ಒಂದು ಸ್ಥಳಕ್ಕೆ ಬಿಲ್ ಮಾಡುವುದು, ಇನ್ನೊಂದು ಸ್ಥಳಕ್ಕೆ ಪೂರೈಕೆ ಮಾಡುವ ಮಾದರಿಯಲ್ಲಿ ಬಿಲ್ಲಿಂಗ್ ಮತ್ತು ಸಾಗಾಟ ಎರಡು ಬೇರೆ ರಾಜ್ಯಗಳಿಗೆ ಮತ್ತು ಬೇರೆ ಘಟಕಗಳಿಗೆ ಸರಕಿನ ಸಾಗಾಣೆ ಮಾಡಲಾಗುತ್ತದೆ. ವಹಿವಾಟಿನಲ್ಲಿ ಬಹುವಿಧದ ತೆರಿಗೆಯ ಪರಿಣಾಮವನ್ನು ತಪ್ಪಿಸುವ ಸಲುವಾಗಿ, ಮೊದಲ ಮಾರಾಟಕ್ಕೆ ತೆರಿಗೆ ವಿಧಿಸಬಹುದು ಮತ್ತು ಸರಕಿನ ಸಾಗಾಣೆಯ ಸಮಯದಲ್ಲಿ ಮತ್ತೆ ಯಾವುದೇ ಮಾರಾಟಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಈಗ, ಒಂದು ಸ್ಥಳಕ್ಕೆ ಬಿಲ್ ಮಾಡುವುದು, ಇನ್ನೊಂದು ಸ್ಥಳಕ್ಕೆ ಪೂರೈಕೆ ವಹಿವಾಟು ಸಾಮಾನ್ಯವಾಗಿ ನಡೆಯುತ್ತದೆ.

“ಒಂದು ಕಡೆಗೆ ಬಿಲ್, ಮತ್ತೊಂದು ಕಡೆಗೆ ಸಾಗಾಟ’’ ವಹಿವಾಟುಗಳನ್ನು ಉದಾಹರಣೆ ಮೂಲಕ ಅರ್ಥ ಮಾಡಿಕೊಳ್ಳೋಣ ಬನ್ನಿ.

ಮಹಾರಾಷ್ಟ್ರದಲ್ಲಿರುವ ಕಬ್ಭಿಣದ ಸರಕುಗಳ ವಿತರಕರಾದ ಗಣೇಶ್ ಟ್ರೇಡರ್ಸ್ ಕಂಪನಿಯು ಕರ್ನಾಟಕದಲ್ಲಿರುವ ಮಾರುತಿ ಟ್ರೇಡರ್ಸ್ ನಿಂದ ಆದೇಶ ಪಡೆಯುತ್ತದೆ. ಇದು 100 ಅಲ್ಯುಮಿನಿಯಂ ಏಣಿಗಳ ಪೂರೈಕೆಯ ಆದೇಶ ಆಗಿದ್ದು, ಇದನ್ನು ತಮಿಳು ನಾಡಿನಲ್ಲಿರುವ ಪ್ರೈಮ್ ಹಾರ್ಡ್ ವೇರ್ಸ್ ಗೆ ತಲುಪಿಸುವಂತೆ ಸೂಚನೆ ನೀಡಲಾಗಿರುತ್ತದೆ. ಪ್ರೈಮ್ ಹಾರ್ಡ್ ವೇರ್ಸ್, ಮಾರುತಿ ಟ್ರೇಡರ್ಸ್ ನ ಗ್ರಾಹಕರಾಗಿರುತ್ತಾರೆ.
ಈ ವಹಿವಾಟಿನಲ್ಲಿ ಎರಡು ಭಾಗಗಳಿವೆ:

  • ವಹಿವಾಟಿನ ಮೊದಲ ಭಾಗ- ಗಣೇಶ್ ಟ್ರೇಡರ್ಸ್ ಮತ್ತು ಮಾರುತಿ ಟ್ರೇಡರ್ಸ್ ನಡುವೆ:
  • ವಹಿವಾಟಿನ ಎರಡನೆಯ ಭಾಗ- ಮಾರುತಿ ಟ್ರೇಡರ್ಸ್ ಮತ್ತು ಪ್ರೈಮ್ ಹಾರ್ಡ್ ವೇರ್ಸ್: ಇಲ್ಲಿ ಮಾರುತಿ ಟ್ರೇಡರ್ಸ್ ಪೂರೈಕೆದಾರ ಮತ್ತು ಪ್ರೈಮ್ ಹಾರ್ಡ್ ವೇರ್ಸ್ ಖರೀದಿದಾರ. ಮಾರುತಿ ಟ್ರೇಡರ್ಸ್ ವಹಿವಾಟಿನ ರಸೀದಿಯನ್ನು ಪ್ರೈಮ್ ಹಾರ್ಡ್ ವೇರ್ಸ್ ಗೆ ಮಾಡುತ್ತದೆ ಮತ್ತು ಲಾರಿ ರಸೀದಿಯನ್ನು (ಸರಕನ್ನು ಲಾರಿಯ ಮೂಲಕ ಗಣೇಶ್ ಟ್ರೇಡರ್ಸ್ ಕಳುಹಿಸಿಕೊಟ್ಟಿತ್ತು) ಪ್ರೈಮ್ ಹಾರ್ಡ್ ವೇರ್ಸ್ ಗೆ ನೀಡಿರುತ್ತದೆ. ಈ ಲಾರಿ ರಸೀದಿ (ಎಲ್ಆರ್) ನಿಂದ ಸರಕನ್ನು ಡೆಲಿವರಿ ಪಡೆಯಲು ಪ್ರೈಮ್ ಹಾರ್ಡ್ ವೇರ್ಸ್ ಗೆ ಸಾಧ್ಯವಾಗುತ್ತದೆ..

ಜಿಎಸ್ಟಿ ಪದ್ಧತಿಯಲ್ಲಿ ಒಂದು ಕಡೆಗೆ ಬಿಲ್, ಇನ್ನೊಂದು ಕಡೆಗೆ ಪೂರೈಕೆ ಅನ್ನು ಅರ್ಥಮಾಡಿಕೊಳ್ಳುವ ಮೊದಲು, ಈಗಿನ ತೆರಿಗೆ ಪದ್ಧತಿಯಲ್ಲಿ ಈ ವಹಿವಾಟಿಗೆ ಹೇಗೆ ತೆರಿಗೆ ವಿಧಿಸಲಾಗುತ್ತದೆ ಎಂದು ತಿಳಿದುಕೊಳ್ಳೋಣ.

ಈಗಿನ ತೆರಿಗೆ ಪದ್ಧತಿ: ಒಂದು ಕಡೆಗೆ ರಸೀದಿ- ಇನ್ನೊಂದು ಕಡೆಗೆ ರವಾನೆ ವಹಿವಾಟಿಗೆ ತೆರಿಗೆ ವಿಧಿಸಲಾಗುತ್ತದೆ?

ರಸೀದಿ ಒಂದು ಕಡೆಗೆ, ಸಾಗಾಣೆ ಒಂದು ಕಡೆಗೆ ವಹಿವಾಟಿನಲ್ಲಿ ಅದರಲ್ಲಿ ಮೊದಲ ಮಾರಾಟ ಮತ್ತು ನಂತರದ ಮಾರಾಟ ಇರುತ್ತದೆ. ಈಗಿನ ತೆರಿಗೆ ಪದ್ಧತಿಯಲ್ಲಿ ಈ ಎರಡೂ ವಹಿವಾಟಿಗೂ ತೆರಿಗೆ ವಿಧಿಸಲಾಗುತ್ತದೆ. ಗಣೇಶ್ ಟ್ರೇಡರ್ಸ್ ನಿಂದ ಮಾರುತಿ ಟ್ರೇಡರ್ಸ್ ಗೆ ಮತ್ತು ನಂತರದ ಮಾರಾಟವಾಗಿರುವ ಮಾರುತಿ ಟ್ರೇಡರ್ಸ್ ನಿಂದ ಪ್ರೈಮ್ ಹಾರ್ಡ್ ವೇರ್ಸ್ ವಹಿವಾಟಿಗೆ ಪ್ರತ್ಯೇಕವಾಗಿ ತೆರಿಗೆ ವಿಧಿಸಲಾಗುತ್ತದೆ.
ಆದರೂ, ಈ ವಹಿವಾಟಿನಲ್ಲಿ ಹಲವು ಬಾರಿ ತೆರಿಗೆ ಲೆಕ್ಕ ಹಾಕುವುದನ್ನು ತಪ್ಪಿಸುವ ಸಲುವಾಗಿ, ನಂತರದ ಮಾರಾಟಕ್ಕೆ ಕೆಲವು ವಿನಾಯಿತಿಗಳನ್ನೂ ನೀಡಲಾಗಿದೆ. ಆದರೆ, ಈ ವಿನಾಯಿತಿಗಳನ್ನು ಪಡೆಯಲು ನಿಗದಿತ ನಮೂನೆಯನ್ನು ಭರ್ತಿ ಮಾಡಿ ಕಳುಹಿಸಬೇಕಾಗುತ್ತದೆ. ನಂತರದ ಮಾರಾಟದಲ್ಲಿ ವಿನಾಯಿತಿ ದೊರಕಬೇಕಾದರೆ ಮೊದಲ ಮಾರಾಟದಾರರಿಂದ ಫಾರ್ಮ್ ಇ1 ಪಡೆದು ಭರ್ತಿ ಮಾಡಬೇಕು ಮತ್ತು ಖರೀದಿದಾರರಿಂದ ಸಿ-ನಮೂನೆ ಪಡೆದು ಸಲ್ಲಿಸಿದರೆ ಸಿಎಸ್ಟಿ ಚಂದಾ ತೆರಿಗೆಯು ಶೇ. 2ರಷ್ಟು ಕಡಿಮೆಯಾಗುತ್ತದೆ.

ಇದನ್ನು ಈ ಮುಂದಿನ ಚಿತ್ರದ ಮೂಲಕ ಅರ್ಥಮಾಡಿಕೊಳ್ಳೋಣ.

Bill to ship to transactions in GST

ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ, ಗಣೇಶ್ ಟ್ರೇಡರ್ಸ್ ಮಾರುತಿ ಟ್ರೇಡರ್ಸ್ ಗೆ ಸಾಮಾನಿನ ಬೆಲೆಪಟ್ಟಿ ಮಾಡುತ್ತದೆ, ಮತ್ತು ಪ್ರೈಮ್ ಹಾರ್ಡ್ ವೇರ್ಸ್ ಗೆ ಪೂರೈಕೆ ಮಾಡುತ್ತದೆ, ಗಣೇಶ್ ಟ್ರೇಡರ್ಸ್ Form E1 ಅನ್ನು ಮಾರುತಿ ಟ್ರೇಡರ್ಸ್ ಗೆ ನೀಡುತ್ತದೆ, ಮತ್ತು ಮಾರುತಿ ತಯಾರಿಸಿದ ಸಿ ನಮೂನೆ ಮೂಲ ಶೇಕಡ 2ರಷ್ಟು ಸಿಎಸ್ಟಿ ದೊರಕುತ್ತದೆ. ಇದರ ಜೊತೆಗೆ ಮಾರುತಿ ಟ್ರೇಡರ್ಸ್ ತೆರಿಗೆ ವಿಧಿಸದೆ ಸಿ ನಮೂನೆ ಮೂಲಕ ಪ್ರೈಮ್ ಹಾರ್ಡ್ ವೇರ್ಸ್ ಗೆ ಸಾಮಾನಿನ ಬೆಲೆಪಟ್ಟಿ ಮಾಡುತ್ತದೆ ಮತ್ತು ಪ್ರೈಮ್ ಹಾರ್ಡ್ ವೇರ್ಸ್ ಗಾಗಿ ಲಾರಿ ಸಾಮಾನಿನ ಬೆಲೆಪಟ್ಟಿ ನೀಡುತ್ತದೆ.

ಜಿಎಸ್ಟಿಯಡಿ ಬೆಲೆಪಟ್ಟಿ ಒಂದೆಡೆ, ಪೂರೈಕೆ ಇನ್ನೊಂದು ಕಡೆಗೆ ವಹಿವಾಟು ಹೇಗಿರಲಿದೆ?

ಜಿಎಸ್ಟಿಯಡಿಯಲ್ಲಿ ಅಂತರ್ ರಾಜ್ಯ ಅಥವಾ ರಾಜ್ಯದೊಳಗೆ ನಡೆಯುವ ವಹಿವಾಟಿನಲ್ಲಿ ಸರಕಿನ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು ಹೆಚ್ಚು ಕ್ಲಿಷ್ಟವಾಗಿರುತ್ತದೆ. ನೀಡಬೇಕಾದ ತೆರಿಗೆಯನ್ನೆಲ್ಲ ವಿಧಿಸಲಾಗುತ್ತದೆ. ಪೂರೈಕೆಯ ಸ್ಥಳದ ಕುರಿತು ನಾವು > “ಜಿಎಸ್ಟಿಯಲ್ಲಿ ಪೂರೈಕೆಯ ಸ್ಥಳ’’ ಎಂಬ ಲೇಖನದಲ್ಲಿ ವಿವರವಾಗಿ ಮಾಹಿತಿ ನೀಡಿದ್ದೇವೆ.

Under GST, the place of supply of goods is very critical to determine the transaction as interstate or intrastate. Click To Tweet

ಜಿಎಸ್ಟಿಯಲ್ಲಿ ಮೂರನೇ ವ್ಯಕ್ತಿಯ ನಿರ್ದೇಶನದ ಮೇಲೆ ಸ್ವೀಕೃತದಾರರಿಗೆ ಪೂರೈಕೆದಾರರು ಸರಕನ್ನು ಪೂರೈಸಿದರೆ, ಮೂರನೇ ವ್ಯಕ್ತಿಯೇ ಸರಕನ್ನು ಪಡೆದಿದ್ದಾನೆ ಎಂದು ಪರಿಗಣಿಸಲಾಗುತ್ತದೆ, ಮತ್ತು ಅಂತಹ ಮೂರನೇ ವ್ಯಕ್ತಿಯ ಪ್ರಮುಖ ವ್ಯವಹಾರದ ಸ್ಥಳವೇ ಪೂರೈಕೆಯ ಸ್ಥಳ ಆಗುತ್ತದೆ. ಇದನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ.

ಗಣೇಶ್ ಟ್ರೇಡರ್ಸ್, ಮಹಾರಾಷ್ಟ್ರದಲ್ಲಿರುವ ಕಬ್ಭಿಣದ ಸರಕುಗಳ ಮಧ್ಯವರ್ತಿ. ಅವರು 100 ಅಲ್ಯುಮಿನಿಯಂ ಏಣಿಗಳನ್ನು ಕಳುಹಿಸಿಕೊಡುವಂತೆ ಮತ್ತು ಈ ಏಣಿಗಳನ್ನು ತಮಿಳುನಾಡಿನಲ್ಲಿರುವ ಪ್ರೈಮ್ ಹಾರ್ಡ್ ವೇರ್ಸ್ ಗೆ ಕಳುಹಿಸಿಕೊಡುವಂತೆ ಕರ್ನಾಟಕದಲ್ಲಿರುವ ಮಾರುತಿ ಟ್ರೇಡರ್ಸ್ ನಿಂದ ಆದೇಶ ಪಡೆಯುತ್ತಾರೆ..

Managing bill to ship to transactions under GST

ಈ ಚಿತ್ರಿಸಿದ ಉದಾಹರಣೆಯ ಪ್ರಕಾರ ಮಾರುತಿ ಟ್ರೇಡರ್ಸ್ ನಿಂದ ಗಣೇಶ್ ಟ್ರೇಡರ್ಸ್ ಅಲ್ಯುಮಿನಿಯಂ ಲೇಡರ್ ಗಳನ್ನು ತಮಿಳುನಾಡಿನಲ್ಲಿರುವ ಪ್ರೈಮ್ ಹಾರ್ಡ್ ವೇರ್ಸ್ ಗೆ ತಲುಪಿಸುವಂತೆ ಸೂಚನೆ ಪಡೆದಿದ್ದಾರೆ. ಇಲ್ಲಿ, ಮಾರುತಿ ಟ್ರೇಡರ್ಸ್ ಅನ್ನು ಮೂರನೇ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮೂರನೇ ವ್ಯಕ್ತಿಯ ಸ್ಥಳವೇ ಪೂರೈಕೆಯ ಸ್ಥಳವಾಗುತ್ತದೆ. ಹೀಗಾಗಿ ಕರ್ನಾಟಕವೇ ಪೂರೈಕೆಯ ಸ್ಥಳವಾಗುತ್ತದೆ. ಇದರ ಪ್ರಕಾರ, ಗಣೇಶ್ ಟ್ರೇಡರ್ಸ್ ಐಜಿಎಸ್ಟಿಯನ್ನು ಮಾರುತಿ ಟ್ರೇಡರ್ಸ್ ಗೆ ಬಿಲ್ ಮಾಡುತ್ತದೆ. ಎರಡನೆಯ ಭಾಗದ ವಹಿವಾಟಿನಲ್ಲಿ ಮಾರುತಿ ಟ್ರೇಡರ್ಸ್ ಮತ್ತು ಪ್ರೈಮ್ ಹಾರ್ಡ್ ವೇರ್ಸ್ ನ ವ್ಯವಹಾರವೂ ಅಂತರ್ ರಾಜ್ಯವಾಗಿದೆ ಮತ್ತು ಐಜಿಎಸ್ಟಿ ವಿಧಿಸಲಾಗುತ್ತದೆ.

ಇದನ್ನು ವಿವಿಧ ಸನ್ನಿವೇಶಗಳ ಆಧಾರದಲ್ಲಿ ಚರ್ಚಿಸೋಣ

ಸನ್ನಿವೇಶ 1
ವಿಷಯ ಪೂರೈಕೆದಾರರು ಮೂರನೇ ಪಾರ್ಟಿ ಸ್ವೀಕೃತಿದಾರರು ಪೂರೈಕೆಯ ಸ್ಥಳ ವಹಿವಾಟಿನ ವಿಧ
ರಾಜ್ಯ ಮಹಾರಾಷ್ಟ್ರ ಮಹಾರಾಷ್ಟ್ರ ಕರ್ನಾಟಕ ಮಹಾರಾಷ್ಟ್ರ ಅಂತರ್ ರಾಜ್ಯ
ಪಾರ್ಟಿ ಹೆಸರು ಗಣೇಶ್ ಟ್ರೇಡರ್ಸ್ ಮಾರುತಿ ಟ್ರೇಡರ್ಸ್ ಪ್ರೈಮ್ ಹಾರ್ಡ್ ವೇರ್

Calculation of GST on bill to ship to transactions

ಚಿತ್ರದಲ್ಲಿ ನೀಡಿದ ಉದಾಹರಣೆಯ ಪ್ರಕಾರ, ಮಾರುತಿ ಟ್ರೇಡರ್ಸ್ ಸೂಚನೆ ಮೇರೆಗೆ ಗಣೇಶ್ ಟ್ರೇಡರ್ಸ್ ಅಲ್ಯುಮಿನಿಯಂ ಏಣಿಗಳನ್ನು ಕರ್ನಾಟಕದಲ್ಲಿರುವ ಪ್ರೈಮ್ ಹಾರ್ಡ್ ವೇರ್ಸ್ ಗೆ ಪೂರೈಕೆ ಮಾಡಿದೆ. ಹೀಗಾಗಿ, ಮಾರುತಿ ಟ್ರೇಡರ್ಸ್ ಅನ್ನು ಮೂರನೇ ವ್ಯಕ್ತಿಯಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ, ಪೂರೈಕೆಯ ಸ್ಥಳವು, ಮೂರನೇ ವ್ಯಕ್ತಿಯ ವ್ಯವಹಾರದ ಸ್ಥಳವಾದ ಮಹಾರಾಷ್ಟ್ರವಾಗುತ್ತದೆ. ಇದರ ಪ್ರಕಾರ, ಗಣೇಶ್ ಟ್ರೇಡರ್ಸ್ ಸಿಜಿಎಸ್ಟಿ + ಎಸ್ಜಿಎಸ್ಟಿಯನ್ನು ಮಾರುತಿ ಟ್ರೇಡರ್ಸ್ ಗೆ ಬೆಲೆಪಟ್ಟಿ ಮಾಡುತ್ತದೆ. ಮಾರುತಿ ಟ್ರೇಡರ್ಸ್ ಮತ್ತು ಪ್ರೈಮ್ ಹಾರ್ಡ್ ವೇರ್ ನ ವಹಿವಾಟಿನ ಎರಡನೇ ಭಾಗವು ಅಂತರ್ ರಾಜ್ಯವಾಗಿದೆ ಮತ್ತು ಐಜಿಎಸ್ಟಿಯನ್ನು ವಿಧಿಸಲಾಗುತ್ತದೆ.

ಸನ್ನಿವೇಶ 2

ವಿಷಯ ಪೂರೈಕೆದಾರರು ಮೂರನೇ ಪಾರ್ಟಿ ಸ್ವೀಕೃತಿದಾರರು ಪೂರೈಕೆಯ ಸ್ಥಳ ವಹಿವಾಟಿನ ವಿಧ
ರಾಜ್ಯ ಮಹಾರಾಷ್ಟ್ರ ಕರ್ನಾಟಕ ಕರ್ನಾಟಕ ಕರ್ನಾಟಕ ಅಂತರ್ ರಾಜ್ಯ
ಪಾರ್ಟಿಯ ಹೆಸರು ಗಣೇಶ್ ಟ್ರೇಡರ್ಸ್ ಮಾರುತಿ ಟ್ರೇಡರ್ಸ್ ಪ್ರೈಮ್ ಹಾರ್ಡ್ ವೇರ್ಸ್

Bili to ship to examples

ಮೇಲಿನ ಸನ್ನಿವೇಶದಲ್ಲಿ ಮೂರನೇ ಪಕ್ಷದ ಪ್ರಮುಖ ವ್ಯವಹಾರ ಸ್ಥಳ ಕರ್ನಾಟಕ, ಮತ್ತು ಪೂರೈಕೆ ಮಾಡುವ ಸ್ಥಳವೂ ಕರ್ನಾಟಕವಾಗಿದೆ. ಇದು ರಾಜ್ಯದೊಳಗಿನ ವಹಿವಾಟು ಮತ್ತು ಐಜಿಎಸ್ಟಿ ಪಾವತಿಸುವ ಬಾಧ್ಯತೆ ಹೊಂದಿರುತ್ತದೆ. ಮಾರುತಿ ಟ್ರೇಡರ್ಸ್ ಮತ್ತು ಪ್ರೈಮ್ ಹಾರ್ಡ್ ವೇರ್ಸ್ ನಡುವೆ ನಡೆಯುವ ಈ ವಹಿವಾಟಿನ ಎರಡನೇ ಭಾಗವು ಅಂತರ್ ರಾಜ್ಯವಾಗಿದೆ ಮತ್ತು ಸಿಜಿಎಸ್ಟಿ + ಎಸ್ಜಿಎಸ್ಟಿ ವಿಧಿಸಲಾಗುತ್ತದೆ.

ಈ ಬ್ಲಾಗ್ ಬರಹ ಓದಿ: ಸಿಜಿಎಸ್ಟಿ, ಎಸ್ಜಿಎಸ್ಟಿ ಮತ್ತು ಐಜಿಎಸ್ಟಿ ವಿವರ

Are you GST ready yet?

Get ready for GST with Tally.ERP 9 Release 6

195,306 total views, 72 views today

Yarab A

Author: Yarab A

Yarab is associated with Tally since 2012. In his 7+ years of experience, he has built his expertise in the field of Accounting, Inventory, Compliance and software product for the diverse industry segment. Being a member of ‘Centre of Excellence’ team, he has conducted several knowledge sharing sessions on GST and has written 200+ blogs and articles on GST, UAE VAT, Saudi VAT, Bahrain VAT, iTax in Kenya and Business efficiency.