ಪೀಠಿಕೆ

“ಮಧ್ಯರಾತ್ರಿ ಗಂಟೆಗೆ ತಲುಪಿದಾಗ, ಜಗತ್ತು ನಿದ್ದೆಯಲ್ಲಿ ಇರುವಾಗ, ಭಾರತವು ಜೀವನ ಮತ್ತು ಸ್ವಾತಂತ್ರ್ಯಕ್ಕಾಗಿ ಎಚ್ಚೆತ್ತುಕೊಳ್ಳುತ್ತಿದೆ.’’

ಈ ಮಾತನ್ನು 1947ರ ಆಗಸ್ಟ್ 14ರಂದು, ಭಾರತವು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆದುಕೊಂಡ ಸಮಯದಲ್ಲಿ ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಹಾರ್ ಲಾಲ್ ನೆಹರು ಅವರು ಹೇಳಿದ್ದರು. ಇದೀಗ 70 ವರ್ಷದ ಬಳಿಕ ರಾಷ್ಟ್ರವು ಹೊಸ ಶಕೆಯೊಂದಕ್ಕೆ ಪ್ರವೇಶಿಸುತ್ತಿದೆ- ಇದು ತೆರಿಗೆ ಡುಪ್ಲಿಕೇಟ್ ಆಗುವುದರಿಂದ ಸ್ವಾತಂತ್ರ್ಯ, ತೆರಿಗೆ ಸಂಕೀರ್ಣತೆಯಿಂದ ಸ್ವಾತಂತ್ರ್ಯ ಮತ್ತು ತೆರಿಗೆ ಭಷ್ಟಾಚಾರದಿಂದ ಸ್ವಾತಂತ್ರ್ಯ ಒದಗಿಸುವ ಭರವಸೆಯನ್ನು ನೀಡಿದೆ.

ಜೂನ್ 30ರ ಮಧ್ಯರಾತ್ರಿ, ಪಾರ್ಲಿಮೆಂಟ್ ಗಂಟೆಯ ಸದ್ದಿನೊಂದಿಗೆ ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಧಿಕೃತವಾಗಿ ಜಿಎಸ್ಟಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಆದರೆ, ಪ್ರಶ್ನೆ ಏನೆಂದರೆ, ನೀವು ಜಿಎಸ್ಟಿ ಶಕೆಯಲ್ಲಿ ವ್ಯವಹಾರವನ್ನು ಮುಂದುವರೆಸಲು ಹೇಗೆ ಸಿದ್ಧರಾಗಿದ್ದೀರಿ ಎನ್ನುವುದಾಗಿದೆ. ನೀವು ಜಿಎಸ್ಟಿ ಆಗಮಿಸಿದ 00:01 ಎಎಂನಿಂದ ಜಿಎಸ್ಟಿ ಸರಕುಪಟ್ಟಿ ರಚಿಸಲು ಸಾಧ್ಯವೇ? ಇದಕ್ಕೆ ಸಂಕ್ಷಿಪ್ತ ಉತ್ತರ, ಹೌದು!
ಜೂನ್ 30ರಿಂದ ನೀವು ಜಿಎಸ್ಟಿ ಸರಕುಪಟ್ಟಿ ಆರಂಭಿಸಲು ಇಲ್ಲೊಂದಿಷ್ಟು ಪರಿಶೀಲನಾಪಟ್ಟಿಯನ್ನು ನೀಡಲಾಗಿದೆ. ಜೊತೆಗೆ ಹೇಗೆ ಕಾಣುತ್ತದೆ ಟ್ಯಾಲಿಯ ಜಿಎಸ್ಟಿ ಸಿದ್ಧ ಉತ್ಪನ್ನ-ಟ್ಯಾಲಿ ಇಆರ್ಪಿ 9 ರಿಲೀಸ್ 6 ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ..

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಸರಕುಪಟ್ಟಿ ರಚಿಸುವುದು

ಈ ಲೇಖನದಲ್ಲಿ ನಾವು ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಬರಲಿರುವ ವಈ ಮುಂದಿನ ಸರಕುಪಟ್ಟಿಗಳ ಮೂಲಕ ವಿಷಯಗಳನ್ನು ತಿಳಿದುಕೊಳ್ಳಲಿದ್ದೇವೆ:

   • ತೆರಿಗೆ ಸರಕುಪಟ್ಟಿ

 

   • ರಿವರ್ಸ್ ಚಾರ್ಜ್ ಸರಕುಪಟ್ಟಿ

 

   • ಸ್ವೀಕೃತಿ ರಸೀದಿ

 

   • ರಫ್ತು ಸರಕುಪಟ್ಟಿ

 

   • ಡೆಲಿವರಿ ಚಲನ್

 

   • ಪೂರೈಕೆಯ ಬಿಲ್

 

   • ಡೆಬಿಟ್ ನೋಟ್

 

  • ಕ್ರೆಡಿಟ್ ನೋಟ್
ತೆರಿಗೆ ಸರಕುಪಟ್ಟಿ

ನೋಂದಾಯಿತ ತೆರಿಗೆದಾರ ವ್ಯಕ್ತಿಯು ತೆರಿಗೆ ವಿಧಿಸಬಲ್ಲ ಸರಕು ಅಥವಾ ಸೇವೆಯನ್ನು ಪೂರೈಕೆ ಮಾಡಿದರೆ- ಒಂದು ತೆರಿಗೆ ಸರಕುಪಟ್ಟಿ ಸಲ್ಲಿಸಬೇಕು. ಜಿಎಸ್ಟಿ ಅನುಸರಣೆಯ ಸರಕುಪಟ್ಟಿ ಸಲ್ಲಿಸುವುದು ಮತ್ತು ಸ್ವೀಕರಿಸುವುದು ಆದಾನ ತೆರಿಗೆ ಪಾವತಿ(ಐಟಿಸಿ) ಕೇಳಲು ಇರುವ ಸಾಧನವಾಗಿದೆ. ಎಲ್ಲಾದರೂ, ವಿತರಕರು ತನ್ನ ಗ್ರಾಹಕರಿಗೆ (ನೋಂದಾಯಿತ ತೆರಿಗೆದಾರ ವ್ಯಕ್ತಿ) ಸರಕು ಪಟ್ಟಿ ನೀಡದೆ ಇದ್ದರೆ- ಆತನ ಗ್ರಾಹಕನು ಐಟಿಸಿ ಕೇಳುವ ಅವಕಾಶವನ್ನು ಕಳೆದುಕೊಳ್ಳುತ್ತಾನೆ ಮತ್ತು ವಿತರಕರು ತನ್ನ ಗ್ರಾಹಕರನ್ನು ಕಳೆದುಕೊಳ್ಳುತ್ತಾರೆ.

ರಿಗೆ ಸರಕುಪಟ್ಟಿ ತಯಾರಿಸಲು ಈ ಮುಂದಿನ ಮಾಹಿತಿಗಳು ಇರುವುದನ್ನು ನೀವು ಖಚಿತಪಡಿಸಿಕೊಳ್ಳಿರಿ

   • ಸರಕುಪಟ್ಟಿ ಸಂಖ್ಯೆ ಮತ್ತು ದಿನಾಂಕ

 

   • ಗ್ರಾಹಕರ ಹೆಸರು

 

   • ಶಿಪ್ಪಿಂಗ್ ಮತ್ತು ಬಿಲ್ ಮಾಡಿರುವ ವಿಳಾಸ

 

   • ಗ್ರಾಹಕರ ಮತ್ತು ತೆರಿಗೆಪಾವತಿದಾರರ ಜಿಎಸ್ಟಿಎನ್

 

   • ಪೂರೈಕೆಯ ಸ್ಥಳ

 

   • ಎಚ್ಎಸ್ಎನ್/ಎಸ್ಎಎಸ್ ಕೋಡ್

 

   • ತೆರಿಗೆ ವಿಧಿಸಬಹುದಾದ ಮೌಲ್ಯ ಮತ್ತು ವಿನಾಯಿತಿ

 

   • ತೆರಿಗೆ ದರ ಮತ್ತು ಮೊತ್ತ. ಅಂದರೆ, ಸಿಜಿಎಸ್ಟಿ+ಎಸ್ಜಿಎಸ್ಟಿ (ರಾಜ್ಯದೊಳಗಿನ ಪೂರೈಕೆಗೆ) ಮತ್ತು ಐಜಿಎಸ್ಟಿ (ಹೊರರಾಜ್ಯಕ್ಕೆ)

 

  • ಸರಕು ವಿವರ, ಅಂದರೆ ವಿವರಣೆ, ವಸ್ತುವಿನ ದರ, ಪ್ರಮಾಣ

ತೆರಿಗೆ ಸರಕುಪಟ್ಟಿಯನ್ನು ನೀವು ಯಾವಾಗ ಸಲ್ಲಿಸುವ ಅಗತ್ಯವಿದೆ?

ಸರಕಿನ ಪೂರೈಕೆಗೆ

ತೆರಿಗೆ ಸರಕುಪಟ್ಟಿಯನ್ನು ನೀವು ಕಡ್ಡಾಯವಾಗಿ ಈ ಮುಂದಿನ ಸಮಯದಲ್ಲಿ ಅಥವಾ ಅದಕ್ಕಿಂತ ಮುಂದೆ ಸಲ್ಲಿಸಬೇಕು

   • ಸರಕು ಹೊರತೆಗೆಯುವಿಕೆ, ಸರಕಿನ ಚಲನೆ ಒಳಗೊಂಡ ಪೂರೈಕೆಯ ಸಂದರ್ಭದಲ್ಲಿ.

 

   • ಸ್ವೀಕೃತಿದಾರರಿಗೆ ಸರಕು ತಲುಪಿದಾಗ, ಯಾವಾಗ ಸರಕಿನ ಚಲನೆಯ ಅಗತ್ಯವಿಲ್ಲದ ಪೂರೈಕೆಯ ಸಂದರ್ಭದಲ್ಲಿ.

 

  • ಲೆಕ್ಕ ಪತ್ರ ಪ್ರಕಟಣೆ/ಪಾವತಿ ಇದ್ದಾಗ, ಯಾವಾಗ ಪೂರೈಕೆಯು ಮುಂದುವರೆಯುತ್ತಿರುವಾಗ.

ಸೇವೆಯ ಪೂರೈಕೆಗೆ

ತೆರಿಗೆ ಸರಕುಪಟ್ಟಿಯನ್ನು ಈ ಮುಂದಿನಂತೆ ಸಲ್ಲಿಸಬೇಕು.

   • ಸೇವೆಯ ಪೂರೈಕೆ ಮಾಡಿದ 30 ದಿನದೊಳಗೆ.

 

  • ಸೇವೆಯ ಪೂರೈಕೆ ಮಾಡಿದ 45 ದಿನದೊಳಗೆ, ಪೂರೈಕೆದಾರರು ವಿಮಾದಾರರು ಅಥವಾ ಬ್ಯಾಂಕಿಂಗ್ ಕಂಪನಿ ಅಥವಾ ಒಂದು ಹಣಕಾಸು ಸಂಸ್ಥೆಯಾಗಿದ್ದಲ್ಲಿ

ಸರಕುಪಟ್ಟಿಯ ಎಷ್ಟು ಪ್ರತಿಗಳ ಅಗತ್ಯವಿದೆ?

ಸರಕಿನ ಪೂರೈಕೆಗೆ

ಸರಕುಪಟ್ಟಿಯ ಮೂರು ಪ್ರತಿಗಳ ಅಗತ್ಯವಿರುತ್ತದೆ- ಮೂಲ, ನಕಲು ಮತ್ತು ಮೂರನೇ ನಕಲು ಪ್ರತಿ

   • ಮೂಲ ಸರಕುಪಟ್ಟಿ- ಮೂಲ ಸರಕುಪಟ್ಟಿಯನ್ನು ಸ್ವೀಕೃತಿದಾರರಿಗೆ ನೀಡಬೇಕು, ಮತ್ತು ಅದರಲ್ಲಿ “ಸ್ವೀಕೃತಿದಾರರಿಗೆ ಮೂಲಪ್ರತಿ’’ ಎಂದು ನಮೋದಿಸಿರಬೇಕು.

 

   • ನಕಲು ಪ್ರತಿ: ನಕಲು ಪ್ರತಿಯನ್ನು ಸಾಗಾಣೆದಾರರಿಗೆ ನೀಡಬೇಕು, ಮತ್ತು ಅದರಲ್ಲಿ “ಸಾಗಾಣೆದಾರರಿಗೆ ನಕಲುಪ್ರತಿ’’ ಎಂದು ನಮೋದಿಸಿರಬೇಕು. ಎಲ್ಲಾದರೂ ಪೂರೈಕೆದಾರರು ಸರಕುಪಟ್ಟಿ ಆಧಾರ ಸಂಖ್ಯೆ ಹೊಂದಿದ್ದರೆ ಇದರ ಅಗತ್ಯವಿರುವುದಿಲ್ಲ. ಜಿಎಸ್ಟಿ ವೆಬ್ ತಾಣದಲ್ಲಿ ಸರಕುಪಟ್ಟಿ ಲಗ್ಗತ್ತಿಸುವ ಸಂದರ್ಭದಲ್ಲಿ ಸರಕುಪಟ್ಟಿ ಆಧಾರ ಸಂಖ್ಯೆಯನ್ನು ಪೂರೈಕೆದಾರರು ಪಡೆಯಬಹುದು. ಸರಕುಪಟ್ಟಿ ಲಗ್ಗತ್ತಿಸಿದ ದಿನಾಂಕದಿಂದ ಈ ಸಂಖ್ಯೆಗೆ 30 ದಿನಗಳವರೆಗೆ ವಾಯಿದೆ ಇರುತ್ತದೆ.

 

  • ಮೂರನೇ ನಕಲುಪ್ರತಿ: ಈ ಪ್ರತಿಯನ್ನು ಪೂರೈಕೆದಾರರು ತಮ್ಮಲ್ಲಿ ಇಟ್ಟುಕೊಳ್ಳಬೇಕು, ಮತ್ತು ಇದರಲ್ಲಿ “ಪೂರೈಕೆದಾರರಿಗೆ ಮೂರನೇ ನಕಲು ಪ್ರತಿ’’ ಎಂದು ನಮೋದಿಸಿರಬೇಕು.

ಸೇವೆಯ ಪೂರೈಕೆಗೆ

ಸರಕುಪಟ್ಟಿಯ ಎರಡು ಪ್ರತಿಗಳ ಅಗತ್ಯವಿರುತ್ತದೆ:

   • ಮೂಲ ಸರಕುಪಟ್ಟಿ: ಸರಕುಪಟ್ಟಿಯ ಮೂಲ ಪ್ರತಿಯನ್ನು ಸ್ವೀಕೃತಿದಾರರಿಗೆ ನೀಡಬೇಕು ಮತ್ತು ಅದರಲ್ಲಿ “ಸ್ವೀಕೃತಿದಾರರಿಗೆ ಮೂಲಪ್ರತಿ’’ ಎಂದು ನಮೋದಿಸಬೇಕು.

 

  • ನಕಲು ಪ್ರತಿ: ಪೂರೈಕೆದಾರರಿಗೆ ನಕಲು ಪ್ರತಿ ಸರಕುಪಟ್ಟಿಯನ್ನು ನೀಡಬೇಕು, ಮತ್ತು ಅದರಲ್ಲಿ “ಪೂರೈಕೆದಾರರಿಗೆ ನಕಲುಪ್ರತಿ’’ ಎಂದು ನಮೋದಿಸಬೇಕು.

ತೆರಿಗೆ ಸರಕುಪಟ್ಟಿಯನ್ನು ನೀಡಲು ಕನಿಷ್ಠ ಮೊತ್ತ ಎಷ್ಟಿರಬೇಕು?

200 ರೂಪಾಯಿಗಿಂತ ಕಡಿಮೆ ಮೊತ್ತದ ಸರಕು ಅಥವಾ ಸೇವೆಯನ್ನು ಪೂರೈಕೆ ಮಾಡಿದಾಗ ತೆರಿಗೆ ಸರಕುಪಟ್ಟಿಯನ್ನು ನೀಡುವ ಅವಶ್ಯಕತೆ ಇಲ್ಲ:

   • ಸ್ವೀಕೃತಿದಾರರು ನೋಂದಾಯಿಸದೆ ಇದ್ದರೆ

 

  • ಸ್ವೀಕೃತಿದಾರರಿಗೆ ಸರಕುಪಟ್ಟಿಯ ಅಗತ್ಯವಿಲ್ಲದೆ ಇದ್ದರೆ (ಎಲ್ಲಾದರೂ ಸ್ವೀಕೃತಿದಾರರು ಸರಕುಪಟ್ಟಿಗೆ ಬೇಡಿಕೆಯಿತ್ತರೆ, ತೆರಿಗೆ ಸರಕುಪಟ್ಟಿಯನ್ನು ನೀಡಬೇಕು)

ಆದರೂ, ಏಕೀಕೃತ ತೆರಿಗೆ ಸರಕುಪಟ್ಟಿ ಅಥವಾ ಸಂಯೋಜಿತ ತೆರಿಗೆಪಟ್ಟಿಯನ್ನು ಪ್ರತಿ ಪೂರೈಕೆದಾರರು ತೆರಿಗೆ ಸರಕುಪಟ್ಟಿ ಸಲ್ಲಿಸದೆ ಇದ್ದರೂ ಪ್ರತಿದಿನ ರಚಿಸಬೇಕು

ರಾಜ್ಯದೊಳಗಿನ ವ್ಯವಹಾರಕ್ಕೆ ತೆರಿಗೆ ಸರಕುಪಟ್ಟಿ – ಜಿಎಸ್ಟಿ ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6

ಎಲ್ಲಾದರೂ ರಾಜ್ಯದೊಳಗಿನ ವ್ಯವಹಾರದ ಸಂದರ್ಭದಲ್ಲಿ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ವಿಧಿಸಲಾಗುತ್ತದೆ. ರಾಜ್ಯದೊಳಗಿನ ವ್ಯವಹಾರಕ್ಕೆ ನಿಮ್ಮ ಸರಕುಪಟ್ಟಿಯ ಮಾದರಿಯು ಈ ಮುಂದಿನಂತೆ ಇರುತ್ತದೆ-

Tax Invoice - Intra-state

ಬಿಲ್ ಒಂದುಕಡೆಗೆ, ರವಾನೆ ಇನ್ನೊಂದೆಡಗೆ ಸಂದರ್ಭದಲ್ಲಿ ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6

ಎಲ್ಲಾದರೂ ಮೂರನೇ ವ್ಯಕ್ತಿಯ ಸೂಚನೆಯ ಮೇರಿಗೆ ಸರಕನ್ನು ಸಂಬಂಧಪಟ್ಟವರಿಗೆ ಕಳುಹಿಸಿದರೆ, ಬಿಲ್ ಒಂದು ಕಡೆಗೆ, ಸರಕು ಪೂರೈಕೆ ಇನ್ನೊಂದು ಕಡೆಗೆ ಎಂಬ ಸಂದರ್ಭ ಉಂಟಾಗುತ್ತದೆ. ಎಲ್ಲಾದರೂ ಮೂರನೇ ವ್ಯಕ್ತಿಯು ಒಂದೇ ರಾಜ್ಯದಲ್ಲಿ ಇದ್ದರೆ, ಮೂರನೇ ರಾಜ್ಯಕ್ಕೆ ಸರಕು ತಲುಪಿಸಿದರೂ ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ..

Tax Invoice - Interstate

Bill-To-Ship

ಯುಆರ್ ಡಿಯಿಂದ ಖರೀದಿ ನಿರ್ವಹಣೆ- ಹಿಮ್ಮುಖ ಶುಲ್ಕ ಸರಕುಪಟ್ಟಿ

ಎಲ್ಲಾದರೂ ನೋಂದಾಯಿತ ವ್ಯಕ್ತಿಯು “ನೋಂದಾಯಿಸದೆ ಇರುವ ವಿತರಕರಿಂದ’ ಖರೀದಿಸಿದರೆ, ಸ್ವೀಕೃತಿದಾರರು ತೆರಿಗೆ ಪಾವತಿಸಬೇಕು, ಮತ್ತು ಸರಕು ಅಥವಾ ಸೇವೆಯನ್ನು ಸ್ವೀಕರಿಸಿದ ದಿನಾಂಕದಂದು ಸ್ವೀಕೃತಿದಾರರು ಕಡ್ಡಾಯವಾಗಿ ಸರಕುಪಟ್ಟಿ ರಚಿಸಬೇಕು.

ಜಿಎಸ್ಟಿ ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6ನಲ್ಲಿ ಹಿಮ್ಮುಖ ವಿಧಿಸುವ ಸರಕುಪಟ್ಟಿ

reverse charge invoice

ಮುಂಗಡ ಪಾವತಿ ನಿರ್ವಹಣೆ- ಸ್ವೀಕೃತಿ ರಸೀದಿ

ಎಲ್ಲಾದರೂ ನೋಂದಾಯಿತ ವಿತರಕರು ಪೂರೈಕೆಗೆ ಮುಂಗಡ ಪಾವತಿಯನ್ನು ಪಡೆದರೆ, ಸ್ವೀಕೃತಿದಾರರಿಂದ ಪಡೆದ ಮುಂಗಡ ಮೊತ್ತಕ್ಕೆ ಒಂದು ಸ್ವೀಕೃತಿ ರಸೀದಿಯನ್ನು ನೀಡಬೇಕು.

ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6ನಲ್ಲಿ ಸ್ವೀಕೃತಿ ರಸೀದಿ

Advance Receipt

ಪರಿಣಾಮಕಾರಿಯಾಗಿ ರಫ್ತು ನಿರ್ವಹಣೆ- ರಫ್ತು ಸರಕುಪಟ್ಟಿ

ತೆರಿಗೆ ಸರಕುಪಟ್ಟಿಯಲ್ಲಿ ಅಗತ್ಯವಿರುವ ಮಾಹಿತಿಗಳ ಜೊತೆಗೆ ರಫ್ತು ಸರಕುಪಟ್ಟಿಯಲ್ಲಿ ಈ ಮುಂದಿನ ವಿವರಗಳು ಇರಬೇಕು:

   • ಐಜಿಎಸ್ಟಿ ಪಾವತಿ ರಫ್ತಿನ ಪೂರೈಕೆ’’ ಅಥವಾ “ಐಜಿಎಸ್ಟಿ ಪಾವತಿ ಮಾಡದೆ ಕರಾರು ಅಥವಾ ಪತ್ರದ ಮೂಲಕ ನಡೆಸಿದ ರಫ್ತು’ ಎಂದು ಕಡ್ಡಾಯವಾಗಿ ಬರೆಯಬೇಕು.

 

   • ಸ್ವೀಕೃತಿದಾರರ ಹೆಸರು ಮತ್ತು ವಿಳಾಸ

 

   • ಯಾವ ದೇಶಕ್ಕೆ ಪೂರೈಕೆಮಾಡಲಾಗುತ್ತದ್ದೋ ಆ ದೇಶದ ಹೆಸರು.

 

  • ತಲುಪಿಸಬೇಕಾಗಿರುವ ವಿಳಾಸ

ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6ನಲ್ಲಿ ರಫ್ತು ಸರಕುಪಟ್ಟಿ

Export invoice

ತಲುಪಿಸಿರುವ ಚಲನ್ ಅನ್ನು ಯಾವಾಗ ನೀಡಬೇಕು?

ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ತಲುಪಿಸಿರುವ ಚಲನ್ ಅನ್ನು ನೀಡಬೇಕು, ಅವುಗಳೆಂದರೆ-

   • ವೀಕೃತ ಅನಿಲ ಪೂರೈಕೆ ಸಂದರ್ಭದಲ್ಲಿ, ಪೂರೈಕೆದಾರರ ವ್ಯವಹಾರದ ಸ್ಥಳವನ್ನು ಸೂಕ್ತ ಸಮಯದಲ್ಲಿ ಗುರುತಿಸಲಾಗದ ಸಂದರ್ಭದಲ್ಲಿ.

 

   • ಉದ್ಯೋಗದ ಕೆಲಸಕ್ಕಾಗಿ ಸರಕು ಸಾಗಾಣೆ

 

   • ಪೂರೈಕೆ ಹೊರತುಪಡಿಸಿದ ಸಂದರ್ಭಗಳಲ್ಲಿ ಸರಕು ಸಾಗಾಣೆ ಮಾಡಿದಾಗ

 

  • ಇತರೆ ಯಾವುದೇ ನಿರ್ದಿಷ್ಟಪಡಿಸಿದ ಪೂರೈಕೆಗಳಿಗೆ

ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6ನಲ್ಲಿ ಪೂರೈಕೆಯ ರಸೀದಿ

Delivery Challan

ಪೂರೈಕೆಯ ಬೆಲೆಪಟ್ಟಿಯನ್ನು ಯಾವಾಗ ನೀಡಬೇಕು?

ಈ ಮುಂದಿನ ಸಂದರ್ಭಗಳಲ್ಲಿ ನೋಂದಾಯಿತ ಪೂರೈಕೆದಾರರು ಪೂರೈಕೆಯ ಬೆಲೆಪಟ್ಟಿಯನ್ನು ನೀಡಬೇಕು:

   • ವಿನಾಯಿತಿ ಇರುವ ಸರಕು ಅಥವಾ ಸೇವೆಯ ಪೂರೈಕೆ

 

   • ಸಂಯೋಜಿತ ಯೋಜನೆಯಡಿ ಪೂರೈಕೆದಾರರು ತೆರಿಗೆ ಪಾವತಿಸುವುದು

 

  ತೆರಿಗೆ ಸರಕುಪಟ್ಟಿಯಂತೆ, 200 ರೂಪಾಯಿಗಿಂತ ಕಡಿಮೆ ಇರುವ ಸರಕು ಅಥವಾ ಸೇವೆಯನ್ನು

ಪೂರೈಕೆ ಮಾಡುವಾಗ ಪೂರೈಕೆಯ ಬೆಲೆಪಟ್ಟಿ ನೀಡುವ ಅವಶ್ಯಕತೆ ಇರುವುದಿಲ್ಲ. ಆದರೂ, ಇಂತಹ ಎಲ್ಲಾ ಪೂರೈಕೆಗೆ ಪ್ರತಿದಿನದ ಅಂತ್ಯದಲ್ಲಿ ಸಂಯೋಜಿತ ಪೂರೈಕೆಯ ಬೆಲೆಪಟ್ಟಿಯನ್ನು ಸಿದ್ಧಪಡಿಸುವ ಅವಶ್ಯಕತೆ ಇರುತ್ತದೆ.

ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6ನಲ್ಲಿ ಪೂರೈಕೆಯ ಬೆಲೆಪಟ್ಟಿ

Bill supply

ಈಗಾಗಲೇ ಸಲ್ಲಿಸಿರುವ ತೆರಿಗೆ ಸರಕುಪಟ್ಟಿಯ ಮೌಲ್ಯವನ್ನು ಪರಿಷ್ಕರಿಸುವುದು ಹೇಗೆ?

ತೆರಿಗೆ ವಿಧಿಸಬಹುದಾದ ಮೌಲ್ಯ ಪರಿಷ್ಕರಿಸಲು ಅಥವಾ ಸರಕುಪಟ್ಟಿಯಲ್ಲಿ ಜಿಎಸ್ಟಿ ವಿಧಿಸಿರುವುದು, ಒಂದು ವ್ಯಯ ಚೀಟಿ ಅಥವಾ ಪೂರಕ ಸರಕುಪಟ್ಟಿ ಅಥವಾ ಕ್ರೆಡಿಟ್ ನೋಟ್ ಅನ್ನು ಪೂರೈಕೆದಾರರು ಕಡ್ಡಾಯವಾಗಿ ಸಲ್ಲಿಸಬೇಕು.
ವ್ಯಯ ಚೀಟಿ/ಪೂರಕ ಸರಕುಪಟ್ಟಿ- ಇದನ್ನು ಪೂರೈಕೆದಾರರು ತೆರಿಗೆಪಾವತಿಸಬೇಕಾಗಿರುವ ಮೌಲ್ಯ ಹೆಚ್ಚಿರುವುದನ್ನು ಮತ್ತು/ಅಥವಾ ಮೂಲ ಸರಕುಪಟ್ಟಿಗೆ ವಿಧಿಸಿರುವ ಜಿಎಸ್ಟಿಯನ್ನು ದಾಖಲಿಸಲು ಬಳಸಬೇಕು.
ಕ್ರೆಡಿಟ್ ನೋಟ್/ ಪರಿಷ್ಕೃತ ಸರಕುಪಟ್ಟಿ- ಇದನ್ನು ಪೂರೈಕೆದಾರರು ತೆರಿಗೆಪಾವತಿಸಬೇಕಾಗಿರುವ ಮೌಲ್ಯ ಕಡಿಮೆಯಾಗಿರುವುದನ್ನು ಮತ್ತು/ಅಥವಾ ಮೂಲ ಸರಕುಪಟ್ಟಿಗೆ ವಿಧಿಸಿರುವ ಜಿಎಸ್ಟಿಯನ್ನು ದಾಖಲಿಸಲು ಬಳಸಬೇಕು. ಈ ಕ್ರೆಡಿಟ್ ನೋಟ್ ಅನ್ನು ಪೂರೈಕೆ ನಡೆಸಿದ ಅಥವಾ ಸಂಬಂಧಪಟ್ಟ ವಾರ್ಷಿಕ ಆದಾಯ ಸಲ್ಲಿಕೆ ಮಾಡಿದ ಹಣಕಾಸು ವರ್ಷದ ನಂತರ ಬರುವ ಸೆಪ್ಟೆಂಬರ್ 30 ಅಥವಾ ಅದಕ್ಕಿಂತ ಮೊದಲು, ಯಾವುದು ಮೊದಲು ಬರುತ್ತದ್ದೋ ಆವಾಗ ಸಲ್ಲಿಸಬೇಕು.

ವ್ಯಯ ಚೀಟಿ ಮತ್ತು ಕ್ರೆಡಿಟ್ ನೋಟ್ ಗಳಲ್ಲಿ ಒಳಗೊಳ್ಳಬೇಕಾದ ವಿವರಗಳು
:

ವ್ಯಯ ಚೀಟಿಗಳು, ಪೂರಕ ಸರಕುಪಟ್ಟಿ ಮತ್ತು ಕ್ರೆಡಿಟ್ ನೋಟ್ ಗಳಲ್ಲಿ ಈ ಮುಂದಿನ ವಿವರಗಳು ಒಳಗೊಂಡಿರಬೇಕು:

   • ದಾಖಲೆಯ ಸ್ವರೂಪವನ್ನು ಪ್ರಾಮಾಣಿಕವಾಗಿ ಸೂಚಿಸಬೇಕು, ಅಂದರೆ “ಪರಿಷ್ಕೃತ ಸರಕುಪಟ್ಟಿ’’ ಅಥವಾ “ಪೂರಕ ಸರಕುಪಟ್ಟಿ’.

 

   • ಹೆಸರು, ವಿಳಾಸ ಮತ್ತು ಪೂರೈಕೆದಾರರ ಜಿಎಸ್ಟಿಐಎನ್

 

   • ಕೇವಲ ಅಕ್ಷರಗಳು ಮತ್ತು/ಅಥವಾ ಸಂಖ್ಯೆಗಳು ಅಥವಾ ವಿಶೇಷ ಚಿಹ್ನೆಗಳಾದ ಸಂಯೋಜಕ ರೇಖೆ “-“ ಅಥವಾ ಸೀಳುಗೆರೆ “/” ಯನ್ನು ಆಯಾ ಹಣಕಾಸು ವರ್ಷವಾಗಿ ವಿಶೇಷವಾಗಿ ರೂಪಿಸಿದ ಕ್ರಮ ಸಂಖ್ಯೆಯನ್ನು ಹೊಂದಿರಬೇಕು.

 

   • ದಾಖಲೆ ಸಲ್ಲಿಸಿದ ದಿನಾಂಕ

 

   • ಎಲ್ಲಾದರೂ ಸ್ವೀಕೃತಿದಾರರು ನೋಂದಾಯಿಸಿದ್ದರೆ- ಸ್ವೀಕೃತಿದಾರರ ಹೆಸರು, ವಿಳಾಸ ಮತ್ತು ಜಿಎಸ್ಟಿಐಎನ್/ವಿಶೇಷ ಗುರುತಿನ ಸಂಖ್ಯೆ.

 

   • ಎಲ್ಲಾದರೂ ಸ್ವೀಕೃತಿದಾರರು ನೋಂದಾಯಿಸದೆ ಇರದೆ ಇದ್ದರೆ- ಸ್ವೀಕೃತಿದಾರರ ಹೆಸರು, ವಿಳಾಸ, ರಾಜ್ಯದ ಹೆಸರು ಮತ್ತು ಪಿನ್ ಕೋಡ್ ಸಂಖ್ಯೆಯ ಜೊತೆಗೆ.

 

   • ಕ್ರಮ ಸಂಖ್ಯೆ ಮತ್ತು ಮೂಲಕ ತೆರಿಗೆ ಸರಕುಪಟ್ಟಿಯ ದಿನಾಂಕ ಅಥವಾ ಪೂರೈಕೆಯ ಬೆಲೆಪಟ್ಟಿ

 

   • ಸರಕು ಅಥವಾ ಸೇವೆಯ ತೆರಿಗೆ ವಿಧಿಸಬಹುದಾದ ಮೌಲ್ಯ, ತೆರಿಗೆ ದರ ಮತ್ತು ಸ್ವೀಕೃತಿದಾರರು ಪಾವತಿಸಿದ/ಸ್ವೀಕರಿಸಿದ ತೆರಿಗೆ ಮೊತ್ತ.

 

  • ಪೂರೈಕೆದಾರರು ಅಥವಾ ಅವರ ಅಧಿಕೃತ ಪ್ರತಿನಿಧಿಯ ಸಹಿ ಅಥವಾ ಡಿಜಿಟಲ್ ಸಹಿ

ಜಿಎಸ್ಟಿ-ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6ನಲ್ಲಿ ಕ್ರೆಡಿಟ್ ನೋಟ್

revised invoice

ಜಿಎಸ್ಟಿ-ರೆಡಿ ಟ್ಯಾಲಿ. ಇಆರ್ ಪಿ 9 ರಿಲೀಸ್ 6ನಲ್ಲಿ ವ್ಯಯ ಚೀಟಿ

Are you GST ready yet?

Get ready for GST with Tally.ERP 9 Release 6

257,380 total views, 127 views today

Pramit Pratim Ghosh

Author: Pramit Pratim Ghosh

Pramit, who has been with Tally since May 2012, is an integral part of the digital content team. As a member of Tally’s GST centre of excellence, he has written blogs on GST law, impact and opinions - for customer, tax practitioner and student audiences, as well as on generic themes such as - automation, accounting, inventory, business efficiency - for business owners.