Language

  • English
  • Hindi
  • Marathi
  • Kannada
  • Telugu
  • Tamil
  • Gujarati

ಪ್ರತಿ ನೋಂದಾಯಿತ ತೆರಿಗೆದಾರರು GSTR-1ರ (ಜಿಎಸ್.ಟಿ. ರಿಟರ್ನ್ಸ್-1) ಮೂಲಕ ಹಿಂದಿನ ತಿಂಗಳಿನ ಹೊರಹೋಗುವ ಪೂರೈಕೆ ವಿವರಗಳನ್ನು ಪ್ರತಿ ತಿಂಗಳ 10ನೇ ತಾರೀಕಿನಂದು ಸಲ್ಲಿಸಬೇಕು. 11ನೇ ತಾರೀಕಿನಂದು ಒಳಬರುವ ಪೂರೈಕೆಯ ಗೋಚರತೆಯನ್ನು ಅಟೋ ಪಾಪ್ಯೂಲೇಟೆಡ್ GSTR-2Aರಲ್ಲಿ ಸ್ವೀಕರಿಸುವವರಿಗೆ ಲಭ್ಯಗೊಳಿಸಲಾಗುತ್ತದೆ. 11 ರಿಂದ 15ನೇ ತಾರಿಕಿನವರೆಗಿನ ಅವಧಿಯಲ್ಲಿ ಯಾವುದೇ ತಿದ್ದುಪಡಿಗಳನ್ನು (ಸೇರ್ಪಡೆ, ಮಾರ್ಪಾಡು ಮತ್ತು ಅಳಿಸಿ ಹಾಕುವಿಕೆ) ನಮೂನೆ GSTR-2Aಯಲ್ಲಿ ಅನುಮತಿಸಲಾಗುತ್ತದೆ ಮತ್ತು ನಂತರದ ತಿಂಗಳ 15ನೇ ತಾರೀಕಿನ ಒಳಗೆ ನಮೂನೆ GSTR-2 ಮೂಲಕ ಸಲ್ಲಿಸಬೇಕಾಗುತ್ತದೆ. ಸ್ವೀಕರಿಸುವವರು ನಮೂನೆ GSTR-2 ರಲ್ಲಿ ಮಾಡಿದ ತಿದ್ದುಪಡಿಗಳನ್ನು (ಸೇರ್ಪಡೆ, ಮಾರ್ಪಾಡು ಮತ್ತು ಅಳಿಸಿ ಹಾಕುವಿಕೆ) ನಮೂನೆ GSTR-1Aಯ ಮೂಲಕ ಪೂರೈಕೆದಾರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಸ್ವೀಕರಿಸುವವರು ಮಾಡಿದ ಹೊಂದಾಣಿಕೆಗಳನ್ನು ಪೂರೈಕೆದಾರು ಸ್ವೀಕರಿಸಬೇಕಾಗುತ್ತದೆ ಅಥವಾ ತಿರಸ್ಕರಿಸಬೇಕಾಗುತ್ತದೆ. ಪೂರೈಕೆದಾರರು ತಿದ್ದುಪಡಿಯನ್ನು ಸ್ವೀಕರಿಸುವ ಪ್ರಮಾಣದ ಪ್ರಕಾರ ನಮೂನೆ GSTR-1 ಅನ್ನು ತಿದ್ದುಪಡಿ ಮಾಡಲಾಗುತ್ತದೆ.

20ನೇ ತಾರೀಕಿನಂದು ಅಟೋ ಪಾಪ್ಯೂಲೇಟೆಡ್ ರಿಟರ್ನ್ GSTR-3 ಪಾವತಿಯೊಂದಿಗೆ ಸಲ್ಲಿಕೆಗೆ ಲಭ್ಯವಾಗುತ್ತದೆ. ಮಾಸಿಕ ರಿಟರ್ನ್ ನಮೂನೆ GSTR-3 ಸಲ್ಲಿಸುವ ಗಡುವಿನ ದಿನಾಂಕದ ನಂತರ, ಪೂರೈಕೆದಾರು ಒದಗಿಸುವ ಹೊರಹೋಗುವ ಪೂರೈಕೆಗಳೊಂದಿಗೆ ಒಳಬರುವ ಪೂರೈಕೆಗಳ ದಾಖಲೆಗಳನ್ನು ಹೋಲಿಸಿ ನೋಡಲಾಗುತ್ತದೆ, ನಂತರ ಪ್ರದಾನ ತೆರಿಗೆ ಕ್ರೆಡಿಟ್‍ನ ಅಂತಿಮ ಸ್ವೀಕೃತಿಯನ್ನು ನಮೂನೆ GST MIS-1ರ ಮೂಲಕ ಸಂವಹನ ಮಾಡಲಾಗುತ್ತದೆ.

ಅಲ್ಲದೆ, ಹೆಚ್ಚುವರಿ ಹಣದ ಬೇಡಿಕೆ ಅಥವ ದ್ವಗುಣೀಕರಣ ಹಣದ ಬೇಡಿಕೆಗÀಳಿಂದಾದ ಪ್ರದಾನ ತೆರಿಗೆ ಕ್ರೆಡಿಟ್‍ನ ಹೊಂದಾಣಿಕೆಯಾಗದ ಬೇಡಿಕೆಗಳನ್ನು ನಮೂನೆ GST MIS-1ರ ಮೂಲಕ ಸಂವಹನ ಮಾಡಲಾಗುತ್ತದೆ. ಅಂಗೀಕರಿಸಲಾಗದ ವ್ಯತ್ಯಾಸಗಳನ್ನು ಬಡ್ಡಿಯೊಂದಿಗೆ ಉತ್ಪಾದನಾ ತೆರಿಗೆಯ ಹೊಣೆಗಾರಿಕೆ ಎಂದು ಸೇರಿಸಲಾಗುತ್ತದೆ. ಆದಾಗ್ಯೂ, ನಿಗದಿತ ಸಮಯದಲ್ಲಿ ಇದನ್ನು ಅಂಗೀಕರಿಸಿದರೆ ಸ್ವೀಕರಿಸುವವರು ಈ ಉತ್ಪಾದನಾ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಅರ್ಹತೆಯನ್ನು ಪಡೆಯುತ್ತಾರೆ.

ಜಿ.ಎಸ್.ಟಿ. ರಿಟರ್ನ್ ಸಲ್ಲಿಸುವ ಪ್ರಕ್ರಿಯೆಯನ್ನು ಒಂದು ಉದಾಹರಣೆಯ ಮೂಲಕ ಅರ್ಥ ಮಾಡಿಕೊಳ್ಳಲಾಗುತ್ತದೆ.

How to file your GST Returns_Kannada

 

Are you GST ready yet?

Get ready for GST with Tally.ERP 9 Release 6

259,074 total views, 9 views today