ನಮ್ಮ ಈ ಹಿಂದಿನ ಬ್ಲಾಗಿನಲ್ಲಿ ಜಿಎಸ್ಟಿಯಡಿಯಲ್ಲಿ ಪೂರೈಕೆಗೆ ವಿಧಿಸುವ ತೆರಿಗೆಗಳ ಕುರಿತು ಚರ್ಚಿಸಿದ್ದೇವೆ.

 • ರಾಜ್ಯದೊಳಗಿನ ಪೂರೈಕೆಯಲ್ಲಿ ಕೇಂದ್ರ ಜಿಎಸ್ಟಿ (ಸಿಜಿಎಸ್ಟಿ) ಮತ್ತು ರಾಜ್ಯ ಜಿಎಸ್ಟಿ (ಎಸ್ಜಿಎಸ್ಟಿ) ತೆರಿಗೆ ವಿಧಿಸಲಾಗುತ್ತದೆ.
 • ರಾಜ್ಯದೊಳಗಿನ ಪೂರೈಕೆಯಲ್ಲಿ, ಐಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ.

ಜಿಎಸ್ಟಿಯ ಇನ್ನೊಂದು ಭಾಗವನ್ನು ಈಗ ಮಾತನಾಡೋಣ. ಅದರ ಹೆಸರು-ಯುಟಿಜಿಎಸ್ಟಿ. ಯುಟಿಜಿಎಸ್ಟಿ ಎಂದರೆ ಕೇಂದ್ರಾಡಳಿತ ಪ್ರದೇಶದ ಸರಕು ಮತ್ತು ಸೇವಾ ತೆರಿಗೆ.

ಯುಟಿಜಿಎಸ್ಟಿಯಲ್ಲಿ ವಿಧಿಸಲಾಗುವ ತೆರಿಗೆಗಳ ಕುರಿತು ಮತ್ತು ಹೆಚ್ಚಿನ ಮಾಹಿತಿಯನ್ನು ಅರ್ಥಮಾಡಿಕೊಳ್ಳೋಣ.

ಕೇಂದ್ರಾಡಳಿತ ಪ್ರದೇಶದ ಜಿಎಸ್ಟಿ(ಯುಟಿಜಿಎಸ್ಟಿ)

ಕೇಂದ್ರಾಡಳಿತ ಪ್ರದೇಶವು ನೇರವಾಗಿ ಕೇಂದ್ರ ಸರಕಾರದ ಆಡಳಿತದ ಅಧೀನದಲ್ಲಿ ಬರುತ್ತದೆ. ಇವು ತಮ್ಮ ಸ್ವಂತ ಚುನಾಯಿತ ಸರಕಾರಗಳು ಹೊಂದಿದ್ದರೂ ಕೇಂದ್ರಾಡಳಿತಕ್ಕೆ ಒಳಪಡುತ್ತವೆ. ಈಗ ಭಾರತದಲ್ಲಿ ಒಟ್ಟು 7 ಕೇಂದ್ರಾಡಳಿತ ಪ್ರದೇಶಗಳಿವೆ:

   1. ಚಂಡೀಗಢ

 

   2. ಲಕ್ಷದ್ವೀಪ

 

   3. ದಮನ್ ಮತ್ತು ದಿಯು

 

   4. ದಾದ್ರಾ ಮತ್ತು ನಾಗರ್ ಹಾವೆಲಿ

 

   5. ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು

 

   6. ದೆಹಲಿ

 

  7. ಪಾಂಡಿಚೇರಿ

ಇವುಗಳಲ್ಲಿ ದೆಹಲಿ ಮತ್ತು ಪಾಂಡಿಚೇರಿಗಳು ತಮ್ಮ ಸ್ವಂತ ಶಾಸಕಾಂಗವನ್ನು ಹೊಂದಿದ್ದು, ಚುನಾಯಿತ ಸದಸ್ಯರು ಮತ್ತು ಒಬ್ಬರು ಮುಖ್ಯಮಂತ್ರಿಯನ್ನು ಹೊಂದಿವೆ. ಆದರೆ, ಇವುಗಳ ಕಾರ್ಯವು ಅರೆ-ರಾಜ್ಯವಾಗಿವೆ.

ಜಿಎಸ್ಟಿಯನ್ವಯ ಎಸ್ಜಿಎಸ್ಟಿ ಕಾಯಿದೆಯು ಈ ಎಲ್ಲಾ ರಾಜ್ಯಗಳಿಗೆ ಅನ್ವಯಿಸುತ್ತದೆ. ಭಾರತದ ಸಂವಿಧಾನದಲ್ಲಿ “ರಾಜ್ಯಗಳು’’ ಎನ್ನುವುದರ ವ್ಯಾಖ್ಯಾನದಲ್ಲಿ ಸ್ವಂತ ಶಾಸಕಾಂಗವಿರುವ ಕೇಂದ್ರಾಡಳಿತ ಪ್ರದೇಶಗಳು ಸೇರಿವೆ. ಹೀಗಾಗಿ, ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಪಾಂಡಿಚೇರಿಗಳಿಗೂ ಎಸ್ಜಿಎಸ್ಟಿ ಕಾಯಿದೆ ಸಹ ಅನ್ವಯವಾಗುತ್ತದೆ. ಇದರ ಪ್ರಕಾರ, ದೆಹಲಿ ಮತ್ತು ಪಾಂಡಿಚೇರಿಯ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪೂರೈಕೆಗೆ ಸಿಜಿಎಸ್ಟಿ+ ಎಸ್ಜಿಎಸ್ಟಿ ತೆರಿಗೆಯು ಅನ್ವಯವಾಗುತ್ತದೆ ಹಾಗೂ ದೆಹಲಿ ಮತ್ತು ಪಾಂಡಿಚೇರಿಯಿಂದ ಇತರ ರಾಜ್ಯಗಳಿಗೆ ಮಾಡುವ ಎಲ್ಲಾ ಪೂರೈಕೆಗಳಿಗೂ ಐಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ.

ಆದರೆ, ಸ್ವಂತ ಶಾಸಕಾಂಗ ಹೊಂದಿರದ ಕೇಂದ್ರಾಡಳಿತ ಪ್ರದೇಶಕ್ಕೆ ಎಸ್ಜಿಎಸ್ಟಿ ಕಾಯಿದೆ ಅನ್ವಯವಾಗುವುದಿಲ್ಲ, ಇದಕ್ಕಾಗಿ ಜಿಎಸ್ಟಿ ಸಮಿತಿಯು ಈ ರಾಜ್ಯಗಳಿಗೆ ತೆರಿಗೆ ವಿಧಿಸಲು ಯುಟಿಜಿಎಸ್ಟಿ ಕಾಯಿದೆಯನ್ನು ಪರಿಚಯಿಸಿದೆ. ಚಂಡೀಗಢ, ಲಕ್ಷದ್ವೀಪ, ದಮನ್ ಮತ್ತು ದಿಯು, ದಾದ್ರಾ ಮತ್ತು ನಾಗರ್ ಹಾವೆಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಯುಟಿಜಿಎಸ್ಟಿ ಅನ್ವಯವಾಗುತ್ತದೆ. ಎಸ್ಜಿಎಸ್ಟಿಯ ಬದಲಾಗಿ ಈ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯುಟಿಜಿಎಸ್ಟಿ ಮೂಲಕ ತೆರಿಗೆ ಸಂಗ್ರಹಿಸಲಾಗುತ್ತದೆ.

UTGST is applicable in the union territories of Chandigarh, Lakshadweep, Daman and Diu, Dadra and Nagar Haveli and Andaman and Nicobar Islands. Click To Tweet

ತೆರಿಗೆ ವಿಧಿಸುವಿಕೆ

ಕೇಂದ್ರಾಡಳಿತ ಪ್ರದೇಶದೊಳಗಿನ ಪೂರೈಕೆ

ಕೇಂದ್ರಾಡಳಿತ ಪ್ರದೇಶದೊಳಗಿನ ಪೂರೈಕೆಗೆ ಸಿಜಿಎಸ್ಟಿ+ಯುಟಿಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ.

ಉದಾಹರಣೆಗೆ: ಚಂಡೀಗಢದಲ್ಲಿರುವ ಫರ್ನಿಚರ್ ಕೇಂದ್ರ, 10,00,000 ರೂ. ಮೌಲ್ಯದ 50 ಸೋಫಾ ಗಳನ್ನು ಚಂಡೀಗಢದಲ್ಲಿರುವ ವೀಣಾ ಫರ್ನಿಚರ್ ಗೆ ಪೂರೈಕೆ ಮಾಡುತ್ತದೆ.

ಇದು ಚಂಡೀಗಢದ ಕೇಂದ್ರಾಡಳಿತ ಪ್ರದೇಶದೊಳಗಿನ ಪೂರೈಕೆಯಾಗಿದೆ. ಸೋಫಾ ಸೆಟ್ ಗಳಿಗೆ ಶೇಕಡ 12ರಷ್ಟು ಜಿಎಸ್ಟಿ ವಿಧಿಸಲಾಗಿದೆ ಎಂದು ಭಾವಿಸಿದರೆ ತೆರಿಗೆ ಲೆಕ್ಕಾಚಾರವು ಈ ಮುಂದಿನಂತೆ ಇರುತ್ತದೆ.

ವಿಷಯ ಮೊತ್ತ(ರೂ.)
ಸೋಫಾ ಸೆಟ್10,00,000
ಸಿಜಿಎಸ್ಟಿ @ 6%60,000
ಯುಟಿಜಿಎಸ್ಟಿ @ 6%60,000
ಒಟ್ಟು 11,20,000

ಎಸ್ಜಿಎಸ್ಟಿಯ ಬದಲಾಗಿ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಯುಟಿಜಿಎಸ್ಟಿ ಮೂಲಕ ತೆರಿಗೆ ಸಂಗ್ರಹಿಸಲಾಗುತ್ತದೆ.

On supplies within a union territory, CGST and UTGST will be levied. Click To Tweet
ಕೇಂದ್ರಾಡಳಿತ ಪ್ರದೇಶದಿಂದ ಹೊರಗಿನ ಪೂರೈಕೆ

ಒಂದು ಕೇಂದ್ರಾಡಳಿತ ಪ್ರದೇಶದಿಂದ ಇನ್ನೊಂದು ರಾಜ್ಯಕ್ಕೆ ಪೂರೈಕೆ ಮಾಡುವಾಗ ಐಜಿಎಸ್ಟಿ ಮೂಲಕ ತೆರಿಗೆ ವಿಧಿಸಲಾಗುತ್ತದೆ.

ಉದಾಹರಣೆಗೆ: ಇದು ಚಂಡೀಗಢದಿಂದ ಹೊರರಾಜ್ಯಕ್ಕೆ ಮಾಡುವ ಪೂರೈಕೆಯಾಗಿದೆ. ಸೋಫಾ ಸೆಟ್ ಗಳಿಗೆ ಜಿಎಸ್ಟಿ ದರವು ಶೇಕಡ 12 ಎಂದುಕೊಂಡರೆ ತೆರಿಗೆ ಲೆಕ್ಕಾಚಾರವು ಈ ಮುಂದಿನಂತೆ ಇರುತ್ತದೆ:

ವಿಷಯ ಮೊತ್ತ(ರೂ.)
ಸೋಫಾ ಸೆಟ್10,00,000
ಐಜಿಎಸ್ಟಿ @ 12%1,20,000
ಒಟ್ಟು 11,20,000

ಹೀಗಾಗಿ, ಹೊರರಾಜ್ಯಕ್ಕೆ ಮಾಡುವ ಪೂರೈಕೆಗೆ ತೆರಿಗೆ ವಿಧಿಸುವಂತೆ ಕೇಂದ್ರಾಡಳಿತ ಪ್ರದೇಶದಿಂದ ಹೊರರಾಜ್ಯಕ್ಕೆ ಮಾಡುವ ಪೂರೈಕೆಗೆ ಐಜಿಎಸ್ಟಿ ಅನ್ವಯವಾಗುತ್ತದೆ.

IGST will be applicable on supplies outside a union territory.Click To Tweet
ಆದೇಶದ ಉಪಯೋಗ

ಯುಟಿಜಿಎಸ್ಟಿ ಕ್ರೆಡಿಟ್ ಅನ್ನು ತೆರಿಗೆ ಪಾವತಿಸುವ ಉದ್ದೇಶದಿಂದ ಎಸ್ಜಿಎಸ್ಟಿಯಂತೆ ಬಳಕೆ ಮಾಡಬಹುದಾಗಿದೆ. ಅಂದರೆ:

ಆದಾನ ತರಿಗೆ ಪಾವತಿ ಬಾಧ್ಯತೆಗೆ ಪ್ರತಿಯಾಗಿ ಸಿದ್ಧಪಡಿಸುವುದು
ಯುಟಿಜಿಎಸ್ಟಿಯುಟಿಜಿಎಸ್ಟಿ ಮತ್ತು ಐಜಿಎಸ್ಟಿ(ಈ ಆದೇಶದಲ್ಲಿ)

ಇದರೊಂದಿಗೆ, ಸಿಜಿಎಸ್ಟಿ ಬಾಧ್ಯತೆಗೆ ಸಿದ್ಧ ಮಾಡಲು ಯುಜಿಜಿಎಸ್ಟಿ ಪಾವತಿಯನ್ನು ಬಳಕೆ ಮಾಡಲು ಅವಕಾಶವಿಲ್ಲ.

ಉದಾಹರಣೆ: ಆಗಸ್ಟ್ 17ರ ಕೊನೆಯಲ್ಲಿ ಚಂಡೀಗಢದ ಫರ್ನಿಚರ್ ಸೆಂಟರ್ ನ ಆದಾನ ತೆರಿಗೆ ಮತ್ತು ತೆರಿಗೆ ಬಾಧ್ಯತೆಯು ಈ ಮುಂದಿನಂತೆ ಇರುತ್ತದೆ:

ಆದಾನ ತೆರಿಗೆ ಪಾವತಿ(ರೂ.) ತೆರಿಗೆ ಬಾಧ್ಯತೆ(ರೂ.)
ಸಿಜಿಎಸ್ಟಿ1,00,000ಸಿಜಿಎಸ್ಟಿ80,000
ಯುಟಿಜಿಎಸ್ಟಿ1,00,000ಯುಟಿಜಿಎಸ್ಟಿ80,000
ಐಜಿಎಸ್ಟಿ2,00,000ಐಜಿಎಸ್ಟಿ2,50,000

ಇಲ್ಲಿ ಫರ್ನಿಚರ್ ಸೆಂಟರ್ ಯುಜಿಜಿಎಸ್ಟಿ ಪಾವತಿ 1,00,000 ಅನ್ನು ಈ ಮುಂದಿನಂತೆ ಬಳಕೆ ಮಾಡಬಹುದಾಗಿದೆ:

ವಿಷಯ ವಿಷಯ
ಯುಟಿಜಿಎಸ್ಟಿ ಕ್ರೆಡಿಟ್1,00,000
(-) ಯುಟಿಜಿಎಸ್ಟಿಗೆ ಪ್ರತಿಯಾಗಿ ಸೆಟ್-ಆಫ್(-) 80,000
ಬ್ಯಾಲೆನ್ಸ್20,000
(-) ಐಹುಎಸ್ಟಿ ಬಾಧ್ಯತೆಗೆ ಪ್ರತಿಯಾಗಿ ಸೆಟ್-ಆಫ್(-) 20,000
ಬ್ಯಾಲೆನ್ಸ್ಇಲ್ಲ

ಸ್ವಂತ ಶಾಸಕಾಂಗ ಹೊಂದಿಲ್ಲದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಜಿಎಸ್ಟಿ ಬದಲಾಗಿ ಯುಟಿಜಿಎಸ್ಟಿ ಮೂಲಕ ತೆರಿಗೆ ಸಂಗ್ರಹಿಸಲಾಗುತ್ತದೆ. ಸಿಜಿಎಸ್ಟಿ ಮತ್ತು ಐಜಿಎಸ್ಟಿ ಮಸೂದೆ ಜೊತೆಗೆ ಕೇಂದ್ರ ಸರಕಾರವು ಏಪ್ರಿಲ್ 6, 2017ರಂದು ಯುಜಿಜಿಎಸ್ಟಿ ಮಸೂದೆಯನ್ನು ಜಾರಿಗೆ ತಂದಿದೆ.

Are you GST ready yet?

Get ready for GST with Tally.ERP 9 Release 6

163,942 total views, 115 views today