(English) Language

  • English
  • Hindi
  • Marathi
  • Kannada
  • Telugu
  • Tamil
  • Gujarati

ಜಿಎಸ್ಟಿ( ಸರಕು ಮತ್ತು ಸೇವಾ ತೆರಿಗೆ) ಎಂಬ ಏಕೈಕ ಏಕರೂಪದ ತೆರಿಗೆಯು ಸಂಕೀರ್ಣ ತೆರಿಗೆ ವ್ಯವಸ್ಥೆಯನ್ನು ತೆಗೆದುಹಾಕಿ `ಒಂದು ರಾಷ್ಟ್ರ- ಒಂದು ತೆರಿಗೆ ವ್ಯವಸ್ಥೆ’ಯ ಮೂಲಕ ಐಕ್ಯ ಭಾರತವನ್ನು ರೂಪುಗೊಳಿಸುವ ಗುರಿಯನ್ನು ಹೊಂದಿದೆ. ಇದು ಭಾರತದ ಸ್ವಾತಂತ್ರ್ಯ ನಂತರ ದೊಡ್ಡ ಪ್ರಮಾಣದ ತೆರಿಗೆ ಸುಧಾರಣೆಯಾಗಿದೆ.

ಇದರ ಅರ್ಥವೇನು? ಇದರ ಪರಿಣಾಮಗಳು ಯಾವುವು? ಜಿಎಸ್ಟಿ ಮತ್ತು ಈಗಿನ ತೆರಿಗೆ ವಿಧಾನದಲ್ಲಿ ಇರುವ ವ್ಯತ್ಯಾಸಗಳು ಯಾವುವು?

ಜಿಎಸ್ಟಿಯು ವ್ಯಾಪಾರಕ್ಕೆ ಭೌಗೋಳಿಕ ತಡೆಗೋಡೆಯನ್ನು ತೆಗೆದುಹಾಕುವ ಮತ್ತು ಪೂರ್ತಿ ರಾಷ್ಟ್ರವನ್ನು `ಒಂದೇ ಸಾಮಾನ್ಯ ಮಾರುಕಟ್ಟೆ ಸ್ಥಳ’ ಎಂದು ಪರಿವರ್ತಿಸುವ ಉದ್ದೇಶವನ್ನು ಹೊಂದಿದೆ.

ಜಿಎಸ್ಟಿಯ ಮೂಲಭೂತ ಲಕ್ಷಣಗಳನ್ನು ನಾವು ಅರ್ಥಮಾಡಿಕೊಳ್ಳೋಣ. ಇದು ಒಂದು ಉಭಯ ಪರಿಕಲ್ಪನೆಯ ತೆರಿಗೆ ವ್ಯವಸ್ಥೆ. ಈ ವ್ಯವಸ್ಥೆಯಡಿ ವ್ಯಾಪಾರದ ಸ್ವರೂಪವನ್ನು ಆಧರಿಸಿ (ರಾಜ್ಯದೊಳಗೆ ಅಥವಾ ಅಂತರ್ ರಾಜ್ಯದೊಳಗೆ) ತೆರಿಗೆಯ ಆಡಳಿತ, ನಿರ್ವಹಣೆ ಮತ್ತು ಹಂಚಿಕೆಯು ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ನಡೆಯುತ್ತದೆ.

ಜಿಎಸ್ಟಿ ತೆರಿಗೆಯ ಅಂಶಗಳು  

TallyBlog_Kannada_New

 

ಜಿಎಸ್ಟಿಯ ತೆರಿಗೆಯ ಅಂಶಗಳನ್ನು ನಾವು ಈಗ ತಿಳಿದುಕೊಂಡೆವು. ಪ್ರಸ್ತುತ ಪದ್ಧತಿಯಲ್ಲಿ ಅಸ್ತಿತ್ವದಲ್ಲಿರುವ ತೆರಿಗೆಯ ಕುರಿತು ನೀವು ತಿಳಿದುಕೊಳ್ಳುವುದು ಸಹ ಇಷ್ಟೇ ಅಗತ್ಯವಾಗಿದೆ. ಇದು ಜಿಎಸ್ಟಿಯಡಿ ಹೇಗೆ ಒಂದಾಗಿದೆ ಎನ್ನುವುದನ್ನೂ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಈಗಿನ ಪರೋಕ್ಷ ತೆರಿಗೆ ರಚನೆ

Tally Blog

 

ಜಿಎಸ್ಟಿಯಡಿ ಒಂದಾಗಿರುವ ತೆರಿಗೆಗಳು

TallyBlog_Kannada_Img2New

Are you GST ready yet?

Get ready for GST with Tally.ERP 9 Release 6

113,315 total views, 75 views today