ಜುಲೈ 1, 2017ರಂದು ಜಿಎಸ್ಟಿ ತೆರಿಗೆ ಪದ್ಧತಿ ಆಗಮಿಸಿದ ತಕ್ಷಣ, ಜಿಎಸ್ಟಿ ತೆರಿಗೆ ಸರಕುಪಟ್ಟಿಯಲ್ಲಿ ತಿಳಿಸಿರುವ ಮಾನದಂಡಗಳಿಗೆ ತಕ್ಕಂತೆ ನೀವು ನಿಖರವಾದ ಸರಕುಪಟ್ಟಿಯನ್ನು ತಯಾರಿಸಬೇಕಿರುವುದು ನೀವು ಮಾಡಬೇಕಾದ ತಕ್ಷಣದ ಕೆಲಸವಾಗಿರುತ್ತದೆ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಪೂರೈಕೆಯಲ್ಲಿ ಸಂಗ್ರಹಿಸಿದ ತೆರಿಗೆಗೆ ಜಿಎಸ್ಟಿ ತೆರಿಗೆ ಸರಕುಪಟ್ಟಿ ರಚಿಸಬೇಕಿರುವುದು ಪ್ರಮುಖ ಅಂಶವಾಗಿದೆ.


ಪೂರೈಕೆ ಸಂದರ್ಭದಲ್ಲಿ ಸಂಗ್ರಹಿಸಿರುವುದಕ್ಕೆ ಸಮರ್ಪಕ ತೆರಿಗೆ ಮೌಲ್ಯವನ್ನು ಲೆಕ್ಕಹಾಕಲು ಸರಕು ಅಥವಾ ಸೇವೆಯ ಪೂರೈಕೆಗೆ ಅನ್ವಯವಾಗುವ ಜಿಎಸ್ಟಿ ತೆರಿಗೆ ಪದ್ಧತಿಯನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಯಾವ ತೆರಿಗೆಯನ್ನು ಯಾವ ರೀತಿ ನಿಗದಿಪಡಿಸಲಾಗಿದೆ ಎಂದು ತಿಳಿದುಕೊಳ್ಳುವುದು ಸರಿಯಾದ ಮೌಲ್ಯ ಕಂಡುಕೊಳ್ಳುವುದಕ್ಕೆ ಅವಶ್ಯಕವಾಗಿರುತ್ತದೆ. ಎಲ್ಲಾದರೂ ಇದನ್ನು ಗಮನಿಸದೆ ಇದ್ದರೆ, ಅನಾವಶ್ಯಕ ದಾವೆ, ಚಂದಾ ತೆರಿಗೆಯ ಮೇಲೆ ಬಡ್ಡಿಇತ್ಯಾದಿ ತೊಂದರೆಗಳು ಮತ್ತು ಸ್ವೀಕೃತಿದಾರರಿಗೂ ಆದಾನ ತೆರಿಗೆ ಪಾವತಿ ಪಡೆಯುವ ಅವಕಾಶವೂ ತಪ್ಪಿ ಹೋಗಬಹುದು.

ಪೂರೈಕೆಯಲ್ಲಿ ಯಾವ ತೆರಿಗೆಯ ಮೌಲ್ಯ ಹೇಗೆ ಎಂದು ಸರಿಯಾಗಿ ನಿರ್ಧರಿಸಲು ಈ ಮಾರ್ಗದರ್ಶನ ನಿಮಗೆ ನೆರವಾಗಲಿದೆ. ಯಾವ ಜಿಎಸ್ಟಿಯಲ್ಲಿ ವಿಧಿಸಲಾದ ಮೌಲ್ಯವನ್ನು ವಹಿವಾಟು ಮೌಲ್ಯ ಎನ್ನಲಾಗುತ್ತದೆ.

ಇದನ್ನೂ ಓದಿ: ಸರಕುಗಳು ಮತ್ತು ಸೇವೆಗಳ ಪೂರೈಕೆ: ಇದರ ಅರ್ಥವೇನು?

ಜಿಎಸ್ಟಿ ಸರಕುಪಟ್ಟಿಯಲ್ಲಿ ತೋರಿಸಬೇಕಿರುವ ಮೌಲ್ಯವನ್ನು ಲೆಕ್ಕಹಾಕಲು ಹಂತಗಳು

1. ಪೂರೈಕೆ ಮಾಡಿರುವ ಸರಕು ಅಥವಾ ಸೇವೆಯ ದರವನ್ನು ನಿರ್ಧರಿಸುವುದು.
2. ಯಾವುದಾದರ ಹೆಚ್ಚುವರಿ ಶುಲ್ಕಗಳು, ಕಮಿಷನ್, ಪ್ಯಾಕ್ ಮಾಡಿರುವ ಶುಲ್ಕಗಳು ಇತ್ಯಾದಿ
3. ಜಿಎಸ್ಟಿ ಮಾತ್ರವಲ್ಲದೆ ಪೂರೈಕೆಯ ಮೇಲೆ ಇತರೆ ಯಾವುದಾದರೂ ತೆರಿಗೆ ಅನ್ವಯವಾದರೆ ಅದನ್ನೂ ಸೇರಿಸಿರಿ.
4. ಸರಕುಪಟ್ಟಿಯಲ್ಲಿ ವಿನಾಯಿತಿ ಕಡಿತವನ್ನೂ ತೋರಿಸಬೇಕು.

ಉದಾಹರಣೆ: ಕರ್ನಾಟಕದ ರೋಹನ್ ಪ್ರೈವೇಟ್ ಲಿಮಿಟೆಡ್, ಕರ್ನಾಟಕದ ವಿತರಕರಾದ ಡಿಸೋಜಾ ಆಂಡ್ ಸನ್ಸ್ ಗೆ 100 ವಾಷಿಂಗ್ ಮೆಷಿನ್ ಗಳನ್ನು ಪೂರೈಕೆ ಮಾಡುತ್ತದೆ. ಒಂದು ವಾಷಿಂಗ್ ಮೆಷಿನ್ ದರ 30,000 ರೂಪಾಯಿ. ರೋಹನ್ ಪ್ರೈವೇಟ್ ಲಿಮಿಟೆಡ್ ಅವರು ಪ್ಯಾಕಿಂಗ್ ಮಾಡಿರುವುದಕ್ಕೆ 2000 ರೂ. ಶುಲ್ಕ ಮತ್ತು ಸಾಗಾಟ ಮಾಡುವುದಕ್ಕೆ 8 ಸಾವಿರ ರೂ. ಶುಲ್ಕ ವಿಧಿಸಿರುತ್ತಾರೆ. ಡಿಸೋಜಾ ಆಂಡ್ ಸನ್ಸ್ ಗೆ 10,000 ರೂ. ವಿನಾಯಿತಿಯನ್ನು ನೀಡಲಾಗುತ್ತದೆ. ವಾಷಿಂಗ್ ಮೆಷಿನಿಗೆ ಶೇಕಡ 28ರಷ್ಟು ಜಿಎಸ್ಟಿ ತೆರಿಗೆ ವಿಧಿಸಲಾಗಿರುತ್ತದೆ.

ಈ ಪೂರೈಕೆ ಮೇಲೆ ಜಿಎಸ್ಟಿಯಲ್ಲಿ ಯಾವೆಲ್ಲ ಮೌಲ್ಯಗಳು ಬಂದಿವೆ ಎಂದು ಗುರುತಿಸಿಕೊಳ್ಳೋಣ.

ವಿಷಯಪ್ರಮಾಣದರಮೊತ್ತ
ವಾಷಿಂಗ್ ಮೆಷಿನ್10030,00030,00,000
ಸೇರ್ಪಡೆ: ಪ್ಯಾಕಿಂಗ್ ಶುಲ್ಕ2,000
ಸೇರ್ಪಡೆ: ಸಾಗಾಟ ಶುಲ್ಕ8000
ಕಡಿತ: ವಿನಾಯಿತಿ(-)10,000
ತೆರಿಗೆ ವಿಧಿಸಬಹುದಾದ ಮೌಲ್ಯ30,00,000
ಸಿಜಿಎಸ್ಟಿ @14%4,20,000
ಎಸ್ಜಿಎಸ್ಟಿ @ 14%4,20,000
ಒಟ್ಟು ಸರಕುಪಟ್ಟಿ ಮೌಲ್ಯ38,40,000

ಈ ಸರಕುಪಟ್ಟಿಯು ಈ ಕೆಳಗಿನಂತೆ ಕಾಣಿಸಲಿದೆ:
tax-invoice-calculation

ಪೂರೈಕೆಯ ಸಮಯದಲ್ಲಿ ದೊರಕಿದ ಹೆಚ್ಚುವರಿ ಶುಲ್ಕಗಳು ಅಥವಾ ವಿನಾಯಿತಿಗಳನ್ನು ಹೇಗೆ ನಿಭಾಯಿಸುವುದು

ಮೌಲ್ಯಕ್ಕೆ ಸೇರ್ಪಡೆ
      • ಹೆಚ್ಚುವರಿ ಶುಲ್ಕಗಳು

 

      • ನೀವು(ಪೂರೈಕೆದಾರ) ಪಾವತಿಸಬೇಕಾದ ಯಾವುದೇ ಮೊತ್ತ, ಆದರೆ, ಸ್ವೀಕೃತಿದಾರರಿಗೆ ಸಂಬಂದಪಟ್ಟಿರುವುದು, ಸಾಗಾಣೆ ಇತ್ಯಾದಿಗಳು.

 

    • ತಡವಾಗಿ ಪಾವತಿ ಮಾಡಿರುವುದಕ್ಕೆ ಸ್ವೀಕೃತಿದಾರರಿಗೆ ವಿಧಿಸಿದ ಬಡ್ಡಿ/ತಡವಾದ ಶುಲ್ಕ/ ದಂಡ ಇತ್ಯಾದಿಗಳು.

ಈ ಸಂದರ್ಭದಲ್ಲಿ, ಡೆಬಿಟ್ ನೋಟ್ ಅನ್ನು ಕಡ್ಡಾಯವಾಗಿ ಸಲ್ಲಿಸಬೇಕು, ಇದನ್ನು ಮೂಲ ಸರಕುಪಟ್ಟಿಗೆ ಜೋಡಿಸಬೇಕು ಮತ್ತು ಆ ಮೌಲ್ಯಕ್ಕೆ ಜಿಎಸ್ಟಿ ಶುಲ್ಕ ನೀಡಬೇಕು.

ಉದಾಹರಣೆ: ಮೇಲಿನ ಉದಾಹರಣೆಯ ಪೂರೈಕೆಗೆ ಸಂಬಂಧಪಟ್ಟಂತೆ, ಒಪ್ಪಿರುವ 30 ದಿನಗಳ ಅವಧಿಯಲ್ಲಿ ಹಣ ಪಾವತಿ ಮಾಡುವುದಕ್ಕೆ ವಿಫಲಗೊಂಡಿರುವುದಕ್ಕೆ ರೋಹನ್ ಪ್ರೈವೇಟ್ ಲಿಮಿಟೆಡ್, ಡಿಸೋಜಾ ಆಂಡ್ ಸನ್ಸ್ ಮೇಲೆ 60 ಸಾವಿರ ರೂಪಾಯಿ ದಂಡ ಶುಲ್ಕ ವಿಧಿಸುತ್ತದೆ.

ಇಲ್ಲಿ, ಮೇಲಿನ ಶೇಕಡ 18 ಜಿಎಸ್ಟಿಯ (ವಾಷಿಂಗ್ ಮೆಷಿನ್ ಗೆ ಅನ್ವಯಿಸಿದ ದರ) ಸರಕುಪಟ್ಟಿಗೆ ಪ್ರತಿಯಾಗಿ ರೋಹನ್ ಪ್ರೈವೇಟ್ ಲಿಮಿಟೆಡ್ ಒಂದು ಡೆಬಿಟ್ ನೋಟ್ ಅನ್ನು ಸಲ್ಲಿಸಬೇಕು. ಅದರಲ್ಲಿ ಲೆಕ್ಕಾಚಾರ ಈ ಕೆಳಗಿನಂತೆ ಇರಬೇಕು:

ವಿಷಯಗಳುಮೊತ್ತ
ವಿಳಂಬ ಪಾವತಿಗೆ ವಿಧಿಸಿದ ದಂಡ60,000
ಸಿಜಿಎಸ್ಟಿ @ 14%8400
ಎಸ್ಜಿಎಸ್ಟಿ @ 14%8400
ಒಟ್ಟು ಡೆಬಿಟ್ ನೋಟ್ ಮೌಲ್ಯ76,800

ಈ ಡೆಬಿಟ್ ನೋಟ್ ಕೆಳಗಿನಂತೆ ಇರುತ್ತದೆ:

debit-note-values
ಮೌಲ್ಯದಿಂದ ಕಳೆಯುವುದು
• ಪೂರೈಕೆಯ ನಂತರ ನೀಡಿರುವ ವಿನಾಯಿತಿ: ಎಲ್ಲಾದರೂ ಪೂರೈಕೆ ಮಾಡಿದ ನಂತರ ವಿನಾಯಿತಿ ಮೊತ್ತವನ್ನು ನೀಡಿದರೆ, ಪೂರೈಕೆಗೆ ಮೊದಲೇ ಇದಕ್ಕೆ ಒಪ್ಪಿಗೆ ಇದೆಯೇ ಎಂದು ಖಚಿತಪಡಿಸಿಕೊಳ್ಳಿ ಮತ್ತು ಇದನ್ನು ನಿರ್ದಿಷ್ಟ ಸರಕುಪಟ್ಟಿಗೆ ಸಂಪರ್ಕ ಕಲ್ಪಿಸಬೇಕು. ಎಲ್ಲಾದರೂ ವಿನಾಯಿತಿ ಮೊತ್ತವು ವಹಿವಾಟು ಮಲ್ಯದಿಂದ ಕಡಿತಗೊಂಡಿರಬಹುದು. ಇದಕ್ಕಾಗಿ ಒಂದು ಕ್ರೆಡಿಟ್ ನೋಟ್ ಮತ್ತು ಅನ್ವಯವಾಗುವ ಜಿಎಸ್ಟಿಯನ್ನು ಸಲ್ಲಿಸಿರಿ.
ಉದಾಹರಣೆ ರೋಹನ್ ಪ್ರೈವೇಟ್ ಲಿಮಿಟೆಡ್ ಮತ್ತು ಡಿಸೋಜಾ ಆಂಡ್ ಸನ್ಸ್ ನಡುವಿನ ಒಪ್ಪಂದದ ಪ್ರಕಾರ, ಎಲ್ಲಾದರೂ ರೋಹನ್ ಪ್ರೈವೇಟ್ ಲಿಮಿಟೆಡ್ ಆನ್ ಲೈನ್ ಮೂಲಕ ಪಾವತಿ ಮಾಡಿದರೆ, ಸರಕುಪಟ್ಟಿ ಮೌಲ್ಯದಲ್ಲಿ ರೋಹನ್ ಪ್ರೈವೇಟ್ ಲಿಮಿಟೆಡ್ 2000 ರೂ. ವಿನಾಯಿತಿಯನ್ನು ಒದಗಿಸಲಿದೆ ಎಂದು ಮೊದಲೇ ಒಪ್ಪಂದ ಮಾಡಲಾಗಿತ್ತು. ಈ ಪ್ರಕಾರ, ಶ್ರೀಯುತ ಡಿಸೋಜಾ ಅವರು ಆನ್ ಲೈನ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಿರುತ್ತಾರೆ. ಇದಕ್ಕಾಗಿ ನೀಡಿರುವ 2000 ರೂ. ವಿನಾಯಿತಿಗೆ, ಶ್ರೀಯುತ ರೋಹನ್ ಅವರು ಮೂಲ ಸರಕುಪಟ್ಟಿಗೆ ಎದುರಾಗಿ ಈ ಮುಂದೆ ತೋರಿಸಿದಂತೆ ಒಂದು ಕ್ರೆಡಿಟ್ ನೋಟ್ ಅನ್ನು ಸಲ್ಲಿಸಬೇಕು:

ವಿಷಯಗಳುಮೊತ್ತ
ವಿನಾಯಿತಿ2000
ಸಿಜಿಎಸ್ಟಿ @ 14%280
ಸಿಜಿಎಸ್ಟಿ @ 14%280
ಒಟ್ಟು ಕ್ರೆಡಿಟ್ ನೋಟ್ ಮೌಲ್ಯ2560

ಈ ಕ್ರೆಡಿಟ್ ನೋಟ್ ಈ ಮುಂದಿನಂತೆ ಕಾಣಿಸುತ್ತದೆ:

revised-invoice-updated

Are you GST ready yet?

Get ready for GST with Tally.ERP 9 Release 6

232,445 total views, 31 views today