ನವೆಂಬರ್ 26, 2016ರಂದು ಪ್ರಕಟಗೊಂಡ ಪರಿಷ್ಕೃತ ಜಿಎಸ್ಟಿ ಕರಡು ಮಸೂದೆಯಲ್ಲಿಜಿಎಸ್ಟಿ ಪರಿವರ್ತನೆ ನಿಬಂಧನೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಪರಿಷ್ಕೃತ ಕರಡು ಮಸೂದೆಯಲ್ಲಿ ಮಾಡಲಾದ ಬದಲಾವಣೆಗಳಿಗೆ ತಕ್ಕಂತೆ ಈ ಪೋಸ್ಟ್ ಪರಿಷ್ಕರಿಸಲಾಗಿದೆ.

 

ಜಿಎಸ್ಟಿಗೆ ಪರಿವರ್ತನೆ ಮಾಡುವ ದಿನಾಂಕದಿಂದ, ವ್ಯವಹಾರಗಳು ಕೆಳಗಿನ ಯಾವುದೇ ವಿಭಾಗಗಳಡಿಗೆ ಬರುತ್ತವೆ:

 1. ಪ್ರಸ್ತುತ ಕಾನೂನಿನಡಿ ನೋಂದಾಯಿಸಲು ಸಾಧ್ಯವಿಲ್ಲದ ವ್ಯವಹಾರಗಳು, ಆದರೆ, ಜಿಎಸ್ಟಿಯಡಿ ನೋಂದಾಯಿಸಲು ಸಾಧ್ಯವಿರುವವು.
 2. ತೆರಿಗೆ ವಿನಾಯಿತಿ ಇರುವ ಸರಕು ಮತ್ತು ಸೇವೆಗಳ ತಯಾರಿಕೆ ಅಥವಾ ಮಾರಾಟದಲ್ಲಿ ನಿರತವಾಗಿರುವ ವ್ಯವಹಾರಗಳು.
 3. ಮೊದಲ ಹಂತದ ವಿತರಕರು ಅಥವಾ ಎರಡನೇ ಹಂತದ ಒಬ್ಬರು ವಿತರಕರು ಅಥವಾ ನೋಂದಾಯಿಸಲ್ಪಟ್ಟ ಒಬ್ಬರು ಆಮದುದಾರರು.

ಪ್ರಸ್ತುತ ಕಾನೂನಿನಡಿ ನೋಂದಾಯಿಸಲು ಸಾಧ್ಯವಿಲ್ಲದ ವ್ಯವಹಾರಗಳು, ಆದರೆ, ಜಿಎಸ್ಟಿಯಡಿ ನೋಂದಾಯಿಸಲು ಸಾಧ್ಯವಿರುವವು.

ಕೇಂದ್ರ ಅಬಕಾರಿ ಸುಂಕ ಕಾಯಿದೆ ಮತ್ತು ನಿಯಮಗಳನ್ವಯ, ಒಟ್ಟು ತೆರವು ಮೌಲ್ಯ 1.5 ಕೋಟಿ ರೂ. ಇದ್ದರೆ ತಯಾರಿಕಾ ಘಟಕವೊಂದು ನೋಂದಣಿ ಮಾಡಿಸಬೇಕಾಗುತ್ತದೆ ಮತ್ತು ತೆರಿಗೆ ನೀಡುವ ಅಗತ್ಯವಿರುತ್ತದೆ. ಹೀಗೆಯೇ, ವ್ಯಾಟ್ ನಡಿ ನೀವು ನಿಮ್ಮ ವಹಿವಾಟು ನಡೆಸಿರುವ ಆರ್ಥಿಕ ವರ್ಷದಲ್ಲಿ ನಿಗದಿತ ಮಿತಿಯನ್ನು ದಾಟಿದರೆ ನೀವು ನೋಂದಣಿ ಮಾಡಲು ಬಾಧ್ಯಸ್ಥರಾಗಿರುತ್ತೀರಿ. ಆರಂಭಿಕ ಮಿತಿ ಅಥವಾ ನಿಗದಿತ ಮಿತಿಯು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.

ನಿಮ್ಮ ವಹಿವಾಟಿನ ಮೌಲ್ಯದ ಮಿತಿಯು ಗೊತ್ತುಪಡಿಸಿರುವ ಮಿತಿಯನ್ನು ಮೀರದೆ ಇರುವುದರಿಂದ ಈಗ ನಿಮಗೆ ನೋಂದಣಿ ಮಾಡಲು ಅರ್ಹತೆ ಲಭಿಸದೆ ಇರಬಹುದು. ಆದರೂ, ನೀವು ಜಿಎಸ್ಟಿಯಡಿ ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ. ಇದರ ಪ್ರಕಾರ ವಿಶೇಷ ವಿಭಾಗೀಯ ರಾಜ್ಯಗಳಿಗೆ (ಅರುಣಾಚಲ ಪ್ರದೇಶ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಮೇಘಾಲಯ, ಮಿಜೊರಾಮ್, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಹಿಮಾಚಲ ಪ್ರದೇಶ ಮತ್ತು ಉತ್ತರ ಖಂಡ) ಮಿತಿಯು 10 ಲಕ್ಷ ರೂಪಾಯಿ ಮತ್ತು ದೇಶದ ಉಳಿದ ರಾಜ್ಯಗಳಿಗೆ 20 ಲಕ್ಷ ರೂ. ಮಿತಿಯಲ್ಲಿ ಜಿಎಸ್ಟಿಯಡಿ ನೋಂದಾಯಿಸಲು ಅವಕಾಶ ನೀಡಲಾಗಿದೆ.

ವಿನಾಯಿತಿ ಇರುವ ಸರಕು ಮತ್ತು ಸೇವೆಗಳ ತಯಾರಿಕೆ ಅಥವಾ ಮಾರಾಟದಲ್ಲಿ ನಿರತವಾಗಿರುವ ವ್ಯವಹಾರಗಳು.

ನೀವು ವಿನಾಯಿತಿ ಇರುವ ಸರಕುಗಳ ತಯಾರಿಕೆ, ಮಾರಾಟದಲ್ಲಿ ತೊಡಗಿಸಿಕೊಂಡಿದ್ದರೆ ಅಥವಾ ವಿನಾಯಿತಿ ಇರುವ ಸೇವೆಗಳನ್ನು ಒದಗಿಸಿದರೆ, ಜಿಎಸ್ಟಿ ನಂತರ ಇವುಗಳಿಗೂ ತೆರಿಗೆ ಪಾವತಿಸಬೇಕಾಗುತ್ತದೆ.

ಮೊದಲ ಹಂತದ ವಿತರಕರು ಅಥವಾ ಎರಡನೇ ಹಂತದ ಒಬ್ಬರು ವಿತರಕರು ಅಥವಾ ನೋಂದಾಯಿಸಲ್ಪಟ್ಟ ಒಬ್ಬರು ಆಮದುದಾರರು.

ನೀವು ವಿತರಕರಾಗಿದ್ದುಕೊಂಡು ತೆರಿಗೆ ವಿಧಿಸಬಲ್ಲ ಸರಕುಗಳ ವ್ಯಾಪಾರದಲ್ಲಿ ತೊಡಗಿದ್ದರೆ ಕೇಂದ್ರ ಅಬಕಾರಿ ಸುಂಕದಡಿ ನೋಂದಾಯಿಸಿಕೊಳ್ಳಲು ಅರ್ಹರಾಗಿರುತ್ತೀರಿ. ಈಗ, ನೀವು ಅಬಕಾರಿ ಸುಂಕವಾಗಿ ಪಾವತಿಸಿರುವುದು ಕ್ರೆಡಿಟ್ ಆಗಿ ದೊರಕುವುದಿಲ್ಲ, ಮೊದಲ ಹಂತದ ಅಥವಾ ಎರಡನೇ ಹಂತದ ವಿತರಕರು ಖರೀದಿಸಿರುವ ಉತ್ಪನ್ನವೊಂದರ ದರಕ್ಕೆ ಸೇರಿಸುತ್ತಾರೆ. ಎಲ್ಲಾದರೂ ಈ ಉತ್ಪನ್ನವನ್ನು ತಯಾರಕರಿಗೆ ಮಾರಾಟ ಮಾಡಿದರೆ, ಅಬಕಾರಿ ಸುಂಕವು ಪಾಸ್ ಆಗುತ್ತದೆ, ಇದನ್ನು ಖರೀದಿಸಿದ ತಯಾರಕರು ಸೆನ್ ವ್ಯಾಟ್ ಕ್ರೆಡಿಟ್ ಆಗಿ ಕ್ಲೇಮ್ ಮಾಡಬಹುದಾಗಿದೆ.

ಅದೇ ರೀತಿಯಾಗಿ, ನೀವು ಸರಕುಗಳನ್ನು ಆಮದು ಮಾಡಿಕೊಳ್ಳುವ ಆಮದುದಾರರಾಗಿದ್ದರೆ ಕೇಂದ್ರ ಅಬಕಾರಿ ಸುಂಕದಡಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಮತ್ತು ಲಭ್ಯವಿರುವ ಅಬಕಾರಿ ಸುಂಕವನ್ನು ನೀಡಬೇಕಾಗುತ್ತದೆ.

ಮೇಲೆ ತಿಳಿಸಿರುವ ಸನ್ನಿವೇಶದಿಂದ ಪ್ರತಿಯೊಂದು ವ್ಯಾಪಾರಸ್ಥರಿಗೂ “ ಜಿಎಸ್ಟಿ ಅನುಷ್ಠಾನಕ್ಕೆ ಬಂದ ಹಿಂದಿನ ದಿನ ನಾನು ಹೊಂದಿರುವ ದಾಸ್ತಾನಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಬಹುದೇ? ‘ ಎಂಬ ಒಂದು ಸಾಮಾನ್ಯ ಪ್ರಶ್ನೆ ಮೂಡಬಹುದು.

ಹೌದು, ನೀವು ಇನ್ಪುಟ್ ಗಳು(ಕಚ್ಚಾ ಸಾಮಾಗ್ರಿಗಳು), ಅರೆ ಮುಕ್ತಾಯಗೊಂಡಿರುವ ಸರಕುಗಳು ಮತ್ತು ಪೂರ್ಣಗೊಂಡಿರುವ ಸರಕುಗಳ ಕ್ಲೋಸಿಂಗ್ ಸ್ಟಾಕ್ ಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಸೆನ್ ವ್ಯಾಟ್, ಇನ್ ಪುಟ್ ವ್ಯಾಟ್, ಪ್ರವೇಶ ತೆರಿಗೆ ಮತ್ತು ಸೇವಾ ತೆರಿಗೆ) ಪಡೆಯಲು ನಿಮಗೆ ಅವಕಾಶ ನೀಡಲಾಗುತ್ತದೆ. ಆದಗ್ಯೂ, ನಿಮ್ಮ ಮುಕ್ತಾಯಗೊಂಡ ಸ್ಟಾಕ್ ಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಲಭಿಸುವಂತೆ ಅರ್ಹತೆ ಪಡೆಯಲು ನೀವು ಕೆಲವೊಂದು ಷರತ್ತುಗಳನ್ನು ಪೂರೈಸಬೇಕಾಗುತ್ತದೆ.

ನಿಮ್ಮ ಕ್ಲೋಸಿಂಗ್ ಸ್ಟಾಕ್ ಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಲಭಿಸುವಂತೆ ಆಗಲು ಇರುವ ಅರ್ಹತಾ ನಿಯಮಗಳು

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ನಿಮ್ಮ ಕ್ಲೋಸಿಂಗ್ ಸ್ಟಾಕ್ ಹೀಗಿರಬೇಕು,

  • ಕ್ಲೋಸಿಂಗ್ ಸ್ಟಾಕ್ ಎನ್ನುವುದು ಕಚ್ಚಾ ವಸ್ತುಗಳ ರೂಪದಲ್ಲಿರಬೇಕು, ಅರ್ಧ ಪೂರ್ಣಗೊಂಡಿರುವ ಸರಕುಗಳಾಗಿರಬೇಕು ಅಥವಾ ಪೂರ್ಣಗೊಂಡಿರುವ ಸರಕುಗಳಾಗಿರಬೇಕು ಮತ್ತು ಕಡ್ಡಾಯವಾಗಿ ತೆರಿಗೆ ವಿಧಿಸಲ್ಪಡುವ ಪೂರೈಕೆಗೆ ಬಳಕೆಯಾಗಬೇಕು.
   1
  • o ಇಂತಹ ಪ್ರಯೋಜನಗಳು, ದರ ಕಡಿತದ ಹಾದಿಯ ಮೂಲಕ ಸ್ವೀಕೃತಿದಾರರಿಗೆ ಪಾಸ್ ಆಗುತ್ತದೆ. ಈಗಿನ ತೆರಿಗೆ ಪದ್ಧತಿಯಲ್ಲಿ ಸುಂಕ/ತೆರಿಗೆಯು ಉತ್ಪನ್ನದ ವೆಚ್ಚವಾಗಿ ಹಾಕುವುದರಿಂದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ಅವಕಾಶವಿಲ್ಲ. ಜಿಎಸ್ಟಿಗೆ ವರ್ಗಾವಣೆಗೊಳ್ಳುವಾಗ ಐಟಿಸಿಗೆ ಅನುಮತಿ ನೀಡಲಾಗುತ್ತದೆ. ಇದರ ಸಹಜ ಪರಿಣಾಮವಾಗಿ ಮೂಲ ವೆಚ್ಚದಲ್ಲಿ ಕಡಿತವಾಗುತ್ತದೆ ಮತ್ತು ಗ್ರಾಹಕರಿಗೆ ಅಂತಿಮ ದರವು ಕಡಿಮೆಯಾಗುತ್ತದೆ.
   Price reduction due to gst
  • ನೀವು ಜಿಎಸ್ಟಿಯಡಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ಅರ್ಹರಾಗಿರುತ್ತೀರಿ. ನೀವು ನಿಯಮಿತವಾಗಿ ತೆರಿಗೆ ಪಾವತಿದಾರರಾಗಿದ್ದರೆ ಮಾತ್ರ ನೀವು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ಅರ್ಹರಾಗುತ್ತೀರಿ. ತೆರಿಗೆ ಪಾವತಿಸುವ ವ್ಯಕ್ತಿಯು ಜಿಎಸ್ಟಿಯಡಿ ಸಂಯೋಜಿತ ಲೆವಿಯನ್ನು ಆಯ್ಕೆ ಮಾಡಿಕೊಂಡಿದ್ದಲ್ಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಕ್ಲೇಮ್ ಮಾಡಲು ಅವಕಾಶ ಇಲ್ಲ.
   2
  • ಇನ್ಪುಟ್ ನ ಮುಕ್ತಾಯಗೊಂಡ ದಾಸ್ತಾನಿನ (ಅರೆ ಪೂರ್ಣಗೊಂಡಿರುವ ಸರಕು ಮತ್ತು ಪೂರ್ಣಗೊಂಡಿರುವ ಸರಕುಗಳು ಸೇರಿದಂತೆ) ಕುರಿತು ನೀವು ಇನ್ವಾಯ್ಸ್ ಅಥವಾ ಸುಂಕ/ತೆರಿಗೆ ಪಾವತಿಸಿರುವ ದಾಖಲೆಗಳನ್ನು ನೀವು ಹೊಂದಿರಬೇಕು.
   3
  • ಜಿಎಸ್ಟಿಗೆ ವರ್ಗಾವಣೆಗೊಂಡ ದಿನಾಂಕದಿಂದ 12 ತಿಂಗಳ ಹಿಂದಿನ ಇನ್ವಾಯ್ಸ್ ಗಳು ಅಥವಾ ಯಾವುದೇ ಇತರೆ ಸುಂಕ/ತೆರಿಗೆ ಪಾವತಿಸಿರುವ ದಾಖಲೆಗಳು.
   4
  • ಈ ಕಾನೂನಿನ ಅನ್ವಯ ಯಾವುದೇ ಇಳಿಕೆ ಮಾಡಲು ಸೇವೆಯ ಪೂರೈಕೆದಾರರಿಗೆ ಅರ್ಹತೆ ಇರುವುದಿಲ್ಲ.

 

ಇದನ್ನು ಒಂದು ಉದಾಹರಣೆಯ ಮೂಲಕ ಅರ್ಥ ಮಾಡಿಕೊಳ್ಳೋಣ.

ಕಾರುಗಳು ಮತ್ತು ಕಾರುಗಳ ಬಿಡಿಭಾಗಗಳ ಎಕ್ಸೈಸ್ ಡೀಲರ್ ಆಗಿ ರವೀಂದ್ರ ಆಟೋಮೊಬೈಲ್ಸ್ ನೋಂದಾಯಿಸಿದೆ. ಮಾರ್ಚ್ 1, 2017ಕ್ಕೆ ರವೀಂದ್ರ ಆಟೋಮೊಬೈಲ್ಸ್ ಖರೀದಿಸಿರುವ ಬಿಡಿಭಾಗಗಳು, ಮತ್ತು ವ್ಯವಹಾರದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:

ದಿನಾಂಕಸ್ಟಾಕ್ ಐಟಂಕ್ವಾಲಿಟಿದರ/ಕ್ವಾಲಿಟಿಒಟ್ಟು ಮೌಲ್ಯವ್ಯಾಟ್ @ 14.5%ಅಬಕಾರಿ ಸುಂಕ 12.5%
01-03-2017ಬಿಡಿಭಾಗಗಳು50 ಸಂಖ್ಯೆ1500 / ಸಂಖ್ಯೆ75,00010,8759,375

 

ಮಾರ್ಚ್ 31, 2017ಕ್ಕೆ ರವೀಂದ್ರ ಆಟೋಮೊಬೈಲ್ಸ್ ನಲ್ಲಿ ಕ್ಲೋಸಿಂಗ್ ಸ್ಟಾಕ್ ಅಥವಾ ಮುಕ್ತಾಯದ ದಾಸ್ತಾನು 30 ಸಂಖ್ಯೆಯಾಗಿದೆ.

     • ರವೀಂದ್ರ ಆಟೋಮೊಬೈಲ್ಸ್, ಪ್ರಸಕ್ತ ತೆರಿಗೆ ವಿಧಾನದ ಅನ್ವಯ, 10,875 ರೂಪಾಯಿಯನ್ನು ಕ್ರೆಡಿಟ್ ಆಗಿ ಇನ್ಪುಟ್ ವ್ಯಾಟ್ ಆಗಿ ಪಡೆಯಬಹುದಾಗಿದೆ ಮತ್ತು ಈ ಮೊತ್ತವನ್ನು ಔಟ್ ಪುಟ್ ವ್ಯಾಟ್ ಗೆ ಪ್ರತಿಯಾಗಿ ಸೆಟ್ ಮಾಡಬಹುದಾಗಿದೆ. ಆದರೂ, ಅಬಕಾರಿ ಸುಂಕವನ್ನು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಆಗಿ ಪಡೆಯಲು ಅವಕಾಶವಿರಲಿಲ್ಲ. ಆದಗ್ಯೂ, ಇದನ್ನು ಉತ್ಪನ್ನದ ವೆಚ್ಚಕ್ಕೆ ಹಾಕುವ ಅವಕಾಶವಿದೆ. ಈಗಿನಿಂದ, ಜಿಎಸ್ಟಿಗೆ ವರ್ಗಾವಣೆಗೊಂಡ ನಂತರ, ರವೀಂದ್ರ ಆಟೋಮೊಬೈಲ್ಸ್, ತಾನು ಹೊಂದಿರುವ ಕ್ಲೋಸಿಂಗ್ ಸ್ಟಾಕ್ ಗೆ ಅಬಕಾರಿ ಸುಂಕದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಅವಕಾಶವಿದೆ.

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ಅನುಮತಿ ಪಡೆಯಬಹುದಾದ, ಕ್ಲೋಸಿಂಗ್ ಸ್ಟಾಕ್ ನ ಅಬಕಾರಿ ಸುಂಕವನ್ನು ಮೇಲಿನ ಉದಾಹರಣೆಯ ಜೊತೆ ಲೆಕ್ಕಮಾಡೋಣ ಬನ್ನಿ.

31-3-2017ಕ್ಕೆ ಅನ್ವಯವಾಗುವಂತೆ ಕ್ಲೋಸಿಂಗ್ ಸ್ಟಾಕ್30 ಸಂಖ್ಯೆಗಳು
ಪ್ರತಿ ಯೂನಿಟ್ ಗೆ ಸುಂಕ(ಒಟ್ಟು ಅಬಕಾರಿ ಸುಂಕ 9,375 / ಒಟ್ಟು ಪ್ರಮಾಣ 50 )187.5 / ಯೂನಿಟ್
ಮುಕ್ತಾಯಗೊಂಡ ದಾಸ್ತಾನಿಗೆ ಬಾಕಿ ಸುಂಕ( ಪ್ರತಿ ಯೂನಿಟ್ ಗೆ 185.5* ಕ್ಲೋಸಿಂಗ್ ಸ್ಟಾಕ್ 30 ಸಂಖ್ಯೆಗಳು) 5,625

 

ಈಗ, ಮುಕ್ತಾಯದ ದಾಸ್ತಾನಿಗೆ 5,625 ರೂಪಾಯಿ ಅಬಕಾರಿ ಸುಂಕವನ್ನು ಪಡೆಯಬಹುದು ಎಂದು ರವೀಂದ್ರ ಆಟೋಮೊಬೈಲ್ಸ್ ತಿಳಿದುಕೊಳ್ಳಬಹುದು. ಆದರೆ, ಇದನ್ನು ಪಡೆಯಲು ಈ ಕಂಪನಿಗೆ ಅರ್ಹತೆ ಇದೆಯೇ?

ಇದನ್ನು ಪಡೆಯಲು ರವೀಂದ್ರ ಆಟೋಮೊಬೈಲ್ಸ್ ಈ ಕೆಳಗಿನ ಷರತ್ತುಗಳನ್ನು ಪೂರೈಸಬೇಕು:

 1. ಮುಕ್ತಾಯದ ದಾಸ್ತಾನನ್ನು ತೆರಿಗೆ ವಿಧಿಸಲು ಅರ್ಹತೆ ಇರುವ ಪೂರೈಕೆಗೆ ಬಳಸಬೇಕು ಅಥವಾ ಬಳಸಲು ಉದ್ದೇಶಿಸಬೇಕು.
  ಹೌದು, ಮುಕ್ತಾಯದ ದಾಸ್ತಾನು ಒಟ್ಟು 30 ಸಂಖ್ಯೆಗಳನ್ನು ತೆರಿಗೆ ವಿಧಿಸಲ್ಪಡುವ ಪೂರೈಕೆಗೆ ಬಳಸಬೇಕು.
 2. ಇಂತಹ ಪಾವತಿಯ ಲಾಭವನ್ನು ಕಡ್ಡಾಯವಾಗಿ ದರವನ್ನು ಕಡಿಮೆ ಮಾಡುವ ಉದ್ದೇಶದಿಂದ ಸ್ವೀಕೃತಿದಾರರಿಗೆ ಪಾಸ್ ಮಾಡಬೇಕು.
  ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಲಭ್ಯವಾಗತೊಡಗಿದ ನಂತರ ಇದನ್ನು ರವೀಂದ್ರ ಆಟೋಮೊಬೈಲ್ಸ್ ಉತ್ಪನ್ನದ ವೆಚ್ಚವಾಗಿ ಹಾಕುವಂತೆ ಇಲ್ಲ. ಇದರ ಪರಿಣಾಮವಾಗಿ ಮೂಲ ವೆಚ್ಚ ಕಡಿಮೆಯಾಗಲಿದೆ ಮತ್ತು ಆನಂತರದಲ್ಲಿ ದರದಲ್ಲಿ ಇಳಿಕೆಯಾಗಲಿದೆ.
 3. ಜಿಎಸ್ಟಿಯಡಿ ಆ ಡೀಲರ್ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ಅರ್ಹತೆ ಪಡೆಯುತ್ತಾರೆ.
 4. ಮುಕ್ತಾಯದ ದಾಸ್ತಾನು ಸರಕುಗಳ (ಅರೆ ಪೂರ್ಣಗೊಂಡ ಸರಕುಗಳು ಮತ್ತು ಪೂರ್ಣಗೊಂಡ ಸರಕುಗಳು ಸೇರಿದಂತೆ) ಇನ್ವಾಯ್ಸ್ ಅಥವಾ ಇತರೆ ಯಾವುದೇ ಗೊತ್ತುಪಡಿಸಿರುವ ಸುಂಕ/ತೆರಿಗೆ ಪಾವತಿಸಿರುವ ದಾಖಲೆಗಳನ್ನು ಹೊಂದಿರಬೇಕು.
  ರವೀಂದ್ರ ಆಟೋಮೊಬೈಲ್ಸ್, ಮುಕ್ತಾಯದ ದಾಸ್ತಾನು 30 ಸಂಖ್ಯೆಗಳ ಕುರಿತಾಗಿ ತನ್ನ ಪೂರೈಕೆದಾರರಿಂದ(ತಯಾರಿಕರಿಂದ) ಪಡೆದಿರುವ ರೂಲ್ 11 ಇನ್ವಾಯ್ಸ್ ಅನ್ನು ಹೊಂದಿದೆ.
 5. ಜಿಎಸ್ಟಿಗೆ ವರ್ಗಾವಣೆಗೊಂಡ ದಿನದಿಂದ 12 ತಿಂಗಳೊಳಗಿನ ದಿನಾಂಕಗಳ ಇನ್ವಾಯ್ಸ್ ಅಥವಾ ಇತರೆ ಯಾವುದೇ ಗೊತ್ತುಪಡಿಸಿದ ಸುಂಕ/ತೆರಿಗೆ ಪಾವತಿಸಿದ ದಾಖಲೆಗಳನ್ನು ಹೊಂದಿರಬೇಕು.
  30 ಸಂಖ್ಯೆಯ ಮುಕ್ತಾಯದ ದಾಸ್ತಾನು ಅನ್ನು 1-3-2017ರಂದು ಖರೀದಿಸಲಾಗಿದ್ದು, ಜಿಎಸ್ಟಿ ಅನುಷ್ಠಾನಕ್ಕೆ ಬರುವ 1-4-2017 ದಿನಾಂಕದಿಂದ ಇದು 12 ತಿಂಗಳ ಒಳಗಿದೆ.

ರವೀಂದ್ರ ಆಟೋಮೊಬೈಲ್ಸ್ ಮೇಲಿನ ಎಲ್ಲಾ ಷರತ್ತುಗಳನ್ನು ಪೂರೈಸಿದೆ ಮತ್ತು ಸಿಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ 5,625 ರೂ. ಅನ್ನು ಅಬಕಾರಿ ಸುಂಕವಾಗಿ ಹೊಂದಲು ಅರ್ಹತೆ ಪಡೆದಿದೆ.

 

Are you GST ready yet?

Get ready for GST with Tally.ERP 9 Release 6

287,736 total views, 30 views today