ನಮ್ಮ ಹಿಂದಿನ ಬ್ಲಾಗ್‍ನಲ್ಲಿ ನಾವು ಜಿಎಸ್‍ಟಿ ಇನ್‍ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುವ ಪರಿಸ್ಥಿತಿಗಳ ಪರಿಸ್ಥಿತಿಗಳ ಬಗ್ಗೆ ತಿಳಿದಿದ್ದೆವು ಮತ್ತು ಐಟಿಸಿ ಪಡೆಯುವ ಸಂದರ್ಭಗಳ ಬಗ್ಗೆಯೂ ತಿಳಿದಿದ್ದೆವು. ಫ್ರಸ್ತುತ ಈ ಬ್ಲಾಗ್‍ನಲ್ಲಿ ಇನ್‍ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಸಾಧ್ಯವಿಲ್ಲದ ಸಂದರ್ಭಗಳ ಬಗ್ಗೆ ಚರ್ಚಿಸೋಣ.

1.ನೋಂದಣಿ ಮಾಡಿಸಲು ಬದ್ಧವಾಗಿದ್ದಾಗ್ಯೂ 30 ದಿನಗಳ ಒಳಗಾಗಿ ನೋಂದಣಿಗೆ ಅರ್ಜಿಯನ್ನೇ ಹಾಕಲಿಲ್ಲ

ನೀವು ನೋಂದಣಿ ಮಾಡಿಸಲು ಬದ್ಧರಾಗಿದ್ದು 30 ದಿನಗಳ ಒಳಗಾಗಿ ನೋಂದಣಿಗೆ ಅರ್ಜಿಯನ್ನೇ ಹಾಕಲಿಲ್ಲವೆಂದರೆ, ನೀವು ತೆರಿಗೆ ಕಟ್ಟಲು ಬದ್ಧರಾದ ದಿನದ ಒಂದು ದಿನ ಮೊದಲು ಇನ್ಪುಟ್‍ಗಳ ಮೇಲೆ ಮತ್ತು ಅರೆಸಿದ್ಧಪಡಿಸಿದ ಅಥವಾ ಸಿದ್ಧಪಡಿಸಿದ ಸರಕುಗಳನ್ನು ಒಳಗೊಂಡಿರುವ ಇನ್ಪುಟ್‍ಗಳ ಮೇಲಿನ ಅರ್ಹ ಐಟಿಸಿ ಕಳೆದುಕೊಳ್ಳುತ್ತೀರಿ.

2.ಇನ್‍ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುವ ಅವಧಿ ಮೀರಿದ ನಂತರ

ಐಟಿಸಿ ಪ್ರಯೋಜನವನ್ನು ಈ ಕೆಳಗಿನ ದಿನಾಂಕಗಳ ಒಳಗೆ ಪಡೆಯಬೇಕು-
• ಸರಕುಪಟ್ಟಿಯ (ಇನ್‍ವಾಯ್ಸ್) ದಿನಾಂಕದ 1 ವರ್ಷದ ಒಳಗಾಗಿ
ಅಥವಾ
• ಮುಂದಿನ ಹಣಕಾಸು ವರ್ಷದ ಸೆಪ್ಟೆಂಬರ್ ಲೆಕ್ಕದ ಮಾಹಿತಿ ದಾಖಲಿಸುವ ದಿನ
ಅಥವಾ
• ವಾರ್ಷಿಕ ಲೆಕ್ಕಪತ್ರ ದಾಖಲಿಸುವ ದಿನ (ಗಡುವು- ಮುಂದಿನ ಹಣಕಾಸು ವರ್ಷದ 31ನೇ ಡಿಸೆಂಬರ್).

ಇದನ್ನು ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ-

ಉದಾಹರಣೆ: ರಾಜೇಶ್ ಅಪಾರೆಲ್ ಪ್ರೈ.ಲಿ. ಒಂದು ಪುರುಷರ ಉಡುಪುಗಳ ವ್ಯಾಪಾರಿ ಸಂಸ್ಥೆ. ಈ ಸಂಸ್ಥೆಯು ದಿನಾಂಕ 15/7/2017 ರಂದು ತಯಾರಕರಿಂದ ಒಂದು ಲಕ್ಷ ರೂಪಾಯಿಗಳ ಉಡುಪುಗಳನ್ನು ಖರೀದಿಸಿತು. ಖರೀದಿಯ ಮೇಲಿನ ಜಿಎಸ್‍ಟಿಯು 18000 ರೂಪಾಯಿಗಳು (18%). ಸಂಸ್ಥೆಯು 2017-18ರ ವಾರ್ಷಿಕ ಲೆಕ್ಕಪತ್ರವನ್ನು 2018ರ ಜುಲೈ 31 ರಂದು ದಾಖಲಿಸಿರುತ್ತದೆ ಮತ್ತು ಸೆಪ್ಟೆಂಬರ್ 2018ರ ಲೆಕ್ಕಪತ್ರವನ್ನು 2018ರ ಅಕ್ಟೋಬರ್ 20 ರಂದು ಸಲ್ಲಿಸಿರುತ್ತದೆ.

ಇಲ್ಲಿ ಪರೀಕ್ಷಿಸಬೇಕಾದ ಮೂರು ದಿನಾಂಕಗಳು-

ಸರಕುಪಟ್ಟಿ ದಿನದಿಂದ 1 ವರ್ಷ2018ರ ಜುಲೈ 14
ಮುಂದಿನ ಹಣಕಾಸು ವರ್ಷದ ಸೆಪ್ಟೆಂಬರ್‍ನ ಲೆಕ್ಕಪತ್ರ ಸಲ್ಲಿಸಿದ ದಿನಾಂಕ2018ರ ಅಕ್ಟೋಬರ್ 20
ವಾರ್ಷಿಕ ಲೆಕ್ಕಪತ್ರ ಸಲ್ಲಿಸಿದ ದಿನಾಂಕ2018ರ ಜುಲೈ 31

ಸರಕುಪಟ್ಟಿಯ ದಿನದಿಂದ 1 ವರ್ಷ ಅಂದರೆ 2018ರ ಜುಲೈ 14, ಮೂರು ದಿನಾಂಕಗಳಲ್ಲಿ ಮೊದಲನೆಯದಾಗಿರುವುದರಿಂದ ಸರಕುಪಟ್ಟಿಯ ಮೇಲಿನ Iಖಿಅ ಅನ್ನು 2018 ರ ಜುಲೈ 14ರ ಮೊದಲು ಪಡೆಯಬೇಕು.

3.ಸಂಯೋಜಿತ ತೆರಿಗೆ ಪಾವತಿದಾರನು ಇನ್ಪುಟ್‍ಗಳಾಗಿ ಬಳಸುವ ಸರಕು ಮತ್ತು / ಅಥವಾ ಸೇವೆಗಳ ಮೇಲೆ

ಸಂಯೋಜಿತ ತೆರಿಗೆ ಪಾವತಿದಾರನು ಇನ್ಪುಟ್‍ಗಳಾಗಿ ಬಳಸುವ ಸರಕು ಮತ್ತು / ಅಥವಾ ಸೇವೆಗಳ ಮೇಲೆ ಐಟಿಸಿ ಪಡೆಯಲಾಗುವುದಿಲ್ಲ.

ಉದಾಹರಣೆ: ಲಕ್ಷ್ಮಿ ಕಿರಣ ಸ್ಟೋರ್ಸ್ ಜಿಎಸ್‍ಟಿ ಅಡಿಯಲ್ಲಿ ನೋಂದಾವಣೆಗೊಂಡ ಒಂದು ಸಂಯೋಜಿತ ತೆರಿಗೆ ಪಾವತಿ ಸಂಸ್ಥೆ. ಅದು ತಯಾರಕರಿಂದ 20,000 ರೂಪಾಯಿಗಳ ಕಿರಾಣಿ ಸಾಮಾನುಗಳನ್ನು ಖರೀದಿಸುತ್ತದೆ ಮತ್ತು ಜಿಎಸ್‍ಟಿ 12% ನಂತೆ ರೂ. 2,400 ಆಗುತ್ತದೆ. ಲಕ್ಷ್ಮಿ ಕಿರಣ ಸ್ಟೋರ್ಸ್ ಸಂಯೋಜಿತ ತೆರಿಗೆ ಪಾವತಿ ಸಂಸ್ಥೆಯೆಂದು ನೋಂದಾವಣೆಗೊಂಡಿರುವುದರಿಂದ, ಅದು ಖರೀದಿಯ ಮೇಲಿನ ಜಿಎಸ್‍ಟಿ 12% ನಂತೆ ರೂ. 2,400 ಪಡೆಯಲು ಬರುವುದಿಲ್ಲ. ಪಾವತಿಸಿದ ಜಿಎಸ್‍ಟಿ ಯು ವಸ್ತುಗಳ ಬೆಲೆಯ ಭಾಗವಾಗುತ್ತದೆ.

4. ವೈಯಕ್ತಿಕ ಬಳಕೆಗೆ ಉಪಯೋಗಿಸಿದ ಸರಕು ಮತ್ತು / ಅಥವಾ ಸೇವೆಗಳ ಮೆಲೆ

ಉದಾಹರಣೆ: ರಾಜೇಶ ಅಪಾರೆಲ್ಸ್ ಪ್ರೈ.ಲಿ. ತಯಾರಕರಿಂದ 50,000 ರೂಪಾಯಿಗಳ ಉಡುಪುಗಳನ್ನು ಖರೀದಿಸಿದೆ. ಖರೀದಿಯ ಮೇಲಿನ ಜಿಎಸ್‍ಟಿ 9,000 ರೂಪಾಯಿಗಳನ್ನು ಈಗಾಗಲೇ ಪಾವತಿಸಿದೆ. ಉಡುಪುಗಳ ಖರೀದಿಯಲ್ಲಿ, ಮಾಲೀಕರು ರೂ. 2,000 ಬೆಲೆಯ ಉಡುಪುಗಳನ್ನು ತನ್ನ ಸ್ವಂತ ಬಳಕೆಗೆ ಪಡೆದಿದ್ದಾರೆ. ಉಳಿದ ಉಡುಪುಗಳನ್ನು ಗ್ರಾಹಕರಿಗೆ ಮಾರಿರುತ್ತಾರೆ. ಇಲ್ಲಿ, ಖರೀದಿಯ ಮೇಲಿನ ಐಟಿಸಿ ಪಡೆಯುವ ಮೊತ್ತ 8,640 ರೂಪಾಯಿಗಳು (48000*18%).

5.ವಿನಾಯಿತಿ ಸರಬರಾಜು ಮಾಡುವ (ಎಕ್ಸೆಮ್ಟ್ ಸಪ್ಲೈಸ್) ಸರಕು ಮತ್ತು ಸೇವೆಗಳಿಗೆ

ವಿನಾಯಿತಿ ಸರಬರಾಜು ಮಾಡುವ ಸರಕು ಮತ್ತು ಸೇವೆಗಳಿಗೆ ಮತ್ತುರಿವರ್ಸ್ ಚಾರ್ಜ್ ಆಧಾರದ ಮೇಲೆ ಉಡುಪುಗಳನ್ನು ಸ್ವೀಕರಿಸುವವರು ತೆರಿಗೆ ಪಾವತಿಸುವುದರಿಂದ ಐಟಿಸಿ ದೊರೆಯುವುದಿಲ್ಲ.

ಉದಾಹರಣೆಗೆ: ನೀವು 2017ರ ಸೆಪ್ಟೆಂಬರ್ 4 ರಂದು ವಿನಾಯಿತಿಯ ಸರಕೊಂದನ್ನು ಉತ್ಪಾದಿಸಿರುತ್ತೀರಿ. ನೀವು ಈ ಕೆಳಗಿನ ಇನ್‍ಪುಟ್‍ಗಳನ್ನು ಖರೀದಿಸುತ್ತೀರಿ (ವಿನಾಯಿತಿಯ ಸರಕು ಉತ್ಪಾದಿಸುವ ಸಲುವಾಗಿ).

ಇನ್ವಾರ್ಡ್ ಸರಬರಾಜುಗಳು- 4.9.2017
ಇನ್ಪುಟ್ಸ್ಮೌಲ್ಯ (ರೂ.)18% (ರೂ.) ದರದಲ್ಲಿ ಇನ್ಪುಟ್‍ಗಳ ಮೇಲೆ ಪಾವತಿಸಲಾದ ಜಿಎಸ್‍ಟಿ
ಕಚ್ಚಾ ಸಾಮಗ್ರಿ ಎ3,00,00054,000
ಕಚ್ಚಾ ಸಾಮಗ್ರಿ ಬಿ30,000 5,400
ಒಟ್ಟು3,30,00059,400

ಇಲ್ಲಿ ನೀವು ರೂ. 59,400 ರೂಪಾಯಿಗಳಿಗೆ ಐಟಿಸಿ ಪಡೆಯಲು ಸಾಧ್ಯವಿಲ್ಲ ಏಕೆಂದರೆ ಈ ಪರಿಕರಗಳನ್ನು ವಿನಾಯಿತಿಯ ಸರಕುಗಳ ಉತ್ಪಾದನೆಗಾಗಿ ಖರೀದಿಸಿರುತ್ತೀರಿ.

6.ಸರಕುಪಟ್ಟಿ ದಿನಾಂಕದಿಂದ 3 ತಿಂಗಳೊಳಗೆ ಪಾವತಿ ಮಾಡಿರದ ಸೇವೆಗಳಿಗೆ-

ಸೇವಾಗ್ರಾಹಕನು ಸೇವೆಗಳ ಮೇಲಿನ ಶುಲ್ಕ ಮತ್ತು ತೆರಿಗೆಯನ್ನು ಸರಕುಪಟ್ಟಿಯ ದಿನಾಂಕದಿಂದ 3 ತಿಂಗಳೊಳಗೆ ಪಾವತಿಸಿರದಿದ್ದಲ್ಲಿ ಪಡೆದಿರುವ ಐಟಿಸಿ ಸೌಲಭ್ಯವನ್ನು ಸೇವೆಗಳನ್ನು ಬಡ್ಡಿ ಸಹಿತ ಸ್ವೀಕರಿಸುವವರ ಹೊಣೆಗಾರಿಕೆಗೆ ಸೇರಿಸಲಾಗುತ್ತದೆ.

ಉದಾಹರಣೆಗೆ: ನೀವು ಆಡಿಟಿಂಗ್ ಮತ್ತು ಸಲಹಾ ಸೇವೆಗಳನ್ನು ಒಬ್ಬ ಚಾರ್ಟರ್ಡ್ ಅಕೌಂಟಂಟ್ ನಿಂದ ಪಡೆದಿರುತ್ತೀರಿ. ಆ ಸೇವೆಯ ಬೆಲೆ 50,000 ರೂಪಾಯಿಗಳು ಮತ್ತು ಜಿಎಸ್‍ಟಿ 18% ದಂತೆ 9,000 ರೂಪಾಯಿಗಳು. ನೀವು 59,000 ರೂಪಾಯಿಗಳನ್ನು ಸರಕುಪಟ್ಟಿ ದಿನಾಂಕದಿಂದ 3 ತಿಂಗಳೊಳಗೆ ಪಾವತಿಸದಿದ್ದಲ್ಲಿ, ನೀವು ಪಡೆದಿರುವ ಐಟಿಸಿ 9,000 ರೂಪಾಯಿಗಳನ್ನು ಬಡ್ಡಿ ಸಮೇತ ನಿಮ್ಮ ಹೊಣೆಗಾರಿಕೆಗೆ (ಲೈಯಬಿಲಿಟಿ) ಸೇರಿಸಲಾಗುತ್ತದೆ

7.ಕಳುವಾದ, ಕಳೆದುಹೋದ, ನಾಶವಾದ, ವಜಾಗೊಳಿಸಿದ ಅಥವಾ ಉಚಿತ ಅಥವಾ ಮಾದರಿಗಳು ಎಂದು ವಿಲೇವಾರಿ ಮಾಡಿದ ಸರಕುಗಳ ಮೇಲೆ

ಉದಾಹರಣೆಗೆ: ನೀವು ಒಬ್ಬ ಎಲೆಕ್ಟ್ರಾನಿಕ್ ವಸ್ತುಗಳ ವ್ಯಾಪಾರಿ. 2017ರ ನವೆಂಬರ್ 1 ರಂದು ನೀವು 25,000 ರೂಪಾಯಿಗಳಿಗೆ ಒಂದರಂತೆ 20 ಕಂಪ್ಯೂಟರ್‍ಗಳನ್ನು ಉತ್ಪಾದಕರಿಂದ ಖರೀದಿಸಿರುತ್ತೀರಿ. ಜಿಎಸ್‍ಟಿ 18% ದಂತೆ 90,000 ರೂಪಾಯಿಗಳು. 2017 ರ ನವೆಂಬರ್ 2 ರಂದು, 1 ಕಂಪ್ಯೂಟರ್ ಉಪಯೋಗಕ್ಕೆ ಬಾರದಂತೆ ಸಂಪೂರ್ಣವಾಗಿ ನಾಶವಾಗಿ ಹೋಗಿರುತ್ತದೆ. ಈ ಕಂಪ್ಯೂಟರ್ ಮೇಲೆ ನೀವು 4,500 ರೂಪಾಯಿಗಳ ಐಟಿಸಿ ಪಡೆಯಲಾಗುವುದಿಲ್ಲ.

8.ಮೋಟಾರು ವಾಹನ ಮತ್ತು ಇತರೆ ಸಾಗಣೆಗಳ ಮೇಲೆ

ಮೋಟಾರು ವಾಹನ ಮತ್ತು ಇತರೆ ಸಾಗಣೆಗಳ ಮೇಲೆ ಐಟಿಸಿ ಸಮ್ಮತವಾಗುವುದಿಲ್ಲ, ಅವುಗಳು ಈ ಕೆಳಗಿನವುಗಳು ಆಗಿಲ್ಲದೇ ಇದ್ದಲ್ಲಿ :

• ಮುಂದುವರೆದು ಸರಬರಾಜು ಆಗಿರಬೇಕು ಅಥವಾ
• ಪ್ರಯಾಣಿಕರು ಅಥವಾ ಸರಕುಗಳ ಸಾಗಣೆಗಾಗಿ ಉಪಯೋಗಿಸಿರಬೇಕು ಅಥವಾ
• ಕಲಿಕಾ ತರಬೇತಿ, ಹಾರಾಟ ತರಬೇತಿ, ಜಲಸಂಚಾರ ತರಬೇತಿಗಾಗಿ ಈ ವಾಹನಗಳನ್ನು ಉಪಯೋಗಿಸಿದ್ದರೆ

ಉದಾಹರಣೆಗೆ: ಸೂಪರ್ ಕಾರ್ ಪ್ರೈ.ಲಿ. ಕಾರ್ ತಯಾರಕರು, ಕಾರ್ಖಾನೆಯ ಒಳಗೆ ನೌಕರರನ್ನು ಸಾಗಿಸಲು ಒಂದು ಟೆಂಪೋ ಟ್ರಾವೆಲರ್
ಖರೀದಿಸುತ್ತಾರೆ. ಸೂಪರ್ ಕಾರ್ ಪ್ರೈ.ಲಿ. ಟೆಂಪೋ ಟ್ರಾವೆಲರ್ ಮೇಲೆ ಐಟಿಸಿ ಪಡೆಯಲು ಸಾಧ್ಯವಿಲ್ಲ, ಏಕೆಂದರೆ ಅದು ಈ ಮೇಲೆ ತಿಳಿಸಿದ ಚಟುವಟಿಕೆಗಳಲ್ಲಿ ಬರುವುದಿಲ್ಲ.

ಇನ್ನೊಂದು ಉದಾಹರಣೆಯನ್ನು ನೋಡೋಣ. ಮುಖೇಶ್ ಟ್ರಾವೆಲ್ಸ್, ಒಬ್ಬ ಟೂರ್ ಆಪರೇಟರ್, ಪ್ರವಾಸಿಗಳನ್ನು ಪ್ಯಾಕೇಜ್ ಪ್ರವಾಸಗಳಲ್ಲಿ ಕೊಂಡೊಯ್ಯಲು ಒಂದು ಟೆಂಪೋ ಟ್ರಾವೆಲರ್ ಖರೀದಿಸುತ್ತಾರೆ. ಇಲ್ಲಿ, ಮುಖೇಶ್ ಟ್ರಾವೆಲ್ಸ್ ಟೆಂಪೋ ಟ್ರಾವೆಲರ್ ಮೇಲೆ ಐಟಿಸಿ ಪಡೆಯಲು ಅರ್ಹರಿರುತ್ತಾರೆ ಏಕೆಂದರೆ, ಅದನ್ನು ಉಪಯೋಗಿಸುತ್ತಿರುವುದು ಪ್ರವಾಸಿಗಳನ್ನು ಸಾಗಾಟ ಮಾಡಲು- ಮುಖೇಶ್ ಟ್ರಾವೆಲ್ ನವರ ವ್ಯಾಪಾರೀ ಚಟುವಟಿಕೆ.

9.ಆಹಾರ ಮತ್ತು ಪಾನೀಯಗಳು, ಹೊರಾಂಗಣ ಅಡುಗೆ, ಸೌಂದರ್ಯ ಚಿಕಿತ್ಸೆ, ಆರೋಗ್ಯ ಸೇವೆಗಳು, ಕಾಸ್ಮೆಟಿಕ್ ಮತ್ತು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ಗಳ ಮೇಲೆ

ಆಹಾರ ಮತ್ತು ಪಾನೀಯಗಳು, ಹೊರಾಂಗಣ ಅಡುಗೆ, ಸೌಂದರ್ಯ ಚಿಕಿತ್ಸೆ, ಆರೋಗ್ಯ ಸೇವೆಗಳು, ಕಾಸ್ಮೆಟಿಕ್ ಮತ್ತು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ಗಳ ಮೇಲೆ ಅವು ಅದೆ ವರ್ಗದಲ್ಲಿ ಬಾಹ್ಯ ಪೂರೈಕೆ ಮಾಡಲು ಉಪಯೋಗಿಸದಿದ್ದಲ್ಲಿ ಐಟಿಸಿ ಪಡೆಯಲು ಸಾಧ್ಯವಿಲ್ಲ.

ಉದಾಹರಣೆ 1: ಸೂಪರ್ ಕಾರ್ ಪ್ರೈ.ಲಿ.ನವರು ರಾಕೇಶ್ ಕೇಟರರ್ಸ್ ಎಂಬ ಆಹಾರ ಒದಗಿಸುವವರ ಸೇವೆಯನ್ನು ದೀಪಾವಳಿ ಉತ್ಸವದ ದಿನದಂದು ನೌಕರರ ಆಹಾರ ಸರಬರಾಜಿಗಾಗಿ ಪಡೆದಿರುತ್ತಾರೆ. ಸೂಪರ್ ಕಾರ್‍ನವರು ಈ ಕೇಟರಿಂಗ್ ಸೇವೆಗಾಗಿ ವ್ಯಯ ಮಾಡಿದ ಹಣಕ್ಕೆ ಐಟಿಸಿ ಸೌಲಭ್ಯ ಪಡೆಯಲಾಗುವುದಿಲ್ಲ ಏಕೆಂದರೆ ಅವರ ವ್ಯಾಪಾರ ಆಹಾರ ಸರಬರಾಜು ಮಾಡುವುದಲ್ಲ.

ಉದಾಹರಣೆ 2: ರಾಕೇಶ್ ಕೇಟರರ್ಸ್ ಸೂಪರ್ ಕಾರ್ ನವರಿಗೆ ಆಹಾರ ಸರಬರಾಜು ಮಾಡುವುದಕ್ಕಾಗಿ ಶಾಮಿಯಾನ ಸೇವೆಯನ್ನು ಪದೆದಿರುತ್ತಾರೆ. ಇಲ್ಲಿ ರಾಕೇಶ್ ಕೇಟರರ್ಸ್ ನವರು ಐಟಿಸಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ ಏಕೆಂದರೆ ಶಾಮಿಯಾನ ಸೌಕರ್ಯವು ಆಹಾರ ಸರಬರಾಜಿನ ಮುಂದುವರೆದ ಭಾಗವಾಗಿರುತ್ತದೆ.

10.ಕ್ಲಬ್ ಮತ್ತು ಆರೋಗ್ಯ ಹಾಗೂ ಫಿಟ್ನೆಸ್ ಕೇಂದ್ರಗಳು, ಕ್ಯಾಬ್ ಸೇವೆಗಳು, ನೌಕರರ ಜೀವವಿಮೆ ಹಾಗೂ ಆರೋಗ್ಯ ವಿಮೆಯ ಸದಸ್ಯತ್ವ, ನೌಕರರ ಕಡ್ಡಾಯವಾಗಿ ಸೂಚಿಸಲ್ಪಟ್ಟ ಸೇವೆಗಳನ್ನು ಹೊರತುಪಡಿಸಿ

ಉದಾಹರಣೆ: ಮುಕೇಶ್ ಟ್ರಾವೆಲ್ಸ್, ಟೂರ್ ಆಪರೇಟರ್, ಪ್ರಥಮ್ ಫಿಟ್ನೆಸ್ ಕೇಂದ್ರದಿಂದ ತನ್ನ ನೌಕರರ ಉಪಯೋಗಕ್ಕಾಗಿ ವಾರ್ಷಿಕ ಸದಸ್ಯತ್ವವನ್ನು ಪಡೆಯುತ್ತಾರೆ. ಇಲ್ಲಿ, ಮುಕೇಶ್ ಟ್ರಾವೆಲ್ಸ್‍ನವರು ಸದಸ್ಯತ್ವ ಶುಲ್ಕದ ಮೇಲೆ ಪಾವತಿಸಿದ ಜಿಎಸ್‍ಟಿ ಮೇಲೆ ಐಟಿಸಿ ಪಡೆಯಲು ಸಾಧ್ಯವಿಲ್ಲ.

11.ನೌಕರರಿಗೆ ನೀಡುವ ಲೀವ್ ಟ್ರಾವೆಲ್ ಕನ್ಸೆಷನ್ ನಂತಹ ಪ್ರಯಾಣ ಭತ್ಯೆ ಮೇಲೆ-

ಉದಾಹರಣೆ: ಸೂಪರ್ ಕಾರ್ ಪ್ರೈ.ಲಿ. ತನ್ನ ಹಿರಿಯ ಉದ್ಯೋಗಿಗಳಿಗೆ ಲೀವ್ ಟ್ರಾವೆಲ್ ಕನ್ಸೆಷನ್ ಭಾಗವಾಗಿ ಹಣವನ್ನು ನೀಡಿರುತ್ತಾರೆ. ಇಲ್ಲಿ, ಸೂಪರ್ ಕಾರ್ ಪ್ರೈ.ಲಿ. ತನ್ನ ಸಿಬ್ಬಂದಿಗೆ ನೀಡಿದ ಲೀವ್ ಟ್ರಾವೆಲ್ ಕನ್ಸೆಷನ್‍ನ ಮೇಲಿನ ಜಿಎಸ್‍ಟಿ ತೆರಿಗೆಗೆ ಐಟಿಸಿ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ.

12.ಬಂಡವಾಳ ಸರಕು ವೆಚ್ಚದ ಮೇಲಿನ ತೆರಿಗೆ, ತೆರಿಗೆಯ ಘಟಕದ ಭಾಗಕ್ಕೆ ಸವಕಳಿಯನ್ನು ಈಗಾಗಲೇ ಕ್ಲೈಮ್ ಮಾಡಿದ್ದರೆ

ಬಂಡವಾಳ ಸರಕು ವೆಚ್ಚದ ಮೇಲಿನ ತೆರಿಗೆ, ತೆರಿಗೆಯ ಘಟಕದ ಭಾಗಕ್ಕೆ ಸವಕಳಿಯನ್ನು ಈಗಾಗಲೇ ಕ್ಲೈಮ್ ಮಾಡಿದ್ದರೆ, ಅಂತಹ ಕ್ಲೈಮುಗಳಿಗೆ ಐಟಿಸಿ ಪಡೆಯಲು ಬರುವುದಿಲ್ಲ.

ಉದಾಹರಣೆ: ಸೂಪರ್ ಕಾರ್ ಪ್ರೈ.ಲಿ. ನವರು ಕಾರ್ ತಯಾರಿಕೆಗೆಂದು 50,00,000 ರೂಪಾಯಿಗಳ ಯಂತ್ರಗಳನ್ನು ಖರೀದಿಸುತ್ತಾರೆ. ಯಂತ್ರಗಳ ಮೇಲಿನ ಜಿಅಸ್‍ಟಿ ತೆರಿಗೆ 9,00,000 ರೂಪಾಯಿಗಳನ್ನು ಈಗಾಗಲೇ ಪಾವತಿಸಿರುತ್ತಾರೆ. ಸೂಪರ್ ಕಾರ್‍ನವರು ಯಂತ್ರಗಳ ಮೇಲಿನ ಸವಕಳಿ ರೂ. 59,00,000 ಕ್ಕೆ (ಜಿಎಸ್‍ಟಿ ಭಾಗ ಸೇರಿಸಿ) ಆದಾಯ ತೆರಿಗೆ ಅಡಿಯಲ್ಲಿ ಕ್ಲೈಮ್ ಮಾಡುತ್ತಾರೆ. ಈ ಸಂದರ್ಭದಲ್ಲಿ ಸೂಪರ್ ಕಾರ್ ಸಂಸ್ಥೆ ರೂ. 9,00,000 ಮೇಲಿನ ಜಿಟಸ್‍ಟಿ ಪಾವತಿಗೆ ಐಟಿಸಿ ಪಡೆಯಲು ಬರುವುದಿಲ್ಲ.

ವಿಶಿಷ್ಠ ಸನ್ನಿವೇಶಗಳಲ್ಲಿ ಈಗಾಗಲೇ ಪಡೆದಿರುವ ಇನ್‍ಪುಟ್‍ಟ್ಯಾಕ್ಸ್ ಕ್ರೆಡಿಟ್‍ನ ನಡಾವಳಿಕೆ

ಐಟಿಸಿ ಪಡೆದಿರುವ ಸಾಮಾನ್ಯ ವರ್ತಕ ಸಂಯೋಜನಾ ವ್ಯವಸ್ಥೆಗೆ ಬದಲಾದರೆ

ಐಟಿಸಿ ಪಡೆದಿರುವ ಸಾಮಾನ್ಯ ವರ್ತಕ ಸಂಯೋಜನಾ ವ್ಯವಸ್ಥೆಗೆ ಬದಲಾದರೆ, ಆ ವ್ಯಕ್ತಿಯು ಈಗಾಗಲೇ ಸ್ಟಾಕ್ ಇನ್‍ಪುಟ್‍ಗಳು, ಅರೆ-ಸಿದ್ಧಪಡಿಸಿದ ಇನ್‍ಪುಟ್‍ಗಳು, ಸಿದ್ಧ ಪಡಿಸಿದ ಸರಕುಗಳು ಮತ್ತು ಕ್ಯಾಪಿಟಲ್ ಗುಡ್ಸ್‍ಗಳ ಮೇಲೆ ಪಡೆದಿರುವ ಐಟಿಸಿಯನ್ನು ಸಂಯೋಜನಾ ವ್ಯವಸ್ಥೆಗೆ ಬದಲಾಗುವ ಒಂದು ದಿನ ಮೊದಲು ಹಿಂತಿರುಗಿಸಬೇಕು.

ಉದಾಹರೆಣೆ: ನೀವು ಒಬ್ಬ ಸಾಮಾನ್ಯ ವರ್ತಕನೆಂದು ನೋಂದಾಯಿಸಿರುತ್ತೀರಿ. ನೀವು ನಿಮ್ಮ ವ್ಯಾಪಾರದ ವಾರ್ಷಿಕ ಬಾಂಡವಾಳದ ಹೂಡಿಕೆ ರೂ. 50 ಲಕ್ಷ ರೂಪಾಯಿ ದಾಟಿಲ್ಲದ ಕಾರಣ ಸಂಯೋಜನಾ ಪದ್ಧತಿಗೆ ದಿನಾಂಕ 1.9.2017 ರಂದು ಬದಲಾಗಿರುತ್ತೀರಿ. 31.8.2017 ರಂದು, ನಿಮ್ಮ ಬಳಿ ಈಗಾಗಲೇ ಐಟಿಸಿ ಪಡೆದಿರುವ ಈ ಕೆಳಗಿನ ಸ್ಟಾಕ್ ಒಳಹರಿವು ಇರುತ್ತದೆ-

ಕ್ಲೋಸಿಂಗ್ ಸ್ಟಾಕ್- 31.08.2017
ಇನ್ಪುಟ್ಸ್ಮೌಲ್ಯ (ರೂ.)18% (ರೂ.) ದರದಲ್ಲಿ ಇನ್ಪುಟ್‍ಗಳ ಮೇಲೆ ಪಾವತಿಸಲಾದ ಜಿಎಸ್‍ಟಿ
ಕಚ್ಚಾ ಸಾಮಗ್ರಿ ಎ1,50,00027,000
ಕಚ್ಚಾ ಸಾಮಗ್ರಿ ಬಿ20,000  3,600
ಒಟ್ಟು1,70,00030,600

ಸಂಯೋಜನಾ ಪದ್ಧತಿಗೆ ಬದಲಾವಣೆಗೊಂಡ ನಂತರ, ನೀವು ಈಗಾಗಲೇ ಸ್ಟಾಕ್ ಒಳಹರಿವಿನ ಮೇಲೆ ಪಡೆದಿರುವ ಐಟಿಸಿಯ ಲಾಭ 30,600 ರೂಪಾಯಿಗಳನ್ನು ತಿರುಗಿಸಿ ಕೊಡಬೇಕಾಗುತ್ತದೆ.

ತೆರಿಗೆಗೆ ಒಳಪಟ್ಟ ಸರಕು ಮತ್ತು / ಅಥವಾ ಸೇವೆಗಳು ಯಾವಾಗ ವಿನಾಯಿತಿಗೆ ಅರ್ಹವಾಗುತ್ತವೆ?

ತೆರಿಗೆಗೆ ಒಳಪಟ್ಟ ಸರಕು ಮತ್ತು / ಅಥವಾ ಸೇವೆಗಳು ಯಾವಾಗ ವಿನಾಯಿತಿಗೆ ಅರ್ಹವಾಗಿವೆ ಎಂದು ಪ್ರಕಟಣೆಯಾಗುತ್ತದೋ ಆಗ ಆ ವ್ಯಕ್ತಿಯು ಈಗಾಗಲೇ ಸ್ಟಾಕ್ ಇನ್‍ಪುಟ್‍ಗಳು, ಅರೆ-ಸಿದ್ಧಪಡಿಸಿದ ಇನ್‍ಪುಟ್‍ಗಳು, ಸಿದ್ಧ ಪಡಿಸಿದ ಸರಕುಗಳು ಮತ್ತು ಕ್ಯಾಪಿಟಲ್ ಗುಡ್ಸ್‍ಗಳ ಮೇಲೆ ಪಡೆದಿರುವ ಐಟಿಸಿಯನ್ನು ವಿನಾಯಿತಿಯ ಒಂದು ದಿನ ಮೊದಲು ಹಿಂತಿರುಗಿಸಬೇಕು.
ಉದಾಹರಣೆಗೆ: ನೀವು ತಯಾರಿಸಿದ ತೆರಿಗೆಗೆ ಒಳಪಟ್ಟ ಒಂದು ವಸ್ತುವು, ಜಿಟಿಸಿಯಿಂದ 15.9.2017 ರಿಂದ ಅನ್ವಯವಾಗುವಂತೆ ವಿನಾಯಿತಿ ಹೋದಿದೆ ಎಂದು ಘೋಷಣೆಯಾಗುತ್ತದೆ. ಜಿಎಸ್‍ಟಿ ಪಡೆದಿರುವ ನಿಮ್ಮ ಸ್ಟಾಕ್ ಒಳಹರಿವು ಈ ರೀತಿ ಇದೆ-

ಕ್ಲೋಸಿಂಗ್ ಸ್ಟಾಕ್- 14.09.2017
ಇನ್ಪುಟ್ಸ್ಮೌಲ್ಯ (ರೂ.)18% (ರೂ.) ದರದಲ್ಲಿ ಇನ್ಪುಟ್‍ಗಳ ಮೇಲೆ ಪಾವತಿಸಲಾದ ಜಿಎಸ್‍ಟಿ
ಕಚ್ಚಾ ಪದಾರ್ಥಗಳು1,00,00018,000
ಅರೆ ಸಿದ್ಧಗೊಂಡ ವಸ್ತುಗಳ ಇನ್ಪುಟ್ಸ್50,000 9,000
ಒಟ್ಟು1,50,00027,000

ಇನ್‍ಪುಟ್ ಸ್ಟಾಕ್ ಮೇಲೆ ಪಡೆದಿರುವ ಐಟಿಸಿ 27,000 ರೂಪಾಯಿಗಳನ್ನು ನೀವು ಹಿಂದಿರುಗಿಸಬೇಕು.

ಸೂಚನೆ:ಜಿಎಸ್‍ಟಿ ದರಗಳು ಇನ್ನೂ ನಿರ್ಧಾರವಾಗಿಲ್ಲ ಮತ್ತು ಮೆಲ್ಕಾಣಿಸಿದ ಉದಾಹರಣೆಗಳಲ್ಲಿನ ದರಗಳು ಕೇವಲ ವಿವರಣೆಗಳಿಗೆ ಮಾತ್ರ.

Are you GST ready yet?

Get ready for GST with Tally.ERP 9 Release 6

129,824 total views, 22 views today