1. ಎಲ್ಲಾದರೂ ಸರಕುಗಳು ಚಲನೆ ಇಲ್ಲದೆ ಪೂರೈಕೆ ಮಾಡುವಂತಹ ಸಂದರ್ಭದಲ್ಲಿ, ಸ್ವೀಕೃತಿದಾರರು ಪೂರೈಕೆಯನ್ನು ಪಡೆದ ಸಮಯವೇ ಪೂರೈಕೆಯ ಸ್ಥಳವಾಗಿದೆ.

ಉದಾಹರಣೆಗೆ: ತಮಿಳುನಾಡಿನ ಚೆನ್ನೈನಲ್ಲಿ ನೋಂದಾಯಿತ ಸ್ಥಳ ಹೊಂದಿರುವ ರೆಕ್ಸ್ ಕಾರ್ಸ್ ಕಂಪನಿಯು ಕರ್ನಾಟಕದ ಮೈಸೂರಿನಲ್ಲಿ ಹೊಸ ಶೋರೂಂ ಅನ್ನು ತೆರೆಯುತ್ತದೆ. ಈ ಸಂಸ್ಥೆಯು ಅಲ್ಲೇ ಮೊದಲೇ ಸ್ಥಾಪಿಸಿದ್ದ ಜನರೇಟರ್ ಅನ್ನು ರೋಹನ್ ಜನರೇಟರ್ಸ್ ನಿಂದ ಖರೀದಿಸುತ್ತದೆ.

ಪೂರೈಕೆದಾರರ ಸ್ಥಳ: ಮೈಸೂರು, ಕರ್ನಾಟಕ

ಪೂರೈಕೆಯ ಸ್ಥಳ: ಈ ಜನರೇಟರ್ ಅನ್ನು ಸಾಗಾಟ ನಡೆಸುವ ಅವಶ್ಯಕತೆ ಇರಲಿಲ್ಲ. ಹೀಗಾಗಿ ಪೂರೈಕೆಯ ಸ್ಥಳವು ಕರ್ನಾಟಕದ ಮೈಸೂರು ಆಗಿದೆ.

ಇದು ರಾಜ್ಯದ ಒಳಗಿನ ಪೂರೈಕೆಯಾಗಿದೆ, ಮತ್ತು ಸಿಜಿಎಸ್ಟಿ ಹಾಗೂ ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ..

When supply does not involve movement of goods, the location of the goods at the time of delivery to the recipient is the place of supplyClick To Tweet

GST for transactions involving no movement of goods

2. ಎಲ್ಲಾದರೂ ಸರಕನ್ನು ನಿಗದಿತ ಸ್ಥಳದಲ್ಲಿ ಜೋಡಣೆ ಅಥವಾ ಸ್ಥಾಪಿಸಿದರೆ, ಸ್ಥಾಪನೆ ಅಥವಾ ಜೋಡಣೆ ಮಾಡಿದ ಸ್ಥಳವೇ ಪೂರೈಕೆಯ ಸ್ಥಳವಾಗಿದೆ.
When the goods are assembled or installed at site, the place of assembly or installation is the place of supplyClick To Tweet

ಉದಾಹರಣೆ: ತಮಿಳು ನಾಡಿನ ಚೆನ್ನೈನಲ್ಲಿ ನೋಂದಾಯಿತ ಸ್ಥಳ ಹೊಂದಿರುವ ರೆಕ್ಸ್ ಕಾರ್ಸ್, ತೆಲ್ಲಂಗಾಣದ ಹೈದರಾಬಾದ್ ನಲ್ಲಿ ಹೊಸ ಶಾಖೆಯನ್ನು ತೆರೆಯುತ್ತದೆ. ಈ ಸಂಸ್ಥೆಯು ತಮಿಳುನಾಡಿನ ಚೆನ್ನೈನಲ್ಲಿ ನೋಂದಾಯಿಸಿರುವ ರೋನ್ ಲಿಫ್ಟ್ಸ್ ನಿಂದ ಲಿಫ್ಟ್ ಖರೀದಿಸುತ್ತದೆ, ಅದನ್ನು ತನ್ನ ಶಾಖೆಯಲ್ಲಿ ಇನ್ ಸ್ಟಾಲ್ ಮಾಡುತ್ತದೆ.

ಪೂರೈಕೆದಾರರ ಸ್ಥಳ: ಚೆನ್ನೈ, ತಮಿಳುನಾಡು.

ಪೂರೈಕೆಯ ಸ್ಥಳ: ತೆಲ್ಲಂಗಾಣದ ಹೈದರಾಬಾದ್ ನಲ್ಲಿರುವ ಶಾಖೆಯಲ್ಲಿ ಈ ಲಿಫ್ಟ್ ಜೋಡಣೆ ಮಾಡಿ ಸ್ಥಾಪಿಸಲಾಗುತ್ತದೆ. ಹೀಗಾಗಿ, ಪೂರೈಕೆಯ ಸ್ಥಳ, ತೆಲ್ಲಂಗಾಣದ ಹೈದರಾಬಾದ್.
ಇದು ರಾಜ್ಯದ ಹೊರಗಿನ ಪೂರೈಕೆಯಾಗಿದೆ ಮತ್ತು ಐಜಿಎಸ್ಟಿ ತೆರಿಗೆ ಅನ್ವಯಿಸುತ್ತದೆ.

Determining GST for goods assembled or installled

3. ಸರಕನ್ನು ಸಾಗಣೆ ವಿಧಾನವಾಗಿ ಪೂರೈಕೆ ಮಾಡುವ ಸಂದರ್ಭದಲ್ಲಿ ಎಲ್ಲಿ ಸರಕನ್ನು ತೆಗೆದುಕೊಳ್ಳಲಾಗುತ್ತದೆಯೋ ಅದನ್ನು ಪೂರೈಕೆಯ ಸ್ಥಳ ಎಂದು ಪರಿಗಣಿಸಲಾಗುತ್ತದೆ.
When the goods are supplied on board a mode of conveyance, the location at which the goods are taken on board is the place of supplyClick To Tweet

ಉದಾಹರಣೆಗೆ: ವ್ಯಕ್ತಿಯೊಬ್ಬರು ಕೊಲ್ಕೊತ್ತಾದಿಂದ ಹೈದರಾಬಾದ್ ಗೆ ಪ್ರಯಾಣಿಸುತ್ತಿರುವ ವಿಮಾನದಿಂದ ಇನ್-ಫ್ಲೈಟ್ ಶಾಪಿಂಗ್ ಕೆಟಲಾಗ್ ನಿಂದ ಪವರ್ ಬ್ಯಾಂಕ್ ಖರೀದಿಸುತ್ತಾರೆ. ಈ ವಿಮಾನಯಾನವು ಕೊಲ್ಕೊತ್ತಾದಲ್ಲಿ ನೋಂದಾಯಿತ ಕಚೇರಿ ಹೊಂದಿದೆ ಮತ್ತು ಕೋಲ್ಕೊತ್ತಾ ಆನ್ ಬೋರ್ಡಿನಲ್ಲಿ ಪವರ್ ಬ್ಯಾಂಕ್ ಪಡೆಯಲಾಗುತ್ತದೆ.
ಪೂರೈಕೆದಾರರ ಸ್ಥಳ: ಕೊಲ್ಕೋತ್ತಾ, ಪಶ್ಚಿಮ ಬಂಗಾಳ
ಪೂರೈಕೆಯ ಸ್ಥಳ: ಕೊಲ್ಕೋತ್ತಾ, ಪಶ್ಚಿಮ ಬಂಗಾಳ
ಇದು ರಾಜ್ಯದ ಹೊರಗಿನ ಪೂರೈಕೆಯಾಗಿದೆ ಮತ್ತು ಸಿಜಿಎಸ್ಟಿ ಮತ್ತು ಎಸ್ಜಿಎಸ್ಟಿ ತೆರಿಗೆ ಅನ್ವಯವಾಗುತ್ತದೆ.

GST for goods supplied on board a mode of conveyance

ಮುಂದೆ ಪ್ರಕಟವಾಗುವ ಬರಹ:
ಒಂದು ಕಡೆಗೆ ಬಿಲ್ಲಿಂಗ್, ಮತ್ತೊಂದು ಕಡೆ ಪೂರೈಕೆ ಸಂದರ್ಭದಲ್ಲಿ ಪೂರೈಕೆಯ ಸ್ಥಳ

Are you GST ready yet?

Get ready for GST with Tally.ERP 9 Release 6

113,488 total views, 37 views today