ನಿಗದಿ ಮಾಡಿದ ಕಾಲಮಿತಿಯೊಳಗೆ ಅಳವಡಿಸಿಕೊಳ್ಳಲು ವ್ಯವಹಾರಿಗಳು ಪೂರ್ಣ ಪ್ರಮಾಣದಲ್ಲಿ ಸನ್ನದ್ಧರಾಗುತ್ತಿದ್ದಾರೆ. ನಾವು ನಮ್ಮ ಹಿಂದಿನ ಬ್ಲಾಗ್ ‘ನಮೂನೆ ಜಿಎಸ್ಟಿಆರ್- 3ಬಿ ಯನ್ನು ಸಲ್ಲಿಸುವುದು ಹೇಗೆ’, ನಲ್ಲಿ ಹೇಳಿರುವಂತೆ, ನಮೂನೆ ಜಿಎಸ್ಟಿಆರ್- 3 ಬಿ, ಮೊದಲ 2 ತಿಂಗಳುಗಳು ಅಂದರೆ ಜುಲೈ . ಮತ್ತು ಆಗಸ್ಟ್, 2017 ರಲ್ಲಿ ಸಲ್ಲಿಸಬೇಕಾಗಿರುವ ಒಂದು ಮಧ್ಯಂತರ ಆದಾಯ ಸಲ್ಲಿಕೆ(ರಿಟರ್ನ್) ಆಗಿದೆ. ಆದಾಗ್ಯೂ, ವ್ಯವಹಾರಗಳು ಜಿಎಸ್ಟಿಆರ್- 1, ನಮೂನೆ ಜಿಎಸ್ಟಿಆರ್-2 ಮತ್ತು ನಮೂನೆ ಜಿಎಸ್ಟಿಆರ್-3 ಗಳನ್ನು ಸಲ್ಲಿಸಬೇಕಾಗಿರುವ ಅವಶ್ಯಕತೆ ಇಲ್ಲ ಎಂದು ಇದರ ಅರ್ಥವಲ್ಲ. ಇದರ ಅರ್ಥವು, ಜಿಎಸ್ಟಿಆರ್- 1,ಜಿಎಸ್ಟಿಆರ್-2, ಜಿಎಸ್ಟಿಆರ್- 3 ಗಳನ್ನು ಸಲ್ಲಿಸುವ ಗಡುವನ್ನು ವಿಸ್ತೃತಗೊಳಿಸಲಾಗಿದೆ ಎಂಬುದಷ್ಟೇ ಆಗಿದೆ, ಮತ್ತು ಹಾಗಿದ್ದರೂ ವ್ಯವಹಾರಗಳು ಈ ಕೆಳಗೆ ನಮೂದಿಸಿದ ಪರಿಷ್ಕರಿಸಿದ ದಿನಗಳ ಪ್ರಕಾರದಂತೆ ಈ ರಿಟರ್ನ್ಗಳನ್ನು
ಸಲ್ಲಿಸಬೇಕಾಗುತ್ತದೆ:

ಜಿಎಸ್ಟಿಆರ್- 1,ಜಿಎಸ್ಟಿಆರ್-2, ಜಿಎಸ್ಟಿಆರ್- 3 ಗಳನ್ನು ಸಲ್ಲಿಸಲು ಅಂತಿಮ

 

ಜಿಎಸ್ಟಿ ಸಲ್ಲಿಸಲು ಅಂತಿಮ ಗಡುವು

ತಿಂಗಳು ಜಿಎಸ್ಟಿಆರ್- 1 ಜಿಎಸ್ಟಿಆರ್- 2 ಜಿಎಸ್ಟಿಆರ್- 3
ಜುಲೈ , 2017, 10 ನೇ ಅಕ್ಟೋಬರ್, 2017ಅಕ್ಟೋಬರ್ 31, 201710 ನೇ ನವೆಂಬರ್, 2017

ಮೇಲಿನ ದಿನಾಂಕಗಳು ಜುಲೈ ಮತ್ತು ಆಗಸ್ಟ್ 2017 ಗಳಲ್ಲಿ ಸಲ್ಲಿಸುವುದಕ್ಕೆ ಮಾತ್ರವೇ ಅನ್ವಯವಾಗುತ್ತವೆ. ಮುಂದಿನ ತಿಂಗಳುಗಳು (ಸೆಪ್ಟೆಂಬರ್ ನಂತರದ) ಸಲ್ಲಿಸಬೇಕಾದ ಅದಾಯಕ್ಕೆ ಗಡುವು, ಆದಾಯ ಸಲ್ಲಿಕೆಯ ನಿಬಂಧನೆಗಳಿಗೆ ಅನುಗುಣವಾಗಿರುತ್ತದೆ, ಅಂದರೆ ಜಿಎಸ್ಟಿಆರ್- 1 ನ್ನು ಮುಂದಿನ ತಿಂಗಳ 10 ರ ಒಳಗೆ, ಜಿಎಸ್ಟಿಆರ್- 2 ನ್ನು 15 ರ ಒಳಗೆ, ಜಿಎಸ್ಟಿಆರ್- 3 ನ್ನು 20 ರ ಒಳಗೆ ಸಲ್ಲಿಸಬೇಕು.

ಪೂರ್ವಸಿದ್ಧತೆಗೆ ಒಂದು ಮೊದಲ ಹೆಜ್ಜೆಯಾಗಿ ಮತ್ತು ಜಿಎಸ್ಟಿಆರ್-1 ಅನ್ನು ಸಲ್ಲಿಸುವುದನ್ನು ಸುಲಭವಾಗಿಸಲು ಜಿಎಸ್ಟಿಆರ್ -1 ನಮೂನೆಯನ್ನು ರಚಿಸುವ ಮತ್ತು ಅದನ್ನು ಉಳಿಸಿಕೊಳ್ಳುವ(ಸೇವ್ ಮಾಡುವ) ಆಯ್ಕೆಯು ಜಿಎಸ್ಟಿ ಪೋರ್ಟಲ್ನಲ್ಲಿ ಜುಲೈ 24, 2017 ನಿಂದ ಲಭ್ಯವಿದೆ. ಇದಾದ ನಂತರ, ಸರಕು ಮತ್ತು ಸೇವೆಗಳ ಸ್ವೀಕೃತಿದಾರರಾದ ನಿಮಗೆ ನಿಮ್ಮ ಪೂರೈಕೆದಾರರು ಅಪ್ಲೋಡ್ ಮಾಡಿದ ಅಂಕಿ ಅಂಶಗಳನ್ನು ವೀಕ್ಷಿಸುವ ಆಯ್ಕೆಯು ನಮೂನೆ ಜಿಎಸ್ಟಿಆರ್-2ಎ ಯಲ್ಲಿ ಲಭ್ಯವಿದೆ. ಈ ಬ್ಲಾಗ್ನಲ್ಲಿ ನಾವು, ಜಿಎಸ್ಟಿಆರ್-1 ನ್ನು ಸಲ್ಲಿಸುವುದು ಹೇಗೆಂದು ಚರ್ಚಿಸಲಿದ್ದೇವೆ. ಸೆಪ್ಟೆಂಬರ್ ತಿಂಗಳ ನಂತರ, ಜಿಎಸ್ಟಿಆರ್-1 ನ್ನು ಸಲ್ಲಿಸಲು ಅಂತಿಮ ದಿನಾಂಕವು ಆಗಸ್ಟ್ 20, 2017 ಆಗಿದೆ.

ಜಿಎಸ್ಟಿಆರ್- 1ನ್ನು ಸಲ್ಲಿಸುವುದು ಹೇಗೆಂದು ಚರ್ಚಿಸುವ ಮೊದಲು, ನಾವು ಜಿಎಸ್ಟಿಆರ್- 1 ನಮೂನೆ ಏನೆಂಬುದನ್ನು ಅರ್ಥಮಾಡಿಕೊಳ್ಳೋಣ.

ಜಿಎಸ್ಟಿಆರ್- 1 ಎಂದರೇನು?

ಜಿಎಸ್ಟಿಆರ್-1 ಎಂದರೆ ಅದು ಒಬ್ಬ ವ್ಯಾಪಾರಸ್ಥನು ಒಂದು ತಿಂಗಳ ಅವಧಿಯಲ್ಲಿ ಮಾಡಿದ ಎಲ್ಲಾ ಹೊರ ಪೂರೈಕೆಗಳನ್ನು ಗ್ರಹಿಸಬೇಕಾದ ಒಂದು ಹೇಳಿಕೆಯಾಗಿದೆ. ವಿಶಾಲಾರ್ಥದಲ್ಲಿ, ನೋಂದಾಯಿತ ವ್ಯವಹಾರಗಳಿಗೆ (ಬಿ2ಬಿ) ಮಾಡಿದ ಎಲ್ಲಾ ಹೊರ ಪೂರೈಕೆಗಳನ್ನು ಖರೀದಿ ಪಟ್ಟಿಯ ಮಟ್ಟದಲ್ಲಿ ಗ್ರಹಿಸಬೇಕಾಗುತ್ತದೆ, ಮತ್ತು ನೋಂದಣಿ ಮಾಡದೇ ಇರುವ ಅಥವಾ ಕೊನೆಯ ಗ್ರಾಹಕರಿಗೆ ಮಾಡಿದ ಪೂರೈಕೆಗಳನ್ನು ದರಕ್ಕೆ ಅನುಗುಣ ಗ್ರಹಿಸಬೇಕಾಗುತ್ತದೆ. ಹಾಗಿದ್ದರೂ ಕೆಲವು ವಿಶಿಷ್ಟ ಸನ್ನಿವೇಶಗಳಲ್ಲಿ ಬಿ2ಸಿ ವ್ಯವಹಾರಗಳನ್ನು ಕೂಡಾ ಸರಕುಪಟ್ಟಿ ಹಂತದಲ್ಲಿ ಗ್ರಹಿಸಬೇಕಾಗುತ್ತದೆ.
ವಿವಿಧ ಬಗೆಯ ನಮೂನೆಗಳ ಅನ್ವಯಿಕೆಯನ್ನು ತಿಳಿಯಲು ಜಿಎಸ್ಟಿಯ ಅಧೀನದಲ್ಲಿ ಇರುವ ವಿವಿಧ ಬಗೆಗಳ ಸಲ್ಲಿಕೆಗಳು (ರಿಟರ್ನ್ಸ್) ಯಾವುವು? ಎಂಬುದನ್ನು ದಯವಿಟ್ಟು ಓದಿರಿ.

File 100% accurate Form GSTR-1 using Tally.ERP 9

BUY NOW
ಜಿಎಸ್ಟಿಆರ್-1 ನ್ನು ಸಲ್ಲಿಸುವುದು ಹೇಗೆ?

ಜಿಎಸ್ಟಿಆರ್- 1 ನಮೂನೆಯು ಹೊರಪೂರೈಕೆಗಳ ವಿವರಗಳನ್ನು ಹಿಡಿದಿಡಬೇಕಾದ ಅವಶ್ಯಕತೆಯಿರುವ 13 ಕೋಷ್ಟಕಗಳನ್ನು ಹೊಂದಿದೆ. ಎಲ್ಲಾ ಕೋಷ್ಟಕಗಳು ಪ್ರತಿಯೊಂದು ವ್ಯವಹಾರಕ್ಕೂ ಅನ್ವಯವಾಗದೆ ಇರುವ ಕಾರಣ ನೀವೇನೂ ಚಿಂತಿಸಬೇಕಾಗಿಲ್ಲ. ಒಂದು ತಿಂಗಳಿನಲ್ಲಿ ನಡೆಸಿದ ವ್ಯವಹಾರದ ಸ್ವರೂಪ ಮತ್ತು ಪೂರೈಕೆಗಳ ಸ್ವರೂಪದ ಆಧಾರದ ಮೇಲೆ ಜಿಎಸ್ಟಿಆರ್- 1 ನಲ್ಲಿ ಸಂಬಂಧಪಟ್ಟ ಅಂಗಗಳು ಮಾತ್ರವೇ ಅನ್ವಯವಾಗುತ್ತವೆ, ಎಲ್ಲವೂ ಅಲ್ಲ. ನಾವೀಗ ಜಿಎಸ್ಟಿಆರ್- 1 ನಮೂನೆಯ ವಿವಿಧ ಅಂಗಗಳ ಬಗ್ಗೆ ವಿವರವಾಗಿ ಚರ್ಚಿಸೋಣ.

1. ಹಿಂದಿನ ವರ್ಷದಲ್ಲಿ ನಡೆಸಿದ ಒಟ್ಟು ವಹಿವಾಟು ಮತ್ತು ಜಿಎಸ್ಟಿಐಎನ್ನ ವಿವರಗಳು.
form gstr1

ಮೇಲಿನ ಕೋಷ್ಟಕ 1 ರಲ್ಲಿ, ನೀವು ನಿಮಗೆ ಹಂಚಿಕೆ ಮಾಡಿದ ಜಿಎಸ್ಟಿಐಎನ್ನ್ನು ಗ್ರಹಿಸಬೇಕಾಗುತ್ತದೆ. ಜಿಎಸ್ಟಿಐಎನ್ನ ಅಧಾರದ ಮೇಲೆ, ನೋಂದಣಿಯ ಸಮಯದಲ್ಲಿ ನೀಡಿದ ವಿವರಗಳೊಂದಿಗೆ ಕೋಷ್ಟಕ 2 (ಎ) ಮತ್ತು 2 (ಬಿ) ಸ್ವಯಂ ಭರ್ತಿಯಾಗುತ್ತವೆ. ಕೋಷ್ಟಕ 3 (ಎ) ನಲ್ಲಿ, ನೀವು ಹಿಂದಿನ ಹಣಕಾಸು ವರ್ಷದ ಒಟ್ಟು ವಹಿವಾಟನ್ನು ಗ್ರಹಿಸಬೇಕು ಮತ್ತು 3 (ಬಿ) ಯಲ್ಲಿ, ನೀವು ಕಳೆದ ತ್ರೈಮಾಸಿಕದಲ್ಲಿ (ಏಪ್ರಿಲ್ನಿಂದ ಜೂನ್, 2017 ವರೆಗೆ) ನಡೆಸಿದ ಒಟ್ಟು ವಹಿವಾಟನ್ನು ಕೈಯಾರೆ ಗ್ರಹಿಸಬೇಕು.
ಮುಂದಿನ ಸಲ್ಲಿಕೆಗಳಲ್ಲಿ, ವಹಿವಾಟಿನ ತ್ರೈಮಾಸಿಕ ಮಾಹಿತಿಯನ್ನು ಗ್ರಹಿಸಬೇಕಾಗಿಲ್ಲ ಮತ್ತು ಹಿಂದಿನ ಹಣಕಾಸು ವರ್ಷದ ಒಟ್ಟು ವಹಿವಾಟಿನ ವಿವರಗಳನ್ನು ಮೊದಲ ವರ್ಷದಲ್ಲಿ, ಕೇವಲ ತೆರಿಗೆದಾರರು ಮಾತ್ರವೇ ಸಲ್ಲಿಸಬೇಕು. ತರುವಾಯದ ವರ್ಷಗಳಲ್ಲಿ, ಇದು ಸ್ವಯಂ ಚಾಲಿತವಾಗಿ ಭರ್ತಿಗೊಳ್ಳುತ್ತದೆ.

2. ನೋಂದಾಯಿತ ವ್ಯಕ್ತಿಗಳಿಗೆ ಮಾಡಿದ ತೆರಿಗೆಗೆ ಒಳಪಟ್ಟ ಹೊರ ಪೂರೈಕೆಗಳು (ಯುಐಎನ್-ಹೊಂದಿರುವವರನ್ನು ಒಳಗೊಂಡು) ಶೂನ್ಯ ಶ್ರೇಣಿಯ ಪೂರೈಕೆದಾರರು ಮತ್ತು ಪರಿಗಣಿತ ರಫ಼್ತುಗಳ ಹೊರತಾಗಿ.

taxable-outward-supply

ಮೇಲಿನ ಕೋಷ್ಟಕದಲ್ಲಿ ಸರಕುಪಟ್ಟಿಯ ಮೌಲ್ಯವು ರೂ. 2,50,000 ಕ್ಕಿಂತ ಹೆಚ್ಚಿರುವ ಎಲ್ಲಾ ಅಂತರ-ರಾಜ್ಯ ಬಿ2ಸಿ ಪೂರೈಕೆಗಳ(ನೋಂದಣಿ ಮಾಡದೇ ಇರುವ ವ್ಯಾಪಾರಸ್ಥ ಅಥವಾ ಕೊನೆಯ ಗ್ರಾಹಕರಿಗೆ ಮಾಡಿದ ಪೂರೈಕೆಗಳು) ವಿವರಗಳನ್ನು ಸರಕುಪಟ್ಟಿಗೆ ಅನುಗುಣವಾಗಿ ಮತ್ತು ದರಕ್ಕೆ ಅನುಗುಣವಾಗಿ ಅಪ್ಲೋಡ್ ಮಾಡಬೇಕಾಗುತ್ತದೆ. ಕೋಷ್ಟಕ 4 ರಲ್ಲಿ ಇದ್ದಂತೆ, ಈ-ಕಾಮರ್ಸ್ ನಿರ್ವಾಹಕರ ಮೂಲಕ ಮಾಡಿದ ಪೂರೈಕೆಗಳನ್ನು ನೀವು 5ಬಿಯಲ್ಲಿ ಪ್ರತ್ಯೇಕವಾಗಿ ಗ್ರಹಿಸಬೇಕು ಮತ್ತು ಸರಕುಪಟ್ಟಿಯ ಮೌಲ್ಯವು ರೂ
2,50,000 ಕ್ಕಿಂತ ಮೇಲಿನ ಇತರ ಎಲ್ಲಾ ಅಂತರ ರಾಜ್ಯ ಪೂರೈಕೆಗಳನ್ನು 5ಎ ಯಲ್ಲಿ ಗ್ರಹಿಸಬೇಕಾಗುತ್ತದೆ. ಈ ವಿಧದ ಪೂರೈಕೆಗಳನ್ನು ಬಿ2ಸಿ ಲಾರ್ಜ್ ಎಂದು ಉಲ್ಲೇಖಿಸಲಾಗುತ್ತದೆ.

3. ನೋಂದಣಿ ಮಾಡದೇ ಇರುವ ವ್ಯಕ್ತಿಗಳಿಗೆ ಪೂರೈಸಿದ ಸರಕುಪಟ್ಟಿಯ ಯ ಮೌಲ್ಯವು ರೂ 2,50 ಲಕ್ಷಕ್ಕೂ ಅಧಿಕವಾಗಿರುವ, ತೆರಿಗೆಗೆ ಒಳಪಟ್ಟ ಅಂತರ ರಾಜ್ಯ ಹೊರಪೂರೈಕೆಗೆಳು.

taxable-outward-inter-state-supply
ಮೆಲಿನ ಕೋಷ್ಟಕದಲ್ಲಿ ಸರಕುಪಟ್ಟಿಯ ಬೆಲೆಯು ರೂ 2,50,000 ಕ್ಕಿಂತಲೂ ಅಧಿಕವಾಗಿರುವ ಎಲ್ಲ ಅಂತರ-ರಾಜ್ಯ ಬಿ2ಸಿ ಪೂರೈಕೆಗಳ (ನೋಂದಣಿ ಮಾಡದೇ ಇರುವ ವ್ಯಾಪಾರಸ್ಥ ಅಥವಾ ಕೊನೆಯ ಗ್ರಾಹಕರಿಗೆ ಮಾಡಿದ ಪೂರೈಕೆಗಳು), ವಿವರಗಳನ್ನು ನೀವು
ಸರಕುಪಟ್ಟಿಯ ಅನುಗುಣವಾಗಿ ಮತ್ತು ದರಕ್ಕೆ ಅನುಗುಣವಾಗಿ ಅಪ್ಲೋಡ್ ಮಾಡಬೇಕಾಗುತ್ತದೆ. ಕೋಷ್ಟಕ 4 ರಲ್ಲಿ ಇದ್ದಂತೆ, ಈ-ಕಾಮರ್ಸ್ ನಿರ್ವಾಹಕರ ಮೂಲಕ ಮಾಡಿದ ಪೂರೈಕೆಗಳನ್ನು ನೀವು 5ಬಿಯಲ್ಲಿ ಪ್ರತ್ಯೇಕವಾಗಿ ಗ್ರಹಿಸಬೇಕು ಮತ್ತು ಸರಕುಪಟ್ಟಿಯ ಮೌಲ್ಯವು ರೂ 2,50,000 ಕ್ಕಿಂತ ಮೇಲಿನ ಇತರ ಎಲ್ಲಾ ಅಂತರ ರಾಜ್ಯ ಪೂರೈಕೆಗಳನ್ನು 5ಎ ಯಲ್ಲಿ ಗ್ರಹಿಸಬೇಕಾಗುತ್ತದೆ. ಈ ವಿಧದ ಪೂರೈಕೆಗಳನ್ನು ಬಿ2ಸಿ ಲಾರ್ಜ್ ಎಂದು ಉಲ್ಲೇಖಿಸಲಾಗುತ್ತದೆ.

GSTR-1 filing is easy and accurate with Tally.ERP 9
4. ಶೂನ್ಯ ದರ ಹೂಡಿಕೆಗಳು ಮತ್ತು ಪರಿಗಣಿತ ರಪ್ತುಗಳ ವಿವರಗಳು

zero-rated-supply
ಮೇಲಿನ ಕೋಷ್ಟಕ 6 ರಲ್ಲಿ, ಭಾರತದಿಂದ ಹೊರಗೆ ಮಾಡಿದ ರಫ್ತಿಗೆ ಸಂಬಂಧಪಟ್ಟ ಮಾಹಿತಿಯನ್ನು 6ಎ ಯಲ್ಲೂ, ಎಸ್ಇಜ಼ೆಡ್ ಘಟಕಕ್ಕೆ ಅಥವಾ ಎಸ್ಇಜ಼ೆಡ್ ಅಭಿವೃದ್ಧಿಗಾರರಿಗೆ ಮಾಡಿದ ಸರಬರಾಜುಗಳನ್ನು 6ಬಿ ಯಲ್ಲೂ,ಮತ್ತು ಪರಿಗಣಿತ ರಪ್ತುಗಳನ್ನು 6ಸಿ ಯಲ್ಲೂ ಗ್ರಹಿಸಬೇಕು. ಈ ಪೂರೈಕೆಗಳಿಗೆ ಸಂಬಂಧಿಸಿದ ವಿವರಗಳನ್ನು
ಸರಕುಪಟ್ಟಿಗೆ ಅನುಗುಣವಾಗಿ ಮತ್ತು ದರಕ್ಕೆ ಅನುಗುಣವಾಗಿ ಗ್ರಹಿಸಬೇಕು. ಈ ವಿವರಗಳನ್ನು ಘೋಷಿಸುವಾಗ, ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:

  1. ಹಡಗು ಸಾಗಾಣಿಕೆ ಪಟ್ಟಿ ಮತ್ತು ಅದರ ದಿನಾಂಕ . ಹಡಗು ಸಾಗಾಣಿಕೆ ಸರಕುಪಟ್ಟಿಯ ವಿವರಗಳನ್ನು 13 ಅಂಕಿಗಳ ಬಂದರು ಕೋಡ್ನ್ನು ಹಿಡಿದಿಡುವ ಸ್ಥಳದಲ್ಲಿ ನಮೂದಿಸಬೇಕು (ಆರು ಅಂಕಿಗಳು) ಇದರ ನಂತರ ಹಡಗು ಸಾಗಾಣಿಕೆ ಸರಕುಪಟ್ಟಿ ಮತ್ತು ಅದರ ದಿನಾಂಕದ ಏಕಮಾತ್ರ ಉಲ್ಲೇಖ ಸಂಖ್ಯೆ(ಯುನೀಕ್ ರೆಫರೆನ್ಸ್ ನಂಬರ್)
    ಯನ್ನು ನಮೂದಿಸಬೇಕು. ಜಿಎಸ್ಟಿಆರ್-1 ನ್ನು ಸಲ್ಲಿಸುವ ಸಮಯದಲ್ಲಿ ಹಡಗು ಸಾಗಾಣಿಕೆ ರಸೀತಿಯ ವಿವರಗಳು ಲಭ್ಯವಿಲ್ಲದೇ ಇದ್ದಲ್ಲಿ, ಆ ಜಾಗವನ್ನು ಖಾಲಿ ಬಿಡಬಹುದು ಮತ್ತು ಮುಂದಿನ ತೆರಿಗೆ ಅವಧಿಯಲ್ಲಿ ಇದನ್ನು ತಿದ್ದುಪಡಿ ಎಂದು ಕೋಷ್ಟಕ 9 ರಲ್ಲಿ ಭರ್ತಿ ಮಾಡಬಹುದು. ಆದರೆ ಇದನ್ನು, ಈ ಸರಕುಪಟ್ಟಿ ಸಂಬಂಧಪಟ್ಟ ಯಾವುದೇ ಮರುಪಾವತಿ/ರಿಯಾಯಿತಿಯನ್ನು ಕೇಳುವ ಮೊದಲೇ ಮಾಡಬೇಕು.
    .
  1. . ಪ್ರವೇಶ. ಸರಕುಪಟ್ಟಿ (ಬಿಲ್ ಆಫ಼್ ಎಂಟ್ರಿ) ಯಿಲ್ಲದೇ ಎಸ್ಇಜ಼ೆಡ್, ದೇಶೀಯ ಸುಂಕದ ವಲಯಕ್ಕೆ (ಡಿಟಿಎ) ಮಾಡಿದ ಪೂರೈಕೆಯನ್ನು, ಎಸ್ಇಜ಼ಡ್ ಘಟಕವು ಜಿಎಸ್ಟಿಆರ್-1 ನಲ್ಲಿ ವರದಿ ಮಾಡಬೇಕು. ಎಸ್ಇಜ಼ೆಡ್ ಪ್ರವೇಶ ಸರಕುಪಟ್ಟಿ ಪೂರೈಕೆಗಳನ್ನು ಡಿಟಿಎ ಘಟಕವು ತನ್ನ ಜಿಎಸ್ಟಿಆರ್-2 ನಲ್ಲಿ, ಜಿಎಸ್ಟಿಆರ್-2 ನಲ್ಲಿ ಮಾಡಿದ ಆಮದು ಎಂದು ವರದಿ ಮಾಡಬೇಕು.
  1. ರಫ್ತು ವಹಿವಾಟುಗಳಲ್ಲಿ, ಖರೀದಿದಾರರ ಜಿಎಸ್ಟಿಐಎನ್ ಅನ್ವಯವಾಗುವುದಿಲ್ಲ ಮತ್ತು ಆ ಜಾಗವನ್ನು ಖಾಲಿ ಬಿಡಬೇಕು..
  1. ಐಜಿಎಸ್ಟಿ (ಬಾಂಡ್/ಉದ್ಯಮ ಹೊಣೆಗಾರಿಕೆ ಪತ್ರದ (ಎಲ್ಯುಟಿ) ಅಧೀನದಲ್ಲಿ)) ಪಾವತಿ ಮಾಡದೆಯೇ ಮಾಡಿದ ರಪ್ತು ವಹಿವಾಟುಗಳನ್ನು ಕೋಷ್ಟಕ 6ಎ ಮತ್ತು 6ಬಿಯ ತೆರಿಗೆ ಮೌಲ್ಯದ ಶೀರ್ಷಿಕೆಯಲ್ಲಿ “ಶೂನ್ಯ” ಎಂದು ವರದಿ ಮಾಡಬೇಕು.
5. ಕೋಷ್ಟಕ ೫ ರಲ್ಲಿ ನಮೂದಿಸದೇ ಇದ್ದ ನೋಂದಣಿ ಮಾಡದೇ ಇರುವ ವ್ಯಕ್ತಿಗಳಿಗೆ ಮಾಡಿದ ತೆರಿಗೆಗೆ ಒಳಪಟ್ಟ ಪೂರೈಕೆಗಳ ವಿವರಗಳು (ಡೆಬಿಟ್ ನೋಟ್ ಮತ್ತು ಕ್ರೆಡಿಟ್ ನೋಟ್ಗಳ ನಿವ್ವಳ)

taxable-supplies
ಮೊದಲಿನ ಕೋಷ್ಟಕ, ಅಂದರೆ ಸಂಖ್ಯೆ 5ರಲ್ಲಿ, ತೆರಿಗೆಗೆ ಒಳಪಟ್ಟ ವ್ಯಕ್ತಿಯು, ನೋಂದಣಿ ಮಾಡದೇ ಇರುವ ವ್ಯಕ್ತಿಗೆ ಸರಕುಪಟ್ಟಿ ಮೌಲ್ಯವು ರೂ 2.5 ಲಕ್ಷಕ್ಕಿಂತಲೂ ಅಧಿಕವಿರುವ ಅಂತರ ರಾಜ್ಯ ಹೊರ ಪೂರೈಕೆಗಳನ್ನು (ಬಿ2ಸಿ ಲಾರ್ಜ್) ಗಳನ್ನು ಮಾತ್ರವೇ ಘೋಷಿಸಿದ್ದಾರೆ. ಕೋಷ್ಟಕ 7ರಲ್ಲಿ, ನೀವು ನೋಂದಣಿ ಮಾಡದೇ ಇರುವ ವ್ಯಕ್ತಿಗೆ ಮಾಡಿದ ಇತರ ಎಲ್ಲಾ ಪೂರೈಕೆಗಳನ್ನು ಗ್ರಹಿಸಬೇಕು, ಅಂದರೆ, ರಾಜ್ಯದೊಳಗೆ ಮಾಡಿದ ಪೂರೈಕೆಗಳನ್ನು 7 ಎ ಯಲ್ಲಿ ಮತ್ತು ನೋಂದಣಿ ಮಾಡದೇ ಇರುವ ವ್ಯಾಪಾರಸ್ಥರಿಗೆ ಮಾಡಿದ
ಸರಕುಪಟ್ಟಿ ಮೌಲ್ಯವು ರೂ. 2.5 ಲಕ್ಷಕ್ಕಿಂತಲೂ ಅಧಿಕವಿರುವ ಅಂತರರಾಜ್ಯ ಪೂರೈಕೆಗಳನ್ನು 7ಬಿ ಯಲ್ಲಿ ಗ್ರಹಿಸಬೇಕು. ಕೋಷ್ಟಕ 7ಎ (1) ದಲ್ಲಿ, ನೀವು ಇ -ಕಾಮರ್ಸ್ ನಿರ್ವಾಹಕನ ಮೂಲಕ ಮಾಡಿದ ಪೂರೈಕೆಗಳನ್ನೂ ಒಳಗೊಂಡು, ನೋಂದಣಿ ಮಾಡದೇ ಇರುವ ವ್ಯಕ್ತಿಗಳಿಗೆ ಮಾಡಿದ ಎಲ್ಲಾ ಅಂತಾರಾಜ್ಯ ಹೊರ ಪೂರೈಕೆಗಳ ವಿವರಗಳನ್ನು ಕ್ರೋಢೀಕರಿಸಿ ದರಕ್ಕೆ ಅನುಗುಣವಾಗಿ ಗ್ರಹಿಸಬೇಕು. 7ಎ(1) ನಲ್ಲಿ ವರದಿ ಮಾಡಿ ದ, ಮೂಲದಲ್ಲಿ ತೆರಿಗೆಯನ್ನು ಆಕರ್ಷಿಸುವಂತಹ, ಇ-ಕಾಮರ್ಸ್ ನಿರ್ವಾಹಕನ ಮೂಲಕ ಪೂರೈಕೆ ಮಾಡಿದ ಒಟ್ಟು ಸರಕುಗಳ ವಿವರಗಳನ್ನು ನೀವು 7ಎ(2) ನಲ್ಲಿ ಪ್ರತ್ಯೇಕವಾಗಿ ತೋರಿಸಬೇಕಾಗುತ್ತದೆ.

ಅದೇ ರೀತಿಯಾಗಿ ಸರಕುಪಟ್ಟಿ ಮೌಲ್ಯವು ರೂ. 2.50 ಲಕ್ಷದವರೆಗಿರುವ ಅಂತರ ರಾಜ್ಯದ ಹೊರ ಪೂರೈಕೆಗಳ ವಿವರಗಳನ್ನು 7ಬಿ(1)ರಲ್ಲಿ, ರಾಜ್ಯ-ವಾರು ಮತ್ತು ದರ-ವಾರು ಪ್ರಕಾರ ಗ್ರಹಿಸಬೇಕು. 7ಬಿ(1) ರಲ್ಲಿ ವರದಿ ಮಾಡಿದ ಮೂಲದಲ್ಲಿ ತೆರಿಗೆ ವಿಧಿಸಿದಂತಹ, ಇ-ಕಾಮರ್ಸ್ ನಿರ್ವಾಹಕರ ಮೂಲಕ ಪೂರೈಸಿದಂತಹ ಒಟ್ಟು ಸರಕುಗಳ ವಿವರಗಳನ್ನು ನೀವು ಪ್ರತ್ಯೇಕವಾಗಿ 7ಬಿ(2)ನಲ್ಲಿ ತೋರಿಸಬೇಕಾಗುತ್ತದೆ.

ಮೇಲಿನ ಎಲ್ಲಾ ಮೌಲ್ಯಗಳೂ ಡೆಬಿಟ್ ನೋಟ್ ಮತ್ತು ಕ್ರೆಡಿಟ್ ನೋಟ್ಗಳ ನಿವ್ವಳ ಮೌಲ್ಯವಾಗಿರಬೇಕೆಂಬುದನ್ನು ದಯವಿಟ್ಟು ಗಮನಿಸಿ. ಮೇಲೆ ನಮೂದಿಸಿದ ಪೂರೈಕೆಗಳಿಗೆ ಸಂಬಂಧಿಸಿದ ಯಾವುದಾದರೂ ಡೆಬಿಟ್ ನೋಟ್ ಅಥವಾ ಕ್ರೆಡಿಟ್ ನೋಟ್ ಇದ್ದಲ್ಲಿ, ಅಂತಹ ಮೌಲ್ಯಗಳನ್ನು ಹೊಂದಿಸುವಂತೆ ಮತ್ತು ತೆರಿಗೆ ವಿಧಿಸಬಹುದಾದ ನಿವ್ವಳ ಮೌಲ್ಯ ಮತ್ತು ಅದಕ್ಕೆ ಸಂಬಂಧಿಸಿದ ತೆರಿಗೆಯನ್ನು ಮಾತ್ರವೇ ಘೋಷಿಸುವಂತೆ ಮಾಡುವುದನ್ನು ಖಾತರಿಪಡಿಸಿಕೊಳ್ಳಿ.

6.ಶೂನ್ಯ ದರದ, ವಿನಾಯಿತಿ ನೀಡಿದ ಮತ್ತು ನಾನ್ ಜಿಎಸ್ಟಿ ಹೊರಪೂರೈಕೆಗಳ ವಿವರಗಳು

nill-rated

ಮೇಲಿನ ಕೋಷ್ಟಕ 8 ರಲ್ಲಿ, ನೀವು ಒಂದು ಅವಧಿಯಲ್ಲಿ ಮಾಡಿದ ಹೊರ ಪೂರೈಕೆಗಳ ಶೂನ್ಯ ದರದ, ವಿನಾಯಿತಿ ನೀಡಿದ ಮತ್ತು ನಾನ್ ಜಿಎಸ್ಟಿ ಹೊರಪೂರೈಕೆಗಳನ್ನು ಗ್ರಹಿಸಬೇಕು. ಈ ವಿವರಗಳನ್ನು ನೋಂದಾಯಿತ ವ್ಯಕ್ತಿಗಳಿಗೆ ಅಂತಾ-ರಾಜ್ಯ ಪೂರೈಕೆಗಳೆಂದು ಮತ್ತು ನೋಂದಣಿ ಮಾಡದೇ ಇರುವ ವ್ಯಕ್ತಿಗಳಿಗೆ ಅಂತರ-ರಾಜ್ಯ ಪೂರೈಕೆಗಳೆಂದು 8 ಎ ಯಿಂದ 8 ಡಿ ಯ ವರೆಗೆ ಮೇಲೆ ತೋರಿಸಿದ ಕೋಷ್ಟಕದಲ್ಲಿದ್ದಂತೆ ವರ್ಗೀಕರಿಸಬೇಕು.

ಚಾಲ್ತಿ ಅವಧಿಯಲ್ಲಿ ನೀಡಿದ ಡೆಬಿಟ್ ನೋಟ್, ಕ್ರೆಡಿಟ್ ನೋಟ್,ಮರುಪಾವತಿ ರಸೀತಿಗಳ ವಿವರಗಳು ಮತ್ತು ಈ ಹಿಂದಿನ ತೆರಿಗೆ ಅವಧಿಗಳಲ್ಲಿ ಕೋಷ್ಟಕ 4,5 ಮತ್ತು 6 ನಲ್ಲಿ ಸಲ್ಲಿಸಿದ ಜಿಎಸ್ಟಿಆರ್-1 ಗೆ ಮಾಡಬೇಕಾದ ಯಾವುದೇ ತಿದ್ದುಪಡಿಗಳು

amendments-taxable-outward-supply

ಮೇಲಿನ ಕೋಷ್ಟಕದಲ್ಲಿ, ನೀವು ಈಗಾಗಲೇ ಈ ಕೆಳಗಿನವುಗಳಲ್ಲಿ ವರದಿ ಮಾಡಿದ ಪೂರೈಕೆಗಳ ಡೆಬಿಟ್ ನೋಟ್ , ಕ್ರೆಡಿಟ್ ನೋಟ್ ಮತ್ತು ಮರುಪಾವತಿ ರಸೀತಿಗಳ (ಮುಂಗಡವಾಗಿ ಪಡೆದ ಮೊತ್ತದ ಮರುಪಾವತಿ) ವಿವರಗಳನ್ನು ಗ್ರಹಿಸಬೇಕು:
• ಕೋಷ್ಟಕ 4 ರಲ್ಲಿ ವರದಿ ಮಾಡಿದ ಬಿ2ಬಿ ಪೂರೈಕೆಗಳು,
• ಕೋಷ್ಟಕ 5 ರಲ್ಲಿ ವರದಿ ಮಾಡಿದ ಬಿ2ಸಿ ಹಿರಿದಾದ ಪೂರೈಕೆಗಳು
• ಕೋಷ್ಟಕ 6 ರಲ್ಲಿ ವರದಿ ಮಾಡಿದ ರಪ್ತುಗಳು/ ಎಸ್ಇಜ಼ೆಡ್ ಘಟಕ ಅಥವಾ ಎಸ್ಇಜ಼ೆಡ್ ಅಭಿವೃದ್ಧಿಗಾರ/ಪರಿಗಣಿತ ರಪ್ತುಗಳನ್ನು ಒಳಗೊಂಡ ಪೂರೈಕೆಗಳು

ಈ ವಿವರಗಳನ್ನು ನೀವು ನೀಡಿದ ಡೆಬಿಟ್ ನೋಟ್ ಅಥವಾ ಕ್ರೆಡಿಟ್ ನೋಟ್ಗೆ ಸಂಬಂಧಪಟ್ಟ ಮೂಲ ದರಪಟ್ಟಿ ಸಂಖ್ಯೆಯೊಂದಿಗೆ ದರ-ವಾರು ಗ್ರಹಿಸಬೇಕಾಗುತ್ತದೆ. ಮೊದಲ ಮೂರು ಕಾಲಮ್ಗಳಲ್ಲಿ, ನೀವು ಆದಾಯ ವಿವರ ಸಲ್ಲಿಸಿದ ಅವಧಿಯಲ್ಲಿ ನೀವು ಕೊಟ್ಟಿರುವ ಮೂಲ ದರಪಟ್ಟಿ, ಹಾಗೂ ಅದರ ನಂತರ ಕ್ರೆಡಿಟ್ ನೋಟ್/ಡೆಬಿಟ್ ನೋಟ್/ಮರುಪಾವತಿ ರಸೀತಿಗಳ ದರ-ವಾರು ವಿವರಗಳನ್ನು ನಮೂದಿಸಬೇಕು.
ನಿಮ್ಮ ಹಿಂದಿನ ಆದಾಯ ಸಲ್ಲಿಕೆಯಲ್ಲಿ ಶಿಪ್ಪಿಂಗ್ ಬಿಲ್ಸ್ ಸಂಖ್ಯೆ ಮತ್ತು ದಿನಾಂಕವನ್ನು, ಅವುಗಳು ಲಭ್ಯವಿಲ್ಲದೇ ಇರುವ ಕಾರಣ ಕೋಷ್ಟಕ 9 ಎ ಯಲ್ಲಿ ನಮೂದಿಸದೇ ಇದ್ದಲ್ಲಿ, ಹಿಂದಿನ ಸಲ್ಲಿಕೆಯ ಅವಧಿಯಲ್ಲಿ ನೀವು ಮಾಡಿದ ರಪ್ತು ವಹಿವಾಟುಗಳಿಗೆ ಸಂಬಂಧಿಸಿದ ಅಂತಹ ವಿವರಗಳನ್ನು ತಿದ್ದುಪಡಿಗಳೆಂದು ನೀವು ಈಗ ಒದಗಿಸಬಹುದು. ರಪ್ತು ವಹಿವಾಟುಗಳು ಚಾಲ್ತಿ ತಿಂಗಳಿಗೆ ಸಂಬಂಧಪಟ್ಟಿದ್ದಾದರೆ, ಶಿಪ್ಪಿಂಗ್ ವಿವರಗಳನ್ನು ನೀವು ಕೋಷ್ಟಕ 6 ನಲ್ಲಿ ನಮೂದಿಸಲೇಬೇಕು.
ಕೋಷ್ಟಕ 9ಬಿಯಲ್ಲಿ, ಆದಾಯ ಸಲ್ಲಿಕೆಯ ಅವಧಿಯಲ್ಲಿ ನೀಡಿದ ಡೆಬಿಟ್ ನೋಟ್/ಕ್ರೆಡಿಟ್ ನೋಟ್/ ಮರುಪಾವತಿ ರಸೀತಿಗಳ ದರ-ವಾರು ವಿವರಗಳನ್ನು ಸಲ್ಲಿಸಬೇಕು ಮತ್ತು ಕೋಷ್ಟಕ 9 ಸಿಯಲ್ಲಿ ಹಿಂದಿನ ಅವಧಿಯಲ್ಲಿ ಮಾಡಿದ ಆದಾಯ ಸಲ್ಲಿಕೆಗೆ ಸಂಬಂಧಿಸಿದ ದರಪಟ್ಟಿ/ಮುಂಗಡ ರಸೀತಿಗಳಿಗೆ ಡೆಬಿಟ್ ನೋಟ್/ಕ್ರೆಡಿಟ್ ನೋಟ್/ಮರುಪಾವತಿ ರಸೀತಿಗಳ ಮೂಲಕ ಮಾಡಿದ ತಿದ್ದುಪಡಿಗಳ ವಿವರಗಳನ್ನು ನಮೂದಿಸಬೇಕು. ಇಷ್ಟೇ ಅಲ್ಲದೇ ನಿಗದಿ ಮಾಡಿದ ದಿನದ ಮೊದಲೇ ನೀಡಿದ ದರಪಟ್ಟಿಗಳಿಗೆ ಸಂಬಂಧಿಸಿದ ಯಾವುದೇ ಡೆಬಿಟ್/ಕ್ರೆಡಿಟ್ ನೋಟ್ಗಳನ್ನು ಕೂಡಾ ಈ ಕೋಷ್ಟಕದಲ್ಲಿ ವರದಿ ಮಾಡಬೇಕು.

8. ನೋಂದಣಿ ಮಾಡದೇ ಇರುವ ವ್ಯಕ್ತಿಗೆ ನೀಡಿದ ಡೆಬಿಟ್ ನೋಟ್ ಮತ್ತು ಕ್ರೆಡಿಟ್ ನೋಟ್ ವಿವರಗಳು.

amendments-taxable-outward-supply-unregistered
ಮೇಲಿನ ಕೋಷ್ಟಕದಲ್ಲಿ, ನೋಂದಣಿ ಮಾಡದೇ ಇರುವ ವ್ಯಕ್ತಿಗೆ ನೀವು ಮಾಡಿದ ಅಂತಾ-ರಾಜ್ಯ ಪೂರೈಕೆಗಳಿಗೆ ನೀವು ನೀಡಿದ ಡೆಬಿಟ್ ನೋಟ್/ಕ್ರೆಡಿಟ್ ನೋಟ್ಗಳ ಕ್ರೋಢೀಕೃತ ದರ-ವಾರು ವಿವರಗಳನ್ನು ತೋರಿಸಬೇಕು ಮತ್ತು ಈ ಹಿಂದಿನ ಅವಧಿಗೆ ಸಲ್ಲಿಸಿದ ಆದಾಯ ವಿವರಗಳಲ್ಲಿ, ನೋಂದಣಿ ಮಾಡದಿರುವ ವ್ಯಕ್ತಿಗಳಿಗೆ ಮಾಡಿದ
ರೂ 2.5 ಲಕ್ಷಕ್ಕಿಂತಲೂ ಕಡಿಮೆ ಮೌಲ್ಯದ ಅಂತರ-ರಾಜ್ಯ ಪೂರೈಕೆಗಳ ವಿವರಗಳನ್ನು ನಮೂದಿಸಬೇಕು. ಇದು ಈ ಹಿಂದಿನ ಆದಾಯ ಸಲ್ಲಿಕೆಯ ಕೋಷ್ಟಕ ೭ಗೆ ಮಾಡಿದ ತಿದ್ದುಪಡಿಯಾಗಿದೆ. 10ಎ ಮತ್ತು 10ಬಿಯಲ್ಲಿ ನೀವು ಅನುಕ್ರಮವಾಗಿ ಅಂತಾ-ರಾಜ್ಯ ಪೂರೈಕೆಗಳು ಅಂತರ-ರಾಜ್ಯ ಪೂರೈಕೆಗಳ ದರ-ವಾರು ವಿವರಗಳನ್ನು ಗ್ರಹಿಸಬೇಕು. 10ಎ ಮತ್ತು ೧೦ಬಿಯಲ್ಲಿ ಗ್ರಹಿಸಿದ ಮೌಲ್ಯಗಳಲ್ಲಿ, ಇ-ಕಾಮರ್ಸ್ ನಿರ್ವಾಹಕರ ಮೂಲಕ ಮಾಡಿದ ಪೂರೈಕೆಗಳ ವಿವರಗಳನ್ನು, ನೀವು ಅಂತಾ-ರಾಜ್ಯ ಪೂರೈಕೆಗೆ 10ಎ(1)ನಲ್ಲೂ ಹಾಗೂ ಅಂತರ- ರಾಜ್ಯ ಪೂರೈಕೆಗಳಿಗೆ 10ಬಿ(1) ನಲ್ಲೂ ಪ್ರತ್ಯೇಕವಾಗಿ ಗ್ರಹಿಸಬೇಕಾಗುತ್ತದೆ.

9. ಚಾಲ್ತಿ ತೆರಿಗೆ ಅವಧಿಯಲ್ಲಿ ಸ್ವೀಕರಿಸಿದ ಮುಂಗಡಗಳು/ಹೊಂದಿಸಿದ ಮುಂಗಡಗಳ ವಿವರ ಅಥವಾ ಈ ಹಿಂದಿನ ತೆರಿಗೆ ಅವಧಿಯಲ್ಲಿ ಜಿಎಸ್ಟಿಅರ್-1 ಗೆ ತಿದ್ದುಪಡಿಗಳು

consolidated-advance-recieved

ಮೇಲಿನ ಕೋಷ್ಟಕ 11ರಲ್ಲಿ, ಚಾಲ್ತಿ ಅವಧಿಯಲ್ಲಿ ನೀವು ಪಡೆದ ಮುಂಗಡಗಳ ಕ್ರೋಢೀಕೃತ ರಾಜ್ಯ-ವಾರು ಮತ್ತು ದರ-ವಾರು ವಿವರಗಳನ್ನು ನೀಡಬೇಕು ಮತ್ತು ಹಿಂದಿನ ಅವಧಿಯಲ್ಲಿ ಪಡೆದ ಆದರೆ ಚಾಲ್ತಿ ಅವಧಿಯಲ್ಲಿ ಅದನ್ನು ಹೊಂದಿಸಿದ ಮುಂಗಡಗಳ ವಿವರಗಳನ್ನು ಕೂಡಾ ಸಲ್ಲಿಸಬೇಕು. ಕೋಷ್ಟಕ 11 ಎಯಲ್ಲಿ, ಮುಂಗಡಗಳನ್ನು ಸ್ವೀಕರಿಸಿದ ಆದರೆ ಅವುಗಳಿಗೆ ದರ ಪಟ್ಟಿಗಳನ್ನು ಇನ್ನೂ ನೀಡದೇ ಇರುವ ಪೂರೈಕೆಗಳ ಬಗ್ಗೆ ವಿವರಗಳನ್ನು ನೀಡಬೇಕು. ಈ ವಿವರಗಳನ್ನು ಅಂತಾ-ರಾಜ್ಯ ಪೂರೈಕೆಗಳೆಂದು ಕೋಷ್ಟಕ 11ಎ(1)ರಲ್ಲೂ ಮತ್ತು ಅಂತರ-ರಾಜ್ಯ ಪೂರೈಕೆಗಳೆಂದು ಕೋಷ್ಟಕ 11ಎ(2) ನಲ್ಲೂ ವರ್ಗೀಕರಿಸಬೇಕಾಗುತ್ತದೆ.
ಮುಂಗಡ ಸ್ವೀಕೃತಿಗಳ ಮೇಲೆ ಪಾವತಿಸಿದ ತೆರಿಗೆ ಮತ್ತು ಪ್ರಸ್ತುತ ತೆರಿಗೆ ಅವಧಿಯಲ್ಲಿ ನೀಡಿದ ದರಪಟ್ಟಿಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ತೆರಿಗೆ ಅವಧಿಯಲ್ಲಿ ಈಗಾಗಲೇ ವರದಿ ಮಾಡಿದ ಮಾಹಿತಿಗಳನ್ನು ಕೂಡಾ ಕೋಷ್ಟಕ 11ಬಿಯಲ್ಲಿ ನೀವು ಸೇರಿಸಬೇಕಾಗುತ್ತದೆ. 11ಎಯಲ್ಲಿ ತೋರಿಸಿದಂತೆ ಈ ವಿವರಗಳನ್ನು ಕೂಡಾ ನೀವು ಕೋಷ್ಟಕ 11ಬಿ(2)ನಲ್ಲಿ ಅಂತಾ-ರಾಜ್ಯ ಪೂರೈಕೆಗಳೆಂದು ಮತ್ತು ಕೋಷ್ಟಕ 11ಬಿ(2)ನಲ್ಲಿ ಅಂತರ-ರಾಜ್ಯ ಪೂರೈಕೆಗಳೆಂದು ವರ್ಗೀಕರಿಸಬೇಕಾಗುತ್ತದೆ.
ಈ ಹಿಂದಿನ ಆದಾಯ ಸಲ್ಲಿಕೆಯ ಅವಧಿಯಲ್ಲಿ ಕೋಷ್ಟಕ 11ಎ ಯಿಂದ 11ಬಿ ವರೆಗೆ ನೀವು ಘೋಷಿಸಿದ ವಿವರಗಳಿಗೆ ಸಂಬಂಧಪಟ್ಟಂತೆ ಬದಲಾವಣೆಗಳೇನಾದರೂ ಇದ್ದಲ್ಲಿ, ಅಂತಹ ಬದಲಾವಣೆಗಳನ್ನು ಕೋಷ್ಟಕ 11 ರ ಭಾಗ II ರಲ್ಲಿ ನೀಡಿ ತಿದ್ದುಪಡಿ ಮಾಡಬಹುದು.
ತೆರಿಗೆ ಸಲ್ಲಿಕೆಯ ಅವಧಿಯಲ್ಲಿ ಪಡೆದ ಮುಂಗಡಗಳಿಗೆ ದರಪಟ್ಟಿಗಳನ್ನು ಕೊಡದೇ ಇದ್ದಲ್ಲಿ ಮಾತ್ರವೇ ಅಂತಹ ಮುಂಗಡ ಸ್ವೀಕೃತಿಗಳ ಬಗ್ಗೆ ವಿವರಗಳನ್ನು ನೀಡಬೇಕೆಂಬುದನ್ನು ಗಮನಿಸಿ. ಒಂದು ವೇಳೆ ಮುಂಗಡ ಮತ್ತು ದರಪಟ್ಟಿಗಳನ್ನು ಒಂದೇ ತಿಂಗಳಲ್ಲಿ ಕೊಟ್ಟಿದ್ದಲ್ಲಿ, ಅಂತಹ ವಿವರಗಳನ್ನು ಕೋಷ್ಟಕ 11ನಲ್ಲಿ ಗ್ರಹಿಸಬೇಕಾದ ಅಗತ್ಯವಿಲ್ಲ.

10 . ಹೊರಪೂರೈಕೆಗಳ ಹೆಚ್ಎಸ್ಎನ್-ವಾರು ಸಾರಾಂಶ

hsn-summary-outward-supplies

ಮೇಲಿನ ಕೋಷ್ಟಕದಲ್ಲಿ, ಅಂದರೆ ಕೋಷ್ಟಕ 12 ರಲ್ಲಿ ಒಂದು ನಿರ್ದಿಷ್ಟ ಹೆಚ್ಎಸ್ಎನ್ ಕೋಡ್ಗೆ ಮಾಡಿದ ಪೂರೈಕೆಗಳ ಸಾರಾಂಶವನ್ನು ನಮೂದಿಸಬೇಕು. ವಾರ್ಷಿಕ ವಹಿವಾಟು ರೂ 1.50 ಕೋಟಿಯವರೆಗೆ ಇರುವ ತೆರಿಗೆದಾರರಿಗೆ ಇದು ಐಚ್ಛಿಕವಾಗಿದೆ. ಆದರೂ ಸರಕುಗಳ ವಿವರಗಳನ್ನು ನೀಡುವುದು ಕಡ್ಡಾಯ.
ಈ ಹಿಂದಿನ ಹಣಕಾಸು ವರ್ಷದಲ್ಲಿ ರೂ 1.5 ಕೋಟಿಗಿಂತ ಹೆಚ್ಚು ಆದರೆ ರೂ 5 ಕೋಟಿಯ ವರೆಗೆ ವಾರ್ಷಿಕ ವಹಿವಾಟು ನಡೆಸಿದ ತೆರಿಗೆದಾರರಿಗೆ ಹೆಚ್ಎಸ್ಎನ್ ಕೋಡ್ನ್ನು ಎರಡು-ಅಂಕಿಯ ವರೆಗೆ ವರದಿ ಮಾಡುವುದು ಕಡ್ಡಾಯವಾಗಿದೆ ಮತ್ತು ರೂ 5 ಕೋಟಿಗಿಂತ ಅಧಿಕ ವಾರ್ಷಿಕ ವಹಿವಾಟು ಇರುವ ತೆರಿಗೆದಾರರಿಗೆ ನಾಲ್ಕು-ಅಂಕಿ ವರೆಗೆ ವರದಿ ಮಾಡುವುದು ಕಡ್ಡಾಯ ಆಗಿದೆ.
ನಾಲ್ಕನೇ ಕಾಲಮ್ ಆದ ಯುಕ್ಯುಸಿ, ಯೂನಿಟ್ ಪ್ರಮಾಣದ ಕೋಡ್ನ್ನು ಉಲ್ಲೇಖಿಸುತ್ತದೆ ಮತ್ತು ಅಲ್ಲಿ ತೋರಿಸಿದ ಅಳತೆಯ ಮಾನವನ್ನು (ಯುಒಎಮ್) ಮಾತ್ರವೇ ಪೋರ್ಟಲ್ ಸ್ವೀಕೃತಿ ಮಾಡುತ್ತದೆ. ಆದ್ದರಿಂದ, ತೆರಿಗೆದಾರನು ಯಾವುದೇ ಯುಒಎಮ್ನ್ನು ನಿರ್ವಹಿಸುತ್ತಿದ್ದರೂ, ಪ್ರಮಾಣಗಳ ವಿವರಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ನಮೂದಿಸಿದ ಯುಕ್ಯುಸಿಗಳನ್ನು ಬಳಸಿಯೇ ನೀಡಬೇಕಾಗುತ್ತದೆ:

ಯುಕ್ಯುಸಿ ಪಟ್ಟಿ
ಬ್ಯಾಗ್-ಬ್ಯಾಗ್ಗಳುCTN- ಕಾರ್ಟನ್ಸ್ಎಟಿಎಸ್-ಮೆಟ್ರಿಕ್ಟಿಜಿಎಂ-ಟೆನ್ ಒಟ್ಟು
ಬಾಲ್-ಬಾಲೆಡಾಜ್-ಡೊಜೆನ್ಸ್NOS- ಸಂಖ್ಯೆಗಳುTHD- ಥೌಸಂಡ್ಸ್
ಬಿಡಿಎಲ್-ಬಂಡಲ್ಗಳುDRM- ಡ್ರಮ್ಸ್ಪಿಎಸಿ-ಪ್ಯಾಕ್ಗಳುಟೋನ್-ಟನ್ಗಳು
BKL- ಬಕಲ್ಗಳುಜಿ.ಕೆ.ಕೆ-ಗ್ರೇಟ್ ಗ್ರೋಸ್ಪಿಸಿಎಸ್-ಪೈಕ್ಸ್ಟ್ಯೂಬ್-ಟ್ಯೂಬ್ಗಳು
BOU- UNITS ಬಿಲಿಯನ್ಜಿಎಂಎಸ್-ಗ್ರ್ಯಾಮ್ಸ್PRS- ಪಾರ್ಸ್ಯುಜಿಎಸ್-ಯುಎಸ್ ಗ್ಯಾಲನ್ಸ್
ಬಾಕ್ಸ್ –
ಬಾಕ್ಸ್
GRS- ಒಟ್ಟುಕ್ಯೂಟಿಎಲ್-ಕ್ವಿಂಟಾಲ್ಘಟಕ – ಘಟಕಗಳು
ಬಿಟಿಎಲ್-ಬಾಟಲಿಗಳುಜಿಡ್-ಗ್ರೋಸ್ ಯಾರ್ಡ್ಸ್ರಾಲ್-ರೋಲ್ಸ್YDS- ಯಾರ್ಡ್ಸ್
ಬನ್-ಬಂಚ್ಸ್ಕೆಜಿಎಸ್-ಕಿಲೋಗ್ರಾಮ್ಸ್ಸೆಟ್-ಸೆಟ್ಸ್ಓತ್-ಇತರೆ
CAN- ಕ್ಯಾನುಗಳುಕೆಎಲ್ಆರ್-ಕಿಲೋಲಿಟರ್ಎಸ್ಕ್ಯೂಎಫ್-ಸ್ಕ್ವೇರ್ ಫೀಟ್
ಸಿಬಿಎಂ-ಕ್ಯುಬಿಕ್ ಮೆಟರ್ಸ್ಕೆಎಂಇ-ಕಿಲೋಮೀಟರ್ಎಸ್ಕ್ಯೂಎಂ-ಸ್ಕ್ವೇರ್ ಮೆಟರ್ಸ್
ಸಿಸಿಎಮ್-ಕ್ಯುಬಿಕ್ ಸೆಂಟಿಮೆಟರ್ಗಳುಎಮ್ಎಲ್ಟಿ-ಮಿಲಿಟರಿಎಸ್ಕ್ವೈ-ಸ್ಕ್ವೇರ್ ಯಾರ್ಡ್ಸ್
CMS- ಸೆಂಟಿಮೀಟರ್MTR- ಮೆಟರ್ಸ್ಟಿಬಿಎಸ್-ಟ್ಯಾಬ್ಲೆಟ್ಸ್
11. ತೆರಿಗೆಯ ಅವಧಿಯಲ್ಲಿ ಹೊರಡಿಸಿದ ದಾಖಲೆಗಳು

documents-issued-tax-period

ಮೇಲಿನ ಕೋಷ್ಟಕದಲ್ಲಿ, ನೀವು ಆದಾಯ ಸಲ್ಲಿಕೆಯ ಸಮಯದಲ್ಲಿ ನೀಡಿದ ದಾಖಲೆಗಳ ವಿವರಗಳನ್ನು, ದಾಖಲೆಯ ಆರಂಭದ ಮತ್ತು ಕೊನೆಯ ಸಂಖ್ಯೆಯೊಂದಿಗೆ ಹಾಗೂ ರದ್ದು ಮಾಡಿದ ದಾಖಲೆ ಮತ್ತು ನೀಡಿದ ನಿವ್ವಳ ದಾಖಲೆಯ ಸಂಖ್ಯೆಯೊಂದಿಗೆ ವಿವರಗಳನ್ನು ಗ್ರಹಿಸಬೇಕಾಗುತ್ತದೆ
.

ಜಿಎಸ್ಟಿಆರ್-1 ನಮೂನೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಉಪಸಂಹಾರ

ಒಟ್ಟಾರೆ ಹೇಳುವುದಾದರೆ, ಜಿಎಸ್ಟಿಆರ್-1 ನಲ್ಲಿ ಗ್ರಹಿಸಬೇಕಾದ ವಿವರಗಳೆಂದರೆ ಅವುಗಳು ಒಂದು ತಿಂಗಳ ಅವಧಿಯಲ್ಲಿ ಮಾಡಿದ ಹೊರಪೂರೈಕೆಗಳ ದರಪಟ್ಟಿ-ವಾರು, ದರ-ವಾರು ಅಥವಾ ರಾಜ್ಯ-ವಾರು ವಿವರಗಳಾಗಿರುತ್ತವೆ. ಈ ಸಮಯದೊಳಗೆ, ಜಿಎಸ್ಟಿಆರ್-1 ಸಲ್ಲಿಸಲು ಒಬ್ಬರು ಒದಗಿಸಬೇಕಾದ ಮಾಹಿತಿಗಳ ಪ್ರಮಾಣದ ಬಗ್ಗೆ ಮತ್ತು ಹಾಗೆ ತಿಳಿಸಲು ಬೇಕಾದ ಶ್ರಮ ಮತ್ತು ಸಮಯದ ಕುರಿತಾಗಿ ನೀವು ಸ್ವಲ್ಪಮಟ್ಟಿಗೆ ತಿಳಿದಿರಬಹುದು. ಕೆಲವು ಕಾರಣಗಳಿಂದಾಗಿ, ಸಮಯಕ್ಕೆ ಸರಿಯಾಗಿ ಆದಾಯ ನಮೂನೆಯನ್ನು ಸಲ್ಲಿಸದೇ ಹೋದಲ್ಲಿ, ಅದು ನಿಮ್ಮ ವ್ಯವಹಾರದ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ, ಐಟಿಸಿಯು ಪೂರೈಕೆದಾರರ ಅನುಸರಣೆಯ ಮೇಲೆ ಅಬಲಂಬಿತವಾದ ಕಾರಣ ಇದು ನಿಮ್ಮ ಗ್ರಾಹಕರ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಅವಶ್ಯಕತೆಗಳನ್ನು ಪೂರೈಸುವಲ್ಲಿ ಮತ್ತು ವ್ಯವಹಾರಗಳನ್ನು ಸುಲಭವಾಗಿಸುವಲ್ಲಿ ಒಂದು ತಂತ್ರಾಂಶವನ್ನು ಪಡೆದುಕೊಳ್ಳುವ ಬಗ್ಗೆ ಯೋಚಿಸುವುದಕ್ಕೆ ಇದು ಸರಿಯಾದ ಸಮಯವಾಗಿದೆ.

ಇದನ್ನು ಕೂಡಾ ಓದಿ: ಟಾಲಿ.ಇಆರ್ಪಿ9ಯನ್ನು ಉಪಯೋಗಿಸಿ ಜಿಎಸ್ಟಿಯನ್ನು (ನಮೂನೆ ಜಿಎಸ್ಟಿಆರ್-1) ಸಲ್ಲಿಸುವುದು ಹೇಗೆ

Are you GST ready yet?

Get ready for GST with Tally.ERP 9 Release 6

202,706 total views, 5 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.