(English) Language

  • English
  • Hindi
  • Marathi
  • Kannada
  • Telugu
  • Tamil
  • Gujarati

ಈಗಿನ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ, ಇನ್ಪುಟ್ ಕ್ರೆಡಿಟ್ನ ಸರಪಣಿಯು ಒಂದು ನಿರ್ದಿಷ್ಟ ಘಟ್ಟದಲ್ಲಿ ಮುರಿದಿದೆ. ಅಂತರ್ ರಾಜ್ಯ ವ್ಯವಹಾರದಲ್ಲಿ ಅನ್ವಯವಾಗುವ ಕೇಂದ್ರ ಮಾರಾಟ ತೆರಿಗೆ (ಸಿಎಸ್ಟಿ)ಯು ನಾನ್ ಕ್ರೆಡಿಟೇಬಲ್ ಆಗಿರುವುದು, ಇನ್ಪುಟ್ ಕ್ರೆಡಿಟ್ ಸರಪಣಿಯು ಮುರಿಯಲು ಪ್ರಮುಖ ಕಾರಣವೆಂದು ಹೇಳಬಹುದು. ಹೀಗೆಯೇ, ಡೀಲರ್ಗೆ ಮಾರಾಟ ಮಾಡಲು ತಯಾರಕರು ಅಬಕಾರಿ ಸುಂಕ ವಿಧಿಸುವುದು ಸಹ ಈ ಸರಪಣಿ ಮುರಿಯಲು ಕಾರಣವಾಗಿದೆ. ಇದರಿಂದ ಉತ್ಪಾದನೆ ವೆಚ್ಚದ ಒಂದು ಭಾಗವಾಗಿ ತೆರಿಗೆಯು ರೂಪುಗೊಳ್ಳಲು ಕಾರಣವಾಗುತ್ತದೆ.

2005ರ ವರ್ಷದಲ್ಲಿ, ಇದೇ ಉದ್ದೇಶದಿಂದ ಕ್ಯಾಸ್ಕೊಡಿಂಗ್ ಪರಿಣಾಮ (ತೆರಿಗೆ ಮೇಲೆ ತೆರಿಗೆ) ನಿವಾರಿಸಲು ವ್ಯಾಟ್ ಅನ್ನು ಪರಿಚಯಿಸಲಾಯಿತು. ಎಲ್ಲಾದರೂ ಇದನ್ನು ಹೋಗಲಾಡಿಸಲು ವ್ಯಾಟ್ ಅನ್ನು ವಿನ್ಯಾಸ ಮಾಡಿದ್ದರೆ, ಜಿಎಸ್ಟಿಯು ಇದಕ್ಕಿಂತ ಹೇಗೆ ಭಿನ್ನವಾಗಿದೆ?

ಹೌದು, ರಾಜ್ಯದ ಪರೋಕ್ಷಾ ತೆರಿಗೆ ಮೇಲೆ ಕ್ಯಾಸ್ಕೊಡಿಂಗ್ ತೆರಿಗೆ ಪರಿಣಾಮವನ್ನು ವ್ಯಾಟ್ ನಿವಾರಣೆ ಮಾಡಿತ್ತು. ಆದರೆ, ಇತರೆ ಪರೋಕ್ಷ ತೆರಿಗೆಗಳ ಮೇಲಿನ ಕ್ಯಾಸ್ಕೋಡಿಂಗ್ ಪರಿಣಾಮವು ಹಾಗೆಯೇ ಉಳಿಯಿತು. ಜಿಎಸ್ಟಿಯು ಟ್ಯಾಕ್ಸ್ ಕ್ರೆಡಿಟ್ನ ತಡೆರಹಿತ ಹರಿವಿಗೆ ಅವಕಾಶ ನೀಡುತ್ತದೆ ಮತ್ತು ತಯಾರಿಕಾ ವಲಯದಿಂದ ರಿಟೇಲರ್ವರೆಗೆ ಹಾಗೂ ಎಲ್ಲಾ ರಾಜ್ಯಗಳ ಗಡಿಯ ಹಂಗಿಲ್ಲದೆ ಎಲ್ಲಾ ಪರೋಕ್ಷ ತೆರಿಗೆಗಳ ಎಲ್ಲಾ ಕ್ಯಾಸ್ಕೋಡಿಂಗ್ ಪರಿಣಾಮವನ್ನು ತೆಗೆದು ಹಾಕುತ್ತದೆ.

ಇದನ್ನು ಒಂದು ಕಾರೆಂಬ ಉತ್ಪನ್ನದ ಉದಾಹರಣೆಯ ಮೂಲಕ ಪರಿಶೀಲಿಸೋಣ. ತೆರಿಗೆಯ ಮೇಲಿನ ತೆರಿಗೆಯನ್ನು ತೆಗೆದುಹಾಕುವುದನ್ನು ವಿವರಿಸಲು ಕಾರೆಂಬ ಉತ್ಪನ್ನಕ್ಕೆ ಅಸ್ತಿತ್ವದಲ್ಲಿರುವ ಮತ್ತು ಜಿಎಸ್ಟಿ ಅನ್ವಯ ಒಟ್ಟಾರೆ ತೆರಿಗೆ ದರ @22% ಆಗುತ್ತದೆ ಎಂದಿರಲಿ.

5,280 ಉಳಿತಾಯವಾಗುವುದು ನಿಮ್ಮ ಕಣ್ಣನ್ನು ಸೆಳೆಯುತ್ತದೆ ಅಲ್ಲವೇ? ಇದನ್ನು ಹೀಗೆ ವಿವರಿಸೋಣ.

ನೀವು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಈ ಉದಾಹರಣೆಯಲ್ಲಿ ಡೀಲರ್ ತಯಾರಕರಿಗೆ (ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ)ನೀಡಿರುವ ತೆರಿಗೆಯನ್ನು ವೆಚ್ಚಕ್ಕೆ ಸೇರಿಸಲಾಗಿಲ್ಲ. ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿರ ತೆರಿಗೆ ಹೊಣೆಗಾರಿಕೆಯನ್ನು ಆಫ್ ಸೆಟ್ ಮಾಡಲು ಡೀಲರ್ಗೆ ಜಿಎಸ್ಟಿ ಅನುವು ಮಾಡಿಕೊಡುವುದರಿಂದ ಇದು ಸಾಧ್ಯವಾಗಿದೆ. ಇದು ಜಿಎಸ್ಟಿಯ ಒಂದು ಮೂಲಭೂತ ಲಕ್ಷಣವಾಗಿದ್ದು, ತಯಾರಿಕರಿಂದ ಡೀಲರ್ತನಕ ತಡೆರಹಿತ ಕ್ರೆಡಿಟ್ ಹರಿವಿಗೆ ಇದು ಅನುವು ಮಾಡಿಕೊಡುತ್ತದೆ ಮತ್ತು ಕ್ಯಾಸ್ಕೋಡಿಂಗ್ ಪರಿಣಾಮವನ್ನು ತೆಗೆದುಹಾಕುತ್ತದೆ.

Are you GST ready yet?

Get ready for GST with Tally.ERP 9 Release 6

57,794 total views, 24 views today