ನೀವು ಜಿಎಸ್ಟಿ ಕುರಿತಾದ ಟ್ಯಾಲಿಯ ಸರಣಿ ಲೇಖನಗಳನ್ನು ಅನುಸರಿಸುತ್ತ ಇರಬಹುದು. ನಾವು ಇತ್ತೀಚಿಗೆ ನಮ್ಮ ಉತ್ಪನ್ನಗಳ ವಿವರಗಳು ಮತ್ತು ನಮ್ಮ ಜಿಎಸ್ಟಿ ಸಿದ್ಧ ತಂತ್ರಾಂಶವಾಗಿರುವ ರಿಲೀಸ್ 6.0 . ನಾವು ಇತ್ತೀಚೆಗೆ ನಮ್ಮ ಉತ್ಪನ್ನ ಮಾರ್ಗಸೂಚಿಯನ್ನು ಪೋಸ್ಟ್ ಮಾಡಿದ್ದೇವೆ ಮತ್ತು ಅದನ್ನು ಪ್ರಕಟಿಸಿದ್ದೇವೆ
Release 6.0 ಬಿಡುಗಡೆ 6.0 ನಮ್ಮ GST- ರೆಡಿ ಸಾಫ್ಟ್ವೇರ್ ಆಗಿರುತ್ತದೆ

ದೇಶದಲ್ಲಿ ಜಿಎಸ್ಟಿ ಬಿಡುಗಡೆ ಸನ್ನಿಹಿತವಾಗಿರುವುದರಿಂದ ನಾವು ಜಿಎಸ್ಟಿ ಸಿದ್ಧ ತಂತ್ರಾಂಶ ಬಿಡುಗಡೆಗೆ ಹತ್ತಿರವಾಗಿದ್ದೇವೆ.

ಟ್ಯಾಲಿಯ ಜೊತೆ ಜಿಎಸ್ಟಿಗೆ ಹೇಗೆ ಸಿದ್ಧತೆಗೊಳ್ಳಬಹುದೆಂಬ ನಮ್ಮ ವಿವರವಾದ ಯೋಜನೆಯ ಕುರಿತು ಇಲ್ಲಿ ಮಾಹಿತಿ ಇದೆ:

 – ನೀವು ಟ್ಯಾಲಿ.ಇಆರ್ಪಿ 9 ರಿಲೀಸ್ 6(ಬೀಟಾ ಆವೃತ್ತಿ)ಯನ್ನು ಡೌನ್ಲೋಡ್ ಮಾಡಿಕೊಂಡು ಪೂರ್ವವೀಕ್ಷಣೆ ಮಾಡುವ ಕಾರ್ಯಕ್ರಮದಿಂದ ನೀವು ಜಿಎಸ್ಟಿ ಕುರಿತು ಆರಾಮವಾಗಿರಬಹುದು.

 – ಟ್ಯಾಲಿ.ಇಆರ್ಪಿ 9 ರಿಲೀಸ್ 6(ಗೋಲ್ಡ್) ಅಂತಿಮ ಬಿಡುಗಡೆಯ ನಂತರ ನೀವು ಇದನ್ನು ಬಳಕೆ ಮಾಡಬಹುದಾಗಿದೆ.

ಈ ಪ್ರಮುಖ ಸಮಯಾವಧಿಯನ್ನು ಗಮನಿಸಿ.

 – ಪೂರ್ವ ವೀಕ್ಷಣೆ ಕಾರ್ಯಕ್ರಮವು ಜೂನ್ 17ರ ವಾರಾಂತ್ಯದಲ್ಲಿ ಆರಂಭಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಟ್ಯಾಲಿ ಪಾಲುದಾರರನ್ನು ಸಂಪರ್ಕಿಸಿರಿ.

 – ಟ್ಯಾಲಿ.ಇಆರ್ಪಿ 9 ರಿಲೀಸ್ 6ರ ಅಂತಿಮ ಬಿಡುಗಡೆಯು ಜೂನ್ 26ನೇ ತಾರೀಕಿನ ವಾರದಲ್ಲಿ ನಡೆಯಲಿದೆ.

ಟ್ಯಾಲಿ.ಡೆವಲಪರ್ 9, ಟ್ಯಾಲಿ.ಸರ್ವರ್ 9 ಮತ್ತು ಶಾಪರ್ 9ಗಳು ಪೂರ್ವವೀಕ್ಷಣೆಯಲ್ಲಿ ಒಳಗೊಂಡಿವೆ.

ಏನಿದು ಪೂರ್ವವೀಕ್ಷಣೆ ಬಿಡುಗಡೆ?

ನಮ್ಮ ಉತ್ಪನ್ನವನ್ನು ಆರಂಭದಲ್ಲಿಯೇ ಬಳಸಲು ನಿಮಗೆ ನೀಡುವ ಅನುಮತಿಯು ಪೂರ್ವವೀಕ್ಷಣೆ ಬಿಡುಗಡೆಯಲ್ಲಿ ದೊರಕುತ್ತದೆ. ನಿಮ್ಮಲ್ಲಿರುವ ವ್ಯವಹಾರದ ಮಾಹಿತಿಯ ಒಂದು ಪ್ರತಿಗಳನ್ನು ಇಟ್ಟುಕೊಳ್ಳಿರಿ ಮತ್ತು ಈ ಉತ್ಪನ್ನದ ಜೊತೆ ಆ ಮಾಹಿತಿಗಳನ್ನು ಹೇಗೆ ಬಳಕೆ ಮಾಡಬಹುದೆಂದು ಪರಿಶೀಲನೆ ನಡೆಸಿ. ಜಿಎಸ್ಟಿ ಬಿಡುಗಡೆಗೆ ಮೊದಲು ಸೀಮಿತ ಅವಧಿಯಲ್ಲಿ ಈ ಅವಕಾಶ ದೊರಕುತ್ತದೆ. ಇದರಿಂದ ಜಿಎಸ್ಟಿಗೆ ಸಮರ್ಪಕವಾಗಿ ಸಿದ್ಧಗೊಳ್ಳಲು ನಿಮಗೆ ಸಹಾಯವಾಗುತ್ತದೆ.

ಗಮನಿಸಿ: ಈ ಪೂರ್ವ ವೀಕ್ಷಣೆಯು `ಗೋಲ್ಡ್ ಆವೃತ್ತಿ’ಯದ್ದಲ್ಲ, ಮತ್ತು ಹೀಗಾಗಿ ನೀವು ಹೊಸ ಮಾಹಿತಿಗಳನ್ನು ಇದರಲ್ಲಿ ಲಗ್ಗತ್ತಿಸಬೇಡಿ.

ಪೂರ್ವವೀಕ್ಷಣೆ ಬಿಡುಗಡೆಯಲ್ಲಿ ನಾನು ಹೇಗೆ ಆರಂಭಿಸಬಹುದು?

ನಮ್ಮ ಪೂರ್ವವೀಕ್ಷಣೆಗೆ ಬಿಡುಗಡೆಯಾದ ತಂತ್ರಾಂಶವು ನಮ್ಮ ವೆಬ್ಸೈಟ್ನಲ್ಲಿ ಲಭ್ಯವಿದೆ. ಟ್ಯಾಲಿ.ಇಆರ್ಪಿ 9 ರಿಲೀಸ್ 6.0(ಬೀಟಾ)ವನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಕಂಪ್ಯೂಟರ್ನಲ್ಲಿ ಸ್ಥಾಪಿಸಿರಿ. ಇದಕ್ಕೆ ಕೆಲವೇ ಕೆಲವು ನಿಮಿಷ ಹಿಡಿಯುತ್ತದೆ.

ಈ ಅವಕಾಶವನ್ನು ನಿಮಗೆ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಪಿಸಲು ಬಳಸುತ್ತಿದ್ದೇವೆ. ನಿಮ್ಮ ಕೊಡುಗೆಯು ನಿಜಕ್ಕೂ ಅಮೂಲ್ಯವಾದದ್ದು ಮತ್ತು ನಮಗೆ ಅತ್ಯುತ್ತಮ ಉತ್ಪನ್ನ ರೂಪಿಸಲು ಸಹಕಾರಿಯಾಗಿದೆ.

ಟ್ಯಾಲಿ.ಇಆರ್ಪಿ 9 ರೀಲಿಸ್ 6.9 (ಬೀಟಾ)ದ ಪೂರ್ವ ವೀಕ್ಷಣೆ ಕುರಿತಾದ ಈ ವಿಡಿಯೋವನ್ನು ವೀಕ್ಷಿಸಿರಿ.

ಪರಿಷ್ಕರಣೆ: ಟ್ಯಾಲಿ.ಇಆರ್ಪಿ 9 ರೀಲಿಸ್ 6 (ಜಿಎಸ್ಟಿ ಸಿದ್ಧ ತಂತ್ರಾಂಶ) ಈಗ ಲಭ್ಯವಿದೆ. ಇದನ್ನು ಈ ಲಿಂಕ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಪ್ರತಿಕ್ರಿಯೆಗಳನ್ನು ಈ ಲೇಖನಕ್ಕೆ ಪ್ರತಿಕ್ರಿಯೆಯ ಮೂಲಕ ತಿಳಿಸಿರಿ.

ನವೀಕರಿಸಿ
:
ಟ್ಯಾಲಿ.ಇಆರ್ಪಿ 9 ರೀಲಿಸ್ 6 (ಜಿಎಸ್ಟಿ ಸಿದ್ಧ ತಂತ್ರಾಂಶ) ಈಗ ಲಭ್ಯವಿದೆ. ಇದನ್ನು ಈ ಲಿಂಕ್ ಮೂಲಕ ಡೌನ್ಲೋಡ್ ಮಾಡಿ
ಇದು ಮತ್ತು ಈ ಪೋಸ್ಟ್ಗೆ ಪ್ರತ್ಯುತ್ತರಿಸುವುದರ ಮೂಲಕ ನಿಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಳ್ಳಿ.

Are you GST ready yet?

Get ready for GST with Tally.ERP 9 Release 6

131,856 total views, 56 views today

Avatar

Author: Rakesh Agarwal

Head of Product Management