ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಲೆಕ್ಕಪುಸ್ತಕಗಳ ನಿರ್ವಹಣೆಯ ಅಭ್ಯಾಸದಲ್ಲಿ ದೊಡ್ಡಮಟ್ಟದ ಬದಲಾವಣೆಯಾಗಲಿದೆ. ಯಾಕೆಂದರೆ ಲೆಕ್ಕಪುಸ್ತಕವನ್ನು ಪ್ರತಿದಿನವೂ ನಿರ್ವಹಿಸಿದರೆ ಅನುಸರಣೆಯ ಒತ್ತಡ ಕಡಿಮೆಯಾಗಲಿದೆ ಮತ್ತು ಇದು ಸಾಮಾನ್ಯ ಚಟುವಟಿಕೆಯಂತೆ ಇರಲಿದೆ. ಎಲ್ಲಾದರೂ ನೀವು ನಿಯಮಿತವಾಗಿ ಇದನ್ನು ನಿರ್ವಹಣೆ ಮಾಡದೆ ಇದ್ದರೆ ಇದು ಅತ್ಯಧಿಕ ಒತ್ತಡದ ಚಟುವಟಿಕೆಯಾಗಲಿದೆ.

ಕಂಪನಿಯೊಂದು ನಿಯಮಿತವಾಗಿ ಸಲ್ಲಿಸಬೇಕಾದ ಹಲವು ಸಂಖ್ಯೆಗಳ ತೆರಿಗೆ ಅನುಸರಣೆಗಳನ್ನು ನೀವು ಗಮನಿಸಬಹುದು- ಅವುಗಳಲ್ಲಿ ಪ್ರಾಥಮಿಕವಾಗಿ ಜಿಎಸ್ಟಿಆರ್-1, ಜಿಎಸ್ಟಿಆರ್-2 ಮತ್ತು ಜಿಎಸ್ಟಿಆರ್ 3 ಎಂಬ ಮೂರರಲ್ಲಿ ವರದಿ ಮಾಡಬೇಕು. ಇದರಲ್ಲಿ ಮೊದಲ ನಮೂನೆಯನ್ನು ಪ್ರತಿತಿಂಗಳ 10ನೇ ತಾರೀಕಿನ ಮೊದಲು ಸಲ್ಲಿಸಬೇಕು. ನಂತರ ಪ್ರತಿತಿಂಗಳ 15ನೇ ತಾರೀಕು ಸಲ್ಲಿಸಬೇಕು. ನಂತರ ಮಧ್ಯಾಂತರ ದಿನಾಂಕವು 17 ಆಗಿದ್ದು, ನೀವು ನಮೂನೆ ಸಲ್ಲಿಕೆ ಮಾಡದೆ ಇದ್ದರೆ ಎಲ್ಲರೂ ನಿಮ್ಮಲ್ಲಿ ಕೇಳಲಿದ್ದಾರೆ. ನೀವು ಜಿಎಸ್ಟಿಆರ್-3 ಸಲ್ಲಿಸಿದ ನಂತರ ನಿಮ್ಮ ತೆರಿಗೆ ಬಾಧ್ಯತೆ ಮತ್ತು ನೀವು ಪಾವತಿ ಮಾಡಬೇಕಿರುವ ಆದಾಯ ನಮೂನೆ ಸೃಷ್ಟಿಯಾಗಲಿದೆ.

ಇದನ್ನೂ ಓದಿ: ನಿಮ್ಮ ಜಿಎಸ್ಟಿ ಆದಾಯ ನಮೂನೆಯನ್ನು ಸಲ್ಲಿಸುವುದು ಹೇಗೆ?

ಆದರೂ, ನೀವು ತೆರಿಗೆ ಬಾಕಿಯನ್ನು ಪ್ರತಿತಿಂಗಳು ಪಾವತಿಸಬೇಕು ಎನ್ನುವುದು ಅತ್ಯಂತ ಪ್ರಮುಖ ಸಂಗತಿಯಾಗಿದೆ. ನಿಮ್ಮ ಆದಾಯ ಸಲ್ಲಿಕೆಯು ಅಂಗೀಕೃತ ಸಲ್ಲಿಕೆ ಎಂದು ಪರಿಗಣಿಸಬೇಕಾದರೆ ಆದಾಯ ಪಾವತಿ ಮಾಡಬೇಕಿರುವುದು ಅತ್ಯಂತ ಅವಶ್ಯಕವಾಗಿದೆ. ಹೀಗಾಗಿ ನೀವು ಆದಾಯ ನಮೂನೆ ಸಲ್ಲಿಕೆ ಮಾಡಿದ ನಂತರ “ನಂತರ ಹಣ ಪಾವತಿಸುತ್ತೇನೆ’’ ಎನ್ನುವ ಹಾಗಿಲ್ಲ.
ಪ್ರತಿಯೊಂದು ವ್ಯವಹಾರಗಳು ತಮ್ಮ ವ್ಯವಹಾರಕ್ಕೆ ಅವಶ್ಯಕತೆ ಇರುವ ಅನುಸರಣೆಯನ್ನು ಗುರುತಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಅಂದರೆ, ಅವರಿಗೆ ಎಷ್ಟು ಆದಾನ ಲಭಿಸುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು, ಆದಾನ ದೊರಕಬೇಕಾದರೆ ಏನು ಮಾಡಬೇಕು, ಆದಾನ ಪೂರ್ತಿಯಾಗಿ ಅಥವಾ ಭಾಗಶಃ ದೊರಕಲು ತಮ್ಮ ಲೆಕ್ಕಪರಿಶೋಧನೆಯ ಲೆಕ್ಕಪುಸ್ತಕವನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ಪ್ರತಿಯೊಂದು ವ್ಯವಹಾರಗಳು ಖಂಡಿತವಾಗಿಯೂ ಜಿಎಸ್ಟಿ ಲೆಕ್ಕಪರಿಶೋಧನೆ ತಂತ್ರಾಂಶ ಹೊಂದಿರಬೇಕಾದ ಅಗತ್ಯವಿದೆ. ಯಾಕೆಂದರೆ, ಜಿಎಸ್ಟಿಯನ್ನು ನೀವು ಕೈಯಿಂದ ಭರ್ತಿ ಮಾಡಲು ಸಾಧ್ಯವಿಲ್ಲ. ನೀವು ಎಕ್ಸೆಲ್ ಹೊಂದಿದ್ದರೂ ನೀವು ತಂತ್ರಾಂಶವೊಂದರ ಅಗತ್ಯವನ್ನು ಹೊಂದಿದ್ದಿರಿ. ಎಕ್ಸೆಲ್ ಇದ್ದರೂ ತಂತ್ರಜ್ಞಾನದ ಪರಿಹಾರದ ಅಗತ್ಯವಿದೆ.

ನಿಮ್ಮ ವಹಿವಾಟು ಮಿತಿ 20 ಲಕ್ಷ ರೂ.ಗಿಂತ ಹೆಚ್ಚಿದ್ದರೆ ನಾನು ಶಿಫಾರಸು ಮಾಡುವುದೆಂದರೆ, ಲೆಕ್ಕಪರಿಶೋಧನೆಗೆ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಸಹಯಾ ಪಡೆಯುವುದು ಉತ್ತಮ. ಯಾವುದೇ ಶಿಕ್ಷಿತ, ಉದ್ಯೋಗ ಮಾಡದ ಕುಟುಂಬದ ಸದಸ್ಯರನ್ನು ಕಂಪನಿಯ ಸಹಾಯಕ್ಕಾಗಿ ತರಬೇತಿಗೆ ಒಳಪಡಿಸಬಹುದು. ಇದರಿಂದ ಆಡಳಿತವು ಹೆಚ್ಚಿನ ಸಮಯವನ್ನು ವ್ಯವಹಾರದಲ್ಲಿ ತೊಡಗಿಸಿಕೊಳ್ಳಬಹುದು ಮತ್ತು ಅನುಸರಣೆ ಮಾಡುವ ಸಮಯವು ಇಳಿಕೆ ಕಾಣಲಿದೆ.

ಬದಲಾವಣೆಯ ಜೊತೆ ಕಾರ್ಯನಿರ್ವಹಣೆ

ಬದಲಾವಣೆಯ ವಿಷಯಕ್ಕೆ ಬಂದಾಗ, ಇದು ಕೇವಲ ನಿಮ್ಮ ಲೆಕ್ಕಪುಸ್ತಕಕ್ಕೆ ಮಾತ್ರ ಸಂಬಂಧಪಟ್ಟಿಲ್ಲ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಸಂಭಾವ್ಯ ವರ್ತನಾ ಬದಲಾವಣೆಯು ಅನುಸರಣೆಯ ವಿಷಯದಲ್ಲಿ ಎದುರಾಗುವುದನ್ನು ನಾವು ಕಾಣಬಹುದು. ಇದನ್ನು ಇನ್ನಷ್ಟು ಹೇಳಬೇಕೆಂದರೆ, ನಾನೊಬ್ಬ ವ್ಯಾಪಾರಿಯಾಗಿದ್ದು ನಾನು “ಎ’’ಯಿಂದ ಕೆಲವು ಉತ್ಪನ್ನಗಳನ್ನು ಖರೀದಿಸುತ್ತೇನೆ ಎಂದಿರಲಿ. ನಾನೇನು ಮಾಡಬೇಕೆಂದರೆ, ಆತ ತೆರಿಗೆ ಪಾವತಿಸುವಂತೆ ಮಾಡುವುದು ಮತ್ತು ಸರಕಾರದ ಜೊತೆ “ಇದು ನನ್ನ ಬಾಧ್ಯತೆ’’ ಎಂದುಕೊಳ್ಳುವುದು ಮುಖ್ಯವಾಗಿದೆ.

ಈ ಹಂತದಲ್ಲಿ ನಾವು ಎರಡು ಪರಿಶೀಲನಾಪಟ್ಟಿಯನ್ನು ನಾವು ಬಳಕೆ ಮಾಡಬಹುದು. ಎಲ್ಲಾದರೂ ಎ ಯು ನನ್ನೊಂದಿಗೆ ವ್ಯವಹಾರ ನಡೆಸಿದರೆ ಆತನು ಆತನ ತೆರಿಗೆಯನ್ನು ಪಾವತಿಸಬೇಕು, ನಂತರ ಆತನ ಜಿಎಸ್ಟಿಆರ್-1 ಸಲ್ಲಿಕೆಗೆ ಕಾಯಬೇಕು ಮತ್ತು ಜಿಎಸ್ಟಿಆರ್-2ಎನಲ್ಲಿ ವಹಿವಾಟು ಸಮರ್ಪಕವಾಗಿದ್ದರೆ ನಾನು ಆತನಿಗೆ ಪಾವತಿಸಲು ಬಯಸುತ್ತೇನೆ.

ಎಲ್ಲಾದರೂ ಆತನು ಸಮರ್ಪಕವಾಗಿ ಅನುಸರಣೆ ಮಾಡುವುದನ್ನು ನನಗೆ ಖಾತ್ರಿಪಡಿಸಿಕೊಳ್ಳಲು ಸಾಧ್ಯವಾಗದೆ ಇದ್ದರೆ ನಂತರ ಆತನು ಸಲ್ಲಿಸಿದ ಜಿಎಸ್ಟಿಆರ್-3ಗೆ ನಾನು ಕಾಯುತ್ತೇನೆ, ಮತ್ತು ಆತನು ನನಗೆ ಮಾರಾಟ ಮಾಡಿರುವುದಕ್ಕೆ ಮತ್ತು ನಾನು ಪಾವತಿಸಿರುವುದಕ್ಕೆ ಸರಿಯಾಗಿ ಆತ ತೆರಿಗೆ ಪಾವತಿಸಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳುತ್ತೇನೆ. ಈ ಪರಿಣಾಮವು ಎಲ್ಲಾ ಪರಿಸರದಲ್ಲಿಯೂ ಕಾಣುವುದನ್ನು ನಾವು ನಿರೀಕ್ಷಿಸಬಹುದು, ಇದು ಸಾಮಾನ್ಯವಾಗಿ ಅನುಸರಣೆ ಮಾಡುವ ಪೂರೈಕೆದಾರರ ಜೊತೆ ಬಂಡವಾಳ ಸರಕಿನ ಆವರ್ತನ ಹೆಚ್ಚಾಗುವುದನ್ನು ಮತ್ತು ಚೌಕಾಶಿ ಶಕ್ತಿ ಹೆಚ್ಚಾಗುವುದನ್ನು ಕಾಣಬಹುದಾಗಿದೆ

ನಾನು ಯಾವಾಗಲೂ ಸಮರ್ಪಕ ಅನುಸರಣೆ ಮಾಡುವರ ಜೊತೆಯೇ ಖರೀದಿಸಲು ಇಚ್ಚಿಸುತ್ತೇನೆ ಮತ್ತು ಎಲ್ಲಾದರೂ ಅವರು ಸಣ್ಣ ಪೂರೈಕೆದಾರರಾಗಿದ್ದರೆ ಆತನ ಅನುಸರಣೆಯ ಕುರಿತು ನನಗೆ ಖಚಿತವಾಗಿ ತಿಳಿಯದೆ ಇದ್ದರೆ, ನನ್ನ ಪಾವತಿ ವಿಧಾನವನ್ನು ನನ್ನ ಆದಾನ ಪಾವತಿ ಲಭ್ಯತೆಯವರೆಗೆ ನನ್ನ ಪಾವತಿಯನ್ನು ನಾನು ವಿಸ್ತರಿಸಿಕೊಳ್ಳಬಹುದಾಗಿದೆ. ನಾನು ಆತನಿಗೆ ಸರಕುಪಟ್ಟಿಯಲ್ಲಿ ತೆರಿಗೆ ಸಂಬಂಧಿತ ಭಾಗಶಃ ಮೊತ್ತವನ್ನು ಪಾವತಿಸಬಹುದು. ಹೀಗೆ ಮಾಡುವುದರಿಂದ ವ್ಯವಹಾರಕ್ಕೆ ಆದಾನ ಲಭ್ಯತೆಯು ಹೆಚ್ಚುತ್ತದೆ ಮತ್ತು ವ್ಯವಹಾರದಲ್ಲಿ ಮತ್ತೊಂದು ಪದರವನ್ನು ಸೇರಿಸಿಕೊಳ್ಳಬಹುದು.

ಈ ಲೇಖನವನ್ನು ಬರೆದವರು ಮನೀಶ್ ಚೌದರಿ. ಅವರು ಟ್ಯಾಲಿ ಎಜುಕೇಷನ್ ನ ಸಿಇಒ. ಇದು ಟ್ಯಾಲಿ ಸೊಲ್ಯುಷನ್ ಪ್ರೈವೇಟ್ ಲಿಮಿಟೆಡ್ ನ ಅಂಗಸಂಸ್ಥೆ. ಈ ಲೇಖನವು ದಿ ಎಕಾನಾಮಿಕ್ ಟೈಮ್ಸ್ ನಲ್ಲಿ ಪ್ರಕಟಗೊಂಡಿದೆ.

Are you GST ready yet?

Get ready for GST with Tally.ERP 9 Release 6

99,565 total views, 41 views today