ಸರಕು ಮತ್ತು ಸೇವಾ ತೆರಿಗೆ ಪದ್ಧತಿಯಡಿಯಲ್ಲಿ, , “ಪೂರೈಕೆಯು’ ಒಂದು ತೆರಿಗೆ ವಿಧಿಸಬಹುದಾದ ಕಾರ್ಯಕ್ರಮವಾಗಿದೆ ಮತ್ತು ಎಲ್ಲಿ ಪೂರೈಕೆ ನಡೆಯುತ್ತದೆಯೋ ಆ ರಾಜ್ಯದಲ್ಲಿ ತೆರಿಗೆ ವಿಧಿಸುವಿಕೆಯ “ಗಮ್ಯ ಆಧರಿತ ಅನುಭೋಗ ತೆರಿಗೆ’’ಯಲ್ಲಿ ಪ್ರಮುಖ ರೂಪಾಂತರವಾಗಲಿದೆ. ಪೂರೈಕೆಗೆ ಯಾವ ಬಗೆಯ ತೆರಿಗೆ ವಿಧಿಸಲಾಗುತ್ತದೆ ಎನ್ನುವುದರ ಮೇಲೆ ಪೂರೈಕೆಯ ಸ್ಥಳವನ್ನು ನಿರ್ಧರಿಸಲಾಗುತ್ತದೆ.
ಸರಕಿನ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು ಸರಳವಾಗಿದೆ. ಇದಕ್ಕೆ ನಮ್ಮ ಈ ಹಿಂದಿನ ಲೇಖನಗಳನ್ನು ಪರಾಮರ್ಶಿಸಬಹುದು- ಸರಕುಗಳ ಚಲನೆಯಲ್ಲಿದ್ದಾಗ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು and ಸರಕುಗಳು ಚಲನೆಯಲ್ಲಿ ಇಲ್ಲದೆ ಇರುವಾಗ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು.

ತನ್ನ ಅಸ್ಪಷ್ಟತೆಯಿಂದಾಗಿ, ಸೇವೆಯಲ್ಲಿ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು ಹೆಚ್ಚು ಸಂಕೀರ್ಣವಾಗಿದೆ. ಸೇವೆಯಲ್ಲಿ ಪೂರೈಕೆಯ ಸ್ಥಳವನ್ನು ನಿರ್ಧರಿಸುವ ಪ್ರಮುಖ ನಿಯಮಗಳನ್ನು ರಚಿಸಲಾಗಿದೆ, ಹಲವು ಸೇವೆಗಳಲ್ಲಿ ಪೂರೈಕೆಯ ಸ್ಥಳವನ್ನು ನಿರ್ಧರಿಸಲು ನಿರ್ದಿಷ್ಟ ನಿಯಮಗಳನ್ನು ರೂಪಿಸಲಾಗಿದೆ. ಈ ಲೇಖನದಲ್ಲಿ ಸಾರಿಗೆ ಸೇವೆಗಳಿಗೆ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು ಹೇಗೆ ಎಂದು ನಾವು ಅರ್ಥಮಾಡಿಕೊಳ್ಳೋಣ.
ಸಾರಿಗೆ ಸೇವೆಗಳಲ್ಲಿ 3 ವಿಧಗಳಿವೆ:

  • ಸರಕಿನ ಸಾರಿಗೆ
  • ಪ್ರಯಾಣಿಕರ ಸಾರಿಗೆ ವ್ಯವಸ್ಥೆ
  • ಸಾರಿಗೆಯಲ್ಲಿ ಸೇವೆಯನ್ನು ಪೂರೈಕೆ ಮಾಡುವುದು

ಈ ಮೂರು ಬಗೆಯ ಸೇವೆಗಳಲ್ಲಿ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು ಹೇಗೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ.

ಸೇವೆಯ ವಿಧ ಸ್ವೀಕೃತಿದಾರರ ವಿಧ ಪೂರೈಕೆಯ ಸ್ಥಳ ಉದಾಹರಣೆ
ಸರಕುಗಳ ಸಾರಿಗೆ ನೋಂದಾಯಿತ ವ್ಯಕ್ತಿ ಸ್ವೀಕೃತಿದಾರರ ಸ್ಥಳ ತಮಿಳುನಾಡು ಮೂಲದ ರೋಫ್ ಟ್ರಾನ್ಸ್ ಫೋರ್ಟರ್ಸ್ , ತಮಿಳುನಾಡಿನ ವಾಹನ ತಯಾರಿಕಾ ಕಂಪನಿಯಾದ ಸೂಪರ್ ಕಾರ್ಸ್ ಲಿಮಿಟೆಡಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತದೆ.

ಪೂರೈಕೆ ದಾರರ ಸ್ಥಳ: ತಮಿಳು ನಾಡು
ಪೂರೈಕೆಯ ಸ್ಥಳ: ತಮಿಳು ನಾಡು
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.

ನೋಂದಣಿ ಮಾಡದ ವ್ಯಕ್ತಿ ಸಾಗಣೆಗಾಗಿ ಸರಕನ್ನು ನೀಡುವ ಸ್ಥಳ ಮಹಾರಾಷ್ಟ್ರದಲ್ಲಿ ನೋಂದಾಯಿಸಿರುವ ಕೋರಿಯರ್ ಏಜೆನ್ಸಿಯಾದ ರೋಹನ್ ಕೋರಿಯರ್ಸ್, ಕರ್ನಾಕಟದ ಶ್ರೀಯುತ ರಾಮ್ ಎಂಬ ನೋಂದಾಯಿಸದ ವ್ಯಕ್ತಿಗೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ದಾಖಲೆಗಳನ್ನು ರವನೆ ಮಾಡುವ ಕೋರಿಯರ್ ಸೇವೆಯನ್ನು ಒದಗಿಸುತ್ತದೆ.
ಪೂರೈಕೆದಾರರ ಸ್ಥಳ: ಮಹಾರಾಷ್ಟ್ರ
ಪೂರೈಕೆಯ ಸ್ಥಳ: ಸಾಗಣೆದಾರರಿಗೆ ದಾಖಲೆಗಳನ್ನು ಸಾಗಾಟಕ್ಕಾಗಿ ನೀಡಿದ ಸ್ಥಳವಾದ ಮಹಾರಾಷ್ಟ್ರ.
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
ಪ್ರಯಾಣಿಕರ ಸಾರಿಗೆನೋಂದಾಯಿತ ವ್ಯಕ್ತಿ ಸ್ವೀಕೃತಿದಾರರ ಸ್ಥಳ ಪೂರೈಕೆದಾರರ ಸ್ಥಳ: ದೆಹಲಿ
ಪೂರೈಕೆಯ ಸ್ಥಳ: ಗುಜರಾತ್
ಇದು ಹೊರ ರಾಜ್ಯಕ್ಕೆ ಪೂರೈಕೆಯಾಗಿದೆ ಮತ್ತು ಐಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
ನೋಂದಣಿ ಮಾಡದ ವ್ಯಕ್ತಿ ಮುಂದಿನ ಪ್ರಯಾಣಕ್ಕೆ ಪ್ರಯಾಣಿಕರನ್ನು ಹತ್ತಿಸುವ ಸ್ಥಳ ನೋಂದಾಯಿಸದೆ ಇರುವ ವ್ಯಕ್ತಿಗೆ ಪ್ರಯಾಣಿಕರ ಸಾಗಾಟ ಸೇವೆ ನೀಡಿದ ಸ್ಥಳ, ಇದರಲ್ಲಿ 3 ಸಂದರ್ಭಗಳು ಇರಬಹುದು:
1. ಮುಂದಕ್ಕೆ ಪ್ರಯಾಣ
ಉದಾಹರಣೆ: ಪಶ್ಚಿಮ ಬಂಗಾಳದ ನೋಂದಾಯಿಸದೆ ಇರುವ ವ್ಯಕ್ತಿಯಾದ ಶ್ರೀಯುತ ರಾಮ್ ಅವರು ಪಶ್ಚಿಮ ಬಂಗಾಳದ ನೋಂದಾಯಿಸಿರುವ ಟ್ರಾನ್ ಏರ್ ಲಿಮಿಟೆಡ್ ನಿಂದ ಪಶ್ಚಿಮ ಬಂಗಾಳದಿಂದ ದೆಹಲಿಗೆ ವಿಮಾನ ಟಿಕೇಟ್ ಗಳನ್ನು ಖರೀದಿಸುತ್ತಾರೆ.
ಪೂರೈಕೆದಾರರ ಸ್ಥಳ: ಪಶ್ಚಿಮ ಬಂಗಾಳ
ಪೂರೈಕೆಯ ಸ್ಥಳ: ಶ್ರೀಯುತ ರಾಮ್ ಅವರು ಪಶ್ಚಿಮ ಬಂಗಾಳದಿಂದ ಪ್ರಯಾಣ ಆರಂಭಿಸುತ್ತಾರೆ. ಹೀಗಾಗಿ, ಇಲ್ಲಿ ಪೂರೈಕೆಯ ಸ್ಥಳವು ಪಶ್ಚಿಮ ಬಂಗಾಳವಾಗಿದೆ.
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
2. ವಾಪಸ್ ಪ್ರಯಾಣ
ಒಂದೇ ಸಮಯದಲ್ಲಿ ಟಿಕೇಟ್ ಮಾಡಿದ್ದರೂ, ಹಿಂತುರುಗಿ ಬರುವ ಪ್ರಯಾಣವನ್ನು ಪ್ರತ್ಯೇಕ ಪ್ರಯಾಣವಾಗಿ ಪರಿಗಣಿಸಲಾಗುತ್ತದೆ.
ಉದಾಹರಣೆ: ಮೇಲೆ ಉದಾಹರಣೆಯಲ್ಲಿ ತಿಳಿಸಿದ ಶ್ರೀಯುತ ರಾಮ್ ಅವರು ದೆಹಲಿಯಿಂದ ಪಶ್ಚಿಮ ಬಂಗಾಳಕ್ಕೆ ವಾಪಸ್ ಬರುವ ಸಲುವಾಗಿ ಟ್ರಾನ್ ಏರ್ ಲಿಮಿಟೆಡಿನಿಂದ ವಾಪಸ್ ಪ್ರಯಾಣದ ಟಿಕೇಟ್ ಖರೀದಿಸುತ್ತದೆ.
ಪೂರೈಕೆದಾರರ ಸ್ಥಳ: ದೆಹಲಿ
ಪೂರೈಕೆಯ ಸ್ಥಳ: ವಾಪಸ್ ಹಿಂತುರುಗಲು ಪ್ರಯಾಣ ಆರಂಭಿಸುವ ಸ್ಥಳ ದೆಹಲಿಯಾಗಿದೆ. ಹೀಗಾಗಿ, ಪೂರೈಕೆಯ ಸ್ಥಳ ದೆಹಲಿಯಾಗಿದೆ.
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
3. ಟಿಕೇಟ್ ಪಡೆಯುವ ಸ್ಥಳದಲ್ಲಿ ವಾಹನ ಹತ್ತುವ ಸ್ಥಳ ತಿಳಿದಿರುವಿಲ್ಲ
ಈ ಸಂದರ್ಭದಲ್ಲಿ ಪೂರೈಕೆದಾರರ ಸ್ಥಳವೇ ಪೂರೈಕೆಯ ಸ್ಥಳವಾಗಿದೆ.
ಉದಾಹರಣೆಗೆ: ಪಶ್ಚಿಮ ಬಂಗಾಳದಲ್ಲಿ ನೋಂದಾಯಿಸಿರುವ ಟ್ರಾನ್ ಏರ್ ಲಿಮಿಟೆಡ್, ಭಾರತದ ಯಾವುದೇ ಸ್ಥಳಕ್ಕೂ ಪ್ರಯಾಣಿಸಲು ಒನ್ ವೇ ಪಾಸ್ ನೀಡಿರುತ್ತದೆ.
ಪೂರೈಕೆದಾರರ ಸ್ಥಳ: ಪಶ್ಚಿಮ ಬಂಗಾಳ
ಪೂರೈಕೆಯ ಸ್ಥಳ: ಪೂರೈಕೆದಾರರ ಸ್ಥಳವೇ ಪೂರೈಕೆಯ ಸ್ಥಳವಾಗಿದೆ, ಅಂದರೆ, ಪಶ್ಚಿಮ ಬಂಗಾಳ
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.
ಸಾಗಾಣೆ ವ್ಯವಸ್ಥೆಗೆ ಸೇವೆಯನ್ನು ಪೂರೈಕೆ ಮಾಡಿದ ಸ್ಥಳ ಅನ್ವಯವಾಗುವುದಿಲ್ಲ.ಪ್ರಯಾಣವನ್ನು ಆರಂಭಿಸಲು ಮೊದಲು ನಿಗದಿಪಡಿಸಿದ ಸ್ಥಳದೆಹಲಿಯಲ್ಲಿ ನೋಂದಾಯಿಸಿರುವ ಟ್ರಾನ್ ಏರ್ ಲಿಮಿಟೆಡ್, ಟ್ರಾನ್ ಏರ್ ಲಿಮಿಟೆಡಿಗೆ ಕೆಟರಿಗೆ ಸೇವೆಯನ್ನು ಒದಗಿಸುವ ಸಲುವಾಗಿ ವಿಮಾನದಲ್ಲಿ ದೆಹಲಿಯಿಂದ ಕೇರಳಕ್ಕೆ ಮುಂಬೈ ಮೂಲಕ ಆಹಾರವನ್ನು ಸಾಗಿಸುತ್ತದೆ.,
ಪೂರೈಕೆದಾರರ ಸ್ಥಳ: ದೆಹಲಿ
ಪೂರೈಕೆಯ ಸ್ಥಳ: ವಿಮಾನವು ಮೊದಲು ಹೊರಡುವ ಸ್ಥಳ ದೆಹಲಿಯಾಗಿದೆ. ಹೀಗಾಗಿ ಇಲ್ಲಿ ಪೂರೈಕೆಯ ಸ್ಥಳ ದೆಹಲಿಯಾಗಿದೆ..
ಇದು ರಾಜ್ಯದೊಳಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ+ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ

Are you GST ready yet?

Get ready for GST with Tally.ERP 9 Release 6

154,338 total views, 64 views today