ತೆರಿಗೆ ಮೊತ್ತ ನಿರ್ಧರಿಸಲು ಸರಕು ಮತ್ತು ಸೇವೆಗಳ ಮೌಲ್ಯ ನಿರ್ಧರಿಸುವುದು ಅತ್ಯಂತ ಅಗತ್ಯವಾಗಿರುತ್ತದೆ. ಎಲ್ಲಾದರೂ ಸರಕು ಮತ್ತು ಸೇವೆಯು ಮೌಲ್ಯ ಹೊಂದಿರದೆ ಇದ್ದಾಗ ಇದಕ್ಕೆ ಕಡಿಮೆ ತೆರಿಗೆ ವಿಧಿಸಿದರೆ, ಇದರಿಂದ ಅನುಸರಣೆ ಮೇಲೆ ಪರಿಣಾಮ ಬೀರುತ್ತದೆ ಮತ್ತು ನ್ಯಾಯ ಸಮ್ಮತವಾಗಿರುವುದಿಲ್ಲ. ಎಲ್ಲಾದರೂ ಹೆಚ್ಚು ಮೌಲ್ಯ ನಿಗದಿಪಡಿಸಿದರೆ, ಹೆಚ್ಚುವರಿ ತೆರಿಗೆಯಿಂದಾಗಿ ಆದಾಯ ನಷ್ಟಕ್ಕೆ ಈಡಾಗಬೇಕಾಗುತ್ತದೆ. ಇಂತಹ ತೊಂದರೆಗಳನ್ನು ತೆಗೆದು ಹಾಕಲು ಮತ್ತು ಸರಕು ಮತ್ತು ಸೇವೆಗಳ ಸಮರ್ಪಕ ಮೌಲ್ಯ ನಿಗದಿಗೊಳಿಸಲು, ಕಾನೂನು ಮೌಲ್ಯ ಕಂಡುಹಿಡಿಯುವಿಕೆಯ ವಿಧಾನವನ್ನು ನೀಡಿದೆ. ಇದರ ಮೂಲಕ ಇಂತಹ ಸರಕು ಸೇವೆಗಳಿಗೆ ನಿಖರವಾದ ಮೌಲ್ಯ ನಿಗದಿಪಡಿಸಬಹುದಾಗಿದೆ.
ನಮ್ಮ ಈ ಹಿಂದಿನ ಬ್ಲಾಗ್ ಬರಹದಲ್ಲಿ ಜಿಎಸ್ಟಿಯಡಿಯಲ್ಲಿ ಸರಕು ಮತ್ತು ಸೇವೆಗಳ ಮೌಲ್ಯ ನಿರ್ಧರಿಸುವುದು ಹೇಗೆ? ನಲ್ಲಿ ನಾವು ಈಗಿನ ತೆರಿಗೆ ಪದ್ಧತಿಯಲ್ಲಿರುವ ವಿವಿಧ ಮೌಲ್ಯ ಕಂಡುಹಿಡಿಯುವಿಕೆಯ ವಿಧಾನಗಳು ಮತ್ತು ಜಿಎಸ್ಟಿಯಡಿಯಲ್ಲಿ ಪೂರೈಕೆಗೆ ಮೌಲ್ಯ ಕಂಡುಹಿಡಿದು ತೆರಿಗೆ ವಿಧಿಸುವ ಬಾಧ್ಯತೆಗಳ ಕುರಿತು ಸಾಕಷ್ಟು ಚರ್ಚಿಸಿದ್ದೇವೆ.
ಪೂರೈಕೆಗೆ ದರವೆನ್ನುವುದು ಒಂದೇ ಪರಿಗಣನೆಯಾಗಿದ್ದರೆ ಮತ್ತು ಪೂರೈಕೆದಾರರು ಮತ್ತು ಸ್ವೀಕೃತಿದಾರರಿಬ್ಬರೂ ಸಂಬಂಧಪಟ್ಟವರಾಗದೆ ಇದ್ದರೆ ಮೌಲ್ಯ ನಿಗದಿಪಡಿಸುವ ವಿಧಾನದಲ್ಲಿ ವಹಿವಾಟು ಮೌಲ್ಯ ಕಂಡುಹಿಡಿಯಲಾಗುತ್ತದೆ. (ಈ ಬ್ಲಾಗ್ ಬರಹ ಓದಿರಿ: ಜಿಎಸ್ಟಿಯಡಿಯಲ್ಲಿ ಸಂಬಂಧಿತ ಪಾರ್ಟಿಗಳ ವಹಿವಾಟು)..

ಆದರೆ, ಎಲ್ಲಾದರೂ ದರವೊಂದೇ ಪೂರೈಕೆಗೆ ಪರಿಗಣನೆಯಾಗದೆ ಇದ್ದರೆ ಅಥವಾ ಪೂರೈಕೆಯು ಸಂಬಂಧಿತ ಅಥವಾ ಭಿನ್ನ ವ್ಯಕ್ತಿಗಳ (ಒಂದೇ ಪಾನ್ ಹೊಂದಿರುವ ಎರಡು ಘಟಕಗಳ ನಡುವೆ) ನಡುವೆ ನಡೆದಿದ್ದರೆ ವಹಿವಾಟು ಮೌಲ್ಯ ವಿಧಾನವನ್ನು ಅನ್ವಯಿಸಲು ಸಾಧ್ಯವಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಪೂರೈಕೆಗೆ ತೆರಿಗೆ ವಿಧಿಸಬಹುದಾದ ಮೌಲ್ಯವನ್ನು ನಿರ್ಧರಿಸಲು ಬೇರೆ ರೀತಿಯ ವಿಧಾನಗಳನ್ನು ಬಳಸಲಾಗುತ್ತದೆ. ಇದನ್ನು ಈ ಮುಂದಿನ ವಿವಿಧ ಸನ್ನಿವೇಶಗಳಡಿ ಪರಿಶೀಲಿಸೋಣ:
1. ಸರಕು ಅಥವಾ ಸೇವೆಯ ಪೂರೈಕೆಯ ಮೌಲ್ಯದ ಪರಿಗಣನೆಯು ಕೇವಲ ಪೂರ್ಣವಾಗಿ ಹಣದಿಂದ ಆಗಿರದೆ ಇರುವ ಸಂದರ್ಭ
2. ಸರಕು ಅಥವಾ ಸೇವೆಯ ಪೂರೈಕೆಯ ಅಥವಾ ಇವೆರಡು ಭಿನ್ನ ಅಥವಾ ಸಂಬಂಧಿತ ವ್ಯಕ್ತಿಗಳ ನಡುವೆ ನಡೆದಿದ್ದರೆ.
3. ಮಧ್ಯವರ್ತಿ ಮೂಲಕ ಸರಕಿನ ಪೂರೈಕೆಯ ಮೌಲ್ಯ ನಡೆದಿದ್ದರೆ.

ಈ ಬ್ಲಾಗ್ ಬರಹದಲ್ಲಿ ಸರಕು ಅಥವಾ ಸೇವೆಯ ಪೂರೈಕೆಯ ಮೌಲ್ಯದ ಪರಿಗಣನೆಯು ಕೇವಲ ಪೂರ್ಣವಾಗಿ ಹಣದಿಂದ ಆಗಿರದೆ ಇರುವ ಸಂದರ್ಭದ ಕುರಿತು ಚರ್ಚಿಸೋಣ.

Valuation of supply of goods or services where the consideration is not wholly in moneyClick To Tweet

“ಪೂರೈಕೆಯ ಪರಿಗಣನೆಯು ಪೂರ್ತಿಯಾಗಿ ಹಣದಿಂದಲ್ಲ’ ಎನ್ನುವುದನ್ನು ವಿವರಿಸುವ ಮೊದಲು, ನಾವು ನಾಗರೀಕರಣ ಆರಂಭವಾಗುವ ಮುಂಚಿನ ಸನ್ನಿವೇಶವನ್ನು ತಿಳಿದುಕೊಳ್ಳೋಣ. ಆ ಸಮಯದಲ್ಲಿ ಸರಕುಗಳ ವಿನಿಮಯದಿಂದ ವ್ಯವಹಾರ ನಡೆಸಲಾಗುತ್ತಿತ್ತು. ಇದು “ಬಾರ್ಟರ್ ವ್ಯವಸ್ಥೆ’’ ಎಂದು ಹೆಸರುಪಡೆದಿದೆ. ಈ ವ್ಯವಸ್ಥೆಯಡಿ ಸರಕು ಅಥವಾ ಸೇವೆಯನ್ನು ವಾಪಸ್ ನೀಡುವಾಗ ಇತರೆ ಸರಕು ಅಥವಾ ಸೇವೆಯ ರೂಪದಲ್ಲಿ ವಿನಿಮಯ ಮಾಡಿಕೊಳ್ಳುತ್ತಿದ್ದರು ಮತ್ತು ಇಲ್ಲಿ ಹಣವೆನ್ನುವುದು ಇರಲಿಲ್ಲ. ಇಂದು ದೇಶದ ಈ ಹಳೆಯ ಬಾರ್ಟರ್ ವ್ಯವಸ್ಥೆಯು ಆಧುನಿಕಗೊಂಡು “ಎಕ್ಸ್ ಚೇಂಜ್ ಆಫರ್’’ ಹೆಸರಿನಲ್ಲಿ ವಾಪಸ್ ಬಂದಿದೆ. ಈ ಸ್ಕೀಮ್ ನ ಪ್ರಕಾರ, ಮಾರಾಟ ಮಾಡಿರುವ ಸರಕನ್ನು ಭಾಗಶಃ ಹಣ ಮತ್ತು ಭಾಗಶಃ ಹಳೆಯ ಸರಕುಗಳ ವಿನಿಮಯದ ಮೂಲಕ ವಾಪಸ್ ನೀಡಬಹುದಾಗಿದೆ. ಉದಾಹರಣೆ: ಹಳೆಯ ವಾಷಿಂಗ್ ಮೆಷಿನ್ ಅನ್ನು ನೀಡಿ ಹೊಸ ವಾಷಿಂಗ್ ಮೆಷಿನ್ ಅನ್ನು 25 ಸಾವಿರ ರೂ.ಗೆ ಮಾರಾಟ ಮಾಡುವುದು.

ಮೇಲಿನ ಉದಾಹರಣೆಯಲ್ಲಿ 25 ಸಾವಿರ ರೂ. ವಹಿವಾಟು ಮೌಲ್ಯವೆಂದು ನೀವು ಭಾವಿಸಿದರೆ, ನೀವು ತೊಂದರೆಗೆ ಸಿಲುಕಿಕೊಳ್ಳುವಿರಿ ಮತ್ತು ಇದು ಕಾನೂನು ವಿರೋಧಿಯಾಗಿದೆ. ಇದು ಯಾಕೆಂದರೆ, ವಾಷಿಂಗ್ ಮೆಷಿನ್ ಪೂರೈಕೆಗಾಗಿ ಕೇವಲ 25 ಸಾವಿರ ರೂ. ನೀಡಲಾಗಿದೆ ಮತ್ತು ಇದು ವಹಿವಾಟು ಮೌಲ್ಯ ನಿರ್ಧರಿಸುವ ಒಟ್ಟು ಮೌಲ್ಯವಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗಾಗಿ, ಇಂತಹ ಬಗೆಯ ಪೂರೈಕೆಗಾಗಿ ಈ ಮುಂದಿನ ವಿಧಾನಗಳನ್ನು ಬಳಸಿ ಪೂರೈಕೆ ಮಾಡಲಾಗುತ್ತದೆ:
1. ಅಂತಹ ಪೂರೈಕೆಯ ಮುಕ್ತ ಮಾರುಕಟ್ಟೆ ಮೌಲ್ಯ
2. ಎಲ್ಲಾದರೂ ಮುಕ್ತ ಮಾರುಕಟ್ಟೆ ಮೌಲ್ಯ ಲಭಿಸದೆ ಇದ್ದರೆ, ಪೂರೈಕೆ ಮಾಡಿದ ವಸ್ತುವಿನ ಒಟ್ಟು ಮೌಲ್ಯ ಮತ್ತು ಗ್ರಾಹಕ ಪಾವತಿಸಿರುವ ಮೌಲ್ಯದ ನಡುವೆ ಉಳಿದ ಮೊತ್ತವನ್ನು ಪರಿಗಣಿಸಬೇಕು. ಇಂತಹ ಮೌಲ್ಯವು ಪೂರೈಕೆಯ ಸಂದರ್ಭದಲ್ಲಿ ತಿಳಿದುಬರುತ್ತದೆ.
3. ಎಲ್ಲಾದರೂ ಮೇಲೆ ತಿಳಿಸಿದ ಹಂತ 1 ಮತ್ತು ಹಂತ 2ರಲ್ಲಿ ಮೌಲ್ಯ ನಿರ್ಧರಿಸಲು ಸಾಧ್ಯವಾಗದೆ ಇದ್ದರೆ ಸರಕು ಅಥವಾ/ಮತ್ತು ಸೇವೆಯ ಗುಣಮಟ್ಟ ಆಧರಿತ ಮೌಲ್ಯ ನಿಗದಿಪಡಿಸಬೇಕಾಗುತ್ತದೆ.

ಈ ಮೂರು ವಿಧಾನಗಳಲ್ಲಿ ಪೂರೈಕೆ ಮೌಲ್ಯ ಕಂಡುಹಿಡಿಯುವುದನ್ನು ಉದಾಹರಣೆ ಸಹಿತ ಅರ್ಥ ಮಾಡಿಕೊಳ್ಳೋಣ..

1. ಪೂರೈಕೆಯ ಮುಕ್ತ ಮಾರುಕಟ್ಟೆ ಮೌಲ್ಯ

ಸರಕು ಅಥವಾ ಸೇವೆಯ ಪೂರೈಕೆಯ ಮುಕ್ತ ಮಾರುಕಟ್ಟೆ ಮೌಲ್ಯದಿಂದ ಈ ವಹಿವಾಟಿನಲ್ಲಿ ವ್ಯಕ್ತಿಯು ಪಾವತಿಸಬೇಕಾದ ಜಿಎಸ್ಟಿ ಮತ್ತು ಸೆಸ್ ಹೊರತುಪಡಿಸಿ ಒಟ್ಟು ಹಣದ ಮೌಲ್ಯ ದೊರಕುತ್ತದೆ.

ವಾಷಿಂಗ್ ಮೆಷಿನ್ ಉದಾಹರಣೆಯನ್ನೇ ಇಲ್ಲಿ ಪರಿಗಣಿಸೋಣ. ಹಳೆಯ ವಾಷಿಂಗ್ ಮೆಷಿನ್ ವಿನಿಮಯ ಮಾಡಿಕೊಳ್ಳುವ ಮೂಲಕ ಹೊಸ ವಾಷಿಂಗ್ ಮೆಷಿನ್ ಅನ್ನು 25 ಸಾವಿರ ರೂ.ಗೆ ನೀಡಲಾಗಿದೆ. ಎಲ್ಲಾದರೂ ವಿನಿಮಯ ಮಾಡಿಕೊಳ್ಳದೆ ವಾಷಿಂಗ್ ಮೆಷಿನ್ ದರವು 30,000 ರೂ. ಆಗಿದ್ದರೆ, ಮುಕ್ತ ಮಾರುಕಟ್ಟೆ ಮೌಲ್ಯ 30,000 ರೂ. ಆಗುತ್ತದೆ ಮತ್ತು ಈ ಮೌಲ್ಯಕ್ಕೆ ಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ.

2. ಒಟ್ಟು ಮೊತ್ತವನ್ನು ಹಣದಿಂದ ಪರಿಗಣಿಸುವುದು ಮತ್ತು ವಿತ್ತೀಯ ಮೌಲ್ಯವನ್ನು ಹಣದಿಂದ ಪರಿಗಣಿಸದೆ ಇರುವುದು.

ಸರಕು ಅಥವಾ ಸೇವೆಯ ಮುಕ್ತ ಮಾರುಕಟ್ಟೆ ದರವು ತಿಳಿಯದೆ ಇದ್ದಾಗ ಈ ವಿಧಾನದ ಮೌಲ್ಯಮಾಪನವನ್ನು ಬಳಕೆ ಮಾಡಲಾಗುತ್ತದೆ. ಇದರಲ್ಲಿ ತೆರಿಗೆ ಮೌಲ್ಯ ದೊರಕಲು, ಹಣದ ರೂಪದಲ್ಲಿ ದೊರಕಿರುವ ಮೌಲ್ಯವನ್ನು ಸರಕು ಅಥವಾ ಸೇವೆಯ ವಿತ್ತೀಯ ಮೌಲ್ಯಕ್ಕೆ ಸೇರಿಸಿ ಪರಿಗಣಿಸಲಾಗುತ್ತದೆ.
ತೆರಿಗೆ ವಿಧಿಸಬಹುದಾದ ಮೌಲ್ಯ = ಹಣದಿಂದ ಪರಿಗಣನೆ + ಹಣದಿಂದ ವಿತ್ತಿಯ ಮೌಲ್ಯವನ್ನು ಪರಿಗಣಿಸದೆ ಇರುವುದು

ಉದಾಹರಣೆ
ಪ್ರಿಸ್ಟೇಜ್ ಇನ್ನೋವೇಟರ್ಸ್ ಸಂಸ್ಥೆಯು ತನ್ನ ರಾಯಲ್ ಗ್ರಾಹಕರೊಬ್ಬರಿಗೆ ಹೊಸ ಇನ್ವೆಂಟರ್ ಏಸಿಯನ್ನು ಅದು ಬಿಡುಗಡೆಯಾಗುವ ಮುನ್ನವೇ ಹಳೆಯ ಏಸಿ ವಿನಿಮಯದ ಜೊತೆಗೆ 45,000 ರೂ.ಗೆ ನೀಡುತ್ತದೆ. ಪೂರೈಕೆಯ ಸಮಯದಲ್ಲಿ ಹಳೆಯ ಏಸಿಯ ಮೌಲ್ಯ 10,000 ರೂ, ಆದರೆ, ಇನ್ವೆಂಟರ್ ಏಸಿಯ ಮುಕ್ತ ಮಾರುಕಟ್ಟೆ ಮೌಲ್ಯವು ಪೂರೈಕೆಯ ಸಂದರ್ಭದಲ್ಲಿ ತಿಳಿದಿರುವುದಿಲ್ಲ.

ಇದನ್ನು ತೆರಿಗೆ ವಿಧಿಸಬಹುದಾದ ಮೌಲ್ಯಕ್ಕೆ ತರುವುದಾದರೆ, ಪ್ರಿಸ್ಟೇಜ್ ಇನ್ನೋವೇಟರ್ಸ್ ಇದನ್ನು ಒಂದೇ ಎಂದು ಪರಿಗಣಿಸಲಾಗದೆ ಇರುವುದರಿಂದ ಇದಕ್ಕೆ ವಹಿವಾಟು ಮೌಲ್ಯವನ್ನು ಅನ್ವಯಿಸಲು ಸಾಧ್ಯವಾಗುವುದಿಲ್ಲ. ಮಾರುಕಟ್ಟೆ ಮೌಲ್ಯ ದೊರಕದೆ ಇರುವುದರಿಂದ ಮುಕ್ತ ಮಾರುಕಟ್ಟೆ ಮೌಲ್ಯವೂ ಲಭಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ, ತೆರಿಗೆ ವಿಧಿಸಬಹುದಾದ ಮೌಲ್ಯವು, ಹಣದ ರೂಪದಲ್ಲಿ ಸ್ವೀಕರಿಸಿರುವ ಒಟ್ಟು ಮೌಲ್ಯ ಮತ್ತು ಉತ್ಪನ್ನದ ಅಥವಾ ಸೇವೆಯ ವಿತ್ತೀಯ ಮೌಲ್ಯ ಆಗಿರುತ್ತದೆ. ಹೀಗಾಗಿ, ಏಸಿಯ ತೆರಿಗೆ ವಿಧಿಸಬಹುದಾದ ಪೂರೈಕೆಯ ಮೌಲ್ಯವು ಈ ಮುಂದಿನಂತೆ ಇರುತ್ತದೆ:

ಹಣದ ರೂಪದಲ್ಲಿ ಪರಿಗಣನೆ 45,000 ರೂ. + ಏಸಿಯ ವಿತ್ತೀಯ ಮೌಲ್ಯ 10,000 ರೂ = 55,000 ರೂ.

3. ಸರಕು ಅಥವಾ ಸೇವೆಯ ಪೂರೈಕೆಯ ಮೌಲ್ಯವು ರೀತಿ ಮತ್ತು ಗುಣಮಟ್ಟದ ಹಾಗೆ.

ಸರಕು ಅಥವಾ ಸೇವೆಯ ಮುಕ್ತ ಮಾರುಕಟ್ಟೆ ಮೌಲ್ಯ ದೊರಕದೆ ಇದ್ದಾಗ ಈ ವಿಧಾನ ಅನ್ವಯವಾಗುತ್ತದೆ ಮತ್ತು ಹಣದ ಪರಿಗಣನೆ ಮತ್ತು ಹಣದಲ್ಲಿ ಪರಿಗಣಿಸಲಾಗದ ವಿತ್ತೀಯ ಮೌಲ್ಯದಲ್ಲಿ ಮೌಲ್ಯವನ್ನು ನಿರ್ಧರಿಸಲಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ, ಸರಕು ಮತ್ತು/ಅಥವಾ ಸೇವೆಯ ಮೌಲ್ಯವನ್ನು ಅದೇ ರೀತಿಯ ಉತ್ಪನ್ನಗಳ ದರಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಅಂದರೆ, ಮೌಲ್ಯ ನಿರ್ಧರಿಸಲಾಗದ ಸರಕು ಅಥವಾ ಸೇವೆಯ ಲಕ್ಷಣಗಳನ್ನು, ಗುಣಗಳನ್ನು, ಕಾರ್ಯ ನಿರ್ವಹಿಸುವ ಭಾಗಗಳು, ವಸ್ತುಗಳು ಮತ್ತು ಗೌರವವನ್ನು ಹೊಂದಿರುವ ಅಥವಾ ಇವೆಲ್ಲದಕ್ಕೆ ಹತ್ತಿರದಲ್ಲಿರುವ ಮತ್ತೊಂದು ಸರಕು ಅಥವಾ ಸೇವೆಯ ಜೊತೆ ತುಲನೆ ಮಾಡಿ ಉತ್ಪನ್ನದ ಮೌಲ್ಯ ನಿರ್ಧರಿಸಲಾಗುತ್ತದೆ.

ಉದಾಹರಣೆ
ಮಾಡರ್ನ್ ಟೆಕ್ನಾಲಜೀಸ್ ಲಿಮಿಟೆಡ್ ಹೊಸ ಉತ್ಪನ್ನ “ಐಒಟಿ-ಯೂನಿವರ್ಸಲ್ ರಿಮೋಟ್ ಆರ್ಗನೈಸರ್’’ ಅನ್ನು ಪರಿಚಯಸಿದ್ದು, ಅದರ ಉತ್ತೇಜನಕ್ಕಾಗಿ ತನ್ನ ಗ್ರಾಹಕರೊಬ್ಬರಿಗೆ ನೀಡಿದೆ ಎಂದಿರಲಿ. ಈ ಸಂದರ್ಭದಲ್ಲಿ, ಆ ಉತ್ಪನ್ನವನ್ನು ಮೊದಲ ಬಾರಿಗೆ ಪರಿಚಯಿಸಲಾಗಿರುತ್ತದೆ, ಮುಕ್ತ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಅದರ ದರ ನಿಗದಿ ಪಡಿಸಲಾಗುವುದಿಲ್ಲ ಅಥವಾ ಹಣದ ಪರಿಗಣನೆ ಮತ್ತು ಹಣದಲ್ಲಿ ಪರಿಗಣಿಸದೆ ಇರುವುದರ ವಿತ್ತೀಯ ಮೌಲ್ಯದ ಆಧಾರದಲ್ಲಿಯೂ ದರ ನಿಗದಿಪಡಿಸಲಾಗುವುದಿಲ್ಲ. ಈ ಸಂದರ್ಭದಲ್ಲಿ ಕೊನೆಯ ವಿಧಾನವಾದ “ಇದೇ ರೀತಿಯ ಮತ್ತು ಗುಣಮಟ್ಟದ ಬೇರೊಂದು ಉತ್ಪನ್ನದ’ ಜೊತೆ ಹೋಲಿಸಿ ಮೌಲ್ಯದ ನಿರ್ಧಾರ ಮಾಡಲಾಗುತ್ತದೆ.

ಇನ್ನೋವೇಟಿವ್ ಸೊಲ್ಯುಷನ್ಸ್ ಇದೇ ರೀತಿಯ ಉತ್ಪನ್ನವನ್ನು 10,000 ರೂ.ಗೆ ಮಾರಾಟ ಮಾಡುತ್ತಿದೆ. ಇದರ ಕಾರ್ಯವಿಧಾನಗಳು ಮತ್ತು ವಿಶೇಷತೆಗಳು ಒಂದೇ ರೀತಿ ಇದೆ ಮತ್ತು ಹೆಚ್ಚುವರಿಯಾಗಿ ಯುಎಸ್ ಬಿ ಪೋರ್ಟ್ ಅನ್ನೂ ಹೊಂದಿದೆ. ಹೀಗಾಗಿ, “ಐಒಟಿ-ಯೂನಿವರ್ಸಲ್ ರಿಮೋಟ್ ಆರ್ಗನೈಸರ್’’ ಮೌಲ್ಯವನ್ನು ತೆರಿಗೆ ಲೆಕ್ಕಾಚಾರದ ಉದ್ದೇಶದಿಂದ 10,000 ರೂ. ಎಂದು ಪರಿಗಣಿಸಲಾಗುತ್ತದೆ.

ಎಲ್ಲಾದರೂ ಪೂರೈಕೆಯ ಮೌಲ್ಯವನ್ನು ನಿರ್ಧರಿಸಲು ಈ ಮೇಲಿನ ವಿಧಾನದಿಂದ ಸಾಧ್ಯವಾಗದೆ ಇದ್ದರೆ, ಉತ್ಪನ್ನದ ವೆಚ್ಚ+10% ಆಧಾರದಲ್ಲಿ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಈ ಕುರಿತು ಮಾಹಿತಿಯನ್ನು ನಮ್ಮ ಮುಂಬರುವ ಬ್ಲಾಗ್ ಬರಹವೊಂದರಲ್ಲಿ ವಿವರವಾಗಿ ತಿಳಿಸಲಾಗುವುದು.

Are you GST ready yet?

Get ready for GST with Tally.ERP 9 Release 6

189,936 total views, 347 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.