ನಮ್ಮ ಜಿಡಿಪಿಗೆ ತಯಾರಿಕಾ ವಲಯವು ಎರಡನೇ ಬೃಹತ್ ಕೊಡುಗೆ ನೀಡುತ್ತಿದೆ. ಭಾರತದಲ್ಲಿ ತಯಾರಿಸಿ, ಭಾರತದಲ್ಲಿ ಹೂಡಿಕೆ ಮಾಡಿ, ಸ್ಟಾರ್ಟ್ಅಪ್ ಮತ್ತು ರಾಷ್ಟ್ರೀಯ ಇ-ಆಡಳಿತ ಯೋಜನೆಯಡಿಯಲ್ಲಿ ಇ-ಬಿಜ್ ಮಿಷನ್ ಮೋಡ್ ಪ್ರಾಜೆಕ್ಟ್ ಇತ್ಯಾದಿ ಸರಕಾರ ಆರಂಭಿಸಿರುವ ಹೊಸ ಕಾರ್ಯಕ್ರಮಗಳು ಹೂಡಿಕೆಗೆ ಅನುಕೂಲ ಮಾಡಿಕೊಡುತ್ತಿದೆ ಮತ್ತು ದೇಶದಲ್ಲಿ ವ್ಯವಹಾರ ನಡೆಸುವುದನ್ನು ಸುಲಭವಾಗಿಸುತ್ತಿದೆ. ವಿವಿಧ ವಲಯದಲ್ಲಿರುವ ಭಾರತದ ತಯಾರಿಕಾ ಕಂಪನಿಗಳು ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿವೆ ಮತ್ತು ಈಗ ಜಾಗತಿಕ ಸ್ಪರ್ಧಿಗಳೊಂದಿಗೆ ಅಸಾಧಾರಣವಾಗಿ ಸ್ಪರ್ಧಿಸುತ್ತಿವೆ.

ತಯಾರಿಕಾ ಉದ್ಯಮಕ್ಕೆ ಉದ್ಯೋಗದ ಕೆಲಸ ಎನ್ನುವುದು ಅಂತರ್ಗತ ಅಂಶವಾಗಿದೆ. ತಯಾರಕರು ಹೆಚ್ಚಾಗಿ ತಮ್ಮ ಚಟುವಟಿಕೆಯ ಭಾಗವನ್ನು ಮೂರನೇ ವ್ಯಕ್ತಿಗೆ ಹೊರಗುತ್ತಿಗೆ ನೀಡಿರುತ್ತಾರೆ. ಇದು ವೆಚ್ಚ ಕಡಿಮೆ ಮಾಡುತ್ತದೆ ಮತ್ತು ತಮ್ಮ ಕೋರ್ ಚಟುವಟಿಕೆಗಳಿಗೆ ಹೆಚ್ಚು ಗಮನವನ್ನು ನೀಡಿ ಹೆಚ್ಚು ಉತ್ಪಾದಕತೆ ಹೊಂದಲು ಅವರಿಗೆ ಇದು ನೆರವಾಗುತ್ತದೆ. ಈ ರೀತಿ ತಮ್ಮ ಚಟುವಟಿಕೆಯ ಪೂರ್ತಿ ಭಾಗ ಅಥವಾ ಒಂದು ಭಾಗವನ್ನು ಮೂರನೇ ವ್ಯಕ್ತಿಗೆ ಹೊರಗುತ್ತಿಗೆ ನೀಡುವ ಈ ಪ್ರಕ್ರಿಯೆಯನ್ನು `ಜಾಬ್ ವರ್ಕ್’ ಎನ್ನಲಾಗುತ್ತದೆ. ಇದು ತಯಾರಿಕಾ ಆವರ್ತನದ ಯಾವುದೇ ಹಂತದಲ್ಲಿರಬಹುದು ಮತ್ತು ಉದ್ಯೋಗದ ಕೆಲಸಕ್ಕಾಗಿ ಕಚ್ಚಾ ಸಾಮಾಗ್ರಿ ಅಥವಾ ಅರೆ ಸಿದ್ಧಗೊಂಡ ಸರಕುಗಳು ಅಥವಾ ಬಂಡವಾಳ ಸರಕುಗಳನ್ನು ಕಳುಹಿಸಿಕೊಡಬಹುದು. ಜಾಬ್ ವರ್ಕ್ಗಾಗಿ ಈ ರೀತಿ ಕಳುಹಿಸಿಕೊಡುವ ಸರಕಿಗೆ `ಪ್ರಿನ್ಸಿಪಾಲ್’ ಎಂದೂ ಮತ್ತು ಈ ಉದ್ಯೋಗದ ಕೆಲಸದ ಚಟುವಟಿಕೆಯನ್ನು ಮಾಡುವ ವ್ಯಕ್ತಿಗೆ `ಜಾಬ್ ವರ್ಕರ್’ ಎಂದು ಕರೆಯಲಾಗುತ್ತದೆ.

ಈಗಿನ ತೆರಿಗೆ ಪದ್ಧತಿಯಲ್ಲಿ ಉದ್ಯೋಗದ ಕೆಲಸವನ್ನು ಹೇಗೆ ನಡೆಸಲಾಗುತ್ತದೆ ಮತ್ತು ಇದು ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಹೇಗೆ ಭಿನ್ನವಾಗಿದೆ ಎಂದು ನಾವು ಅರ್ಥಮಾಡಿಕೊಳ್ಳೋಣ ಬನ್ನಿರಿ.

ಈಗಿನ ತೆರಿಗೆ ಪದ್ಧತಿ

ಅರ್ಥ

ಉದ್ಯೋಗದ ಕೆಲಸದ ಅರ್ಥವೇನೆಂದರೆ, ಒಂದು ಭಾಗದ ಅಥವಾ ಪೂರ್ತಿ ಪ್ರಕ್ರಿಯೆ ಪೂರ್ಣಗೊಳಿಸುವ ಸಲುವಾಗಿ ಕಚ್ಚಾ ಸಾಮಾಗ್ರಿಗಳು ಅಥವಾ ಅರೆ-ಪೂರ್ಣಗೊಂಡ ಸರಕುಗಳನ್ನು ಉದ್ಯೋಗ ಕೆಲಸಗಾರರಿಗೆ ಕಳುಹಿಸುವ ಪ್ರಕ್ರಿಯೆಯಾಗಿದ್ದು, ಇದರ ಫಲಿತಾಂಶವಾಗಿ ತಯಾರಕರು ಅಥವಾ ಒಂದು ಲೇಖನ ಪೂರ್ತಿಗೊಳಿಸುವಿಕೆ ಅಥವಾ ಪ್ರಕ್ರಿಯೆಗೆ ಅಗತ್ಯವಿರುವ ಯಾವುದೇ ಅಗತ್ಯ ಕಾರ್ಯನಿರ್ವಹಣೆಯನ್ನು ಪೂರ್ಣಗೊಳಿಸುವುದಾಗಿದೆ. ಇದು ಈ ಮುಂದಿನವುಗಳನ್ನು ಸೂಚಿಸುತ್ತದೆ:

  1. ತಯಾರಕರ ಈ ಚಟುವಟಿಕೆಯು ತಯಾರಿಕೆ ಅಥವಾ ಸರಕಿನ ಪೂರ್ಣಗೊಳಿಸುವಿಕೆ ಅಥವಾ ತಯಾರಿಕಾ ಪ್ರಕ್ರಿಯೆಗೆ ಈ ಕಾರ್ಯಾಚರಣೆ ಅತ್ಯಂತ ಅಗತ್ಯವಾಗಿದೆ.
  2. ಪ್ರಿನ್ಸಿಪಾಲ್ ನೋಂದಣಿ ಅಪ್ರಸ್ತುತವಾಗಿದೆ. ನೋಂದಾಯಿಸದೆ ಇರುವ ವ್ಯಕ್ತಿಗೆ ಸರಕು ಕಳುಹಿಸಿಕೊಟ್ಟರೂ ಇದನ್ನು ಜಾಬ್ ವರ್ಕ್ ಅಥವಾ ಉದ್ಯೋಗದ ಕೆಲಸ ಎಂದು ಪರಿಗಣಿಸಲಾಗುತ್ತದೆ.
ಆದಾನ ತೆರಿಗೆ ಪಾವತಿ

ಉದ್ಯೋಗದ ಕೆಲಸಕ್ಕೆ ಕಳುಹಿಸಿದ ಒಳಹರಿವು ಅಥವಾ ಬಂಡವಾಳ ಸರಕನ್ನು 180 ದಿನಗಳಲ್ಲಿ ಅಥವಾ 1 ವರ್ಷದಲ್ಲಿ ವಾಪಸ್ ನೀಡಿದರೆ, ಪ್ರಿನ್ಸಿಪಾಲ್ಗೆ ಆದಾನ ತೆರಿಗೆ ಪಾವತಿ ಕೇಳಲು ಅವಕಾಶವಿದೆ.

ಅನ್ವಯವಾಗುವ ತೆರಿಗೆ

ಈ ಚಟುವಟಿಕೆಯು ತಯಾರಿಕೆಯ ಪ್ರಮಾಣದಲ್ಲಿದ್ದರೆ, ಉದ್ಯೋಗ ಕೆಲಸಗಾರರರು ಅಬಕಾರಿ ಸುಂಕ ಪಾವತಿಸುವ ಬಾಧ್ಯತೆ ಹೊಂದುತ್ತಾರೆ. ಆದರೂ, ಪ್ರಿನ್ಸಿಪಾಲ್ ಅವರು ಘೋಷಣೆ ಸಿದ್ಧಪಡಿಸುವ ಸಮಯದಲ್ಲಿ, ಉದ್ಯೋಗ ಕೆಲಸಗಾರರು ಅಬಕಾರಿ ಸುಂಕದಿಂದ ವಿನಾಯಿತಿ ಪಡೆಯುತ್ತಾರೆ.

ಎಲ್ಲಾದರೂ ಈ ಚಟುವಟಿಕೆಯು ತಯಾರಿಕೆಯ ಪ್ರಮಾಣವನ್ನು ಹೊಂದಿಲ್ಲದೆ ಇದ್ದರೆ, ಸೇವಾ ತೆರಿಗೆ ಅನ್ವಯವಾಗುತ್ತದೆ. ಆದರೆ, ಉದ್ಯೋಗದ ಕೆಲಸಗಾರರಿಗೆ ಸೇವಾ ತೆರಿಗೆಯಿಂದ ವಿನಾಯಿತಿ ದೊರಕುತ್ತದೆ.

ಉದ್ಯೋಗ ಕೆಲಸಗಾರರಿಗೆ ವಿಧಿಸುವ ಪ್ರಕ್ರಿಯೆ ಶುಲ್ಕಗಳು- ಉದ್ಯೋಗದ ಕೆಲಸಗಾರರಿಗೆ ವಿಧಿಸುವ ಪ್ರಕ್ರಿಯೆ ಶುಲ್ಕಗಳಿಗೆ ಸೇವಾ ತೆರಿಗೆ ಅನ್ವಯವಾಗುವುದಿಲ್ಲ.

ಉದ್ಯೋಗದ ಕೆಲಸದ ಸಮಯದಲ್ಲಿ ಉಂಟಾದ ವ್ಯರ್ಥ ವಸ್ತುಗಳು ಅಥವಾ ತ್ಯಾಜ್ಯಗಳು- ಉದ್ಯೋಗದ ಕೆಲಸದ ಸಮಯದಲ್ಲಿ ಉಂಟಾದ ಯಾವುದೇ ವ್ಯರ್ಥ ಅಥವಾ ತ್ಯಾಜ್ಯಗಳಿಗೆ ತೆರಿಗೆ ಪಾವತಿಸಿ ಉದ್ಯೋಗದ ಕೆಲಸಗಾರರು ನೇರವಾಗಿ ತನ್ನ ವ್ಯವಹಾರದ ಸ್ಥಳದಿಂದ ಅವನು/ಅವಳ ನೋಂದಾಯಿತ ವ್ಯವಹಾರದ ಸ್ಥಳಕ್ಕೆ ನೇರವಾಗಿ ಕಳುಹಿಸಿಕೊಡಬಹುದು. ಎಲ್ಲಾದರೂ ಉದ್ಯೋಗದ ಕೆಲಸಗಾರರು ನೋಂದಾಯಿಸದೆ ಇದ್ದರೆ ಪ್ರಿನ್ಸಿಪಾಲ್ ಕಳುಹಿಸಿಕೊಡಬಹುದು.

ಜಿಎಸ್ಟಿ ತೆರಿಗೆ ಪದ್ಧತಿ

ಅರ್ಥ

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ಉದ್ಯೋಗದ ಕೆಲಸದ ಅರ್ಥವೇನೆಂದರೆ ಯಾವುದೇ ಪ್ರಕ್ರಿಯೆ ಅಥವಾ ಉಪಚಾರವನ್ನು ಸರಕು ಹೊಂದಿರುವ ವ್ಯಕ್ತಿಯಿಂದ ಮತ್ತೊಬ್ಬರು ನೋಂದಾಯಿಸದೆ ಇರುವ ವ್ಯಕ್ತಿಗೆ ನೀಡುವುದಾಗಿದೆ. ಈ ವ್ಯಾಖ್ಯಾನದಲ್ಲಿ ಇರುವ ಬದಲಾವಣೆಯು ಎರಡು ವಿಷಯಗಳಲ್ಲಿ ಅನ್ವಯವಾಗುತ್ತದೆ:

    1. ಉದ್ಯೋಗದ ಕೆಲಸವನ್ನು ತಯಾರಿಸುವಲ್ಲಿ ಫಲಿತಾಂಶಗಳು ಅಥವಾ ಉತ್ಪಾದನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯವಾದ ಕಾರ್ಯಚರಣೆಯಾಗಿದ್ದರೂ ಸಹ, ಉದ್ಯೋಗದ ಕೆಲಸಗಾರರು ಮಾಡಿದ ಯಾವುದೇ ಉಪಚಾರವನ್ನು ಅಥವಾ ಪ್ರಕ್ರಿಯೆಯನ್ನು ಸೇರಿಸಲು ವಿಶಾಲವಾದ ದೃಷ್ಟಿಕೋನದಲ್ಲಿ ಉದ್ಯೋಗದ ಕೆಲಸವನ್ನು ವ್ಯಾಖ್ಯಾನಿಸಲಾಗುತ್ತದೆ.
    2. ಉದ್ಯೋಗದ ಕೆಲಸಗಾರರು ಈ ಉಪಚಾರ ಅಥವಾ ಪ್ರಕ್ರಿಯೆಯನ್ನು ನೋಂದಾಯಿತ ವ್ಯಕ್ತಿಗೆ ಸಂಬಂಧಪಟ್ಟ ಸರಕಿಗೆ ಮಾಡಿದರೆ ಮಾತ್ರ ಉದ್ಯೋಗದ ಕೆಲಸ ಅನ್ವಯವಾಗುತ್ತದೆ. ಆದರೂ, ಸರಕುಗಳಿಗೆ ತೆರಿಗೆ ವಿಧಿಸಬಹುದಾಗಿದ್ದರೂ, ಅದು ನೋಂದಾಯಿಸದೆ ಇರುವ ವ್ಯಕ್ತಿಯಲ್ಲಿ ಇದ್ದರೆ, ಇದನ್ನು ಉದ್ಯೋಗದ ಕೆಲಸವೆಂದು ಪರಿಗಣಿಸಲಾಗುವುದಿಲ್ಲ. ಇದು ಪ್ರಿನ್ಸಿಪಾಲ್ ನೋಂದಣಿ ಅಪ್ರಸ್ತುತವಾಗಿರುವ ಈಗಿನ ತೆರಿಗೆ ಪದ್ಧತಿಗೆ ಹೋಲಿಸಿದರೆ ಪ್ರಮುಖ ಬದಲಾವಣೆಯಾಗಿದೆ.
ಆದಾನ ತೆರಿಗೆ ಪಾವತಿ(ಐಟಿಸಿ)

ಉದ್ಯೋಗದ ಕೆಲಸಕ್ಕೆ ಕಳುಹಿಸಿಕೊಟ್ಟ ಒಳಹರಿವು ಮತ್ತು ಬಂಡವಾಳ ಸರಕಿಗೆ ಐಟಿಸಿ ಪಡೆಯಲು ಪ್ರಿನ್ಸಿಪಾಲ್ ಅರ್ಹರಾಗಿರುತ್ತಾರೆ.

ಅನ್ವಯವಾಗುವ ತೆರಿಗೆ

ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಆದಾನ ಅಥವಾ ಬಂಡವಾಳ ಸರಕುಗಳು

ಉದ್ಯೋಗದ ಕೆಲಸಕ್ಕಾಗಿ ಆದಾನ ಅಥವಾ ಬಂಡವಾಳ ಸರಕುಗಳನ್ನು ಕಳುಹಿಸಿಕೊಟ್ಟರೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ. ಉದ್ಯೋಗದ ಕೆಲಸಕ್ಕಾಗಿ ಸರಕುಗಳನ್ನು ತೆಗೆಯುವ ಸಮಯದಲ್ಲಿ ಪ್ರಿನ್ಸಿಪಾಲ್ ಅವರು ವಿತರಣಾ ರಶೀದಿ ನೀಡಬೇಕು. ವಿತರಣಾ ಚಲನ್ ಹೇಗಿರಬೇಕೆನ್ನುವುದಕ್ಕೆ ಉದಾಹರಣೆಯಾಗಿ ಇಲ್ಲೊಂದಿಷ್ಟು ಮಾದರಿಗಳನ್ನು ನೀಡಲಾಗಿದೆ.

ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಆದಾನ ಅಥವಾ ಬಂಡವಾಳ ಸರಕುಗಳು ಕ್ರಮವಾಗಿ 1 ವರ್ಷ ಅಥವಾ 3 ವರ್ಷಗಳಲ್ಲಿ ವಾಪಸ್ ಬಂದರೆ.

ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಆದಾನ ಅಥವಾ ಬಂಡವಾಳ ಸರಕುಗಳು ಕ್ರಮವಾಗಿ 1 ವರ್ಷ ಅಥವಾ 3 ವರ್ಷಗಳಲ್ಲಿ ವಾಪಸ್ ಬರುವ ಸಂದರ್ಭಗಳಲ್ಲಿ, ಇಲ್ಲಿ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ.

ಉದಾಹರಣೆ: ನೋಂದಾಯಿತ ಉಡುಪು ತಯಾರಕರಾದ ರಾಜೇಶ್ ಅಪರೆಲ್ಸ್ ಅವರು ನೋಂದಾಯಿತ ಉದ್ಯೋಗದ ಕೆಲಸಗಾರರಾದ ರಮೇಶ್ ಎಂಬ್ರಾಡಯರ್ಸ್ಗೆ ಉಡುಪುಗಳಿಗೆ ಕಸೂತಿ ಕೆಲಸ ಮಾಡಿಸುವ ಸಲುವಾಗಿ ಆಗಸ್ಟ್ 1, 2017ರಂದು 100 ಕುರ್ತಾಗಳನ್ನು ಕಳುಹಿಸಿಕೊಡುತ್ತಾರೆ. ಕಸೂತಿ ಕೆಲಸ ಪೂರ್ಣಗೊಳಿಸಿದ ಬಳಿಕ ಅಕ್ಟೋಬರ್ 10, 2017ರಂದು ರಾಜೇಶ್ ಅಪರೆಲ್ಸ್ಗೆ ರಮೇಶ್ ಎಂಬ್ರಾಡಯರಿಯು ವಾಪಸ್ ನೀಡುತ್ತದೆ.

ವ್ಯವಹಾರದಲ್ಲಿ ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ 1 ವರ್ಷದೊಳಗೆ ರಾಜೇಶ್ ಅಪರೆಲ್ಸ್ಗೆ ವಾಪಸ್ ನೀಡಿರುವುದರಿಂದ ಇಲ್ಲಿ ಕುರ್ತಾಗಳಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.
.

ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಆದಾನ ಅಥವಾ ಬಂಡವಾಳ ಸರಕುಗಳು ಉದ್ಯೋಗದ ಕೆಲಸಗಾರರ ಸ್ಥಳದಿಂದ ಕ್ರಮವಾಗಿ 1 ವರ್ಷ ಅಥವಾ 3 ವರ್ಷದೊಳಗೆ ಪೂರೈಕೆ ಮಾಡಿರುವ ಸಂದರ್ಭ.

ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಆದಾನ ಅಥವಾ ಬಂಡವಾಳ ಸರಕುಗಳು ಉದ್ಯೋಗದ ಕೆಲಸಗಾರರ ಸ್ಥಳದಿಂದ ಕ್ರಮವಾಗಿ 1 ವರ್ಷ ಅಥವಾ 3 ವರ್ಷದೊಳಗೆ ಪೂರೈಕೆ ಮಾಡಿರುವ ಸಂದರ್ಭದಲ್ಲಿ ಪೂರೈಕೆಯು ಭಾರತದೊಳಗೆ ನಡೆದಿದ್ದರೆ ತೆರಿಗೆ ಅನ್ವಯವಾಗುತ್ತದೆ. ಆದರೆ, ಈ ಪೂರೈಕೆಯು ರಫ್ತು ಆಗಿದ್ದರೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ.

ಉದ್ಯೋಗ ಕೆಲಸಗಾರರ ವ್ಯವಹಾರದ ಸ್ಥಳಕ್ಕೆ ಆದಾನ ಅಥವಾ ಬಂಡವಾಳ ಸರಕುಗಳನ್ನು ಪೂರೈಕೆ ಮಾಡುವ ಸಂದರ್ಭಗಳಲ್ಲಿ, ಪ್ರಿನ್ಸಿಪಾಲ್ ಉದ್ಯೋಗ ಕೆಲಸಗಾರರ ವ್ಯವಹಾರದ ಸ್ಥಳವನ್ನು ಆತನ ಹೆಚ್ಚುವರಿ ವ್ಯವಹಾರದ ಸ್ಥಳವಾಗಿ ಘೋಷಿಸಬಹುದು, ಅದು ಈ ಮುಂದಿನವುಗಳಿಗೆ ಹೊರತಾಗಿರಬೇಕು-

  1. ಉದ್ಯೋಗದ ಕೆಲಸಗಾರರು ನೋಂದಾಯಿಸಿರಬೇಕು ಅಥವಾ
  2. ಪೂರೈಕೆಯು ನಿರ್ದಿಷ್ಟಪಡಿಸಿದ ವಿಶೇಷ ಸರಕು ಆಗಿರಬೇಕು.
ಉದಾಹರಣೆ: ಸೆಪ್ಟೆಂಬರ್ 15, 2017ರಂದು ಉಡುಪಿನ ಕಸೂತಿ ಕೆಲಸಕ್ಕಾಗಿ ರಾಜೇಶ್ ಅಪರೆಲ್ಸ್ 200 ಕುರ್ತಾಗಳನ್ನು ರಮೇಶ್ ಎಂಬ್ರಾಡಯರಿಗೆ ಕಳುಹಿಸಿದೆ. ಕಸೂತಿ ಕೆಲಸ ಮುಗಿಸಿದ ಬಳಿಕ, ತಮಿಳುನಾಡಿನಲ್ಲಿ ವ್ಯವಹಾರ ಹೊಂದಿರುವ ರಮೇಶ್ ಎಂಬ್ರಾಡಯರಿಯ ತಮಿಳುನಾಡಿನ ಗ್ರಾಹಕರಿಗೆ ಕುರ್ತಾವನ್ನು ಡಿಸೆಂಬರ್ 25, 2017ರಂದು ಪೂರೈಕೆ ಮಾಡಲಾಗಿದೆ.
ಇಲ್ಲಿ, ರಮೇಶ್ ಎಂಬ್ರಾಡಯರಿಯ ವ್ಯವಹಾರದ ಸ್ಥಳಕ್ಕೆ ಕುರ್ತಾವನ್ನು ಪೂರೈಕೆ ಮಾಡಿರುವುದರಿಂದ, ಅನ್ವಯವಾಗುವ ದರಕ್ಕೆ ತಕ್ಕಂತೆ ರಾಜೇಶ್ ಅಪರೆಲ್ಸ್ ತೆರಿಗೆ ಪಾವತಿಸುವ ಬಾಧ್ಯತೆ ಹೊಂದಿರುತ್ತದೆ.

ಎಲ್ಲಾದರೂ ಉದ್ಯೋಗ ಕೆಲಸಗಾರರ ವ್ಯವಹಾರದ ಸ್ಥಳಕ್ಕೆ ಸರಕನ್ನು ಪೂರೈಕೆ ಮಾಡಿದರೆ, ಇಲ್ಲಿ ಉದ್ಯೋಗ ಕೆಲಸಗಾರರು ನೋಂದಾಯಿಸಿದ್ದರೂ, ಈ ಪೂರೈಕೆಯನ್ನು ಪ್ರಿನ್ಸಿಪಾಲ್ ಮಾಡಿರುವ ಪೂರೈಕೆ ಎಂದೇ ಪರಿಗಣಿಸಲಾಗುತ್ತದೆ ಮತ್ತು ಈ ಸರಕಿನ ಮೌಲ್ಯವನ್ನು ಉದ್ಯೋಗ ಕೆಲಸಗಾರರ ಒಟ್ಟು ವಹಿವಾಟಿಗೆ ಸೇರಿಸಲಾಗುವುದಿಲ್ಲ.

ಎಲ್ಲಾದರೂ ಉದ್ಯೋಗ ಕೆಲಸಕ್ಕಾಗಿ ಕಳುಹಿಸಿದ ಆದಾನ ಅಥವಾ ಬಂಡವಾಳ ಸರಕುಗಳು ಉದ್ಯೋಗ ಕೆಲಸಗಾರರ ಸ್ಥಳದಿಂದ ಕ್ರಮವಾಗಿ 1 ವರ್ಷ ಅಥವಾ 3 ವರ್ಷದಲ್ಲಿ ವಾಪಸ್ ಬಾರದೆ ಇರುವ ಸಂದರ್ಭ.

ಉದಾಹರಣೆ: ಅಕ್ಟೋಬರ್ 10, 2017ರಂದು ರಾಜೇಶ್ ಅಪರೆಲ್ಸ್ 150 ಕುರ್ತಾಗಳನ್ನು ರಮೇಶ್ ಎಂಬ್ರಾಡಯರಿಗೆ ತನ್ನ ಉಡುಪುಗಳ ಕಸೂತಿ ಕೆಲಸಕ್ಕಾಗಿ ಕಳುಹಿಸಿಕೊಡುತ್ತದೆ ಈ ಕುರ್ತಾಗಳು ಅಕ್ಟೋಬರ್ 10, 2018ರವರೆಗೂ ರಾಜೇಶ್ ಅಪರೆಲ್ಸ್ ನ ವ್ಯವಹಾರದ ಸ್ಥಳಕ್ಕೆ ವಾಪಸ್ ಬರುವುದಿಲ್ಲ.

ಇಲ್ಲಿ, ಈ ಕುರ್ತಾಗಳನ್ನು ರಾಜೇಶ್ ಅಪರೆಲ್ಸ್ ನಿಂದ ರಮೇಶ್ ಎಂಬ್ರಾಯಡಯರಿಗೆ ಅಕ್ಟೋಬರ್ 10, 2017ರಂದು ಪೂರೈಕೆ ಮಾಡಲಾಗಿದೆ ಮತ್ತು ಬಡ್ಡಿದರದ ಜೊತೆ ರಾಜೇಶ್ ಅಪರೆಲ್ಸ್ ಪೂರೈಕೆಗೆ ತೆರಿಗೆ ಪಾವತಿಸುವ ಬಾಧ್ಯತೆ ಹೊಂದಿರುತ್ತದೆ..

ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿದ ಆದಾನವು ಉದ್ಯೋಗದ ಕೆಲಸಗಾರರಿಂದ 1 ವರ್ಷದೊಳಗೆ ವಾಪಸ್ ಬಂದಿಲ್ಲವಾದರೆ ಅಥವಾ ವಾಪಸ್ ಕಳುಹಿಸಿಕೊಟ್ಟಿಲ್ಲವಾದರೆ ಅಥವಾ ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಬಂಡವಾಳ ಸರಕು 3 ವರ್ಷದೊಳಗೆ ವಾಪಸ್ ಬಂದಿಲ್ಲವಾದರೆ ಅಥವಾ ಅವರಿಂದ ಮರುಪೂರೈಕೆ ಆಗದೆ ಇದ್ದರೆ ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ದಿನದಿಂದ ಪ್ರಿನ್ಸಿಪಾಲ್ ಅವರನ್ನು ಪೂರೈಕೆಗೆ ಪರಿಗಣಿಸಲಾಗುತ್ತದೆ. ಹೀಗಾಗಿ, ಬಡ್ಡಿದರದ ಬಾಕಿಯ ಜೊತೆಗೆ ಪ್ರಿನ್ಸಿಪಾಲ್ ಅವರು ತೆರಿಗೆ ಪಾವತಿಸುವ ಬಾಧ್ಯತೆ ಹೊಂದಿರುತ್ತಾರೆ..

ಗಮನಿಸಿ: ಮೊದಲು ಪ್ರಿನ್ಸಿಪಾಲ್ ಅವರ ವ್ಯವಹಾರದ ಸ್ಥಳಕ್ಕೆ ಕೊಂಡೊಯ್ಯದೆ ಆದಾನ ಅಥವಾ ಬಂಡವಾಳ ಸರಕುಗಳನ್ನು ಉದ್ಯೋಗದ ಕೆಲಸಗಾರರ ಬಳಿಗೆ ನೀಡಿರಬಹುದು. ಇಂತಹ ಸಂದರ್ಭದಲ್ಲಿ ಉದ್ಯೋಗದ ಕೆಲಸಗಾರರು ಆದಾನ ಅಥವಾ ಬಂಡವಾಳ ಸರಕನ್ನು ಸ್ವೀಕರಿಸಿದ ದಿನಾಂಕವನ್ನು ಕ್ರಮವಾಗಿ 1 ವರ್ಷ ಮತ್ತು 3 ವರ್ಷಕ್ಕೆ ಲೆಕ್ಕ ಹಾಕಲಾಗುತ್ತದೆ.

ಉದ್ಯೋಗದ ಕೆಲಸಗಾರ ವಿಧಿಸುವ ಪ್ರಕ್ರಿಯೆಯ ಶುಲ್ಕ

ಉದ್ಯೋಗದ ಕೆಲಸಗಾರರು ವಿಧಿಸುವ ಪ್ರಕ್ರಿಯೆಯ ಶುಲ್ಕಕ್ಕೆ ಜಿಎಸ್ಟಿ ಅನ್ವಯವಾಗುತ್ತದೆ.

ಉದಾಹರಣೆ: ರಮೇಶ್ ಎಂಬ್ರಾಡಯರಿಯು ರಮೇಶ್ ಅಪರೆಲ್ಸ್ ನಿಂದ ಆಗಸ್ಟ್ 2017ರಂದು ಸ್ವೀಕರಿಸಿದ ಕೆಲಸಕ್ಕೆ 10,000 ರೂ. ಶುಲ್ಕ ವಿಧಿಸುತ್ತದೆ.
ಇಲ್ಲಿ, ಕಸೂತಿ ಕೆಲಸದ ಶುಲ್ಕಕ್ಕೆ ರಮೇಶ್ ಎಂಬ್ರಾಡಯರಿಯು ಶೇಖಡ 5ರಷ್ಟು ಜಿಎಸ್ಟಿ ಪಾವತಿಸಬೇಕು (ಇಲ್ಲಿ ಜವಳಿ ಕೆಲಸದ ತೆರಿಗೆ ಅನ್ವಯವಾಗುತ್ತದೆ).

ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಮೋಲ್ಡ್ ಗಳು ಮತ್ತು ಪಟ್ಟೆಗಳು, ಜಿಗ್ ಗಳು ಮತ್ತು ಫೆಕ್ಷರ್ ಗಳು ಅಥವಾ ಟೂಲ್ ಗಳು

ಉದ್ಯೋಗದ ಕೆಲಸಕ್ಕಾಗಿ ಉದ್ಯೋಗದ ಕೆಲಸಗಾರರಿಗೆ ಕಳುಹಿಸಿಕೊಟ್ಟ ಮೋಲ್ಡ್ ಗಳು, ಪಟ್ಟೆಗಳು, ಜಿ್ ಗಳು ಮತ್ತು ಫಿಕ್ಷರ್ಸ್ ಗಳು ಮತ್ತು ಟೂಲ್ ಗಳಿಗೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ.

ಉದ್ಯೋಗದ ಕೆಲಸದಲ್ಲಿ ಸೃಷ್ಟಿಯಾದ ತ್ಯಾಜಗಳು ಅಥವಾ ಗುಜರಿಗಳು

ಉದ್ಯೋಗದ ಕೆಲಸದಲ್ಲಿ ಸೃಷ್ಟಿಯಾದ ತ್ಯಾಜ್ಯ ಅಥವಾ ಗುಜರಿಗಳನ್ನು ನೋಂದಾಯಿಸಿರುವ ಅವನು/ಅವಳು ತನ್ನ ವ್ಯವಹಾರದ ಸ್ಥಳದಿಂದ ಪೂರೈಕೆ ಮಾಡಿದರೆ ತೆರಿಗೆ ಪಾವತಿಸಬೇಕು. ಎಲ್ಲಾದರೂ ಅವನು/ಅವಳು ನೋಂದಾಯಿಸದೆ ಇದ್ದರೆ ಪ್ರಿನ್ಸಿಪಾಲ್ ತೆರಿಗೆ ಪಾವತಿಸಬೇಕು.

ಉಪಸಂಹಾರ

ಜಿಎಸ್ಟಿ ತೆರಿಗೆ ಪದ್ಧತಿಯಡಿಯಲ್ಲಿ ಉದ್ಯೋಗದ ಕೆಲಸಕ್ಕಾಗಿ ತೆರಿಗೆ ವಿಧಿಸುವಿಕೆಯು ಹೆಚ್ಚಿನ ಪ್ರಮಾಣದಲ್ಲಿ ಈಗಿನ ತೆರಿಗೆ ಪದ್ಧತಿಯಂತೆ ಉಳಿದಿದೆ. ಆದರೆ, ಪ್ರಮುಖವಾಗಿ ಗಮನಿಸಬೇಕಾದ ಸಂಗತಿಯೆಂದರೆ ಇಲ್ಲಿ ಉದ್ಯೋಗ ಸ್ಥಳದಿಂದ ಆದಾನ ಸರಕನ್ನು ಈ ಹಿಂದಿನ 180 ದಿನಗಳ ಬದಲಾಗಿ 1 ವರ್ಷದೊಳಗೆ ವಾಪಸ್ ಪಡೆಯಲು ಅವಕಾಶ ನೀಡಲಾಗಿದೆ. ಇದೇ ರೀತಿ, ಬಂಡವಾಳ ಸರಕನ್ನು ಈ ಹಿಂದಿನ 1 ವರ್ಷದ ಬದಲಾಗಿ 3 ವರ್ಷಗಳೊಳಗೆ ವಾಪಸ್ ನೀಡಲು ಅವಕಾಶ ನೀಡಲಾಗಿದೆ. ಇದೇ ರೀತಿ, ಉದ್ಯೋಗದ ಕೆಲಸಗಾರರು ಕಾರ್ಯನಿರ್ವಹಣೆಗೆ ವಿಧಿಸಿದ ಶುಲ್ಕಕ್ಕೆ ಈಗ ಜಿಎಸ್ಟಿ ವಿಧಿಸಲಾಗುತ್ತದೆ.
ತಯಾರಿಕಾ ವಲಯಕ್ಕೆ ಈ ಸೌಲಭ್ಯಗಳು ಸಕಾರಾತ್ಮಕವಾಗಿದೆ ಮತ್ತು ಈ ವಲಯಕ್ಕೆ ಸರಕಾರದ ಅತ್ಯುತ್ತಮ ಬೆಂಬಲ ಇರುವುದು ಇದರಿಂದ ತಿಳಿದುಬರುತ್ತದೆ.

Are you GST ready yet?

Get ready for GST with Tally.ERP 9 Release 6

214,839 total views, 16 views today