ಜಿಎಸ್ಟಿ ಪರಿಚಯಿಸದ ಬಳಿಕ ಎಲ್ಲರಲ್ಲಿಯೂ ಒಂದು ಪ್ರಶ್ನೆ ಇರುತ್ತದೆ “ಹೇಗೆ ಟ್ಯಾಲಿಯು ನನ್ನ ವ್ಯವಹಾರಕ್ಕೆ ಬೆಂಬಲ ನೀಡುತ್ತದೆ ಮತ್ತು ಜಿಎಸ್ಟಿಗೆ ಸಿದ್ಧರಾಗಲು ಹೇಗೆ ಬೆಂಬಲ ನೀಡುತ್ತದೆ?’’
ಈ ಲೇಖನದಲ್ಲಿ ಟ್ಯಾಲಿಯ ಜಿಎಸ್ಟಿ ಕಾರ್ಯತಂತ್ರವನ್ನು ನೀವು ಇಲ್ಲಿ ಅರ್ಥಮಾಡಿಕೊಳ್ಳಲಿದ್ದೀರಿ ಮತ್ತು ನೀವು ಟ್ಯಾಲಿ.ಇಆರ್ಪಿ 9 ಮೂಲಕ ನೀವು ಹೇಗೆ ಜಿಎಸ್ಟಿ ಅನುಸರಣೆ ಮಾಡಬಹುದೆಂದು ತಿಳಿದುಕೊಳ್ಳುವಿರಿ.

ಜಿಎಸ್ಟಿಎನ್ ಗೆ ಸಿದ್ಧಗೊಳ್ಳುವುದು

ನಿಮಗೆ ತಿಳಿದಿರುವ ಹಾಗೆ, ಜಿಎಸ್ಟಿ ಪರಿಷತ್ ಜಿಎಸ್ಟಿಗೆ ಸಂಬಂಧಪಟ್ಟ ಕಾನೂನು, ಮತ್ತು ನಿಯಮಗಳನ್ನು ಅಂತಿಮಗೊಳಿಸಿದೆ. ಜಿಎಸ್ಟಿಎನ್ ಎಪಿಐ ಅಂತಿಮಗೊಳಿಸುವಿಕೆ ಮತ್ತು ಜಿಎಸ್ಟಿಎನ್ ಯು ಅಂತಿಮಗೊಳ್ಳಲು ಸನಿಹದಲ್ಲಿದೆ. ಜಿಎಸ್ಟಿಎನ್ ಫೌಂಡೇಷನ್ ಅಂತಿಮಗೊಳ್ಳುವ ಹಂತದಲ್ಲಿದೆ. ಅವಶ್ಯಕತೆ ಇರುವಷ್ಟು ಸದೃಢತೆಯನ್ನು ಹೊಂದಿದ ಜಿಎಸ್ಟಿಎನ್ ಫೌಂಡೇಷನ್ ಸಿದ್ಧಗೊಳ್ಳುವ ತನಕ ನಿಮಗಾಗಿ ಜಿಎಸ್ಟಿಎನ್ ಬಳಕೆಗೆ ಅತ್ಯುತ್ತಮ ಉತ್ಪನ್ನವನ್ನು ನಿಮಗಾಗಿ ರಚಿಸಲು ಸಾಧ್ಯವಿಲ್ಲ.
ಈ ಅವಲಂಬನೆಯಿಂದ ಹೊರಗೆ ಬರಲು ಮತ್ತು ನಿಮಗೆ ಸಹಾಯ ಮಾಡಲು, ನಮ್ಮ ಬಳಕೆದಾರರಿಗೆ ನೆರವಾಗಲು, ಜಿಎಸ್ಟಿಗೆ ಸಿದ್ಧಗೊಳ್ಳಲು ನಾವು ಸ್ಪಷ್ಟವಾದ ಜಿಎಸ್ಟಿ ಉತ್ಪನ್ನವನ್ನು ಹೊರತಂದಿದ್ದೇವೆ.

ಜಿಎಸ್ಟಿ ಉತ್ಪನ್ನ ಹೊರತರುವ ಯೋಜನೆ

ಟ್ಯಾಲಿ.ಇಆರ್ ಪಿ 9 ರಿಲೀಸ್ 6.0- ಜಿಎಸ್ಟಿ ಜೊತೆ ಆರಂಭ

ನಮ್ಮ ಮೊದಲ ಜಿಎಸ್ಟಿ ಬಿಡುಗಡೆಗೊಳಿಸುವ ಯೋಜನೆಯು ಈ ಜೂನ್ ನಲ್ಲಿ ನೆರವೇರಿತು. ಈ ಬಿಡುಗಡೆಯ ಮೂಲಕ ನಿಮಗೆ 1ನೇ ದಿನದಿಂದ ನೀವು ಜಿಎಸ್ಟಿಗೆ ಸಿದ್ಧಗೊಳ್ಳಲು ನೆರವಾಗುತ್ತದೆ. ಈ ರಿಲೀಸ್ ಅನ್ನು ಬಳಕೆ ಮಾಡಿ ನೀವು ಹೊಸ ಜಿಎಸ್ಟಿ ನಿಯಮಗಳಿಗೆ ತಕ್ಕಂತೆ ನಿಮ್ಮ ವ್ಯವಹಾರ ನಡೆಸಬಹುದಾಗಿದೆ.

ಜಿಎಸ್ಟಿಗೆ ಸಿದ್ಧಗೊಳ್ಳಲು ಮೊದಲ ಹೆಜ್ಜೆ ಯಾವುದು?

ಜಿಎಸ್ಟಿಗೆ ಸಿದ್ಧಗೊಳ್ಳಲು ಪ್ರಮುಖ ಮೊದಲ ಹೆಜ್ಜೆಗಳಲ್ಲಿ ಈ ಮುಂದಿನವು ಸೇರಿವೆ:

 • ಜಿಎಸ್ಟಿ ಅನುಸರಣೆಯ ವ್ಯವಹಾರ ರಚಿಸುವುದು
 • ಜಿಎಸ್ಟಿ ಸರಕುಪಟ್ಟಿ ಮುದ್ರಿಸುವುದು.

 • ಲೆಕ್ಕಪುಸ್ತಕ ನಿರ್ವಹಿಸುವುದು.
 • ಜಿಎಸ್ಟಿಎನ್ ನಲ್ಲಿ ನಿಮ್ಮ ಮಾಹಿತಿಗಳು ಕಾಣಿಸಿಕೊಳ್ಳುವಂತೆ ಮಾಡಬೇಕು- ಇದು ನಿಮಗೆ ಹೊಸ ಚಟುವಟಿಕೆಯಾಗಿದೆ, ಮತ್ತು ಕೆಲವೊಂದು ಅಂಶಗಳು ನಿಮಗೆ ಅಚ್ಚರಿ ಮೂಡಬಹುದು. ಹೊಸ ಜಿಎಸ್ಟಿ ತೆರಿಗೆ ಸಲ್ಲಿಕೆ ಮಾಡಲು ನಿಮ್ಮ ಭರವಸೆ ಹೆಚ್ಚಿಸಲು ನೀವು ಈ ಮುಂದಿನ ಎರಡು ಹೆಜ್ಜೆಗಳನ್ನು ಈ ಮುಂದಿನಂತೆ ಮಾಡಿರಿ:
  • ಟ್ಯಾಲಿ.ಇಆರ್ ಪಿ 9ರಲ್ಲಿ ನೀಡಲಾದ ದೋಷ ಪರಿಹರಿಸುವ ಸಾಮರ್ಥ್ಯ(ಇದಕ್ಕೆ ಟ್ರಯಾಂಗ್ಯುಲೇಷನ್ ಎಂದೂ ಕರೆಯಲಾಗುತ್ತದೆ)ವನ್ನು ಬಳಸಿರಿ, ಇದರಿಂದ ತಪ್ಪು ವ್ಯವಹಾರವನ್ನು ಲಗ್ಗತ್ತಿಸಿದರೆ ಇದರಲ್ಲಿ ಸರಿಪಡಿಸಬಹುದು ಮತ್ತು ಯಾಾಗಲೂ ಮಾಹಿತಿಗಳು ಸಮರ್ಪಕವಾಗಿರಲು ಇದು ನೆರವಾಗುತ್ತದೆ.
  • ದೃಢೀಕರಿಸಿದ ವ್ಯವಹಾರದ ಮಾಹಿತಿಯನ್ನು ಜಿಎಸ್ಟಿಎನ್ ಗೆ ಲಗ್ಗತ್ತಿಸಿರಿ, ನಂತರ ಯಾವುದೇ ದೋಷಗಳನ್ನು ಕಡಿಮೆ ಮಾಡಲು ಇದರಿಂದ ಸಾಧ್ಯವಾಗುತ್ತದೆ.

ಟ್ಯಾಲಿ.ಇಆರ್ ಪಿ 9 ರಿಲೀಸ್ 6 ಜೊತೆ ನಿಮ್ಮ ಸಂಪೂರ್ಣ ವ್ಯವಹಾರವನ್ನು ಜಿಎಸ್ಟಿ ನಿಯಮಗಳಿಗೆ ತಕ್ಕಂತೆ ಈ ಮುಂದಿನ ಸಾಮರ್ಥ್ಯಗಳ ಜೊತೆಗೆ ನಡೆಸಬಹುದಾಗಿದೆ:

ನಿಮ್ಮ ಪ್ರತಿದಿನದ ವ್ಯವಹಾರವನ್ನು ನಡೆಸುವುದು

 1. 1. ಸಂಬಂಧಪಟ್ಟ ಎಲ್ಲಾ ತೆರಿಗೆ ದರಗಳನ್ನು ಸಿದ್ಧಪಡಿಸಿಕೊಳ್ಳಬೇಕು ಮತ್ತು ನಿಮ್ಮೆಲ್ಲ ಪೂರೈಕೆದಾರರು ಮತ್ತು ಗ್ರಾಹಕರ ಜಿಎಸ್ಟಿಐಎನ್ ಮಾಹಿತಿಯನ್ನು ನಿರ್ವಹಿಸಬೇಕು.
 2. 2.ಎಲ್ಲಾ ಹೊಸ ವ್ಯವಹಾರಗಳು ಜಿಎಸ್ಟಿ-ಅನುಸರಣೆ ಹೊಂದಿರುವಂತೆ ಖಚಿತಪಡಿಸಿಕೊಳ್ಳಿ ಮತ್ತು ಜಿಎಸ್ಟಿ ಸರಕುಪಟ್ಟಿಯನ್ನು ಮುದ್ರಿಸಿಕೊಳ್ಳಿರಿ.
  .

ನಿಮ್ಮ ಅನುಸರಣೆ ಆದಾಯ ಸಲ್ಲಿಕೆ ಮಾಡುವುದು

 1. ಟ್ಯಾಲಿ.ಇಆರ್ಪಿ 9 ರಿಲೀಸ್ 6.0 ಅನ್ನು ವ್ಯವಹಾರವನ್ನು ಜಿಎಸ್ಟಿ ನಿಯಮಗಳಿಗೆ ತಕ್ಕಂತೆ ಜಿಎಸ್ಟಿಗೆ ಲಗ್ಗತ್ತಿಸುವ ಮೊದಲು ಸರಿಪಡಿಸಿಕೊಳ್ಳಲು ಬಳಸಿರಿ.
 2. ಟ್ಯಾಲಿ.ಇಅರ್ಪಿ 9 ರಿಲೀಸ್ 6.0 ಬಳಸಿಕೊಂಡು ಸರಿಯಾಗಿ ಮೈಕ್ರೊಸಾಫ್ಟ್ ಎಕ್ಸೆಲ್ ಶೀಟ್ ನಲ್ಲಿ ಸರಿಯಾಗಿ ರಚಿಸಿಕೊಂಡು ಮಾಹಿತಿಗಳನ್ನು ರಫ್ತು ಮಾಡಿರಿ.
 3. ಈ ಎಕ್ಸೆಲ್ ಫೈಲ್ ಗಳನ್ನು ಜಿಎಸ್ಟಿಎನ್ ನಲ್ಲಿ ನೀಡಲಾದ ಆಫ್ ಲೈನ್ ಸೌಲಭ್ಯವನ್ನು ಬಳಸಿಕೊಂಡು ಆಮದು ಮಾಡಿಕೊಳ್ಳಿ ಮತ್ತು ಹೊರ ಕಡತವನ್ನು ರಚಿಸಿರಿ(ಜಿಎಸ್ಒಎನ್ ಸ್ವರೂಪದಲ್ಲಿ).
 4. ಬಿಡಿಸಿರುವ ಕಡತವನ್ನು ಜಿಎಸ್ಟಿಎನ್ ತಾಣದಲ್ಲಿ ಲಗ್ಗತ್ತಿಸಿರಿ.

ಈ ಲೇಖನ ಪ್ರಕಟಿಸುವ ಸಮಯದಲ್ಲಿ, ಜಿಎಸ್ಟಿಆರ್ 2 ನಮೂನೆಯು ಜಿಎಸ್ಟಿಎನ್ ಆಫ್ ಲೈನ್ ಸೌಲಭ್ಯದಲ್ಲಿ ಲಭ್ಯವಿರಲಿಲ್ಲ. ಒಮ್ಮೆ ಈ ನಮೂನೆಯು ಲಭ್ಯವಾದರೆ, ನಿಮಗೆ ಟ್ಯಾಲಿ.ಇಆರ್ಪಿ 9ನಲ್ಲಿ ಇದಕ್ಕೆ ಪೂರಕವಾಗಿರುವುದನ್ನು ನೀಡಲಿದ್ದೇವೆ ಮತ್ತು ಖರೀದಿ ಸಂಬಂಧಪಟ್ಟ ದೋಷಗಳನ್ನು ಸರಿಪಡಿಸುವ ಸೌಲಭ್ಯವನ್ನು ಒದಗಿಸಲಾಗುತ್ತದೆ. ತೆರಿಗೆ ರಿಟರ್ನ್ ಮತ್ತು ಲೆಕ್ಕಪುಸ್ತಕದ ಸ್ಟೇಟಸ್ ಅನ್ನು ಸುಲಭವಾಗಿ ನಿರ್ವಹಿಸಲು ಮತ್ತು ಜಿಎಸ್ಟಿಎನ್ ಮಾಹಿತಿಗಳು ಸಿಂಕ್ ಆಗಲು ನಿಮಗಿದು ಸಹಾಯವಾಗಲಿದೆ.
ಆರಂಭಿಕ ಹಂತದಲ್ಲಿ, ಕಾನೂನನ್ನು, ನಿಯಮಗಳನ್ನು ಮತ್ತು ಎಪಿಐಗಳನ್ನು ಪರಿಷ್ಕರಣೆ ಮತ್ತು ಸದೃಢಗೊಳಿಸುವುದನ್ನು ನಾವು ನಿರೀಕ್ಷಿಸುತ್ತೇವೆ. ಈ ಬದಲಾವಣೆಗಳಿಗೆ ಬೆಂಬಲ ನೀಡುವ ಸಲುವಾಗಿ, ನಾವು ಸಣ್ಣ/ನಿರ್ವಹಣೆ ಪ್ರಕಟಣೆಯಾಗಿರುವ ಟ್ಯಾಲಿ.ಇಆರ್ಪಿ 9 ರಿಲೀಸ್ 6 ಅನ್ನು ನೀಡುತ್ತೇವೆ ಮತ್ತು ಮುಂದೆ ಪ್ರಮುಖವಾದ ಟ್ಯಾಲಿ.ಇಆರ್ ಪಿ 9 ರಿಲೀಸ್ 7 ನಲ್ಲಿ ಲಭ್ಯವಿರಲಿದೆ.

ಟ್ಯಾಲಿ.ಇಆರ್ಪಿ 9 ರಿಲೀಸ್ 7

ಟ್ಯಾಲಿ.ಇಆರ್ಪಿ 9 ರಿಲೀಸ್ 7ನಲ್ಲಿ ನಿಮಗೆ ನಾವು “ಸಂಪರ್ಕಿಸಿದ ಅನುಭವ’ವನ್ನು ಜಿಎಸ್ಟಿಎನ್ ವ್ಯವಸ್ಥೆ ಜೊತೆಗೆ ನೀಡುತ್ತೇವೆ ಮತ್ತು ಈ ಹಿಂದೆ ನಾವು ಹಂಚಿಕೊಂಡಿರುವ ಲೇಖನದಲ್ಲಿ ಗುರುತಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ ((ಜಿಎಸ್ಟಿ ಮತ್ತು ಜಿಎಸ್ಟಿ ಸಿದ್ಧ ಉತ್ಪನ್ನದಿಂದ ಏನು ನಿರೀಕ್ಷಿಸಬಹುದು)). ನಮ್ಮ ಉತ್ಪನ್ನದ ದಿನಾಂಕ ಮತ್ತು ಲಕ್ಷಣಗಳು ಜಿಎಸ್ಟಿಎನ್ ಎಪಿಐ ಸದೃಢವಾದಗಿನ ಸಮಯವನ್ನು ಅವಲಂಬಿಸಿದೆ ಮತ್ತು ಆ ಸಮಯದಲ್ಲಿ ನಿಮಗೆ ಸಮರ್ಪಕ ಪರಿಹಾರವನ್ನು ಒದಗಿಸುತ್ತೇವೆ. ಇದಕ್ಕಾಗಿ ನಾವು ಜಿಎಸ್ಟಿಎನ್ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ.

ನಮ್ಮ ಪ್ರತಿಯೊಂದು ಉತ್ಪನ್ನಗಳ ಬಿಡುಗಡೆಯು ವ್ಯವಹಾರಕ್ಕೆ ಅತ್ಯುತ್ತಮ ಅನುಸರಣೆ ಒದಗಿಸುವ ಸಲುವಾಗಿದೆ ಮತ್ತು ನಾವು ಅದಕ್ಕಾಗಿ ಸೇವೆ ಸಲ್ಲಿಸುತ್ತೇವೆ!
ನೀವು ಟ್ಯಾಲಿ.ಇಆರ್ ಪಿ 9 ರಿಲೀಸ್ 6 ಅನ್ನು ಹೇಗೆ ಪಡೆಯಬಹುದು?
ನಿಮಗೀಗ ಟ್ಯಾಲಿಯ ಜಿಎಸ್ಟಿ ಕಾರ್ಯತಂತ್ರದ ಕುರಿತು ಅರ್ಥವಾಗಿರಬಹುದು, ನೀವು ಇಂದು ಟ್ಯಾಲಿ.ಇಆರ್ ಪಿ 9 ರಿಲೀಸ್ 5 ಅನ್ನು ಅಪ್ ಗ್ರೇಡ್ ಪರಿಷ್ಕರಣೆ: ಟ್ಯಾಲಿ.ಇಆರ್ಪಿ 9 ರಿಲೀಸ್ 6(ಜಿಎಸ್ಟಿ-ರೆಡಿ) ಈಗ ಲಭ್ಯವಿರುತ್ತದೆ. ಇದನ್ನು ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿರಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ಈ ಲೇಖನದ ಕೆಳಗೆ ಪ್ರತಿಕ್ರಿಯೆಯ ರೂಪದಲ್ಲಿ ಹಂಚಿಕೊಳ್ಳಿರಿ .

Are you GST ready yet?

Get ready for GST with Tally.ERP 9 Release 6

325,772 total views, 430 views today

Avatar

Author: Rakesh Agarwal

Head of Product Management