ಭಾರತದಾದ್ಯಂತ ಉದ್ಯಮಗಳು ಮೊಟ್ಟ ಮೊದಲಿಗೆ ಜಿಎಸ್ಟಿಆರ್ ಅನ್ನು ಸಲ್ಲಿಸುವ ದಿನ ಬಹಳ ದೂರ ಉಳಿದಿಲ್ಲ (ಸೆಪ್ಟೆಂಬರ್ 10, 2017).ಈ ಬ್ಲಾಗ್ ನಲ್ಲಿ ಜಿಎಸ್ಟಿ ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6 ಅನ್ನು ಬಳಸಿ ಜಿಎಸ್ಟಿಆರ್-1 ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಚರ್ಚಿಸೋಣ.

ಜಿಎಸ್ಟಿ ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6.1 ಮುನ್ನೋಟದ ಬಿಡುಗಡೆ (ಪ್ರಿವ್ಯೂ ರಿಲೀಸ್) ಈಗ ಲಭ್ಯವಿದೆ ಎಂದು ಘೋಷಿಸಲು ನಾವು ಸಂತೋಷಿಸುತ್ತೇವೆ. ಈ ರಿಲೀಸ್ ಬಳಸಿಕೊಂಡು ಜಿಎಸ್ಟಿ ವಿಭಾಗದ ಅವಶ್ಯಕತೆಗಳಿಗೆ ಅನುಸಾರವಾಗಿ ಜಿಎಸ್ಟಿ ಆರ್ -1 ಅರ್ಜಿಯನ್ನು ಉತ್ಪಾದಿಸುವುದು ನಿಮಗೆ ಸಾಧ್ಯವಾಗುತ್ತದೆ. ಪ್ರಿವ್ಯೂ ರಿಲೀಸ್ ಅನ್ನು ಪ್ರಯತ್ನಿಸಲು ಇಲ್ಲಿ ಕ್ಲಿಕ್ ಮಾಡಿ .

ಒಳಗೊಂಡಿರುವ ವಿಷಯಗಳು

  1. ಜಿಎಸ್ಟಿಆರ್-1 ಅರ್ಜಿಯ ಪರಿಚಯ
  2. ಜಿಎಸ್ಟಿ ಪ್ರಾಕ್ಟಿಷನರ್ ನಮ್ಮ ಆದಾಯವನ್ನು ಸಲ್ಲಿಸುತ್ತಾರೆ, ನಾವು ಏನು ಮಾಡಬೇಕು?
  3. ನಾವು ನಮ್ಮದೇ ಸ್ವಂತ ಆದಾಯವನ್ನು ಸಲ್ಲಿಸುವುದರ ಬಗ್ಗೆ ಕಾಳಜಿ ವಹಿಸುತ್ತೇವೆ, ಹೇಗೆ ಮುಂದುವರಿಯಬೇಕು?
  4. ನಾವು ಜಿಎಸ್ಟಿ ಪ್ರಾಕ್ಟಿಷನರ್ಸ್ (ಸಿಎ, ಎಸ್ ಟಿಪಿ ಅಥವಾ ಲೇಖಪಾಲ(ಅಕೌಂಟೆಂಟ್) ಆಗಿದ್ದೇವೆ, ನಾವು ಹೇಗೆ ಜಿಎಸ್ಟಿಆರ್ 1 ಸಲ್ಲಿಕೆಯನ್ನು ಮಾಡಬೇಕು?
  5. ಜಿಎಸ್ಟಿಆರ್-1 ಸಲ್ಲಿಕೆಗಾಗಿ ಆಫ್ಲೈನ್ ಸೌಲಭ್ಯವನ್ನು ಎಲ್ಲಿ ಪಡೆಯಬಹುದು?

ಜಿಎಸ್ಟಿಆರ್-1 ಪರಿಚಯ

ಅರ್ಜಿ ಜಿಎಸ್ಟಿಆರ್-1 ಎಂಬುದು ಒಂದು ಉದ್ಯಮ ತನ್ನ ಹೊರಗಿನ ಸರಬರಾಜುಗಳ ವಿವರಗಳನ್ನು ಒದಗಿಸಬೇಕಾದ ಒಂದು ಅರ್ಜಿಯಾಗಿದೆ. ಹೊರಗಿನ ಸರಬರಾಜುಗಳೆಂದರೆ ಇತರ ಉದ್ಯಮಗಳಿಗೆ ಮಾರಾಟವನ್ನು ಒಳಗೊಂಡಿರುವ ಎಲ್ಲಾ ಸರಬರಾಜು, ಗ್ರಾಹಕರಿಗೆ ಮಾರಾಟ, ರಫ್ತುಗಳು, ಗ್ರಾಹಕರಿಂದ ಮುಂಗಡ ರಶೀದಿಗಳು, ಮತ್ತು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ಅರ್ಜಿಯಲ್ಲಿ ಅನೇಕ ಕೋಷ್ಟಕಗಳಿವೆ ಹಾಗೂ ಪ್ರತಿಯೊಂದು ಕೋಷ್ಟಕದಲ್ಲೂ ಉದ್ಯಮಗಳು ವಿವಿಧ ಶೈಲಿಗಳಲ್ಲಿ ತಮ್ಮ ವಿವರಗಳನ್ನು ನೀಡಬೇಕು. ಉದಾಹರಣೆಗೆ,
a) ಉದ್ಯಮಗಳು “ಇತರ ನೋಂದಾಯಿತ ಉದ್ಯಮಗಳಿಗೆ ಮಾಡಿದ ಮಾರಾಟವನ್ನು (B2B ಸರಕುಪಟ್ಟಿಗಳು)” ಖರೀದಿದಾರನ ವಿವರಗಳೊಂದಿಗೆ ಪ್ರತಿ ಬಿಲ್ ನೊಂದಿಗೆ ಪ್ರಸ್ತುತಪಡಿಸುವುದು ಅವಶ್ಯಕ.
b) “ಗ್ರಾಹಕರಿಗೆ ಮಾಡಿದ ಸಣ್ಣ ಪ್ರಮಾಣದ ಮಾರಾಟವನ್ನು (B2CS ಸರಕುಪಟ್ಟಿಗಳು)” ಬಿಲ್ ರೂಪದಲ್ಲಿಲ್ಲದೆ ಒಂದು ಸಂಕ್ಷಿಪ್ತವಾಗಿ ಪ್ರಸ್ತುತಪಡಿಸಬೇಕು.
c) ಗ್ರಾಹಕರಿಗೆ ಮಾಡಿದ ದೊಡ್ಡ ಪ್ರಮಾಣದ ಮಾರಾಟವನ್ನು (B2CL ಸರಕುಪಟ್ಟಿಗಳು)” ಗ್ರಾಹಕನ ವಿವರಗಳೊಂದಿಗೆ ಪ್ರತಿ ಬಿಲ್ ನೊಂದಿಗೆ ಪ್ರಸ್ತುತಪಡಿಸುವುದು ಅವಶ್ಯಕ.

ಜಿಎಸ್ಟಿಆರ್ -1 ರ ಸ್ಥೂಲ ಸಮೀಕ್ಷೆ ಹಾಗೂ ದೂರು ಸಲ್ಲಿಕೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ವಿವರಗಳನ್ನು ನಮ್ಮ ಹಿಂದಿನ ಬ್ಲಾಗ್ ನಲ್ಲಿ ನಾವು ನೀಡಲು ಪ್ರಯತ್ನಿಸಿದ್ದೇವೆ. ಅದರ ಬಗ್ಗೆ ಓದಲು ಇಲ್ಲಿ ಕ್ಲಿಕ್ ಮಾಡಿ.

File the most accurate GST Returns using Tally.ERP 9

ಜಿಎಸ್ಟಿ ಪ್ರಾಕ್ಟಿಷನರ್ ನಮ್ಮ ಆದಾಯವನ್ನು ಸಲ್ಲಿಸುತ್ತಾರೆ, ನಾವು ಏನು ಮಾಡಬೇಕು?

ಭಾರತದಲ್ಲಿ ಬಹಳಷ್ಟು ಉದ್ಯಮಗಳು ತಮ್ಮ ತೆರಿಗೆ ಆದಾಯವನ್ನು ಸಲ್ಲಿಸಲು ತಮ್ಮ ಜಿಎಸ್ಟಿ ಪ್ರಾಕ್ಟೀಷನರ್ಸ್ ಅನ್ನು ಅವಲಂಬಿಸಿರುತ್ತಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ಇದು ಸ್ವಲ್ಪ ಸಮಯದವರೆಗೂ ಹೀಗೆ ಮುಂದುವರಿಯುತ್ತದೆ ಎಂಬ ನಿರೀಕ್ಷೆಯಿದೆ.
ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ನೀಡಲು ನಿಮ್ಮ ಉದ್ಯಮಕ್ಕೆ ಖಂಡಿತವಾಗಿ ಜಿಎಸ್ಟಿ ಪ್ರಾಕ್ಟೀಷನರ್ಸ್ ಮತ್ತು ನೀವು ಬಳಸುವ ಸಾಫ್ಟ್ ವೇರ್ ನಿಂದ ಸಹಾಯ ಬೇಕಾಗುತ್ತದೆ. ಇದರಿಂದ ನೀವು ಜಿಎಸ್ಟಿ ಆದಾಯವನ್ನು ಸಲ್ಲಿಸಲು ಮತ್ತು ಬದ್ಧರಾಗಿರಲು ಇದು ಸಹಾಯ ಮಾಡುತ್ತದೆ.

ನೀವು ಕೆಲಸ ಮಾಡುವ ಶೈಲಿಯನ್ನು ಅವಲಂಬಿಸಿ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಬಹುದು:

a) ನಿಮ್ಮ ಕಂಪನಿ ಡೇಟಾ ಬ್ಯಾಕ್ ಅಪ್ ಅನ್ನು ತೆಗೆದು ನಿಮ್ಮ ಜಿಎಸ್ಟಿ ಪ್ರಾಕ್ಟೀಷನರ್ ನೊಂದಿಗೆ ಹಂಚಿಕೊಳ್ಳಬಹುದು. ಜಿಎಸ್ಟಿ –ರೆಡಿ ಟ್ಯಾಲಿ.ಇಆರ್ ಪಿ 9 ಅನ್ನು ಬಳಸಿ ನಿಮ್ಮ ಡೇಟಾವನ್ನು ಬ್ಯಾಕ್ ಅಪ್ ಮಾಡುವುದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು. ಇಲ್ಲಿ ಕ್ಲಿಕ್ ಮಾಡಿ.
b) ನೀವು ಅರ್ಜಿ ಜಿಎಸ್ಟಿಆರ್ -1 ವರದಿಗೆ ಹೋಗಿ, ಅಪೂರ್ಣವಾಗಿರುವ/ಮಾಹಿತಿಯ ಅನುರೂಪತೆಯನ್ನು ಹೊಂದಿರುವ ವೋಚರ್ ಗಳಿಗೆ ತಿದ್ದುಪಡಿಗಳು/ಬದಲಾವಣೆಗಳನ್ನು ಮಾಡಿ ಮೈಕ್ರೋಸಾಫ್ಟ್ ಎಕ್ಸೆಲ್ ಟೆಂಪ್ಲೇಟ್ ಗೆ ಎಕ್ಸ್ ಪೋರ್ಟ್ ಮಾಡಿಕೊಳ್ಳಿ, ನಂತರ ಇದನ್ನು ಜಿಎಸ್ಟಿ ಪ್ರಾಕ್ಟೀಷನರ್ ನೊಂದಿಗೆ ಹಂಚಿಕೊಳ್ಳಿ ಟ್ಯಾಲಿ.ಇಆರ್ ಪಿ 9 ರಿಂದ ಜಿಎಸ್ಟಿಆರ್-1 ಅರ್ಜಿಯನ್ನು ಪಡೆಯಲು ಮತ್ತು ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ..

ನಾವು ನಮ್ಮದೇ ಸ್ವಂತ ಆದಾಯವನ್ನು ಸಲ್ಲಿಸುವುದರ ಬಗ್ಗೆ ಕಾಳಜಿ ವಹಿಸುತ್ತೇವೆ, ಹೇಗೆ ಮುಂದುವರಿಯಬೇಕು?

ಕೆಲವು ಉದ್ಯಮಗಳು ತಮ್ಮ ಜಿಎಸ್ಟಿ ಪ್ರಾಕ್ಟೀಷನರ್ಸ್ ಕೋರಿಕೆಯ ಮೇರೆಗೆ ತಾವೇ ಸ್ವಂತವಾಗಿ ಜಿಎಸ್ಟಿಆರ್-1 ಅನ್ನು ಸಲ್ಲಿಸಲು ಬಯಸುತ್ತಾರೆ. ಇಂತಹ ಉದ್ಯಮಗಳಿಗೆ ತಾವು ಬಳಸುತ್ತಿರುವ ಜಿಎಸ್ಟಿ-ಸಿದ್ಧ ಸಾಫ್ಟ್ ವೇರ್ ಜಿಎಸ್ಟಿಆರ್-1 ಅನ್ನು ಪಡೆಯಲು ಅನುಮತಿಸುತ್ತದೆ.

ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ ಪಿ 9 ಜಿಎಸ್ಟಿಆರ್ -1 ಅನ್ನು ಉತ್ಪನ್ನದೊಳಗಿಂದ ಉತ್ಪಾದಿಸಲು ಅನುವು ಮಾಡಿಕೊಡುತ್ತದೆ. ನೀವು ಜಿಎಸ್ಟಿಆರ್ -1 ವರದಿಗೆ ಹೋಗಿ ಅಪೂರ್ಣವಾಗಿರುವ/ಮಾಹಿತಿಯ ಅನುರೂಪತೆಯನ್ನು ಹೊಂದಿರುವ ವೋಚರ್ ಗಳಿಗೆ ತಿದ್ದುಪಡಿಗಳು/ಬದಲಾವಣೆಗಳನ್ನು ಮಾಡಿ ಮೈಕ್ರೋಸಾಫ್ಟ್ ಎಕ್ಸೆಲ್ ಟೆಂಪ್ಲೇಟ್ ಗೆ ಎಕ್ಸ್ ಪೋರ್ಟ್ ಮಾಡಿಕೊಳ್ಳಿ, ಇದನ್ನು ಜಿಎಸ್ಟಿಎನ್ ಆಫ್ಲೈನ್ ಟೂಲ್ ಬಳಸಿ ಮೌಲ್ಯೀಕರಿಸಿ ನಂತರ ಜಿಎಸ್ಟಿಎನ್ ಪೋರ್ಟಲ್ ಗೆ ಅಪ್ಲೋಡ್ ಮಾಡಬಹುದು. ಟ್ಯಾಲಿ.ಇಆರ್ಪಿ 9 ನಿಂದ ಜಿಎಸ್ಟಿಆರ್-1 ಅರ್ಜಿಯನ್ನು ಉತ್ಪಾದಿಸಲು ಈ ಸ್ಥಳವನ್ನು ವೀಕ್ಷಿಸಿ.

ನಾವು ಜಿಎಸ್ಟಿ ಪ್ರಾಕ್ಟಿಷನರ್ಸ್ (ಸಿಎ, ಎಸ್ ಟಿಪಿ ಅಥವಾ ಲೇಖಪಾಲ (ಅಕೌಂಟೆಂಟ್), ಹೇಗೆ ಜಿಎಸ್ಟಿಆರ್ -1 ಸಲ್ಲಿಕೆಯನ್ನು ಮಾಡಬೇಕು?

ನೀವೊಬ್ಬ ಜಿಎಸ್ಟಿ ಪ್ರಾಕ್ಟೀಷನರ್ ಆಗಿದ್ದರೆ ಜಿಎಸ್ಟಿ –ರೆಡಿ ಟ್ಯಾಲಿ ಇಆರ್ಪಿ 9 ಅನ್ನು ಬಳಸಿ ನಿಮ್ಮ ಗ್ರಾಹಕರಿಗೆ ನೀವು ಪುಸ್ತಕಗಳನ್ನು ಡಿಜಟೈಸ್ ಮಾಡಬಹುದು ಹಾಗೂ ಅದೇ ಮಾಹಿತಿಯನ್ನು ಬಳಸಿಕೊಂಡು ಜಿಎಸ್ಟಿ ಯನ್ನು ಸಲ್ಲಿಸಬಹುದು. ಜಿಎಸ್ಟಿ –ರೆಡಿ ಟ್ಯಾಲಿ ಇಆರ್ಪಿ 9 ಜಿಎಸ್ಟಿಆರ್- ಅನ್ನು ಉತ್ಪನ್ನದೊಳಗೆ ಉತ್ಪಾದನೆ ಮಾಡಲು ಅವಕಾಶ ನೀಡುತ್ತದೆ. ನೀವು ಅರ್ಜಿ ಜಿಎಸ್ಟಿಆರ್ -1 ವರದಿಗೆ ಹೋಗಿ ಅಪೂರ್ಣವಾಗಿರುವ/ಮಾಹಿತಿಯ ಅನುರೂಪತೆಯನ್ನು ಹೊಂದಿರುವ ವೋಚರ್ ಗಳಿಗೆ ತಿದ್ದುಪಡಿಗಳು/ಬದಲಾವಣೆಗಳನ್ನು ಮಾಡಿ ಮೈಕ್ರೋಸಾಫ್ಟ್ ಎಕ್ಸೆಲ್ ಟೆಂಪ್ಲೇಟ್ ಗೆ ಎಕ್ಸ್ ಪೋರ್ಟ್ ಮಾಡಿಕೊಳ್ಳಿ, ಇದನ್ನು ಜಿಎಸ್ಟಿಎನ್ ಆಫ್ಲೈನ್ ಟೂಲ್ ಬಳಸಿ ಮೌಲ್ಯೀಕರಿಸಿ ನಂತರ ಜಿಎಸ್ಟಿಎನ್ ಪೋರ್ಟಲ್ ಗೆ ಅಪ್ಲೋಡ್ ಮಾಡಬಹುದು. ಟ್ಯಾಲಿ.ಇಆರ್ಪಿ 9 ನಿಂದ ಜಿಎಸ್ಟಿಆರ್-1 ಅರ್ಜಿಯನ್ನು ಉತ್ಪಾದಿಸಲು ಇಲ್ಲಿ ಕ್ಲಿಕ್ ಮಾಡಿ .
ಇನ್ನುಳಿದ ನಿಮ್ಮ ಗ್ರಾಹಕರಿಗೆ ನೀವು ಈ ಕೆಳಗಿನ ರೀತಿಯಲ್ಲಿ ಡೇಟಾವನ್ನು ಪಡೆಯಬಹುದು:

1. ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ ಪಿ 9 ರಿಂದ ಡೇಟಾ ಬ್ಯಾಕ್ಅಪ್
2. ಜಿಎಸ್ಟಿಎನ್ ಗೆ ಅವಶ್ಯಕವಿರುವಂತೆ ಜಿಎಸ್ಟಿಆರ್-1 ಎಕ್ಸೆಲ್ ಟೆಂಪ್ಲೇಟ್
3. ಇತರ ಯಾವುದೇ ಸಾಫ್ಟ್ ವೇರ್ ನಿಂದ ಡೇಟಾ (ಈ ಬ್ಲಾಗ್ ನಲ್ಲಿ ಒಳಗೊಳ್ಳದೆ ಇರುವುದು)

ನೀವು ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ ಪಿ 9 ರಿಂದ ಡೇಟಾ ಬ್ಯಾಕ್ಅಪ್ ಅನ್ನು ಪಡೆದಿದ್ದರೆ ಈ ಮುಂಚೆ ತಿಳಿಸಿದ ರೀತಿಯಲ್ಲಿ ಜಿಎಸ್ಟಿಆರ್-1 ಅನ್ನು ಉತ್ಪಾದಿಸಿ ಬ್ಯಾಕ್ಅಪ್ ಅನ್ನು ಹಿಂದಕ್ಕೆ ಪಡೆಯಬಹುದು. ಬ್ಯಾಕ್ಅಪ್ ಹಿಂಪಡೆಯಲು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ ಪಿ 9 ರೊಂದಿಗೆ ನೀವು ಜಿಎಸ್ಟಿಆರ್-1 ಅನ್ನು ಉತ್ಪನ್ನದೊಳಗಿಂದ ಉತ್ಪಾದಿಸಬಹುದು. ನೀವು ಅರ್ಜಿ ಜಿಎಸ್ಟಿಆರ್ -1 ವರದಿಗೆ ಹೋಗಿ ಅಪೂರ್ಣವಾಗಿರುವ/ಮಾಹಿತಿಯ ಅನುರೂಪತೆಯನ್ನು ಹೊಂದಿರುವ ವೋಚರ್ ಗಳಿಗೆ ತಿದ್ದುಪಡಿಗಳು/ಬದಲಾವಣೆಗಳನ್ನು ಮಾಡಿ ಮೈಕ್ರೋಸಾಫ್ಟ್ ಎಕ್ಸೆಲ್ ಟೆಂಪ್ಲೇಟ್ ಗೆ ಎಕ್ಸ್ ಪೋರ್ಟ್ ಮಾಡಿಕೊಳ್ಳಿ, ಇದನ್ನು ಜಿಎಸ್ಟಿಎನ್ ಆಫ್ಲೈನ್ ಟೂಲ್ ಬಳಸಿ ಮೌಲ್ಯೀಕರಿಸಿ ನಂತರ ಜಿಎಸ್ಟಿಎನ್ ಪೋರ್ಟಲ್ ಗೆ ಅಪ್ಲೋಡ್ ಮಾಡಬಹುದು. ಟ್ಯಾಲಿ.ಇಆರ್ಪಿ 9 ನಿಂದ ಜಿಎಸ್ಟಿಆರ್-1 ಅರ್ಜಿಯನ್ನು ಉತ್ಪಾದಿಸಲು. ಇಲ್ಲಿ ಕ್ಲಿಕ್ ಮಾಡಿ .

ಟ್ಯಾಲಿ.ಇಆರ್ಪಿ 9 ರಿಲೀಸ್ 6.1 ಅನ್ನು ಬಳಸಿ ಜಿಎಸ್ಟಿಆರ್-1 ಸಲ್ಲಿಸುವುದು – ಒಂದು ಮುನ್ನೋಟ

ಜಿಎಸ್ಟಿಎನ್ ಗೆ ಅವಶ್ಯಕವಿರುವ ರೀತಿಯಲ್ಲಿ ನೀವು ಜಿಎಸ್ಟಿಆರ್-1 ಎಂಎಸ್ ಎಕ್ಸೆಲ್ ಟೆಂಪ್ಲೇಟ್ ಅನ್ನು ಪಡೆದಿದ್ದರೆ ಅದನ್ನು ನೀವು ಆಫ್ಲೈನ್ ಟೂಲ್ ಮೂಲಕ ಇಂಪೋರ್ಟ್ ಮಾಡಬೇಕು, ಜೆಎಸ್ಒಎನ್ ಫೈಲ್ ಅನ್ನು ಉತ್ಪಾದಿಸಿ ನಂತರ ಜೆಎಸ್ಒಎನ್ ಫೈಲ್ ಅನ್ನು ಜಿಎಸ್ಟಿಎನ್ ಪೋರ್ಟಲ್ ಗೆ ಅಪ್ಲೋಡ್ ಮಾಡಬೇಕು.

ಜಿಎಸ್ಟಿಆರ್-1 ಸಲ್ಲಿಸಲು ಆಫ್ಲೈನ್ ಸೌಲಭ್ಯ ಎಲ್ಲಿ ನಮಗೆ ದೊರೆಯುತ್ತದೆ?

ಆಫ್ಲೈನ್ ಟೂಲ್ ಅನ್ನು ಇಲ್ಲಿ ಡೌನ್ಲೋಡ್ ಮಾಡಬಹುದು.

ಗಮನಿಸಿ: ಜಿಎಸ್ಟಿ ಇಲಾಖೆಯ ಪುಟದಲ್ಲಿ “ಸಿಸ್ಟಂ ರಿಕ್ವೈರ್ಮೆಂಟ್ಸ್” ವಿಭಾಗವನ್ನು ನೋಡಿ ಮತ್ತು ಅಲ್ಲಿ ಸೂಚಿಸಲಾದ ಸಿಸ್ಟಂ ಅವಶ್ಯಕತೆಗಳನ್ನು ನಿಮ್ಮ ಸಿಸ್ಟಂ ಹೋಲುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದರ ಜೊತೆಗೆ ಆಫ್ಲೈನ್ ಟೂಲ್ ಅನ್ನು ಅನುಷ್ಠಾನಗೊಳಿಸಲು ನೀಡಲಾದ ಸೂಚನೆಗಳನ್ನು ಓದಿ.

ಸಲ್ಲಿಕೆಗೆ ಶುಭಾಶಯ ಹಾಗೂ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಿ!

Are you GST ready yet?

Get ready for GST with Tally.ERP 9 Release 6

249,114 total views, 1 views today

Avatar

Author: Shailesh Bhatt