ಈ ಲೇಖನದಲ್ಲಿ ನಾವು ಟ್ಯಾಲಿಯ ಜಿಎಸ್ಟಿ ರೆಡಿ ಸಾಫ್ಟ್ವೇರ್ಮೂಲಕ ನಮೂನೆ ಜಿಎಸ್ಟಿಆರ್ 3ಬಿಯನ್ನು ಸರಳವಾಗಿ ಭರ್ತಿ ಮಾಡುವ ಕುರಿತು ಪರಿಶೀಲಿಸೋಣ.

ವಿವಿಧ ವಿಷಯಗಳು

ನಮೂನೆ ಜಿಎಸ್ಟಿಆರ್ 3ಬಿ ಪೀಠಿಕೆ

ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್6ನಲ್ಲಿ ನಮೂನೆ ಜಿಎಸ್ಟಿಆರ್ 3ಬಿಗೆ ಅವಕಾಶವಿದೆಯೇ?

ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6ನಿಂದ ಮೇಲ್ದರ್ಜೆಗೆ ಬಾರದೆ ಇದ್ದರೂ ಏನಾಗಬಹುದು? ನಾನೀಗಲೂ ನಮೂನೆ ಜಿಎಸ್ಟಿಆರ್ 3ಬಿ ಭರ್ತಿ ಮಾಡಬಹುದೇ?

ನಮೂನೆ ಜಿಎಎಸ್ಟಿಆರ್-3ಬಿ ಇನ್ ಟ್ಯಾಲಿ.ಇಆರ್ಪಿ 9 ()

ನಮೂನೆ ಜಿಎಸ್ಟಿಆರ್ 3ಬಿ ಪೀಠಿಕೆ

ಈಗ, ಸರಕಾರವು ಜಿಎಸ್ಟಿಆರ್ 1 ಮತ್ತು ಜಿಎಸ್ಟಿಆರ್ ಭರ್ತಿ ಮಾಡುವ ಸಮಯದಲ್ಲಿ ವಿನಾಯಿತಿ ನೀಡಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಮೊದಲ ಬಾರಿಗೆ ಜುಲೈ ಮತ್ತು ಆಗಸ್ಟ್ 2017ರ ಜಿಎಸ್ಟಿಆರ್ 1 ನಮೂನೆಯನ್ನು ಬಹುಶಃ ಸೆಪ್ಟೆಂಬರ್ 2017ರಲ್ಲಿ ಸಲ್ಲಿಸಬೇಕಾಗಬಹುದು ಮತ್ತು ಉಳಿದ ಚಟುವಟಿಕೆಗಳು ಅದೇ ರೀತಿ ಮುಂದುವರೆಯಬಹುದು.
ಆದರೂ, ಅಲ್ಲಿಯವರೆಗೆ ಜಿಎಸ್ಟಿ ಸಂಗ್ರಹ ಮತ್ತು ಪಾವತಿಯು ನಡೆಯುವುದಿಲ್ಲವೆಂದರ್ಥವಲ್ಲ. ನಿಗದಿತ ತೆರಿಗೆಪಾವತಿದಾರರು ಜುಲೈ ಮತ್ತು ಆಗಸ್ಟ್ 2017ರ ತಮ್ಮ ಬಾಹ್ಯಾ ಮತ್ತು ಆಂತರಿಕ ಪೂರೈಕೆಯ ವಿವರಗಳನ್ನು ಜಿಎಸ್ಟಿಆರ್-3ಬಿ ಎಂಬ ಮಾದರಿ ನಮೂನೆಯಲ್ಲಿ ಭರ್ತಿ ಮಾಡಿ ತೆರಿಗೆಯನ್ನು ಪಾವತಿಸಬೇಕಿರುತ್ತದೆ.

ಇದನ್ನೂ ಓದಿ: ನಮೂನೆ ಜಿಎಸ್ಟಿಆರ್-3ಬಿಯನ್ನು ಭರ್ತಿ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಿರಿ

ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್6ನಲ್ಲಿ ನಮೂನೆ ಜಿಎಸ್ಟಿಆರ್ 3ಬಿಗೆ ಅವಕಾಶವಿದೆಯೇ?

ಶುಭ ಸುದ್ದಿಯೆಂದರೆ ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್6ನಲ್ಲಿ ನಮೂನೆ ಜಿಎಸ್ಟಿಆರ್ 3ಬಿ ಸಲ್ಲಿಸಲು ವಿಶೇಷ ಅವಕಾಶ ನೀಡುವ ಯೋಜನೆ ಹೊಂದಲಾಗಿದೆ. ಇದು ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಪರಿಷ್ಕರಣೆ: ಟ್ಯಾಲಿ.ಇಆರ್ಪಿ 9 ೀಗ ಜಿಎಸ್ಟಿಆರ್ -3ಬಿ ಸಲ್ಲಿಕೆಗೆ ಸಿದ್ಧವಾಗಿದೆ. ಇದನ್ನು ನೀವು ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಟ್ಯಾಲಿ.ಇಆರ್ಪಿ 9ನ ಇನ್ಫಾರ್ಮೆಷನ್ ವಿಭಾಗದಲ್ಲಿ ಇರುವ ಅಪ್ಡೇಟ್ ವಿಭಾಗವನ್ನು ಕ್ಲಿಕ್ ಮಾಡಿರಿ.
ನಮ್ಮ ಗ್ರಾಹಕರಿಗೆ ನಮೂನೆ ಜಿಎಸ್ಟಿಆರ್ 3ಬಿಯನ್ನು ಮುದ್ರಿಸಿಕೊಳ್ಳುವ ಅವಕಾಶವನ್ನು ನೀಡುವ ಯೋಜನೆ ನಾವು ಹೊಂದಿದ್ದೇವೆ, ಇದು ವರ್ಡ್ ಡಾಕ್ಯುಮೆಂಟಿನಲ್ಲಿ ಲಭ್ಯವಿರಲಿದೆ. ಜಿಎಸ್ಟಿಎನ್ ವೆಬ್ ತಾಣದಲ್ಲಿ ಇರುವಂತೆ ಈ ವರ್ಡ್ ದಾಖಲೆಯಲ್ಲಿಯೂ ಅದೇ ವಿಭಾಗಗಳು ಇವೆ, ಇದರಿಂದ ಗ್ರಾಹಕರಿಗೆ ಜಿಎಸ್ಟಿಎನ್ ವೆಬ್ ತಾಣದಲ್ಲಿ ಭರ್ತಿ ಮಾಡುವುದು ಸುಲಭವಾಗಲಿದೆ. ಇದು ನಿಮಗೆ ನಮೂನೆ ಜಿಎಸ್ಟಿಆರ್ 3ಬಿ ಬಗ್ಗೆ ಭರವಸೆ ಹೆಚ್ಚಿಸಲಿದೆ, ಜಿಎಸ್ಟಿಎನ್ನಲ್ಲಿ ಆಗಸ್ಟ್ 20ರಂದು ಭರ್ತಿ ಮಾಡಲು ನಿಮಗೆ ಭರವಸೆ ಹೆಚ್ಚಲಿದೆ.

ಜಿಎಸ್ಟಿಎನ್ನಲ್ಲಿ ಇಂಟರ್ನೆಟ್ ಇಲ್ಲದೆ ಎಕ್ಸೆಲ್ ಟೆಂಪ್ಲೆಟ್ ಮೂಲಕವೂ ನಮೂನೆ ಜಿಎಸ್ಟಿಆರ್ 3ಬಿ ಸಲ್ಲಿಸುವ ಅವಕಾಶ ದೊರಕುವ ನಿರೀಕ್ಷೆಯಿದೆ, ನಾವು ಅದಕ್ಕೂ ಬೆಂಬಲ ನೀಡಲಿದ್ದೇವೆ.

ಇಂದಿನವರೆಗೆ ಸರಕಾರವು ಜುಲೈ ಮತ್ತು ಆಗಸ್ಟ್ 2017ರ ಜಿಎಸ್ಟಿಆರ್ 1 ಅನ್ನು ಲಗ್ಗತ್ತಿಸುವುದನ್ನು ಮತ್ತು ಜಿಎಸ್ಟಿಆರ್ 2ಗೆ ಸರಕುಪಟ್ಟಿ ಹೋಲಿಸುವುದನ್ನು ಸೆಪ್ಟೆಂಬರ್ 2017ರಲ್ಲಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ.
ಅತ್ಯಂತ ಪ್ರಮುಖವಾಗಿರುವುದು ಏನೆಂದರೆ, ನೀವು ಜುಲೂ ಮತ್ತು ಆಗಸ್ಟ್ 2017ರ ನಮೂನೆ ಜಿಎಸ್ಟಿಆರ್ 3ಬಿ ಸಲ್ಲಿಸುವುದು, ಜಿಎಸ್ಟಿಎನ್ ಸೃಜಿಸುವ ಜುಲೈ ಮತ್ತು ಆಗಸ್ಟ್ 2017ರ ತಿಂಗಳ ಜಿಎಸ್ಟಿಆರ್ 3 ಸೃಜಿಸುವುದಕ್ಕೆ ಹೋಲಿಕೆಯಾಗಬೇಕು.

ನೀವಿದನ್ನು ಜಿಎಸ್ಟಿ-ರೆಡಿ ಟ್ಯಾಲಿ. ಇಆರ್ಪಿ ರಿಲೀಸ್ 6ನಲ್ಲಿ ಮಾಡಿದ್ದರೆ ಜಿಎಸ್ಟಿಆರ್-3ಗೆ ನಮೂನೆ ಜಿಎಸ್ಟಿಆರ್ 3ಬಿಯನ್ನು ಮ್ಯಾಚ್ ಮಾಡುವುದು ಸುಲಭವಾಗಲಿದೆ, ಯಾಕೆಂದರೆ ಇದರ ಮಾಹಿತಿಯ ಮೂಲ ಒಂದೇ ಆಗಿರುತ್ತದೆ. ಇಲ್ಲವಾದರೆ, ಒಮ್ಮೆ ಜಿಎಸಟಿಆರ್ 3 ಜನರೇಟ್ ಆದ ಬಳಿಕ ಜಿಎಸ್ಟಿಆರ್ 1 ಮತ್ತು 2 ರೀತಿ ರಿವಾಜುಗಳನ್ನು ಪೂರ್ಣಗೊಳಿಸಬೇಕಾಗುತ್ತದೆ ಅಥವಾ ಎಲ್ಲಾದರೂ ಮರುಪಾವತಿ ಬಯಸಿದ್ದಲ್ಲಿ, ಇದು ಐಟಿಸಿಯಾಗಿ ಲಭ್ಯವಿರಲಿದೆ, ಇದನ್ನು ಭವಿಷ್ಯದ ಬಾಧ್ಯತೆಯಾಗಿ ಕೇಳಬಹುದಾಗಿದೆ.

ಜಿಎಸ್ಟಿಆರ್ -3ಬಿ ಬಗ್ಗೆ ಟ್ಯಾಲಿ.ಇಆರ್ಪಿ 9 ರಿಲೀಸ್ 6.0.3 ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಿ TallyHelp

ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6ನಿಂದ ಮೇಲ್ದರ್ಜೆಗೆ ಬಾರದೆ ಇದ್ದರೂ ಏನಾಗಬಹುದು? ನಾನೀಗಲೂ ನಮೂನೆ ಜಿಎಸ್ಟಿಆರ್ 3ಬಿ ಭರ್ತಿ ಮಾಡಬಹುದೇ?

ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ಪಿ 9 ದೊರಕಿದ ತಕ್ಷಣ ನೀವು ಅದಕ್ಕೆ ಹೋಗುವುದು ಸೂಕ್ತವೆಂದು ನಾವು ಶಿಫಾರಸ್ಸು ಮಾಡುತ್ತೇವೆ. ಇದರಿಂದ ನಿಮಗೆ ಒಂಧೇ ವರದಿಯಲ್ಲಿ ಜಿಎಸ್ಟಿಆರ್ 3ಬಿ ಭರ್ತಿ ಮಾಡಲು ಸಾಧ್ಯವಾಗಲಿದೆ. ಆದರೂ, ಈಗಿನದ್ದಕ್ಕೆ ನೀವು ತಕ್ಷಣ ಹೋಗಲಾಗದಂತೆ ಹಲವು ಕಾರಣಗಳು ಇರಬಹುದು. ಇದರ ಕುರಿತು ನೀವು ಚಿಂತೆ ಮಾಡಬೇಕಿಲ್ಲ. ನಮೂನೆ ಜಿಎಸ್ಟಿಆರ್ 3ಬಿ ಭರ್ತಿ ಮಾಡಲು ಬೇಕಾದ ದಾಖಲೆಗಳು ಟ್ಯಾಲಿ.ಇಆರ್ಪಿ 9ನಲ್ಲೇ ಲಭ್ಯವಿದೆ.
ಎಲ್ಲಾದರೂ ನೀವು ಟ್ಯಾಲಿ.ಇಆರ್ಪಿ 9ರ ಲೋವರ್ ರಿಲೀಸ್ ಅನ್ನು ಬಳಕೆ ಮಾಡುತ್ತಿದ್ದರೆ, ಸಂಬಂಧಪಟ್ಟ ಎಲ್ಲಾ ಮಾಹಿತಿಗಳು ಜಿಎಸ್ಟಿಆರ್ 1 ಮತ್ತು ಜಿಎಸಟಿಆರ್ 2ನಲ್ಲಿ ಹಿಂದಿನ ರಿಲೀಸ್ ನಲ್ಲಿಯೇ ಲಭ್ಯವಿದೆ.

• ಸರಳವಾಗಿ ಜಿಎಸ್ಟಿಆರ್ 1/ಜಿಎಸ್ಟಿಆರ್ 2 ವರದಿ ತೆರೆಯಿರಿ ಮತ್ತು ಡಿಫಾಲ್ಟ್ ವ್ಯೂ ಅನ್ನು ಕ್ಲಿಕ್ ಮಾಡಿರಿ.
• ಎಫ್ 1 ಕ್ಲಿಕ್ ಮಾಡಿ, ವಿಭಾಗೀಯ ಮಾಹಿತಿಯಂತೆ ಎಲ್ಲಾ ಮಾಹಿತಿ ದೊರಕುತ್ತದೆ.

ಎಲ್ಲಾದರೂ ನಿಮಗೆ ರಾಜ್ಯವಾರು ಮಾಹಿತಿಯ ಅಗತ್ಯವಿದ್ದರೆ, ಸಂಬಂಧಪಟ್ಟ ವಿಭಾಗಗಳಲ್ಲಿ ಎಂಟರ್ ಕ್ಲಿಕ್ ಮಾಡಿರಿ.

ಜಿಎಸ್ಟಿ ರೆಡಿ ತಂತ್ರಾಂಶ ಟ್ಯಾಲಿ.ಇಆರ್ಪಿ ನಲ್ಲಿಯೇ ವಿವಿಧ ಕೋಷ್ಟಕಗಳಲ್ಲಿ ಎಲ್ಲಾ ಮಾಹಿತಿಗಳು ದೊರಕುತ್ತವೆ.

ಹೆಚ್ಚಿನ ಮಾಹಿತಿಗಳು ನಿಮಗೆ ಶೀಘ್ರದಲ್ಲಿ ಇಲ್ಲಿ ದೊರಕಲಿದೆ.

ಉಪಸಂಹಾರ

ನಾವು ನಿಮ್ಮೊಂದಿಗೆ ಜಿಎಸ್ಟಿ ಪ್ರಯಾಣದಲ್ಲಿ ಟ್ಯಾಲಿ.ಇಆರ್ಪಿ 9 ಬೆಂಬಲದ ಜೊತೆಗೆ ಇರುತ್ತೇವೆ, ನಿಮ್ಮ ಜಿಎಸ್ಟಿ ಅನುಸರಣೆಯ ಅಗತ್ಯಗಳಿಗೆ ಪ್ರತಿಯೊಂದು ಹೆಜ್ಜೆಯಲ್ಲಿಯೂ ಜೊತೆಗಿರುತ್ತೇವೆ ಮತ್ತು ಸರಕಾರದಿಂದ ಹೊಸ ಬಗೆಯ ಸೂಚನೆಗಳು ಬಂದಾಗ ಇತ್ತೀಚಿನ ವಿವರಗಳನ್ನು ಪ್ರಕಟಿಸುತ್ತೇವೆ.

Are you GST ready yet?

Get ready for GST with Tally.ERP 9 Release 6

271,617 total views, 2 views today

Avatar

Author: Shailesh Bhatt