ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ದೂರಸಂಪರ್ಕ ಸೇವೆಗಳಿಗೆ ಮತ್ತು ಹಣಕಾಸು ಸೇವೆಗಳ ಪೂರೈಕೆಯ ಸ್ಥಳವನ್ನು ಗುರುತಿಸಲು ನಿರ್ದಿಷ್ಟ ನಿಯಮಗಳನ್ನು ಮಾಡಲಾಗಿದೆ. ಪೂರೈಕೆಗೆ ಸರಿಯಾದ ತೆರಿಗೆಯನ್ನು ವಿಧಿಸಲು ಪೂರೈಕೆಯ ಸ್ಥಳವನ್ನು ಗುರುತಿಸುವುದು ಅತ್ಯಂತ ಅವಶ್ಯವಾಗಿದೆ. ದೂರಸಂಪರ್ಕ ಸೇವೆಗಳಿಗೆ ಮತ್ತು ಹಣಕಾಸು ಸೇವೆಗಳಿಗೆ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು ಹೇಗೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ.

ದೂರಸಂಪರ್ಕ ಸೇವೆಗಳ ಪೂರೈಕೆ ಸ್ಥಳ

ಕರೆ ಮಾಡುವಿಕೆ, ಅಂತರ್ ಜಾಲ, ಮಾಹಿತಿ ರವಾನೆ, ಪ್ರಸಾರ, ಕೇಬಲ್, ಡಿಟಿಎಚ್ (ಡೈರೆಕ್ಟ್ ಟು ಹೋಮ್) ಸೇವೆಗಳು ಇತ್ಯಾದಿಗಳು ದೂರಸಂಪರ್ಕ ಸೇವೆಗಳಲ್ಲಿ ಸೇರಿವೆ. ಪೂರೈಕೆಯ ಸ್ಥಳವನ್ನು ನಿರ್ಧರಿಸಲು ದೂರಸಂಪರ್ಕ ಸೇವೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ:

  1. ಸ್ಥಿರ ದೂರವಾಣಿ ವ್ಯವಸ್ಥೆಗಳು, ಲೀಸ್ಡ್ ಸರ್ಕ್ಯೂಟ್ ಗಳು, ಇಂಟರ್ ನೆಟ್ ಗುತ್ತಿಗೆಯ ಸರ್ಕ್ಯೂಟ್ ಗಳು, ಕೇಬಲ್ ಅಥವಾ ಡಿಶ್ ಆಂಟೆನಾ ಇತ್ಯಾದಿ ಸೇವೆ ಒದಗಿಸುವುದು
  2. ಪೋಸ್ಟ್ ಪೇಯ್ಡ್ ಮೊಬೈಲ್ ಸಂಪರ್ಕ
  3. ಪ್ರಿಪೇಯ್ಡ್ ಮೊಬೈಲ್ ಸಂಪರ್ಕ
ಸೇವೆಯ ಬಗೆ ಪೂರೈಕೆಯ ಸ್ಥಳ ಉದಾಹರಣೆ
ಸ್ಥಿರ ದೂರಸಂಪರ್ಕ ಲೈನ್, ಗುತ್ತಿಗೆ ಸರ್ಕ್ಯೂಟ್ ಗಳು, ಇಂಟರ್ ನೆಟ್ ಗುತ್ತಿಗೆ ಸರ್ಕ್ಯೂಟ್ ಗಳು, ಕೇಬಲ್ ಅಥವಾ ಡಿಶ್ ಆಂಟೆನಾ ಇತ್ಯಾದಿಗಳನ್ನು ಬಳಸಿ ಸೇವೆಯನ್ನು ಒದಗಿಸುವುದು.ಯಾವ ಸ್ಥಳದಲ್ಲಿ ದೂರಸಂಪರ್ಕ ಲೈನ್ ಗಳು, ಲೀಸ್ಡ್ ಸರ್ಕ್ಯೂಟ್ ಗಳು, ಕೇಬಲ್ ಸಂಪರ್ಕ ಅಥವಾ ಡಿಶ್ ಆಂಟೆನಾ ಅಳವಡಿಸುವುದುಮಧ್ಯಪ್ರದೇಶದಲ್ಲಿ ಡಿಟಿಎಚ್ ಸೇವೆ ನೀಡುವ ಸಲುವಾಗಿ ನೋಂದಾಯಿಸಿರುವ ಲಿಯೊ ಡಿಟಿಎಚ್ ನಿಂದ ಮದ್ಯಪ್ರದೇಶದ ನಿವಾಸಿಯಾಗಿರುವ ಶ್ರೀಯುತ ರಾಜೇಶ್ ಅವರು ಆಂಟೆನಾ ಖರೀದಿಸುತ್ತಾರೆ. ಈ ಡಿಟಿಎಚ್ ಅನ್ನು ಶ್ರೀಯುತ ರಾಜೇಶ್ ಮನೆಯಲ್ಲಿ ಅಳವಡಿಸಲಾಗುತ್ತದೆ.
ಪೂರೈಕೆದಾರರ ಸ್ಥಳ: ಮಧ್ಯಪ್ರದೇಶ
ಪೂರೈಕೆಯ ಸ್ಥಳ: ಮಧ್ಯಪ್ರದೇಶ
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
ಪೋಸ್ಟ್ ಪೇಯ್ಡ್ ಮೊಬೈಲ್ ಸಂಪರ್ಕಪೂರೈಕೆದಾರರ ದಾಖಲೆಗಳಲ್ಲಿರುವ ಬೆಲೆಪಟ್ಟಿಯ ವಿಳಾಸಆಂಧ್ರ ಪ್ರದೇಶದಲ್ಲಿರುವ ಶ್ರೀಯುತ ಸಾರಥಿಯು ಕರ್ನಾಕಟದ ಬೆಲೆಪಟ್ಟಿ ವಿಳಾಸ ಹೊಂದಿರುವ ತನ್ನ ಪೋಷಕರಿಗಾಗಿ ಪೋಸ್ಟ್ ಪೇಯ್ಡ್ ಮೊಬೈಲ್ ಸಂಪರ್ಕ ಪಡೆದುಕೊಳ್ಳುತ್ತಾರೆ. ಕರ್ನಾಟಕದಲ್ಲಿ ನೋಂದಾಯಿಸಿರುವ ಆರ್ ಟಿ ಟೆಲಿಕಾಂನಿಂದ ಮೊಬೈಲ್ ಸಂಪರ್ಕ ಪಡೆಯಲಾಗುತ್ತದೆ.
ಪೂರೈಕೆದಾರರ ಸ್ಥಳ: ಕರ್ನಾಟಕ
ಪೂರೈಕೆಯ ಸ್ಥಳ: ಪೋಸ್ಟ್ ಪೇಯ್ಡ್ ಮೊಬೈಲ್ ಸಂಪರ್ಕದ ಬೆಲೆಪಟ್ಟಿ ವಿಳಾಸ ಕರ್ನಾಟಕದ್ದಾಗಿದೆ. ಹೀಗಾಗಿ, ಪೂರೈಕೆಯ ಸ್ಥಳ ಕರ್ನಾಟಕವಾಗಿದೆ.
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
ಪೂರೈಕೆದಾರರ ಮಾರಾಟ ದಳ್ಳಾಲಿ/ಮರು ಮಾರಾಟಗಾರ /ವಿತರಕರು ಪೂರೈಕೆ ಮಾಡಿದ ಸಂದರ್ಭದಲ್ಲಿ.
ಪೂರೈಕೆಯ ಸಮಯದಲ್ಲಿ ಪೂರೈಕೆದಾರರ ದಾಖಲೆಯಲ್ಲಿ ಇರುವ ಮಾರಾಟ ದಳ್ಳಾಲಿ/ಮರು ಮಾರಾಟಗಾರ /ವಿತರಕರ ವಿಳಾಸ.
ತಮಿಳು ನಾಡಿನಲ್ಲಿ ನೋಂದಾಯಿಸಿರುವ ರಾಧಾ ರೀಚಾರ್ಜ್ಸ್, ಆರ್ ಟಿ ದೂರಸಂಪರ್ಕದ ಗ್ರಾಹಕರಿಗೆ ಪ್ರೀಪೇಯ್ಡ್ ಮೊಬೈಲ್ ರಿಚಾರ್ಜ್ ವೋಚರ್ ನೀಡುತ್ತದೆ.
ಪೂರೈಕೆದಾರ ಸ್ಥಳ: ತಮಿಳುನಾಡು
ಪೂರೈಕೆಯ ಸ್ಥಳ: ರಾಧ ರೀಚಾರ್ಜ್ ನ ವಿಳಾಸವು ಪೂರೈಕೆಯ ಸ್ಥಳವಾಗಿದೆ. ಅಂದರೆ, ತಮಿಳುನಾಡು.
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
ತಮಿಳುನಾಡಿನಲ್ಲಿ ನೋಂದಾಯಿತ ಚಿಲ್ಲರೆ ವ್ಯಾಪಾರಿ ರಾಧಾ ರೀಚಾರ್ಜ್ ಅವರು ಆರ್ಟಿ ಟೆಲಿಕಾಮ್ನ ಪ್ರಿಪೇಯ್ಡ್ ರೀಚಾರ್ಜ್ ಚೀಟಿಗಳನ್ನು ಗ್ರಾಹಕರು ನೀಡುತ್ತಾರೆ.
ಸರಬರಾಜು ಮಾಡುವ ಸ್ಥಳ: ತಮಿಳುನಾಡು
ಸರಬರಾಜು ಸ್ಥಳ: ಪೂರೈಕೆ ಸ್ಥಳವು ರಾಧಾ ರೀಚಾರ್ಜ್ನ ವಿಳಾಸ, ಅಂದರೆ ತಮಿಳುನಾಡು.
ಆದ್ದರಿಂದ, ಇದು ಒಂದು ವಿಲಕ್ಷಣ ಸರಬರಾಜು ಮತ್ತು ಅನ್ವಯವಾಗುವ ತೆರಿಗೆಗಳು CGST + SGST.
ಅಂತರ್ ಜಾಲ ಬ್ಯಾಂಕಿಂಗ್ ಅಥವಾ ಇತರೆ ವಿದ್ಯುನ್ಮಾನ ವಿಧಾನದಲ್ಲಿ ರೀಚಾರ್ಜ್ ಪಾವತಿ ಮಾಡಿರುವುದು.
ಪೂರೈಕೆದಾರರ ದಾಖಲೆಯಲ್ಲಿರುವ ಸ್ವೀಕೃತಿದಾರರ ಸ್ಥಳ
ಪುದುಚೇರಿಯ ಶ್ರೀಮತಿ ಲಕ್ಷ್ಮಿ ಅವರು ತನ್ನಲ್ಲಿರುವ ಆರ್ ಟಿ ದೂರಸಂಪರ್ಕ ಮೊಬೈಲ್ ಸಂಪರ್ಕಕ್ಕೆ ರೀಚಾರ್ಜ್ ಮಾಡಿಸಿಕೊಳ್ಳುತ್ತಾರೆ. ಈ ರೀಚಾರ್ಜ್ ಪಾವತಿಯನ್ನು ಆರ್ ಟಿ ಟೆಲಿಕಾಂನ ವೆಬ್ ತಾಣದ ಮೂಲಕ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡಿ ಮಾಡಲಾಗಿದೆ. ಆರ್ ಟಿ ಟೆಲಿಕಾಂ ಪುದುಚೇರಿಯಲ್ಲಿ ನೋಂದಾಯಿಸಿಸದೆ ಮತ್ತು ಶ್ರೀಮತಿ ಲಕ್ಷ್ಮಯವರ ವಿಳಾಸವು ಆರ್ ಟಿ ಟೆಲಿಕಾಂನ ದಾಖಲೆಯಲ್ಲಿ ಪುದುಚೇರಿ ಎಂದಿದೆ.
ಪೂರೈಕೆದಾರರ ಸ್ಥಳ: ಪುದುಚೇರಿ
ಪೂರೈಕೆಯ ಸ್ಥಳ: ಪುದುಚೇರಿ
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.

 

ಹಣಕಾಸು ಸೇವೆಗಳಲ್ಲಿ ಪೂರೈಕೆಯ ಸ್ಥಳ

ಹಣಕಾಸು ಸೇವೆಯನ್ನು 2 ವಿಭಾಗಗಳಾಗಿ ವಿಭಾಗಿಸಲಾಗುತ್ತದೆ:

  1. ವಿಮಾ ಸೇವೆಗಳು
  2. ಬ್ಯಾಂಕಿಂಗ್ ಮತ್ತು ಇತರೆ ಹಣಕಾಸು ಸೇವೆಗಳು
ಸೇವೆಯ ವಿಧ ಸ್ವೀಕೃತಿದಾರರ ವಿಧ ಪೂರೈಕೆಯ ಸ್ಥಳ ವಿಳಾಸ
ವಿಮಾ ಸೇವೆಗಳುನೋಂದಾಯಿಸಿದ ವ್ಯಕ್ತಿಸ್ವೀಕೃತಿದಾರರ ಸ್ಥಳಉತ್ತರ ಪ್ರದೇಶದಲ್ಲಿ ನೋಂದಾಯಿಸಿರುವ ಅಲೆನ್ ಫೈರ್ ಇನ್ಸೂರೆನ್ಸ್ ಕಾರ್ಪೊರೇಷನ್, ಉತ್ತರ ಪ್ರದೇಶದಲ್ಲಿ ನೋಂದಾಯಿಸಿರುವ ಗಣೇಶ್ ಹಾರ್ಡ್ ವೇರ್ ಗೆ ಬೆಂಕಿ ಆಕಸ್ಮಿಕ ವಿಮಾ ಸೇವೆಯನ್ನು ಒದಗಿಸಿದೆ.
ಪೂರೈಕೆದಾರರ ಸ್ಥಳ: ಉತ್ತರ ಪ್ರದೇಶ
ಪೂರೈಕೆಯ ಸ್ಥಳ: ಉತ್ತರ ಪ್ರದೇಶ
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
ನೋಂದಣಿ ಮಾಡದ ವ್ಯಕ್ತಿಪೂರೈಕೆದಾರರ ದಾಖಲೆಯಲ್ಲಿ ಸ್ವೀಕೃತಿದಾರರ ಸ್ಥಳ td>ಉತ್ತರ ಪ್ರದೇಶದಲ್ಲಿ ನೋಂದಾಯಿಸಿರುವ ಅಲೆನ್ ಫೈರ್ ಇನ್ಸೂರೆನ್ಸ್ ಕಾರ್ಪೊರೇಷನ್, ನೋಂದಾಯಿಸದೆ ಇರುವ ವ್ಯಕ್ತಿ ಶ್ರೀಯುತ ರಾಹುಲ್ ಅವರಿಗೆ ಅಗ್ನಿ ಆಕಸ್ಮಿಕ ವಿಮಾ ಸೇವೆಯನ್ನು ಒದಗಿಸುತ್ತದೆ. ಅಲೆನ್ ಫೈರ್ ಇನ್ಸೂರೆನ್ಸ್ ಕಾರ್ಪೊರೇಷನ್ ನ ದಾಖಲೆಯಲ್ಲಿ ಆ ವ್ಯಕ್ತಿಯ ವಿಳಾಸವು ಉತ್ತರ ಪ್ರದೇಶ ಎಂದಿರುತ್ತದೆ.
ಪೂರೈಕೆದಾರರ ಸ್ಥಳ: ಉತ್ತರ ಪ್ರದೇಶ
ಪೂರೈಕೆಯ ಸ್ಥಳ: ಉತ್ತರ ಪ್ರದೇಶ
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
ಬ್ಯಾಂಕಿಂಗ್ ಮತ್ತು ಇತರೆ ಹಣಕಾಸು ಸೇವೆಗಳುಅನ್ವಯ ಆಗುವುದಿಲ್ಲಪೂರೈಕೆದಾರರ ದಾಖಲೆಯಲ್ಲಿ ಸ್ವೀಕೃತಿದಾರರ ಸ್ಥಳ
ಎಲ್ಲಾದರೂ ಪೂರೈಕೆದಾರರ ದಾಖಲೆಗಳಲ್ಲಿ ಸ್ವೀಕೃತಿದಾರರ ಸ್ಥಳ ನಮೂದು ಆಗಿಲ್ಲವಾದರೆ ಪೂರೈಕೆದಾರರ ಸ್ಥಳವೇ ಪೂರೈಕೆಯ ಸ್ಥಳವಾಗಿದೆ
ಶ್ರೀಮತಿ ಮೋನಾ ಅವರು ಮಹಾರಾಷ್ಟ್ರದ ನಿವಾಸಿಯಾಗಿದ್ದು, ಗುಜರಾತ್ ನಲ್ಲಿ ನೋಂದಾಯಿಸಿರುವ ಶ್ರೀ ಸೂರ್ಯ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದಾರೆ. ಬ್ಯಾಂಕ್ ನ ದಾಖಲೆಯಲ್ಲಿ ಶ್ರೀಮತಿ ಮೋನಾ ಅವರ ಪೋಷಕರ ಮನೆಯು ಗುಜರಾತ್ ನಲ್ಲಿ ಇರುವುದಾಗಿ ದಾಖಲಾಗಿದೆ.
ಶ್ರೀ ಸೂರ್ಯ ಕೋ-ಆಪರೇಟಿವ್ ಬ್ಯಾಂಕ್ ತನ್ನ ಬ್ಯಾಂಕಿಂಗ್ ಸೇವೆಗಳನ್ನು ನೀಡಲು,
ಪೂರೈಕೆದಾರರ ಸ್ಥಳ: ಗುಜರಾತ್
ಪೂರೈಕೆಯ ಸ್ಥಳ: ಗುಜರಾತ್
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.

ನೀವು ನೋಡಿದ ಹಾಗೆ, ಇಲ್ಲಿ ಎಲ್ಲಾ ಸಂದರ್ಭಗಳಲ್ಲಿ ದೂರಸಂಪರ್ಕ ಮತ್ತು ಹಣಕಾಸು ಸೇವೆಗಳ ಪೂರೈಕೆಯ ಸ್ಥಳವು ರಾಜ್ಯದೊಳಗೆ ಆಗಿರುತ್ತದೆ. ಇದು ಯಾಕೆಂದರೆ, ಸೇವೆಯ ಪೂರೈಕೆದಾರರು ಈಗ ಪ್ರತಿಯೊಂದು ರಾಜ್ಯದಲ್ಲಿಯೂ ತೆರಿಗೆ ವಿಧಿಸಬಲ್ಲ ಸೇವೆಯನ್ನು ಪೂರೈಕೆ ಮಾಡಿದರೆ ಅವರು ನೋಂದಣಿ ಮಾಡಿಕೊಳ್ಳುವ ಅಗತ್ಯವಿರುತ್ತದೆ.

Are you GST ready yet?

Get ready for GST with Tally.ERP 9 Release 6

131,521 total views, 87 views today