ತಂತ್ರಜ್ಞಾನ ಆಧರಿತ ಅನುಸರಣೆಯು ಭಾರತಕ್ಕೆ ಸಂಪೂರ್ಣ ಹೊಸ ಪರಿಕಲ್ಪನೆಯೇನಲ್ಲ. 1990ರ ಹಿಂದೆಯೇ, ತೆರಿಗೆ ಇಲಾಖೆಯು ತೆರಿಗೆ ಆಡಳಿತಕ್ಕೆ ತಂತ್ರಜ್ಞಾನವನ್ನು ಬಳಸಿದೆ. ಆದಾಗ್ಯೂ, ಇದು ಬ್ಯಾಕ್ ಎಂಡ್ ಅಥವಾ ಹಿಂಬದಿಯ ಯಾಂತ್ರಿಕತೆಯಾಗಿತ್ತು. ಆನ್ ಲೈನ್ ಮೂಲಕ ರಿಟರ್ನ್ ಸಲ್ಲಿಕೆ ಆರಂಭವಾದ ಬಳಿಕ ಈ ವರ್ತನೆಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಇದರ ಪರಿಣಾಮವಾಗಿ, ಬೃಹತ್ ಪ್ರಮಾಣದಲ್ಲಿ ವಿಭಿನ್ನವಾದ ಕಂಪ್ಯೂಟರ್ ವ್ಯವಸ್ಥೆಯನ್ನುಸಂಯೋಜಿಸಲಾಯಿತು.ಇದರಿಂದಾಗಿ ತೆರಿಗೆ ಪಾವತಿದಾರರೇ, ನೇರವಾಗಿ ತೆರಿಗೆ ಇಲಾಖೆಯನ್ನುಸಂಪರ್ಕಿಸಲು ಅವಕಾಶ ಕಲ್ಪಿಸಲು ಸಾಧ್ಯವಾಯಿತು.

ಪ್ರಸಕ್ತ ತೆರಿಗೆ ವ್ಯವಸ್ಥಯಡಿ, ಡೇಟಾ ಅಥವಾ ಮಾಹಿತಿಗಳು ಒಂದೇ ದಿಕ್ಕಿನತ್ತ ಸರ್ಕಾರಕ್ಕೆ ವಿಶಾಲವಾಗಿ ಹರಿಯುತ್ತದೆ. ಇದನ್ನು ನಾವು ‘ಬಿ’ ಯಿಂದ ‘ಜಿ’ಗೆ ಅಂದರೆ ಬಿಸಿನೆಸ್ ನಿಂದ ಗವರ್ನಮೆಂಟ್ ಗೆ ಮಾಹಿತಿಗಳ ಪ್ರವಹಿಸುವಿಕೆ ಎನ್ನಬಹುದು. ತಂತ್ರಜ್ಞಾನದ ಬಳಕೆಯಿಂದ ಸಮಯ ಮತ್ತು ವೆಚ್ಚದ ಉಳಿತಾಯವಾಗುವುದರ ಜೊತೆಗೆ ತೆರಿಗೆ ಅನುಸರಣೆಯ ನಿಖರತೆಯು ಅತ್ಯುತ್ತಮವಾಗಿ ಹೆಚ್ಚಾಗಿದೆ.

ಜಿಎಸ್ಟಿ ಅನುಸರಣೆಗೆ ತಂತ್ರಜ್ಞಾನ- ಈ ಸಮಯದಲ್ಲಿ ಏನು ವ್ಯತ್ಯಾಸವಿದೆ?

ಈಗಾಗಲೇ ತೆರಿಗೆ ಅನುಸರಣೆಯಲ್ಲಿ ತಂತ್ರಜ್ಞಾನವು ಹಾಸು ಹೊಕ್ಕಾಗಿದೆ. ಹಾಗಾದರೆ, ಜಿಎಸ್ಟಿ ಅಳವಡಿಕೆಗೆ ಮತ್ತು ಅನುಸರಣೆಗೆ ಈ ವಿಷಯದ ಕುರಿತು ಮತ್ತೆ ಆಲೋಚಿಸುವ ಅಗತ್ಯವೇನಿದೆ? ಸರಕಾರ ಮತ್ತು ವ್ಯವಹಾರದ ದೃಷ್ಟಿಯಿಂದ ಜಿಎಸ್ಟಿ ಅಳವಡಿಕೆ ಮತ್ತು ಆಡಳಿತದಲ್ಲಿ ತಂತ್ರಜ್ಞಾನವು ಯಾಕೆ ಮಹತ್ವದ ಪಾತ್ರ ವಹಿಸುತ್ತದೆ?
ಜಿಎಸ್ಟಿ ಮೂಲಕ ಸರ್ಕಾರವು ಎರಡು ಪ್ರಮುಖ ಗುರಿಗಳನ್ನು ಸಾಧಿಸಲು ಹೊರಟಿದೆ:
• ತೆರಿಗೆ ವಂಚನೆ ಕಡಿಮೆ ಮಾಡುವಿಕೆ
• ತೆರಿಗೆ ಪಾವತಿದಾರರಿಗೆ ಅನುಸರಣೆಯನ್ನು ಸರಳಗೊಳಿಸುವಿಕೆ
ತೆರಿಗೆ ವ್ಯವಸ್ಥೆಯಲ್ಲಿ ಗೆಲ್ಲುವ ಉದ್ದೇಶವಿದ್ದರೂ, ಸರ್ಕಾರಕ್ಕೆ ಹಲವು ಕಾರಣಗಳಿಂದ ತೆರಿಗೆ ವಂಚನೆ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಮತ್ತು ತೆರಿಗೆ ಆದಾಯ ನಷ್ಟವನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದರ ಪರಿಣಾಮವಾಗಿ, ಮಾರಾಟದಾರರ ಬಾಧ್ಯತೆಗಳಿಗೆ ಎದುರಾಗಿ ತೆರಿಗೆಯನ್ನು ಪಡೆಯಲು ಇಲಾಖೆಗೆ ಸವಾಲಿನ ವಿಷಯವಾಗಿ ಪರಿಣಮಿಸಿದೆ. ಇದರೊಂದಿಗೆ, ಇನ್ಪುಟ್ ತೆರಿಗೆಯನ್ನು ಪಡೆಯಲು ಹಲವು ನಕಲು ಹಾದಿಗಳನ್ನು ಅನುಸರಿಸುವುದು, ತೆರಿಗೆ ವಂಚನೆ, ಕ್ಲೇಮ್ ಮಾಡುವಲ್ಲಿ ವಂಚನೆ, ಮಾರಾಟಗಾರರಿಂದ ಬಾಧ್ಯತೆ ಘೋಷಣೆ ಮಾಡದೆ ಇದ್ದರೂ ಆದಾನ ತೆರಿಗೆ ಪಡೆಯಲು ಪ್ರಯತ್ನಿಸುವುದು ಅಥವಾ ತೆರಿಗೆ ಬಾಧ್ಯತೆಯನ್ನು ಘೋಷಿಸದೆ ಇರುವ ಮಾರಾಟಗಾರರು ಸೇರಿದಂತೆ ಹಲವು ಬಗೆಯಲ್ಲಿ ತೆರಿಗೆ ವಂಚನೆ ಮಾಡಲಾಗುತ್ತಿತ್ತು.

It has been estimated that the taxpayer base under #GST is around 8 million Click To Tweet

ಇಂತಹ ತೊಂದರೆಯಿಂದ ಹೊರಬರಲು, ಖರೀದಿದಾರರು ಮತ್ತು ಮಾರಾಟಗಾರರಿಗೆ ಹೊಂದಾಣಿಕೆಯಾಗುವಂತಹ ಸರಕುಪಟ್ಟಿಯಾದಿಯನ್ನು ತಯಾರಿಸಿದೆ.

ಸರಕುಪಟ್ಟಿಯನ್ನು ಕಂಪ್ಯೂಟರ್ ನೆರವು ಇಲ್ಲದೆ ಹೋಲಿಸಿ ನೋಡಲು ದಾರಿಗಳು ಇಲ್ಲ.

ತೆರಿಗೆ ಪಾವತಿದಾರರಿಗೆ ತೆರಿಗೆ ಅನುಸರಣೆಯನ್ನು ಸರಳಗೊಳಿಸಲು ಜಿಎಸ್ಟಿಎನ್ ಪಾತ್ರವೇನು?
ಈಗಿನ ವ್ಯವಸ್ಥೆಗಿಂತ ವಿಶೇಷವಾಗಿ ಭಿನ್ನವಾಗಿರುವ ಹೊಸ ಆಧುನಿಕ ತಂತ್ರಜ್ಞಾನದ ಐಟಿ ಮೂಲಸೌಕರ್ಯವನ್ನು ಪರಿಚಯಿಸುವ ನಿಟ್ಟಿನಲ್ಲಿ ಜಿಎಸ್ಟಿಎನ್ ಕೆಲಸ ಮಾಡುತ್ತಿದೆ. ಮುಕ್ತ ಎಪಿಐ (ಅಪ್ಲಿಕೇಷನ್ ಪ್ರೋಗ್ರಾಂ ಇಂಟರ್ ಫೇಸ್) ನೆರವಿನಿಂದ ಜಿಎಸ್ಟಿಎನ್ ಸರ್ವರ್ ಮುಖಾಂತರ ತೆರಿಗೆಪಾವತಿದಾರರು ಬಳಸುವ ಥರ್ಡ್ ಪಾರ್ಟಿ ಅಪ್ಲಿಕೇಷನ್ ಗಳಿಗೆ ಸಂಪರ್ಕ ಹೊಂದಲು ಪ್ರಯತ್ನಿಸಲಾಗುತ್ತಿದೆ. ಡೆಸ್ಕ್ ಟಾಪ್, ಮೊಬೈಲ್ ಗಳು ಮತ್ತು ಟ್ಯಾಬ್ಲೆಟ್ ಕಂಪ್ಯೂಟರ್ ಗಳ ಮೂಲಕ ತೆರಿಗೆ ಪಾವತಿಸಲು ಎಲ್ಲರಿಗೂ ಇದರಿಂದ ಸಾಧ್ಯವಾಗಲಿದೆ. ಇದರಿಂದ ಪೋರ್ಟಲ್ ಗೆ ಲಾಗಿನ್ ಆಗುವ ಬದಲು, ತಮ್ಮಲ್ಲಿರುವ ಸಾಫ್ಟ್ ವೇರ್ ನೆರವಿನಿಂದ ಸರಕುಪಟ್ಟಿ ಹೋಲಿಕೆ ಮಾಡಿ ನೋಡಲು ತೆರಿಗೆ ಪಾವತಿದಾರರಿಗೆ ಸಾಧ್ಯವಾಗಲಿದೆ. ಇದು ತೆರಿಗೆ ಅನುಸರಣೆಯನ್ನು ಸರಳಗೊಳಿಸಲಿದ್ದು, ಸಾಕಷ್ಟು ಸಮಯ ಉಳಿತಾಯವಾಗಲಿದೆ. ನಿಯಮಿತ ಅಂತರದಲ್ಲಿ ರಿಟರ್ನ್ ಫೈಲ್ ಮಾಡಲು ಅವಕಾಶ ನೀಡುವುದರಿಂದ ಸಾಕಷ್ಟು ಶಿಸ್ತಿನಿಂದ ಜಿಎಸ್ಟಿಯು ಕಾರ್ಯನಿರ್ವಹಿಸಲಿದ್ದು, ಕಡಿಮೆ ಶ್ರಮದಿಂದ ವ್ಯವಹಾರವನ್ನು ನಡೆಸಲು ಆಟೋಮೇಷನ್ ನೆರವಾಗಲಿದೆ.

ಕಡಿಮೆ ಅಥವಾ ಸಂಪೂರ್ಣವಾಗಿ ಮನುಷ್ಯರ ಪಾಲ್ಗೊಳ್ಳುವಿಕೆ ಇಲ್ಲವಾಗಿಸಿ ನೋಂದಣಿ, ತೆರಿಗೆ ರಿಟರ್ನ್ ಸಲ್ಲಿಕೆ, ಮಾಹಿತಿ ವಿನಿಮಯ ಮತ್ತು ಪರಿಣಾಮಕಾರಿಯಾಗಿ ತನಿಖೆ, ನಿಗಾ ವಹಿಸುವಿಕೆ, ಲೆಕ್ಕಪರಿಶೋಧನೆ ಮತ್ತು ಕಾರ್ಯಕ್ಷಮತೆ ವಿಶ್ಲೇಷಣೆ ಇತ್ಯಾದಿ ವಿಷಯಗಳ ತೆರಿಗೆ ಆಡಳಿತವನ್ನು ದಕ್ಷವಾಗಿ ಮಾಡಲು ತಂತ್ರಜ್ಞಾನದ ಬಳಕೆಯು ನೆರವಾಗಲಿದೆ. ಇಂಟರ್ ನೆಟ್ ಇಲ್ಲದೆ ಆಫ್ ಲೈನ್ ನಮೂನೆ ಭರ್ತಿ ಮಾಡುವ ಅವಕಾಶ, ರಿಟರ್ನ್ ಸಲ್ಲಿಸಲು ಅಲರ್ಟ್ ಸಂದೇಶ, ಮೊಬೈಲ್/ಟ್ಯಾಬ್ಲೆಟ್ ನಲ್ಲಿ ಕಾರ್ಯನಿರ್ವಹಿಸುವುದು ಸೇರಿದಂತೆ ಹಲವು ಬಳಕೆದಾರ ಸ್ನೇಹಿ ಲಕ್ಷಣಗಳನ್ನು ಇದು ಹೊಂದಿರಲಿದೆ. ಮಾಹಿತಿಗಳ ನಕಲಾಗುವಿಕೆಯನ್ನು ಹೆಚ್ಚುವರಿ ಯಾಂತ್ರಿಕತೆಯು ತಪ್ಪಿಸಲಿದೆ.

ಈ ತೆರಿಗೆ ವ್ಯವಸ್ಥೆಯನ್ನು ಭಾರತದಲ್ಲಿ ಹೊಸದಾಗಿ ಪರಿಚಯಿಸುತ್ತಿರುವುದರಿಂದ ಆರಂಭಿಕ ಹಂತದ ಅಳವಡಿಕೆ ಸಮಯದಲ್ಲಿ ವ್ಯವಹಾರಗಳು ಸಾಕಷ್ಟು ಸವಾಲುಗಳನ್ನು ಎದುರಿಸಲಿವೆ. ಆದಗ್ಯೂ, ಒಮ್ಮೆ ಈ ವ್ಯವಸ್ಥೆಯು ಹಳಿಗೆ ಬಂದ ನಂತರ ಎರಡು ಪ್ರಮುಖ ಲಾಭವನ್ನು ಪಡೆಯಬಹುದು. ತೆರಿಗೆ ವಂಚನೆ ತಡೆಯುವಿಕೆ, ಮತ್ತು ತೆರಿಗೆ ಆದಾಯ ಹೆಚ್ಚಿಸುವಿಕೆ ಮತ್ತು ತೆರಿಗೆ ಪಾವತಿದಾರರಿಗೆ ಸುಲಭವಾಗಿ ತೆರಿಗೆ ಪಾವತಿಸುವ ಸೌಕರ್ಯವನ್ನು ಪಡೆಯಬಹುದು.

ಈ ಮೂಲಕ ದೇಶವು ಜಿಎಸ್ಟಿ ಅನುಸರಣೆಯಲ್ಲಿ ಯಶಸ್ಸಾದರೆ ಜಗತ್ತಿನಲ್ಲೇ ಹೊಸ ಇತಿಹಾಸ ಬರೆಯಲಿದೆ.

ವ್ಯವಹಾರಗಳು ಈಗ ಏನು ಮಾಡಬೇಕು?

ಜಿಎಸ್ಟಿಎನ್ ಸರ್ವರ್ ಇಂಟರ್ ಫೇಸ್ ಮೂಲಕ, ತಂತ್ರಜ್ಞಾನದ ಸಾಥ್ ನೊಂದಿಗೆ ಜಿಎಸ್ಟಿ ಆಡಳಿತವು ಜುಲೈ 1, 2017ರಿಂದ ಆರಂಭಗೊಳ್ಳಲಿದೆ. ವ್ಯವಹಾರಗಳು ಕಡ್ಡಾಯವಾಗಿ ಮ್ಯಾನುಯಲ್ ಆಗಿ ನಮೂನೆ ಭರ್ತಿ ಮಾಡುವಿಕೆಯಿಂದ ಸ್ವಯಂಚಾಲಿತ ಅಥವಾ ಆಟೋಮೆಟ್ ವ್ಯವಸ್ಥೆಗೆ ಹೋಗಬೇಕು ಮತ್ತು ಜಿಎಸ್ಟಿಎನ್ ಗೆ ಪೂರಕವಾದ ಸಾಫ್ಟ್ ವೇರ್ ಅಳವಡಿಸಿಕೊಳ್ಳಬೇಕು ಮತ್ತು ತಕ್ಷಣ, ನಿಖರವಾಗಿ ಮತ್ತು ವಿಶ್ವಾಸನೀಯವಾಗಿ ಜಿಎಸ್ಟಿ ಬಳಕೆ ಮಾಡಬೇಕು.

ಸರಕುಪಟ್ಟಿ ಹೊಂದಾಣಿಕೆಯು ಜಿಎಸ್ಟಿಯಲ್ಲಿ ಅತ್ಯಂತ ಕ್ಲಿಷ್ಟ ಅಗತ್ಯವಾಗಿದೆ. ಯಾಕೆಂದರೆ, ಜಿಎಸ್ಟಿಯು ಇದಕ್ಕೆ ನಿಖರ ಸಮಯ ನೀಡಿದ್ದು, ತಿಂಗಳಾಂತ್ಯದಲ್ಲಿ ಅಥವಾ ತ್ರೈಮಾಸಿಕದ ಅಂತ್ಯದಲ್ಲಿ ಸರಕುಪಟ್ಟಿ ಹೋಲಿಕೆ ನಮೂನೆ ಸಲ್ಲಿಸುವಂತೆ ಇಲ್ಲ. ಇದರೊಂದಿಗೆ, ಸರಕುಪಟ್ಟಿ ಹೋಲಿಕೆ ಮತ್ತು ಇತರೆ ಅನುಸರಣೆಯನ್ನು ಮ್ಯಾನುಯಲ್ ಆಗಿ ಅಥವಾ ಕೆಳಹಂತದ ತಂತ್ರಜ್ಞಾನಗಳಿಂದ ಮಾಡಲು ಸಾಧ್ಯವಿಲ್ಲ. ವೇಗ ಮತ್ತು ನಿಖರತೆ ಎರಡೂ ಕ್ಲಿಷ್ಟವಾದ ವಿಷಯಗಳಾಗಿವೆ.
ಜಿಎಸ್ಟಿಎನ್ ವ್ಯವಸ್ಥೆ ಜೊತೆ ವ್ಯವಹಾರಗಳು ಆಗಾಗ ಸಂವಹನ ನಡೆಸುತ್ತ ಇರಬೇಕಾಗುತ್ತದೆ. ಇದಕ್ಕೆ ಜಿಎಸ್ಟಿಎನ್ ಇರುವ ಬಿಸಿನೆಸ್ ಅಪ್ಲಿಕೇಷನ್ ಅಥವಾ ಅಕೌಂಟಿಂಗ್ ಸಾಫ್ಟ್ ವೇರ್ ಅಗತ್ಯವಿದೆ. ಕೆಲಸಕಾರ್ಯವು ತಡೆರಹಿತವಾಗಿ ಮತ್ತು ದಕ್ಷವಾಗಿ ನಡೆಯಲು ಇವುಗಳ ಅವಶ್ಯಕತೆಯಿದೆ.

ವ್ಯವಹಾರಕ್ಕೆ ನೀವು ಮಾಡಬೇಕಿರುವುದು:
• ನಿಮ್ಮ ವ್ಯವಹಾರಕ್ಕೆ ಮತ್ತು ಜಿಎಸ್ಟಿ ಮೇಲೆ ತಂತ್ರಜ್ಞಾನದ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿರಿ.
• ತೆರಿಗೆ ಅನುಸರಣೆಯನ್ನು ಶಿಸ್ತಿನಿಂದ ಕೈಗೊಳ್ಳಿರಿ
• ಅನುಸರಣೆ ಸಾಧಿಸಲು ಸರಿಯಾದ ಸಾಫ್ಟ್ ವೇರ್ ಅನ್ನು ಆಯ್ಕೆ ಮಾಡಲು ಗಮನ ನೀಡಿರಿ

Are you GST ready yet?

Get ready for GST with Tally.ERP 9 Release 6

40,149 total views, 5 views today