ತೆರಿಗೆ ಮರುಪಾವತಿ ಎಂದರೆ ತೆರಿಗೆ ಪಾವತಿದಾರರಿಗೆ ನಿಗದಿಪಡಿಸಿದ ಮೊತ್ರವನ್ನು ತೆರಿಗೆ ಇಲಾಖೆಯು ವಾಪಸ್ ನೀಡುವ ಪ್ರಕ್ರಿಯೆಯಾಗಿದೆ. ಮರುಪಾವತಿ ಪಡೆಯುವುದಕ್ಕೆ ಸಂಬಂಧಪಟ್ಟಂತೆ ನಿರ್ದಿಷ್ಟ ಸನ್ನಿವೇಶಗಳಿವೆ ಮತ್ತು ಈ ಸಂದರ್ಭಗಳಲ್ಲಿ ಮಾತ್ರ ವಿತರಕರು ಮರುಪಾವತಿ ಕೇಳಬಹುದಾಗಿದೆ. ಹೆಚ್ಚುವರಿ ತೆರಿಗೆ ಪಾವತಿ, ರಫ್ತು ಸಂದರ್ಭದಲ್ಲಿ ಬಳಕೆ ಮಾಡದ ಇನ್ಪುಟ್ ತೆರಿಗೆ ಪಾವತಿ, ಇನ್ಪುಟ್ ಮೇಲೆ ತೆರಿಗೆಯ ದರವು ಔಟ್ ಪುಟ್ ಮೇಲಿನ ತೆರಿಗೆಗಿಂತ ಹೆಚ್ಚಾದರೆ.. ಇತ್ಯಾದಿ ಹಲವು ಸಂದರ್ಭಗಳಲ್ಲಿ ಮರುಪಾವತಿ ಕೇಳಬಹುದಾಗಿದೆ.

ಈಗಿನ ತೆರಿಗೆ ಪದ್ಧತಿಯಲ್ಲಿ ಯಾವ ಸನ್ನಿವೇಶದಲ್ಲಿ ತೆರಿಗೆ ಮರುಪಾವತಿ ಕೇಳಬಹುದು ಎಂದು ಆರಂಭದಲ್ಲಿ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ ಬನ್ನಿ.

ಈಗಿನ ತೆರಿಗೆ ಪದ್ಧತಿ

ಈ ಮುಂದಿನ ಸಂದರ್ಭಗಳಲ್ಲಿ ಈಗಿನ ತೆರಿಗೆ ಪದ್ಧತಿಯಲ್ಲಿ ಮರುಪಾವತಿಗೆ ಅವಕಾಶ ನೀಡಲಾಗುತ್ತದೆ:

ಅಬಕಾರಿ

ಈ ಮುಂದಿನ ಸಂದರ್ಭಗಳಲ್ಲಿ ಮರುಪಾವತಿಗೆ ಅವಕಾಶ:

 1. 1. ರಫ್ತು ಮಾಡಲಿರುವ ಸರಕು ಖರೀದಿಗೆ ತೆರಿಗೆ ಪಾವತಿಸಿದರೆ ಅಥವಾ ಇನ್ಪುಟ್ ಅನ್ನು ಸರಕು ರಫ್ತಿಗೆ ಬಳಕೆ ಮಾಡಿದರೆ.
 2. 2. ಕೇವಲ ರಫ್ತಿಗಾಗಿ ಔಟ್ ಪುಟ್ ಪೂರೈಕೆ ಮಾಡಲಾಗಿದ್ದು ಇನ್ಪುಟ್ ತೆರಿಗೆ ಪಾವತಿ ಸಂಗ್ರಹಿಸಿದ್ದರೆ ಅಥವಾ ಶೂನ್ಯ ಶ್ರೇಯಾಂಕದ ಪೂರೈಕೆಗೆ.

ವ್ಯಾಟ್

ಈ ಮುಂದಿನ ಸಂದರ್ಭಗಳಲ್ಲಿ ಮರುಪಾವತಿಗೆ ಅವಕಾಶ:

  1. ರಫ್ತು ಮಾಡುವ ಸರಕು ಖರೀದಿಗೆ ವ್ಯಾಟ್ ಪಾವತಿ.
  2. ಅಧಿಕ ಇನ್ಪುಟ್ ತೆರಿಗೆ ಪಾವತಿ- ಬಹುತೇಕ ರಾಜ್ಯಗಳಲ್ಲಿ ತಿಂಗಳೊಂದರಲ್ಲಿ ಮಾರಾಟಕ್ಕೆ ಪಾವತಿ ಮಾಡುವ ಇನ್ಪುಟ್ ತೆರಿಗೆ ಪಾವತಿ ಅಧಿಕವಿದ್ದರೆ, ಅಧಿಕ ಪಾವತಿಸಿರುವ ಮೊತ್ತವನ್ನು ಆರ್ಥಿಕ ವರ್ಷದ ಅಂತ್ಯದವರೆಗೆ ಕೊಂಡೊಯ್ಯಲಾಗುತ್ತದೆ. ಹಣಕಾಸು ವರ್ಷದ ಕೊನೆಗೆ, ಈ ಅಧಿಕ ಮೊತ್ತವನ್ನು ಮರುಪಾವತಿ ಮಾಡುವಂತೆ ಕೇಳುವ ಅಥವಾ ಇನ್ಪುಟ್ ತೆರಿಗೆ ಪಾವತಿಯಾಗಿ ಮುಂದಕ್ಕೆ ಹಾಕುವಂತೆ ಕೇಳುವ ಆಯ್ಕೆಯು ವಿತರಕರಿಗೆ ಇರುತ್ತದೆ.

ಸೇವಾ ತೆರಿಗೆ

ಈ ಮುಂದಿನ ಸಂದರ್ಭಗಳಲ್ಲಿ ಮರುಪಾವತಿ ಕೇಳಲು ಅವಕಾಶ:

  1. ಸೇವಾ ತೆರಿಗೆ ಪಾವತಿಸಿರವುದು ಅಧಿಕವಾಗಿದ್ದರೆ, ಹೆಚ್ಚುವರಿ ತೆರಿಗೆ ಪಾವತಿಸಿರುವುದನ್ನು ಮುಂದಿನ ತೆರಿಗೆ ಪಾವತಿ ಬಾಧ್ಯತೆಯಾಗಿ ಹೊಂದಾಣಿಕೆ ಮಾಡಲು ಅವಕಾಶವಿಲ್ಲದೆ ಇದ್ದಾಗ.
  2. ಹೊರಗಿನ ಸೇವೆಗೆ ಅಧಿಕ ಇನ್ಪುಟ್ ತೆರಿಗೆ ಪಾವತಿ ಬಳಸಿದರೆ, ಸೇವಾ ತೆರಿಗೆ ಪಾವತಿಸದೆ ರಫ್ತು ಮಾಡಲು ಬಳಸಬಹುದು.

ಜಿಎಸ್ಟಿಯನ್ವಯ ತೆರಿಗೆ ಮರುಪಾವತಿ ಅವಕಾಶಗಳನ್ನು ಅರ್ಥಮಾಡಿಕೊಳ್ಳೋಣ

ಜಿಎಸ್ಟಿ ಪದ್ಧತಿ

ಜಿಎಸ್ಟಿ ಪದ್ಧತಿಯಲ್ಲಿ, ಈ ಸನ್ನಿವೇಶದಲ್ಲಿ, ತೆರಿಗೆ ಮರುಪಾವತಿಯು ಈಗಿನ ತೆರಿಗೆ ಮರುಪಾವತಿಗೆ ಬಹುತೇಕ ಹೋಲಿಕೆಯಾಗುತ್ತದೆ. ಈ ಮುಂದಿನ ಸಾಮಾನ್ಯ ಸಂದರ್ಭಗಳಲ್ಲಿ ಜಿಎಸ್ಟಿಯನ್ವಯ ತೆರಿಗೆ ಮರುಪಾವತಿ ಪಡೆಯಲು ಅವಕಾಶವಿದೆ:

  ರಫ್ತು ಮಾಡಿರುವ ಸರಕು ಮತ್ತು /ಅಥವಾ ಸೇವೆಯ ಇನ್ವಾರ್ಡ್ ಪೂರೈಕೆಗೆ ತೆರಿಗೆ ಪಾವತಿಸಿರುವುದು ಅಥವಾ ರಫ್ತು ಮಾಡಿರುವ ಸರಕು ಮತ್ತು /ಅಥವಾ ಸೇವೆಯ ಇನ್ಪುಟ್ ಅಥವಾ ಔಟ್ಪುಟ್ ಸೇವೆಯನ್ನು ಬಳಸಿರುವುದು. ಎಲ್ಲಾದರೂ ಸರಕು ರಫ್ತು ತೆರಿಗೆಗೆ ಒಳಪಟ್ಟಿದ್ದರೆ, ಮರುಪಾವತಿಗೆ ಅವಕಾಶವಿಲ್ಲ.
  • ರಫ್ತು ಅಥವಾ ಶೂನ್ಯ ಶ್ರೇಯಾಂಕದ ಪೂರೈಕೆಯ ಔಟ್ ಪುಟ್ ತೆರಿಗೆ ಪಾವತಿಯಿಂದಾಗಿ ಇನ್ಪುಟ್ ತೆರಿಗೆ ಪಾವತಿಯನ್ನುಬಳಕೆ ಮಾಡದೆ ಇದ್ದರೆ.
  • ತಲೆಕೆಳಗಾದ ಸುಂಕದ ರಚನೆಯಿಂದಾಗಿ ಇನ್ಪುಟ್ ತೆರಿಗೆ ಪಾವತಿಯನ್ನು ಬಳಕೆ ಮಾಡದೆ ಇರುವುದು. ಔಟ್ ಪುಟ್ ಪೂರೈಕೆಯ ತೆರಿಗೆಯ ದರವು ಇನ್ಪುಟ್ ತೆರಿಗೆ ದರಕ್ಕಿಂತ ಅಧಿಕವಾಗಿದ್ದರೆ ಇಂತಹ ಸನ್ನಿವೇಶ ಉದ್ಭವಿಸುತ್ತದೆ. ಈಗಿನ ತೆರಿಗೆ ಪದ್ಧತಿಯಲ್ಲಿ, ಇದಕ್ಕೆ ಮರುಪಾವತಿ ಪಡೆಯುವ ಅವಕಾಶ ನೀಡಲಾಗಿಲ್ಲ. ಆದರೆ, ಜಿಎಸ್ಟಿ ಪದ್ಧತಿಯಲ್ಲಿ ಈ ಸಂದರ್ಭದಲ್ಲಿ ಮರುಪಾವತಿ ಪಡೆಯುವ ಅವಕಾಶ ನೀಡಲಾಗಿದೆ. ಪೂರೈಕೆಯು ಶೂನ್ಯ ಶ್ರೇಯಾಂಕ ಅಥವಾ ಸಂಪೂರ್ಣ ವಿನಾಯಿತಿಯದ್ದಾಗಿದ್ದರೆ ಈ ಸಂದರ್ಭದಲ್ಲಿಯೂ ಮರುಪಾವತಿ ಕೇಳುವ ಅವಕಾಶವನ್ನು ನೀಡಲಾಗಿಲ್ಲ.

ಜಿಎಸ್ಟಿ ಮರುಪಾವತಿ ಕೇಳುವ ಪ್ರಕ್ರಿಯೆಗಳು

1. ಮರುಪಾವತಿಗಾಗಿ ಅರ್ಜಿ ಸಲ್ಲಿಕೆ

ಮರುಪಾವತಿ ತೆರಿಗೆ ಅಥವಾ ಬಡ್ಡಿ ಅಥವಾ ಇತರೆ ಯಾವುದೇ ಮೊತ್ತವನ್ನು ಮರುಪಾವತಿಯಾಗಿ ಕೇಳುವವರು ಮರುಪಾವತಿಗಾಗಿ ಅರ್ಜಿಯನ್ನು “ಸಂಬಂಧಪಟ್ಟ ದಿನ”ದಿಂದ 2 ವರ್ಷದೊಳಗೆ ನಮೂನೆ GST RFD-1 ಮೂಲಕ ಕೇಳಬೇಕು.
ಆಯಾ ಸಂದರ್ಭಕ್ಕೆ ತಕ್ಕಂತೆ ಮರುಪಾವತಿಗೆ “ಸಂಬಂಧಪಟ್ಟ ದಿನ”ವು ಈ ಮುಂದಿನಂತೆ ಇರುತ್ತದೆ:

ಸನ್ನಿವೇಶ ಸಂಬಂಧಪಟ್ಟ ದಿನ
ಸಮುದ್ರ ಅಥವಾ ಆಕಾಶದ ಮೂಲಕ ಸರಕನ್ನು ರಫ್ತು ಮಾಡಿದ್ದರೆ. ಸರಕು ಲೋಡ್ ಮಾಡಿದ ಹಡಗು ಅಥವಾ ವಿಮಾನ ಭಾರತ ಬಿಟ್ಟು ತೆರಳಿದ ದಿನಾಂಕ.
ಭೂಸಾರಿಗೆ ಮೂಲಕ ಸರಕು ರಫ್ತುಗೊಂಡಿದ್ದರೆ. ಸರಕು ಯಾವಾಗ ಗಡಿಬಿಟ್ಟು ಮುಂದಕ್ಕೆ ಸಾಗಿದೆಯೋ ಆ ದಿನಾಂಕ
ಅಂಚೆ ಮೂಲಕ ರಫ್ತು ಮಾಡಿದರೆ. ಸಂಬಂಧಪಟ್ಟ ಅಂಚೆ ಕಚೇರಿಯಿಂದ ಸರಕು ಹೊರಕ್ಕೆ ಹೋದ ದಿನಾಂಕ
ಸೇವೆಯನ್ನು ರಫ್ತು ಮಾಡಿದಾಗ, ಎಲ್ಲಿ ಸೇವೆಯ ಪೂರೈಕೆಯು ಪಾವತಿ ಸ್ವೀಕರಿಸುವ ಮೊದಲು ಪೂರ್ಣಗೊಂಡಿದೆಯೋ ಆವಾಗ. ಪಾವತಿ ಸ್ವೀಕರಿಸಿದ ದಿನಾಂಕ
ಸೇವೆ ರಫ್ತು ಮಾಡಿದಾಗ, ಸರಕುಪಟ್ಟಿ ನೀಡುವ ದಿನಾಂಕದ ಮೊದಲೇ ಮುಂಗಡವಾಗಿ ಹಣ ಪಾವತಿ ಮಾಡಿರುವಂತಹ ಸಂದರ್ಭದಲ್ಲಿ. ಸರಕುಪಟ್ಟಿ ನೀಡಿದ ದಿನಾಂಕ
ಇನ್ಪುಟ್ ತೆರಿಗೆ ಮೊತ್ತವನ್ನು ಬಳಕೆ ಮಾಡದೆ ಇದ್ದರೆ. ತೆರಿಗೆ ಮರುಪಾವತಿ ಕೇಳಿದ ಹಣಕಾಸು ವರ್ಷದ ಅಂತ್ಯದಲ್ಲಿ.

ಗಮನಿಸಿ: ಎಲೆಕ್ಟ್ರಾನಿಕ್ ಕ್ಯಾಶ್ ಲೆಡ್ಜರ್ ನಲ್ಲಿರುವ ಬಾಕಿಗೆ ಮರುಪಾವತಿ ಕೇಳುವಾಗ ಕಡ್ಡಾಯವಾಗಿ ಸಂಬಂಧಪಟ್ಟ ತಿಂಗಳ ರಿಟರ್ನ್ ಸಲ್ಲಿಸಬೇಕು. ಉದಾಹರಣೆಗೆ ನಿಯಮಿತ ಡೀಲರ್ ಆಗಿದ್ದರೆ ನಮೂನೆ Form GSTR-3 ಮತ್ತು ಸಂಯೋಜಿತ ಡೀಲರ್ ಆಗಿದ್ದರೆ Form GSTR-4 ನಮೂನೆಯನ್ನು ಭರ್ತಿ ಮಾಡಬೇಕು.

ಜಿಎಸ್ಟಿಯನ್ವಯ ಮರುಪಾವತಿ ಕೇಳಲು ಅಗತ್ಯವಿರುವ ದಾಖಲೆಪತ್ರಗಳು

ಎಲ್ಲಾದರೂ ಮರುಪಾವತಿಗೆ ಕೇಳಿರುವ ತೆರಿಗೆಯು 5 ಲಕ್ಷ ರೂ.ಗಿಂತ ಕಡಿಮೆ ಇದ್ದರೆ- – ಸಂಬಂಧಪಟ್ಟ ವ್ಯಕ್ತಿಯು ಆತನಲ್ಲಿ ಲಭ್ಯವಿರುವ ದಾಖಲೆಗಳ ಆಧಾರದಲ್ಲಿ ನಮೂನೆಯನ್ನು ಭರತಿ ಮಾಡಬೇಕು, ಈ ತೆರಿಗೆ ಅಥವಾ ಬಡ್ಡಿಯ ಮರುಪಾವತಿಯನ್ನು ಮತ್ತೊಬ್ಬರಿಗೆ ವರ್ಗಾಯಿಸುವುದಿಲ್ಲವೆಂದು ದೃಢೀಕರಿಸಬೇಕು.
ಎಲ್ಲಾದರೂ ಮರುಪಾವತಿಗೆ ಕೇಳಿರುವ ತೆರಿಗೆಯು 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ- ಮರುಪಾವತಿಗೆ ಸಲ್ಲಿಸುವ ಅರ್ಜಿಯು ಈ ಮುಂದಿನಂತೆ ಇರಬೇಕು:

 1. ವ್ಯಕ್ತಿಗೆ ಮರುಪಾವತಿ ನೀಡಬೇಕಾಗಿರುವ ವಿಷಯಕ್ಕೆ ಸಂಬಂಧಪಟ್ಟಂತೆ ದಾಖಲೆಯುಕ್ತ ಸಾಕ್ಷಿ.
 2. ಅವನು/ಅವಳು ಮೊತ್ತ ಪಾವತಿಸಿರುವುದಕ್ಕೆ ಸಂಬಂಧಪಟ್ಟ ದಾಖಲೆ ಅಥವಾ ಇತರೆ ಸಾಕ್ಷಿ ಸಲ್ಲಿಸಬೇಕು ಮತ್ತು ಈ ತೆರಿಗೆ ಅಥವಾ ಬಡ್ಡಿಯ ಮರುಪಾವತಿಯನ್ನು ಮತ್ತೊಬ್ಬರಿಗೆ ವರ್ಗಾಯಿಸುವಂತೆ ಇಲ್ಲ.
2. ಮರುಪಾವತಿಗೆ ಆದೇಶ

ರಫ್ತಿಗೆ ಸಂಬಂಧಪಟ್ಟ ಮರುಪಾವತಿ

ಎಲ್ಲಾದರೂ ಸರಕು ಮತ್ತು/ಅಥವಾ ಸೇವೆಯ ರಫ್ತಿಗೆ ಸಂಬಂಧಪಟ್ಟ ಮರುಪಾವತಿಯಾಗಿದ್ದರೆ, ನಮೂನೆ GST RFD-4 ಆಧಾರದಲ್ಲಿ ಸಂಬಂಧಪಟ್ಟ ಅಧಿಕೃತ ಅಧಿಕಾರಿಯು ಒಟ್ಟು ಮೊತ್ತದ ಶೇಕಡ 90ರಷ್ಟನ್ನು ಮರುಪಾವತಿ ಮಾಡುತ್ತಾರೆ. ನಂತರದ ದೃಢೀಕರಣಗಳ ಬಳಿಕ, ಆ ಅಧಿಕಾರಿಯು ಮರುಪಾವತಿ ಕೇಳಿರುವ ಆದೇಶದ ಅಂತಿಮ ಸಟ್ಲಮೆಂಟ್ ಮಾಡುತ್ತಾರೆ.
ಈ ಮುಂದಿನ ಪರಿಸ್ಥಿತಿಗಳಲ್ಲಿ ಅಧಿಕ ಮರುಪಾವತಿ ಮಾಡಲಾಗುತ್ತದೆ:

  • ವ್ಯಕ್ತಿಯು ಮರುಪಾವತಿಗೆ ಕೇಳುವ ಮೊತ್ತವು ಮುಂದಿನ 5 ವರ್ಷಗಳಲ್ಲಿ ತೆರಿಗೆ ತಪ್ಪಿಸಿಕೊಳ್ಳುವ ಸಲುವಾಗಿ 250 ಲಕ್ಷ ರೂ.ಗಿಂತ ಹೆಚ್ಚಿರಬಾರದು. ಅಂದರೆ, ಇದು ತೆರಿಗೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೂಡಿರಬಾರದು.
  • ವ್ಯಕ್ತಿಯ ಜಿಎಸ್ಟಿ ಅನುಸರಣೆ ರೇಟಿಂಗ್ 10ರಲ್ಲಿ 5ಕ್ಕಿಂತ ಕಡಿಮೆ ಇರಬಾರದು.
  • ಮರುಪಾವತಿಗೆ ಸಲ್ಲಿಸಿದ ಮೊತ್ತದಲ್ಲಿ ಯಾವುದೇ ಬಾಕಿ ಪಾವತಿಗಳು, ಅಪೀಲು, ಪರಾಮರ್ಶೆ ಉಳಿದಿರಬಾರದು.

ಇತರೆ ಸಂದರ್ಭಗಳಲ್ಲಿ ಮರುಪಾವತಿ
ಮರುಪಾವತಿ ಕೇಳಿದ ಅರ್ಜಿಯ ಕುರಿತು ಮತ್ತು ಒಟ್ಟು ಮರುಪಾವತಿ ಮೊತ್ತದ ಕುರಿತು ಎಲ್ಲಾದರೂ ಅಧಿಕಾರಿ ತೃಪ್ತಿ ಹೊಂದಿದ್ದರೆ ಅವರು ಮರುಪಾವತಿಗೆ ನಮೂನೆ GST RFD-5ಯಲ್ಲಿ ಆದೇಶ ನೀಡುತ್ತಾರೆ. ಇದು ಅರ್ಜಿ ಸ್ವೀಕರಿಸಿದ 60 ದಿನದೊಳಗೆ ಆಗುತ್ತದೆ. ಎಲ್ಲಾದರೂ 60 ದಿನದೊಳಗೆ ಮರುಪಾವತಿ ನೀಡದೆ ಇದ್ದರೆ, 60 ದಿನದ ಬಳಿಕದ ದಿನಕ್ಕೆ ಮರುಪಾವತಿ ಮೊತ್ತಕ್ಕೆ ಬಡ್ಡಿ ನೀಡಲಾಗುತ್ತದೆ.
ಗಮನಿಸಿ: : ಮರುಪಾವತಿಗಾಗಿ ಕೇಳಿರುವ ಮೊತ್ತವು 1,000 ರೂ.ಗಿಂತ ಕಡಿಮೆ ಇದ್ದರೆ ಮರುಪಾವತಿ ಮಾಡಲಾಗುವುದಿಲ್ಲ.

ಜಿಎಸ್ಟಿ ಮರುಪಾವತಿಯಲ್ಲಿ ಅಸಾಧರಣ ಸನ್ನಿವೇಶಗಳು

ಜಿಎಸ್ಟಿ ಅನ್ವಯ ಮರುಪಾವತಿಗೆ ಅವಕಾಶವಿರುವ ಕೆಲವು ಅಸಾಧಾರಣ ಸನ್ನಿವೇಶಗಳು ಈ ಮುಂದಿನಂತೆ ಇವೆ:

  1. ಪರಿಗಣಿಸಲಾಗುವ ರಫ್ತಿಗೆ ಸಂಬಂಧಪಟ್ಟಂತೆ ಪೂರೈಕೆಯ ತೆರಿಗೆ ಹಾಕಿದ್ದರೆ. ಉದಾಹರಣೆಗೆ: ಎಸ್ ಇ ಝಡ್ (ವಿಶೇಷ ಆರ್ಥಿಕ ವಲಯ) ಅಥವಾ ಇಒಯು(ರಫ್ತು ಆಧರಿತ ಘಟಕ)ಕ್ಕೆ ಸಂಬಂಧಪಟ್ಟಂತೆ ಸರಕು ಅಥವಾ ಸೇವೆಯನ್ನು ಪೂರೈಕೆ ಮಾಡಿರುವ ಸಂದರ್ಭಗಳಲ್ಲಿ.
  2. ಸಂಬಂಧಪಟ್ಟ ಕಾನೂನು ಪ್ರಾಧಿಕಾರ, ನ್ಯಾಯಾಲಯ ಅಥವಾ ಅಪೀಲು ಮಂಡಳಿಯ ತೀರ್ಮಾನ, ಡಿಕ್ರಿ ಅಥವಾ ಆದೇಶಕ್ಕೆ ತಕ್ಕಂತೆ ತೆರಿಗೆ ಮರುಪಾವತಿ ಮಾಡಲಾಗುತ್ತದೆ.
  3. ಪೂರ್ಣವಾಗಿ ಅಥವಾ ಭಾಗಶಃ ಒದಗಿಸದ ಪೂರೈಕೆಯ ಮೇಲೆ ತೆರಿಗೆ ಪಾವತಿಸಿದ್ದರೆ, ಮತ್ತು ಅದಕ್ಕಾಗಿ ಸರಕು ಪಟ್ಟಿಯನ್ನು ನೀಡಲಾಗದೆ ಇದ್ದರೂ ಇದು ಅನ್ವಯಿಸುತ್ತದೆ. ಉದಾಹರಣೆಗೆ: ನವೆಂಬರ್ 2, 2017ರಂದು ಪೂರೈಕೆದಾರರೊಬ್ಬರು ಡಿಸೆಂಬರ್ 2, 2017ರಂದು ಮಾಡಲಿರುವ ಪೂರೈಕೆಗಾಗಿ ಮುಂಗಡ ಹಣವನ್ನು ಸ್ವೀಕೃತಿದಾರರಿಂದ ಪಡೆಯುತ್ತಾರೆ. ಆದರೆ, ಅಂತಿಮವಾಗಿ ಈ ಪೂರೈಕೆ ಮಾಡಲಾಗಿರುವುದಿಲ್ಲ. ನಮೂನೆ ಭರ್ತಿ ಮಾಡುವುದು ನವೆಂಬರ್ 17, 2017ರಲ್ಲಿ ಆಗಿರುವುದರಿಂದ ಮುಂಗಡ ಸ್ವೀಕರಿಸಿರುವುದಕ್ಕೆ ಪೂರೈಕೆದಾರರು ತೆರಿಗೆ ಪಾವತಿಸಬೇಕು. ಈ ತೆರಿಗೆಯನ್ನು ಮರುಪಾವತಿ ವಿಧಾನದಲ್ಲಿ ಕೇಳಬಹುದು.
  4. ತಪ್ಪಾಗಿ ತೆರಿಗೆ ಸಂಗ್ರಹಿಸಿರುವುದು ಮತ್ತು ಅದನ್ನು ಕೇಂದ್ರ ಅಥವಾ ರಾಜ್ಯ ಸರಕಾರಕ್ಕೆ ನೀಡಿರುವುದು. ಎಲ್ಲಾದರೂ ಅಂತರ್ ರಾಜ್ಯ ಪೂರೈಕೆಗಾಗಿ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ಪಾವತಿಸಿದ್ದರೆ ಅಥವಾ ರಾಜ್ಯದೊಳಗಿನ ಪೂರೈಕೆಗಾಗಿ ಐಜಿಎಸ್ಟಿ ಪಾವತಿಸಿದ್ದರೆ, ತೆರಿಗೆಯು ಸರಿಯಾಗಿ ಪಾವತಿಯಾದ ಬಳಿಕ ವ್ಯಕ್ತಿಯು ಮರುಪಾವತಿ ಕೋರಿ ಅರ್ಜಿ ಸಲ್ಲಿಸಬಹುದು.
  5. ಎಲ್ಲಾದರೂ ವಿದೇಶ ಪ್ರವಾಸ ಮಾಡುವ ವ್ಯಕ್ತಿಯು ಸರಕನ್ನು ದೇಶದಿಂದ ಹೊರಕ್ಕೆ ತೆಗೆದುಕೊಂಡು ಹೋಗುವಂತಹ ಸಂದರ್ಭದಲ್ಲಿ ಐಜಿಎಸ್ಟಿ ಪಾವತಿಸಿದ್ದರೆ..

ಆಯಾ ಸಂದರ್ಭಕ್ಕೆ ತಕ್ಕಂತೆ ಮರುಪಾವತಿಗೆ “ಸಂಬಂಧಪಟ್ಟ ದಿನ”ವು ಈ ಮುಂದಿನಂತೆ ಇರುತ್ತದೆ:

ಸನ್ನಿವೇಶ ಸಂಬಂಧಪಟ್ಟ ದಿನ
ಸರಕು ಡೀಮ್ಡ್ ರಫ್ತು ಆಗಿದ್ದರೆ. ಈ ರಫ್ತಿಗೆ ಸಂಬಂಧಪ್ಟಂತೆ ರಿಟರ್ನ್ ಸಲ್ಲಿಸಿದ ದಿನ.
ಸಂಬಂಧಪಟ್ಟ ಕಾನೂನು ಪ್ರಾಧಿಕಾರ, ನ್ಯಾಯಾಲಯ ಅಥವಾ ಅಪೀಲು ಮಂಡಳಿಯ ತೀರ್ಮಾನ, ಡಿಕ್ರಿ ಅಥವಾ ಆದೇಶಕ್ಕೆ ತಕ್ಕಂತೆ ತೆರಿಗೆ ಮರುಪಾವತಿ ನ್ಯಾಯತೀರ್ಮಾನ, ಡಿಕ್ರಿ, ಆದೇಶ ಅಥವಾ ನಿರ್ದೇಶನ ನೀಡಿದ ದಿನ
ತೆರಿಗೆ ಅಧಿಕ ಪಾವತಿ ಮಾಡಿದ್ದರೆ ಅಂತಿಮ ಪರಿಶೀಲನೆ ನಂತರ ತೆರಿಗೆಯ ದಿನಾಂಕದ ಹೊಂದಾಣಿಕೆ
ಎಲ್ಲಾದರೂ ಪೂರೈಕೆದಾರರ ಬದಲಾಗಿ ವ್ಯಕ್ತಿಯಾಗಿದ್ದರೆ. ವ್ಯಕ್ತಿಯಿಂದ ಸರಕು ಅಥವಾ ಸೇವೆಯನ್ನು ಸ್ವೀಕರಿಸಿದ ದಿನಾಂಕ
ಇತರೆ ಯಾವುದೇ ಪ್ರಕರಣದಲ್ಲಿ ತೆರಿಗೆ ಪಾವತಿಸಿದ ದಿನಾಂಕ

ಮರುಪಾವತಿ ಕೇಳುವ ಪ್ರಕ್ರಿಯೆಯು ಈ ಮೇಲೆ ಚರ್ಚಿಸಿದಂತೆ ಮರುಪಾವತಿ ಕೇಳುವ ಅಸಾಧಾರಣ ಸನ್ನಿವೇಶದಂತೆ ಇದೆ.

Are you GST ready yet?

Get ready for GST with Tally.ERP 9 Release 6

129,426 total views, 173 views today