾಗಿ ಚರ್ಚಿಸಿದ್ದೇವೆ.

ಈ ಬ್ಲಾಗ್ ಬರಹದಲ್ಲಿ ನಾವು ತೆರಿಗೆ ವಿಧಿಸಬಲ್ಲ ಪೂರೈಕೆಯ ಭಾಗವಾಗಿರುವ ಅಸಾಧಾರಣ ಸನ್ನಿವೇಶಗಳ ಕುರಿತು ಚರ್ಚಿಸುತ್ತಿದ್ದೇವೆ:

  • ಪರಿಗಣನೆಗೆ ತೆಗೆದುಕೊಳ್ಳದೆ ಪೂರೈಕೆ ಮಾಡಿರುವುದು
  • ಪರಿಗಣನೆಗಾಗಿ ಸರಬರಾಜು ಮಾಡಿರುವುದು, ಸಂಬಂಧಪಟ್ಟು ಅಥವಾ ಸಂಬಂಧಪಡದೆ ಅಥವಾ ವ್ಯವಹಾರದ ಮುಂದುವರಿಕೆಗಾಗಿ

ಪರಿಗಣಿಸದೆ ಮಾಡುವ ಸರಬರಾಜು

GST supply without consideration

ಪರಿಗಣನಿಸದೆ ಇದ್ದರೂ ಪೂರೈಕೆ ಮಾಡಿದ್ದರೆ ಮತ್ತು ತೆರಿಗೆಗೆ ಹೊಣೆಗಾರಿಕೆ ಹೊಂದಿದ್ದರೆ ಈ ಮುಂದಿನ ಚಟುವಟಿಕೆಗಳನ್ನು ಪರಿಗಣಿಸಲಾಗುತ್ತದೆ.

ಗಮನಿಸಿ: “ಸಂಬಂಧಪಟ್ಟ ವ್ಯಕ್ತಿಯ ಅಥವಾ ವಿಭಿನ್ನ ವ್ಯಕ್ತಿಯ ನಡುವೆ ಪರಿಗಣನೆಗೆ ತೆಗೆದುಕೊಳ್ಳದೆ ಸರಕು ಮತ್ತು ಅಥವಾ ಸೇವೆಯ ಪೂರೈಕೆಯ’ ಒಂದು ಪ್ರಮುಖ ಸನ್ನಿವೇಶಗಳು, ಈ ವಿಷಯದ ಕುರಿತು ಮುಂದಿನ ಬ್ಲಾಗ್ ಅಂಚೆಯಲ್ಲಿ ಮಾಹಿತಿ ನೀಡಲಾಗುವುದು.

1. ಖಾಯಂ ಆಗಿ ವ್ಯವಹಾರ ಸ್ವತ್ತುಗಳನ್ನು ಸಾಗಿಸುವುದು/ವಿಲೇವಾರಿ ಮಾಡುವಾಗ ಯಾವ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ವಯಿಸುತ್ತದೆ

ಎಲ್ಲಾದರೂ ವ್ಯವಹಾರ ಸ್ವತ್ತುಗಳ ಮಾರಾಟ ಅಥವಾ ರವಾನೆಯ ಸಂದರ್ಭಗಳಲ್ಲಿ ಬಂಡವಾಳ ಸರಕುಗಳಿಗೆ ಇನ್ಪುಟ್ ಸರಕುಗಳು ಹೇಗೆ ಅನ್ವಯಿಸುತ್ತದೆ ಅಂದರೆ- ಪರಿಗಣನೆಗೆ ತೆಗೆದುಕೊಳ್ಳದೆ ಸ್ವತ್ತನ್ನು ಕ್ಲೀಯರ್ ಮಾಡಿದ್ದರೆ ಅಥವಾ ರವಾನೆ ಮಾಡಿದರೆ ಈ ವ್ಯವಹಾರವನ್ನು ಪೂರೈಕೆ ಎಂದು ಪರಿಣಿಸಲಾಗುತ್ತದೆ ಮತ್ತು ಈ ವ್ಯವಹಾರವು ಜಿಎಸ್ಟಿ ಪಾವತಿಗೆ ಭಾದ್ಯತೆ ಹೊಂದುತ್ತದೆ.

ಉದಾಹರಣೆ

ಸೂಪರ್ ಕಾರ್ಸ್ ಲಿಮಿಟೆಡ್ ಸುಮಾರು 3,00,000 ರೂ. ಮೌಲ್ಯದ 15 ಕಂಪ್ಯೂಟರ್ ಅನ್ನು ಖರೀದಿಸುತ್ತದೆ ಮತ್ತು 54,000 ರೂ. ಜಿಎಸ್ಟಿ ಪಾವತಿಸಿರುತ್ತದೆ. ಸೂಪರ್ ಕಾರ್ಸ್ ಲಿಮಿಟೆಡ್ ಗೆ 54,000 ರೂ. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ದೊರಕುತ್ತದೆ. ಯಾಕೆಂದರೆ ಈ ಕಂಪ್ಯೂಟರ್ ಗಳನ್ನು ವ್ಯವಹಾರದ ದಾಖಲೆಗಳು ಮತ್ತು ಲೆಕ್ಕಗಳನ್ನು ನಿರ್ವಹಣೆ ಮಾಡುವ ಸಲುವಾಗಿ ಈ ಕಂಪ್ಯೂಟರ್ ಗಳನ್ನು ಬಳಸಲಾಗಿದೆ.

ಹಲವು ವರ್ಷಗಳ ಬಳಕೆಯ ನಂತರವು ಈ ಕಂಪ್ಯೂಟರ್ ಗಳನ್ನು ಉದ್ಯೋಗಿಗಳಿಗೆ ಯಾವುದೇ ವೆಚ್ಚ ಪಡೆಯದೆ ಸೂಪರ್ ಕಾರ್ಸ್ ಲಿಮಿಟೆಡ್ ನೀಡುತ್ತದೆ.

ಯಾವುದೇ ಪರಿಗಣನೆ ಇಲ್ಲದೆ ಈ ಕಂಪ್ಯೂಟರ್ ಗಳನ್ನು ವಿಲೇವಾರಿ ಮಾಡದೆ ಇದ್ದರೂ ಸೂಪರ್ ಕಾರ್ಸ್ ಲಿಮಿಟೆಡ್ ಜಿಎಸ್ಟಿ ಪಾವತಿಸಲು ಬಾಧ್ಯತೆ ಹೊಂದಿರುತ್ತದೆ.

ಗಮನಿಸಿ: ಒಮ್ಮೆ ಈ ನಿಯಮವನ್ನು ಅನ್ವಯಿಸಿದ ನಂತರ ಪೂರೈಕೆಯಂತಹ ವಿಷಯಗಳಿಗೆ ತೆರಿಗೆ ಮೌಲ್ಯದ ಕುರಿತು ಹೆಚ್ಚು ಸ್ಪಷ್ಟತೆ ದೊರಕಲಿದೆ.

2. ಸರಕುಗಳನ್ನು ಪ್ರಿನ್ಸಿಪಾಲ್ ಮತ್ತು ಅವರ ಪ್ರತಿನಿಧಿ ನಡುವೆ ಪೂರೈಕೆ ಮಾಡುವುದು

ಪರಿಶೀಲನೆಗೆ ಬರದೆ ಇದ್ದರೂ ಸರಕುಗಳ ಪೂರೈಕೆಗೆ ಈ ಮುಂದಿನ ಸನ್ನಿವೇಶಗಳಡಿಯಲ್ಲಿ ತೆರಿಗೆಗೆ ಪರಿಗಣಿಸಲ್ಪಡುತ್ತದೆ.

  • ಪ್ರಿನ್ಸಿಪಾಲ್ ವ್ಯಕ್ತಿಯಿಂದ ಆತನ ಪ್ರತಿನಿಧಿಗೆ ಪೂರೈಕೆ: ತನ್ನ ಪ್ರಿನ್ಸಿಪಾಲ್ ಪರವಾಗಿ ಯಾವಾಗ ಪ್ರತಿನಿಧಿಯು ಸರಕುಗಳ ಪೂರೈಕೆ ಮಾಡಲು ಆರಂಭಿಸುತ್ತಾನೋ ಆ ಸಮಯದಲ್ಲಿ
  • ಪ್ರಿನ್ಸಿಪಾಲಿಗೆ ಪ್ರತಿನಿಯಿಂದ ಪೂರೈಕೆ: ತನ್ನ ಪ್ರಿನ್ಸಿಪಾಲ್ ಪರವಾಗಿ ಯಾವಾಗ ಪ್ರತಿನಿಧಿಯು ಸರಕುಗಳನ್ನು ಪಡೆಯುತ್ತಾನೋ ಆ ಸಮಯದಲ್ಲಿ

ಉದಾಹರಣೆ

ಸೂಪರ್ ಕಾರ್ ಲಿಮಿಟೆಡ್ ಕಂಪನಿಯು ಶರ್ಮಾ ಏಜೆನ್ಸಿಯನ್ನು ತನ್ನ ಪ್ರತಿನಿಧಿಯನ್ನಾಗಿ ನೇಮಕ ಮಾಡುತ್ತದೆ ಮತ್ತು ಆತನ ಮಧ್ಯವರ್ತಿಗಳಿಂದ, ಸೂಚನೆಗಳಿಂದ ಸೂಪರ್ ಕಾರ್ಸ್ ಲಿಮಿಟೆಡ್ ಆದೇಶಗಳನ್ನು ಪಡೆಯುತ್ತದೆ ಮತ್ತು ಶರ್ಮಾ ಏಜೆನ್ಸಿಗೆ ಪೂರೈಕೆಯನ್ನು ಸ್ವೀಕರಿಸಲು ಸೂಚನೆಗಳನ್ನು ಪಡೆಯುತ್ತದೆ.

ಇಷ್ಟು ಮಾತ್ರವಲ್ಲದೆ, ಸೂಪರ್ ಕಾರ್ಸ್ ಲಿಮಿಟೆಡ್ ಪರವಾಗಿ ವಿವಿಧ ತಯಾರಕರಿಂದ ಶರ್ಮಾ ಏಜೆನ್ಸಿಯು ಕಚ್ಚಾ ಸಾಮಾಗ್ರಿಗಳನ್ನು ಪಡೆಯುತ್ತದೆ.

ಈ ಉದಾಹರಣೆಯ ಪ್ರಕಾರ,

  • ಸೂಪರ್ ಕಾರ್ಸ್ ಲಿಮಿಟೆಡ್ ಪ್ರಿನ್ಸಿಪಾಲ್ ಆಗುತ್ತದೆ ಮತ್ತು ಶರ್ಮಾ ಏಜೆನ್ಸಿಯು ಪ್ರತಿನಿಧಿಯಾಗುತ್ತದೆ.
  • ಸೂಪರ್ ಕಾರ್ಸ್ ಲಿಮಿಟೆಡ್ ನಿಂದ ಶರ್ಮಾ ಏಜೆನ್ಸಿಗೆ ಬಿಡಿಭಾಗಗಳ ಪೂರೈಕೆ ಮಾಡುವುದು ತೆರಿಗೆ ವಿಧಿಸಬಹುದಾದ ಪೂರೈಕೆಯಾಗುತ್ತದೆ.
  • ಸೂಪರ್ ಕಾರ್ಸ್ ಲಿಮಿಟೆಡ್ ಪರವಾಗಿ ಶರ್ಮಾ ಏಜೆನ್ಸಿಯು ಕಚ್ಚಾ ಸಾಮಾಗ್ರಿಗಳನ್ನು ಪಡೆಯುವುದು ಮತ್ತು ಶರ್ಮಾ ಏಜೆನ್ಸಿಯಿಂದ ಸೂಪರ್ ಕಾರ್ಸ್ ಲಿಮಿಟೆಡ್ ಗೆ ಪೂರೈಕೆ ಮಾಡುವುದು ಸ ತೆರಿಗೆ ವಿಧಿಸಬಹುದಾದ ಪೂರೈಕೆಯಾಗಿರುತ್ತದೆ.

ಮೇಲೆ ತಿಳಿಸಲಾದ ಈ ಬಾಧ್ಯತೆಗಳನ್ನು ಸೂಪರ್ ಕಾರ್ಸ್ ಲಿಮಿಟೆಡ್ ಮತ್ತು ಶರ್ಮಾ ಏಜೆನ್ಸಿಯು ಜಂಟಿಯಾಗಿ ಹಂಚಿಕೊಳ್ಳಬಹುದು ಅಥವಾ ಅವರಲ್ಲಿ ಯಾರೂ ಬೇಕಾದರೂ ವೈಯಕ್ತಿಕವಾಗಿ ಪಾವತಿಸಬಹುದು.

ಗಮನಿಸಿ: ಒಮ್ಮೆ ಈ ನಿಯಮ ಅನುಷ್ಠಾನಕ್ಕೆ ಬಂದ ಬಳಿಕ ತೆರಿಗೆ ಪಾವತಿಸಲು ಬಾಧ್ಯತೆ ಕುರಿತು ಹೆಚ್ಚು ಸ್ಪಷ್ಟತೆ ದೊರಕುತ್ತದೆ.

3. ವ್ಯವಹಾರದ ಉದ್ದೇಶದಿಂದ ಅಥವಾ ವ್ಯವಹಾರದ ವಿಸ್ತರಣೆಗಾಗಿ ಸಂಬಂಧಪಟ್ಟ ವ್ಯಕ್ತಿ ಅಥವಾ ಭಾರತದ ಹೊರಗೆ ಇರುವ ಆತನ ಯಾವುದೇ ಸಂಸ್ಥೆಗಳಿಂದ ತೆರಿಗೆಗೆ ಒಳಪಡುವ ವ್ಯಕ್ತಿಯಿಂದ ಆಮದೀಕರಣ.

ಭಾರತದ ಹೊರಗೆ ಇರುವ ಸಂಬಂಧಪಟ್ಟ ವ್ಯಕ್ತಿಯಿಂದ ಸೇವೆಯನ್ನು ಆಮದು ಮಾಡಿಕೊಳ್ಳುವುದು ಎಲ್ಲಾದರೂ ವ್ಯವಹಾರಕ್ಕೆ ಸಂಬಂಧಪಟ್ಟದಾದರೆ ಮಾತ್ರ ಜಿಎಸ್ಟಿ ಲೆವಿ ಅನ್ವಯಿಸುತ್ತದೆ.

ಉದಾಹರಣೆ 1

ಸಿಂಗಾಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಂಪನಿಯೊಂದು ತನ್ನ ಶಾಖೆಗಾಗಿ ಒಳಾಂಗಣ ವಿನ್ಯಾಸ ಸೇವೆ ನೀಡುತ್ತದೆ. ಈ ಒಳಾಂಗಣ ಸೇವೆಗೆ ತೆರಿಗೆ ನೀಡಬೇಕು ಮತ್ತು ರಿವರ್ಸ್ ಚಾರ್ಜ್ ಆಧಾರದಲ್ಲಿ ಈ ಸೇವೆಯು ಜಿಎಸ್ಟಿಗೆ ಒಳಪಡುತ್ತದೆ.

ಆದರೆ, ಪರಿಗಣಿಸಲ್ಪಡದೆ ಸಂಬಂಧಪಡದ ವ್ಯಕ್ತಿಯಿಂದ ವ್ಯವಹಾರದ ಉದ್ದೇಶಕ್ಕಾಗಿ ಸೇವೆಯನ್ನು ಆಮದು ಮಾಡಿಕೊಂಡರೆ ಮತ್ತು ಪರಿಗಣನೆಗೆ ತೆಗೆದುಕೊಳ್ಳದೆ ಪೂರೈಕೆಗಾಗಿ ಅಲ್ಲದೆ ವೈಯಕ್ತಿಕ ಉದ್ದೇಶಕ್ಕಾಗಿ ಸೇವೆಯನ್ನು ಆಮದು ಮಾಡಿಕೊಂಡರೆ ಅದು ಜಿಎಸ್ಟಿಗೆ ಒಳಪಡುವುದಿಲ್ಲ.

ಉದಾಹರಣೆ 2

ಸಿಂಗಾಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಇಂಟಿರಿಯರ್ ಡಿಸೈನ್ ಸರ್ವೀಸ್ ತನ್ನ ವೈಯಕ್ತಿಕ ನಿವಾಸಕ್ಕಾಗಿ ಸೇವೆಯನ್ನು ಪಡೆದರೆ ಅದಕ್ಕೆ ಜಿಎಸ್ಟಿ ಅನ್ವಯಿಸುವುದಿಲ್ಲ.

ವ್ಯವಹಾರದ ಉದ್ದೇಶಕ್ಕಾಗಿ ಅಥವಾ ಅಲ್ಲದೆ ಪೂರೈಕೆ ಮಾಡಿರುವುದು

GST supply whether or not in the course or for furtherance of business

ಪರಿಗಣನೆಗೆ ತೆಗೆದುಕೊಳ್ಳುವ ಸೇವೆಯನ್ನು ಆಮದು ಮಾಡಿಕೊಳ್ಳುವುದು, ಅದು ಕೋರ್ಸಿಗೆ ಸಂಬಂಧಪಟ್ಟ ಅಥವಾ ಸಂಬಂಧಪಡದೆ ಅಥವಾ ವ್ಯವಹಾರದ ಉದ್ದೇಶಕ್ಕಾಗಿ ಆಗಿದ್ದರೆ ಅದು ತೆರಿಗೆ ವಿಧಿಸಬಲ್ಲ ಪೂರೈಕೆಯಾಗಿರತ್ತದೆ. ಪರಿಗಣಿಸಲ್ಪಡುವ ಈ ಸೇವೆಯನ್ನು ಆಮದು ಮಾಡಿಕೊಂಡಿದ್ದರೆ, ಅದು ವ್ಯವಹಾರದ ಉದ್ದೇಶಕ್ಕೆ ಅಥವಾ ವೈಯಕ್ತಿಕ ಉದ್ದೇಶಕ್ಕೆ ಆಗಿದ್ದರೆ ನೀವು ಜಿಎಸ್ಟಿ ಪಾವತಿಸಲು ಬಾಧ್ಯರಾಗಿರುತ್ತೀರಿ.

ಉದಾಹರಣೆ

ಎಲ್ಲಾದರೂ ಸೂಪರ್ ಕಾರ್ಸ್ ಲಿಮಿಟೆಡ್ ತನ್ನ ಸಿಂಗಾಪುರದಲ್ಲಿರುವ ವ್ಯಾಪಾರಿಯಿಂದ ನ್ಯಾವಿಗೇಷನ್ ಡಿಸೈನ್ ಸರ್ವೀಸ್ ಅನ್ನು 20 ಸಾವಿರ ಸಿಂಗಾಪುರ ಡಾಲರ್ಗೆ ಆಮದು ಮಾಡಿಕೊಂಡಿದೆ ಎಂದಿರಲಿ.

ಈಗ ಸೂಪರ್ ಕಾರ್ಸ್ ಲಿಮಿಟೆಡ್ ಕಂಪನಿಯು ಮೇಲೆ ನಮೋದಿಸಿದ ಆಮದು ಸೇವೆಗೆ ರಿವರ್ಸ್ ಚಾರ್ಜ್ ಆ ಜಿಎಸ್ಟಿ ಪಾವತಿಸಬೇಕು.

Are you GST ready yet?

Get ready for GST with Tally.ERP 9 Release 6

84,935 total views, 22 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.