(English) Language

 • English
 • Hindi
 • Marathi
 • Kannada
 • Telugu
 • Tamil
 • Gujarati

ಈ ಪೋಸ್ಟ್ ಇತ್ತೀಚಿನ ಬದಲಾವಣೆಗಳನ್ನು ಅಳವಡಿಸಲು 2 ಡಿಸೆಂಬರ್ 2016 ರಂದು ನವೀಕರಿಸಲಾಗಿದೆ.

ರಾಜ್ಯ ಸಭೆಯಲ್ಲಿ 122ನೇ ಮಸೂದೆಯೊಂದು ಅವಿರೋಧವಾಗಿ ಅಂಗೀಕಾರ ಪಡೆಯುವ ಮೂಲಕ ಭಾರತದ ಸಂವಿಧಾನದ ತೆರಿಗೆ ಇತಿಹಾಸದಲ್ಲಿ ಆಗಸ್ಟ್ 3, 2016 ಒಂದು ಪ್ರಮುಖ ರೆಡ್ ಲೆಟರ್ ದಿನವಾಗಿ ದಾಖಲಾಯಿತು. ಇದು ಏಪ್ರಿಲ್ 1, 2017ರಿಂದ ಭಾರತದಲ್ಲಿ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಆರಂಭಿಸಲು ದಾರಿಯಾಯಿತು. ಸರಕು ಮತ್ತು ಸೇವಾ ತೆರಿಗೆಯು ಕಳೆದ ದಶಕದಿಂದ ನಿಧಾನವಾಗಿ ವಿಕಾಸ ಹೊಂದುತ್ತ ಬಂದಿದೆ ಮತ್ತು ಇದು ಸ್ವಾತಂತ್ರ್ಯ ಸಿಕ್ಕದ ತರುವಾಯ ಭಾರತದ ಒಂದೇ ಒಂದು ಬೃಹತ್ ತೆರಿಗೆ ಸುಧಾರಣೆಯೆಂದು ಮನ್ನಣೆ ಪಡೆದಿದೆ. ಇದು ಒಟ್ಟು ದೇಶೀಯ ಉತ್ಪನ್ನವನ್ನುಶೇಕಡ 1.5ರಿಂದ ಶೇಕಡ 2ಕ್ಕೆ ಏರಿಸಲಿದೆ ಎಂದು ಅಂದಾಜಿಸಲಾಗಿದೆ. “ಒಂದು ಭಾರತ, ಒಂದು ತೆರಿಗೆ’’ ಎನ್ನುವುದು ಜಿಎಸ್‌ಟಿಯ ಹೊಸ ವಾಸ್ತವವಾಗಿದ್ದು, ಸುಮಾರು 10 ಪರೋಕ್ಷ ತೆರಿಗೆಗಳು ಜಿಎಸ್‌ಟಿಯೊಳಗೆ ಅಂತರ್ಗತವಾಗಿದ್ದು, ಭಾರತವನ್ನು ಒಂದೇ ಸಾಮಾನ್ಯ ಮಾರುಕಟ್ಟೆಯಗಿ ಪರಿಭಾವಿಸಿದೆ. ಒಂದಕ್ಕೊಂದುಸೇರಿಸುವ ಪರಿಣಾಮಗಳನ್ನು ತೆಗೆದುಹಾಕುವುದನ್ನು ಹೊರತುಪಡಿಸಿಯು ಇದರಿಂದ ಸರಳೀಕೃತ ಅನುಸರಣೆ, ತಾಂತ್ರಿಕ ಬೆಂಬಲ ಮತ್ತು ದೇಶಾದ್ಯಂತ ಏಕೀಕೃತ ತೆರಿಗೆ ವ್ಯವಸ್ಥೆಯು “ವ್ಯಾಪಾರವನ್ನು ಸುಲಭವಾಗಿಸುವುದು” ಸೇರಿದಂತೆ ಹಲವು ಪ್ರಮುಖ ಲಾಭಗಳಿವೆ. ಆದರೂ, ವ್ಯವಹಾರದ ಯಶಸ್ಸು ಎನ್ನುವುದು ಹೊಸ ವಾಸ್ತವವನ್ನು ಅರ್ಥಮಾಡಿಕೊಳ್ಳುವುದು ಮತ್ತು ಬಳಕೆ ಮಾಡುವುದರಲ್ಲಿದ್ದು, ಈಗ ಅಸ್ತಿತ್ವದಲ್ಲಿರುವ ಹಲವು ವ್ಯಾವಹಾರಿಕ ಕಾರ್ಯವಿಧಾನಗಳು ಬದಲಾವಣೆಗೆ ಒಳಪಡಬೇಕಿದೆ.

ಸರಕು ಮತ್ತು ಸೇವಾ ತೆರಿಗೆಯು ದೇಶಾದ್ಯಂತ ಸರಕು ಮತ್ತು ಸೇವೆಗಳ ಪೂರೈಕೆಗಳ ಮೇಲೆ ವಿಧಿಸಲಾಗುವ ಸಮಗ್ರ ತೆರಿಗೆಯಾಗಿದೆ. ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಎನ್ನುವುದು ಅನುಭೋಗ ತೆರಿಗೆ ಆಧರಿತ ಗಮ್ಯಸ್ಥಾನವಾಗಿದೆ ಮತ್ತುತೆರಿಗೆ ವಿಧಿಸಬಲ್ಲ ತೆರಿಗೆ ಕ್ರಿಯೆ ಎನ್ನುವುದು ಪ್ರಸ್ತುತ ಚಾಲ್ತಿಯಲ್ಲಿರುವ ತೆರಿಗೆ ಕ್ರಿಯೆಯುಮಾರಾಟ, ತಯಾರಿಕೆ ಅಥವಾ ಸೇವೆ ಒದಗಿಸುವಿಕೆಗೆ ಪ್ರತಿಯಾಗಿ “ಪೂರೈಕೆ’ಯಾಗಿದೆ. ಜಿಎಸ್‌ಟಿ ಕಾನೂನಿನ ಕರಡು ಮಸೂದೆಯನ್ನು ಮೊದಲ ಬಾರಿ ಸಾರ್ವಜನಿಕವಾಗಿ ಜೂನ್ 2016ರಲ್ಲಿ ಪ್ರಕಟಿಸಲಾಯಿತು. ನಂತರ ಪರೀಷ್ಕೃತ ಕರಡು ಮಸೂದೆಯನ್ನು ನವೆಂಬರ್ 26, 2016ರಂದು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಯಿತು. ಆರಂಭಿಕ ದಿನಾಂಕದಂದು ಕ್ರಮಬದ್ಧ ಮಾಹಿತಿಗಳನ್ನು ಒದಗಿಸುವುದು ಮತ್ತು ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಸಂಬಂಧಪಟ್ಟ ಎಲ್ಲಾ ಕಾಳಜಿಗಳನ್ನು ಅಂತಿಮ ಜಿಎಸ್‌ಟಿ ಮಸೂದೆ ಪರಿಹರಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ವ್ಯವಹಾರಗಳಿಗೆ, ಉದ್ಯಮಗಳಿಗೆ/ ವ್ಯಾಪಾರದ ಅಂಗಸಂಸ್ಥೆಗಳಿಗೆ, ವೃತ್ತಿಪರ ಸಂಘಗಳಿಗೆ ಇದು ಪ್ರಮುಖ ಸಮಯವಾಗಿರುತ್ತದೆ.

ಹಿನ್ನೆಲೆ

ಕಳೆದ 5ರಿಂದ 6 ದಶಕದಲ್ಲಿ ಭಾರತದ ಪರೋಕ್ಷ ತೆರಿಗೆ ವ್ಯವಸ್ಥೆಯು ಸಾಕಷ್ಟು ರೂಪಾಂತರಗೊಂಡಿದೆ. 1986ರಲ್ಲಿ ವ್ಯಾಟ್ ಕ್ರಮವನ್ನು ಪರಿಚಯಿಸಿರುವುದು, ಅಬಕಾರಿ ಮತ್ತು ಸೇವಾ ತೆರಿಗೆ(2004) ನಡುವೆ ವಿನಿಮಯ ಗುಣ, ವ್ಯಾಟ್ ಅನ್ನು ಪರಿಚಯಿಸಿರುವುದು (2005ರ ನಂತರ) ತೆರಿಗೆ ಆಡಳಿತದಲ್ಲಿ ಪಾರದರ್ಶಕತೆ, ತೆರಿಗೆ ಪಾವತಿದಾರರ ತೊಂದರೆಗಳನ್ನು ತಗ್ಗಿಸಿರುವುದು ಮತ್ತುಒಂದಕ್ಕೊಂದು ಸೇರಿಸುವ ಪರಿಣಾಮವನ್ನು ತೆಗೆದುಹಾಕಿರುವುದು ಸೇರಿದಂತೆ ಗ್ರಾಹಕರಿಗೆ ಹಲವು ಪ್ರಯೋಜನಗಳನ್ನು ಉಂಟು ಮಾಡಿದೆ. ಆದರೆ, ಭಾರತದ ಒಕ್ಕೂಟ ವ್ಯವಸ್ಥೆಯ ಪರಿಣಾಮವಾಗಿ ತೆರಿಗೆಯನ್ನುರಾಜ್ಯಗಳು ಮತ್ತು ಕೇಂದ್ರವು ಜೊತೆಯಾಗಿ ನಿರ್ವಹಿಸುತ್ತಿವೆ. ಇವೆರಡು ಘಟಕಗಳಾದ್ಯಾಂತ ಸಾಲಗಳ ಬಳಕೆಗೆ ಸೌಲಭ್ಯಗಳ ಕೊರತೆಯಿಂದಾಗಿ ಈ ತೆರಿಗೆ ವ್ಯವಸ್ಥೆಯಲ್ಲಿ ಕೊಂಚ ಪ್ರಮಾಣದಲ್ಲಿ ಒಂದಕ್ಕೊಂದು ಸೇರಿಸುವ ಪರಿಣಾಮ ಉಳಿದಿದೆ. ಇದಕ್ಕೆ ಅನುಸರಣೆಯ ಹೊರೆಯು ಸೇರಿ ಹಲವು ಏಜೆನ್ಸಿಗಳ ಸೇರುವಿಕೆಯು ಹೆಚ್ಚಾಗಿದೆ. ಜಿಎಸ್‌ಟಿ ಯು ಈ ತೊಂದರೆಯನ್ನು ಸರಿಪಡಿಸಲಿದ್ದು, ಭಾರತಾದ್ಯಂತ ಏಕೀಕೃತವಾಗಿ ಒಂದೇ ತೆರಿಗೆ ವಿಧಿಸಿ, ಅನಿಯಂತ್ರಿತ ತೆರಿಗೆ ಪಾವತಿಯ ಹರಿಯುವಿಕೆಗೆ ನೆರವಾಗಲಿದೆ. ಪರಿಕಲ್ಪನೆಯಲ್ಲಿ ಜಿಎಸ್‌ಟಿ ಯು ವ್ಯಾಟ್ ನಂತೆ ಇದ್ದು, ಪೂರೈಕೆ ಜಾಲದ ಪ್ರತಿಯೊಂದು ಅಂಶಗಳ ಮೌಲ್ಯದ ಸೇರ್ಪಡೆಗೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ.

ಪ್ರಮುಖ ಲಕ್ಷಣಗಳು

ಜಿಎಸ್‌ಟಿಯ(ಸರಕು ಮತ್ತು ಸೇವಾ ತೆರಿಗೆ) ಪ್ರಮುಖ ಲಕ್ಷಣಗಳು ಯಾವುದೆಂದರೆ:

ನೋಂದಣಿ:

ಈಶಾನ್ಯ ಭಾರತ+ ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ , ಹಿಮಾಚಲ ಪ್ರದೇಶ ಮತ್ತು ಉತ್ತರಖಂಡದಲ್ಲಿ ಜಿಎಸ್‌ಟಿ ನೋಂದಣಿ ಮಿತಿಯು 9-10 ಲಕ್ಷ ರೂಪಾಯಿಯಾಗಿದೆ. ಭಾರತದ ಉಳಿದ ಭಾಗಗಳಲ್ಲಿ ಈ ನೋಂದಣಿ ಮಿತಿಯು 19-20 ಲಕ್ಷ ರೂಪಾಯಿಯಾಗಿರುತ್ತದೆ. ಅಂದಾಜು 7-8 ದಶಲಕ್ಷ ವ್ಯವಹಾರಗಳು ಜಿಎಸ್‌ಟಿ ಮೂಲಕ ನೋಂದಾಣಿಯಾಗುವ ನಿರೀಕ್ಷೆಯಿದೆ. ಸುಮಾರು 50 ಲಕ್ಷಕ್ಕಿಂತ ಕಡಿಮೆ ವ್ಯವಹಾರ ಹೊಂದಿರುವ ಸಣ್ಣ ಮಧ್ಯವರ್ತಿಗಳಿಗೆ ಸಂಯೋಜಿತ ಯೋಜನೆಯನ್ನು ಅಳವಡಿಸಿಕೊಳ್ಳುವ ಆಯ್ಕೆ ನೀಡಲಾಗಿದೆ ಮತ್ತು ತಮ್ಮ ವಹಿವಾಟಿನಲ್ಲಿ ಶೇಕಡ 1ರಿಂದ 4ರವರೆಗೆ ತೆರಿಗೆ ರೂಪದಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ.

ಅವಳಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ):

ಭಾರತದ ಒಕ್ಕೂಟ ವ್ಯವಸ್ಥೆಯನ್ನು ಪರಿಗಣಿಸಿ, ಕೇಂದ್ರಮತ್ತುರಾಜ್ಯಗಳಸರಕು ಮತ್ತು ಸೇವೆಯ ಪೂರೈಕೆಗಾಗಿಜಂಟಿಯಾಗಿ ತೆರಿಗೆ ವಿಧಿಸುವ ಮಾದರಿಯನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಅವಳಿ ಜಿಎಸ್‌ಟಿ ಅಥವಾ ಅವಳಿ ಜಿಎಸ್‌ಟಿಯನ್ನು ಆಯ್ಕೆ ಮಾಡಲಾಗಿದೆ.

ಅವಳಿ ಜಿಎಸ್‌ಟಿ ಯ ಘಟಕಗಳು ಈ ರೀತಿ ಇವೆ:

 • ಸಿಜಿಎಸ್‌ಟಿ : ಕೇಂದ್ರದ ಜಿಎಸ್‌ಟಿ
 • ಎಸ್ಜಿಎಸ್‌ಟಿ : ರಾಜ್ಯದ ಜಿಎಸ್‌ಟಿ
 • ಐಜಿಎಸ್‌ಟಿ : ಅಂತರ್ಗತ ಜಿಎಸ್‌ಟಿ

ಅಂತರ್ ರಾಜ್ಯ ವ್ಯವಹಾರಕ್ಕೆ ಸಿಜಿಎಸ್‌ಟಿ + ಎಸ್ಜಿಎಸ್‌ಟಿ ಯು ಅನ್ವಯವಾಗಲಿದೆ ಮತ್ತು ಅಂತರ್ ರಾಜ್ಯ ವ್ಯವಹಾರಕ್ಕೆ ಐಜಿಎಸ್‌ಟಿ ಅನ್ವಯಿಸಲಿದೆ.

ಜಿಎಸ್‌ಟಿ ದರಗಳು:

ಇದರಲ್ಲಿ ಪ್ರಾಯಶಃ ಮೂರು ವಿಧದ ದರಗಳು ಈ ಕೆಳಗಿನಂತೆ ಇರಲಿದೆ:

 • ಅರ್ಹತೆಯ ದರ
 • ಸಾಮಾನ್ಯ ದರ
 • ಅನರ್ಹ ದರ

ಬೆಲೆಬಾಳುವ ಲೋಹಗಳಿಗೆ ಕಡಿಮೆ ದರ ಮತ್ತು ಅಗತ್ಯ ಸರಕುಗಳಿಗೆ ಶೂನ್ಯ ದರ ನಿಗದಿಪಡಿಸುವ ಸಾಧ್ಯತೆಯಿದೆ.

ಅಂತರ್ಗತವಾದ ತೆರಿಗೆ:

ಜಿಎಸ್‌ಟಿ ಅನ್ವಯ ಈ ತೆರಿಗೆಗಳು ಅಂತರ್ಗತ ಅಥವಾ ಒಂದಾಗಲಿದೆ:

ಜಿಎಸ್‌ಟಿ ಯೊಳಗೆ ಸೇರುವುದುಜಿಎಸ್‌ಟಿ ಯೊಳಗೆ ಸೇರದೆ ಇರುವುದು
ಕೇಂದ್ರ ಅಬಕಾರಿಪ್ರಾಥಮಿಕ ಕಸ್ಟಮ್ಸ್ ಸುಂಕ
ಸೇವಾ ತೆರಿಗೆಮದ್ಯಪಾನ
ವ್ಯಾಟ್/ ಸೇವಾ ತೆರಿಗೆಪೆಟ್ರೋಲ್/ಡೀಸೆಲ್/ವೈಮಾನಿಕ ಇಂಧನ/ ನೈಸರ್ಗಿಕ ಅನಿಲ*
ಮನರಂಜನೆ ತೆರಿಗೆಅಂಚೆಚೀಟಿ ಸುಂಕ ಮತ್ತು ಆಸ್ತಿ ತೆರಿಗೆ
ಐಷಾರಾಮಿ ತೆರಿಗೆಟೋಲ್ ತೆರಿಗೆ
ಲಾಟರಿಗಳ ಮೇಲಿನ ತೆರಿಗೆವಿದ್ಯುತ್ ಮೇಲಿನ ತೆರಿಗೆ
ಪ್ರವೇಶ ತೆರಿಗೆ
ಖರೀದಿ ತೆರಿಗೆ

 

*ನಂತರ ನಿಗದಿಪಡಿಸಿದ ದಿನಾಂಕದ್ದು ಮಾತ್ರ ಸೇರುತ್ತದೆ.

ಐಟಿಸಿ ಬಳಕೆ:

ತೆರಿಗೆ ಬಾಧ್ಯತೆಯನ್ನುಸಿದ್ಧಪಡಿಸಲು ಇನ್ಪುಟ್ ತೆರಿಗೆ ಪಾವತಿಯನ್ನು ಪಡೆಯುವ ಪ್ರಕಾರವನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಲಾಗಿದೆ.

ಇನ್ಪುಟ್ ತೆರಿಗೆ ಪಾವತಿಬಾಧ್ಯತೆಗೆ ಪ್ರತಿಯಾಗಿ ಸಿದ್ಧಪಡಿಸು
ಸಿ ಜಿ ಎಸ್ ಟಿಸಿಜಿಎಸ್ ಟಿ ಮತ್ತು ಐಜಿಎಸ್ ಟಿ (ಕ್ರಮ ಪ್ರಕಾರವಾಗಿ)
ಎಸ್ ಜಿ ಎಸ್ ಟಿಎಸ್ ಜಿ ಎಸ್ ಟಿ ಮತ್ತು ಐ ಜಿ ಎಸ್ ಟಿ ( ಕ್ರಮ ಪ್ರಕಾರವಾಗಿ)
ಐ ಜಿ ಎಸ್ ಟಿಐ ಜಿ ಎಸ್ ಟಿ, ಸಿ ಜಿ ಎಸ್ ಟಿ, ಎಸ್ ಜಿ ಎಸ್ ಟಿ (ಕ್ರಮ ಪ್ರಕಾರವಾಗಿ)

ಸಿ ಜಿ ಎಸ್ ಟಿ ಮತ್ತು ಎಸ್ ಜಿ ಎಸ್ ಟಿಯನ್ನು ಒಂದಕ್ಕೊಂದು ವಿರುದ್ಧವಾಗಿ ಸಿದ್ಧಪಡಿಸಲು ಮಾಡಲು ಸಾಧ್ಯವಿಲ್ಲವೆನ್ನುವುದನ್ನು ಗಮನಿಸಿ.

ಜಿಎಸ್‌ಟಿ ಆಡಳಿತದಲ್ಲಿ ತೆರಿಗೆ ಬಾಧ್ಯತೆಗೆ ಎದುರಾಗಿ ಇನ್ಪುಟ್ ತೆರಿಗೆ ಪಾವತಿಯನ್ನು ನಿಗದಿಪಡಿಸುವುದು ಹೇಗೆ?

ಐಟಿ ಮೂಲಸೌಕರ್ಯ:

ಸರಕು ಮತ್ತು ಸೇವಾ ತೆರಿಗೆ ಜಾಲ ಅಥವಾ ಜಿ ಎಸ್ ಟಿ ಎನ್ ಎನ್ನುವುದು ಜಿಎಸ್‌ಟಿ ಯ ಇ-ಫಿಲ್ಲಿಂಗ್ ಅಗತ್ಯಗಳಿಗೆ ಮತ್ತು ಐಟಿ ಬೆನ್ನೆಲುಬು(ಮುಂಭಾಗ ಮತ್ತು ಹಿನ್ನೆಲೆಯಿಂದ ನೆರವು) ಆಗಿ ಹೊರತರಲು ಸಾರ್ವಜನಿಕ- ಖಾಸಗಿ ಪಾಲುದಾರಿಕೆಯಡಿ (ಖಾಸಗಿ ಕಂಪನಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲುದಾರರು)ಬರುವ ಸೆಕ್ಷನ್ 25/ ಸೆಕ್ಷನ್ 8ಆದಾಯ ಅಲ್ಲ. ಇದು ಸ್ವಾಯತ್ತ ಸಂಸ್ಥೆಯಾಗಿರಲಿದ್ದು, ಎಲ್ಲಾ ಪ್ರಕ್ರಿಯೆಗಳನ್ನು, ರೂಪಗಳನ್ನು ಮತ್ತು ದೇಶಾದ್ಯಂತ ನಡೆಯುವ ಎಲ್ಲಾ ವ್ಯಾಪಾರಗಳ ಮಾಹಿತಿಗಳನ್ನುಇದು ನಿಯಂತ್ರಿಸಲಿದೆ.

ಜಿಎಸ್‌ಟಿ ಸಮಿತಿ:

ರಾಷ್ಟ್ರಪತಿಯ ಅಂಗೀಕಾರ ದೊರಕಿದ 60 ದಿನದೊಳಗೆ ಈ ಒಕ್ಕೂಟ ರಚನೆಯಾಗಬೇಕು, ಇದರಲ್ಲಿ ರಾಜ್ಯದ 2/3ನೇ ಪ್ರಾತಿನಿಧ್ಯ ಇರಬೇಕು ಮತ್ತು ಕೇಂದ್ರದ ಪ್ರಾತಿನಿಧ್ಯತೆ 1/3ನೇ ಭಾಗ ಇರಬೇಕು. ತೆರಿಗೆ ದರ, ವಿವಾದಗಳಿಗೆ ಪರಿಹಾರ, ವಿನಾಯಿತಿ ಮತ್ತು ಇತರ ವಿಷಯಗಳ ಕುರಿತು ಎಲ್ಲಾ ನಿರ್ಧಾರಗಳನ್ನು ಜಿಎಸ್‌ಟಿ ಒಕ್ಕೂಟ ತೆಗೆದುಕೊಳ್ಳಲಿದೆ. ಕೇಂದ್ರ ಮತ್ತು ರಾಜ್ಯಗಳ ಬದ್ಧತೆಯ ಆಧಾರದಲ್ಲಿ ಜಿಎಸ್‌ಟಿ ಒಕ್ಕೂಟ (ಶೇಕಡ 75ರಷ್ಟು ಮತಗಳು) ಶಿಫಾರಸ್ಸು ಮಾಡುತ್ತದೆ.

ವ್ಯವಹಾರದ ಪ್ರಕ್ರಿಯೆ

ನೋಂದಣಿ ಅಥವಾ ರಿಜಿಸ್ಟ್ರೇಷನ್:

ಈಗಾಗಲೇ ಇರುವ ಮಧ್ಯವರ್ತಿಗಳು ಈ ಪ್ರಕ್ರಿಯೆಗೆ ಸ್ವಯಂ ವಲಸೆ ಹೋಗಬಹುದು ಮತ್ತು 15 ಅಂಕೆಗಳ ಪಾನ್ ಆಧರಿತ ಜಿಎಸ್‌ಟಿ ಐಎನ್ ಸಂಖ್ಯೆಯನ್ನು ಈ ಮುಂದಿನ ಸ್ವರೂಪದಲ್ಲಿ ನೀಡಲಾಗುತ್ತದೆ.

ರಾಜ್ಯದ ಕೋಡ್ಪಾನ್ಎಂಟಿಟಿ ಕೋಡ್ಬ್ಲ್ಯಾಂಕ್ಚೆಕ್ ಅಂಕಿಗಳು
123456789101112131415

ರಾಜ್ಯದೊಳಗೆ ಹಲವು ವ್ಯವಹಾರಗಳನ್ನು ನಡೆಸುವ ತೆರಿಗೆ ಪಾವತಿದಾರರಿಗೆ ಮಾತ್ರ ಇದು ಅನ್ವಯವಾಗಲಿದೆ.

ರಿಟರ್ನ್ಸ್:

ಜಿಎಸ್‌ಟಿ ( ಸರಕು ಮತ್ತು ಸೇವಾ ತೆರಿಗೆ) ಪರಿಚಯಿಸಿದ ನಂತರ ಈ ಮುಂದಿನ ಬದಲಾವಣೆಗಳಾಗುತ್ತವೆ: ಕಡತ

 • ಜಿಎಸ್‌ಟಿ ಸ್ವರೂಪದಲ್ಲಿ ಎಲ್ಲಾ ವ್ಯವಹಾರಗಳು ಕಡ್ಡಾಯವಾಗಿ ತ್ರೈಮಾಸಿಕವಾಗಿ ಮತ್ತು ವಾರ್ಷಿಕ ಲಾಭ ಸಲ್ಲಿಕೆ ಮಾಡುವುದರ ಜೊತೆ ಪ್ರತಿತಿಂಗಳು ಲಾಭ ವಾಪಸಾತಿ ಸಲ್ಲಿಕೆ ಮಾಡುವ ಅಗತ್ಯವಿದೆ. ಈಗಾಗಲೇ ತ್ರೈಮಾಸಿಕವಾಗಿ ಮತ್ತು ಅರ್ಧ ವಾರ್ಷಿಕವಾಗಿ (ಸೇವಾ ತೆರಿಗೆ ಇತ್ಯಾದಿ ಆದಾಯಪತ್ರ ಫೈಲ್ ಮಾಡುವುದು) ಆದಾಯಪತ್ರ ಸಲ್ಲಿಕೆ ಮಾಡುವ ವ್ಯಾಪಾರಿಗಳೂ ಇನ್ನು ಮುಂದೆ ಪ್ರತಿ ತಿಂಗಳು ಆದಾಯಪತ್ರ ಸಲ್ಲಿಕೆ ಮಾಡಬೇಕಿದೆ.
 • ಪ್ರಸಕ್ತ 1ಬಾರಿಸಲ್ಲಿಕೆಗೆ ಹೋಲಿಸಿದರೆ ಇನ್ನು ಮುಂದೆ ಪ್ರತಿತಿಂಗಳು 3 ಅನುಸರಣೆ ಕ್ರಿಯೆ(ಕಾಂಪ್ಲಿಯನ್ಸ್ ಇವೆಂಟ್) ಮಾಡಬೇಕಿದೆ. ಇದರ ಅರ್ಥವೇನೆಂದರೆ, ವ್ಯವಹಾರಗಳು ಇನ್ಮುಂದೆ ಫಾರ್ಮ್ ಜಿಎಸ್‌ಟಿ ಆರ್-1, ಫಾರ್ಮ್ ಜಿಎಸ್‌ಟಿ ಆರ್-2 ಮತ್ತು ಜಿಎಸ್‌ಟಿ ಆರ್-3 (ಈ ಕೆಳಗೆ ಉಲ್ಲೇಖಿಸಿರುವಂತೆ) ಫೈಲ್ ಮಾಡಬೇಕಿದೆ. ಈಗ ಕೇವಲ ತಿಂಗಳಿಗೆ ಒಂದು ಲಾಭ ಸಲ್ಲಿಕೆ ಮಾಡಲಾಗುತ್ತದೆ.
 • ಈಗಿನ ವ್ಯಾಟ್ ಪ್ರಕ್ರಿಯೆಗೆ ಕೊನೆಯ ದಿನಾಂಕ 20ಕ್ಕೆ ಬದಲಾಗಿ ಮೊದಲ ಅನುಸರಣೆ ಕ್ರಿಯೆಯನ್ನು(ಫಾರ್ಮ್ ಜಿಎಸ್‌ಟಿ ಆರ್-1 ಸಲ್ಲಿಕೆಮಾಡುವುದು) ಮುಂಬರುವ ತಿಂಗಳ 10ನೇ ತಾರೀಖು ಕೊನೆಯ ದಿನಾಂಕವಾಗಿದೆ.
 • ಆದಾಯ ಮಾಹಿತಿಯನ್ನು ತ್ರೈಮಾಸಿಕವಾಗಿ ಸಲ್ಲಿಕೆ ಮಾಡಬೇಕಿರುವುದರಿಂದ ಮತ್ತು ಆದಾಯ ಮಾಹಿತಿ ಸಲ್ಲಿಕೆಯಲ್ಲಿ ಖರೀದಿಯ ವಿವರಗಳನ್ನು ತುಂಬ ಬೇಕಿರುವುದರಿಂದ ಸಂಘಟಿತ ಯೋಜನೆಯು ಇನ್ನುಮುಂದೆ ಒಂದು ಅನುಕೂಲಕರ ಆಯ್ಕೆಯಾಗಿರುವುದಿಲ್ಲ.ಸಂಘಟಿತ ಮಧ್ಯವರ್ತಿಗಳು ಮಾರಾಟ ದರವನ್ನು ಹೆಚ್ಚಿಸಿದರೆ ಸರಪಣಿಗೆ ಒಳಬರುವ ಪಾವತಿಯ ಲಭ್ಯತೆ ಇಲ್ಲದೆ ಇರುವುದು ಈ ಯೋಜನೆಯ ಇನ್ನೊಂದು ಪ್ರಮುಖ ತಡೆಯಾಗಿದೆ. ಇದರಿಂದ ಇಂತಹ ಮಧ್ಯವರ್ತಿಗಳಿಂದ ವ್ಯಾಪಾರಿಗಳು ತಮ್ಮ ಖರೀದಿಯನ್ನು ಕಡಿಮೆ ಮಾಡಲಿದ್ದಾರೆ.

ನಿಯಮಿತ ಮಧ್ಯವರ್ತಿ: ತಿಂಗಳ ಸಲ್ಲಿಕೆ

 • ನಮೂನೆ ಜಿಎಸ್‌ಟಿ ಆರ್-1:10ನೇ ತಾರೀಖಿಗೆ ಎಲ್ಲಾ ಸರಕುಪಟ್ಟಿಯನ್ನು ಭರ್ತಿಮಾಡಿ.
 • ನಮೂನೆ ಜಿಎಸ್‌ಟಿ ಆರ್-2ಎ: ಪೂರೈಕೆದಾರರು ಒದಗಿಸಿರುವ ಜಿಎಸ್‌ಟಿ ಆರ್-1 ಫಾರ್ಮ್ ಆಧಾರದಲ್ಲಿ ಸ್ವೀಕೃತಿದಾರರಿಗೆ ಆಂತರಿಕ ಪೂರೈಕೆ ಕುರಿತು ಸ್ವಯಂ ರಚಿಸಲ್ಪಟ್ಟ ವಿವರಗಳನ್ನು ಲಭಿಸುವಂತೆ ಮಾಡಬೇಕು. (11ನೇ ತಾರೀಖಿಗೆ)
 • ಜಿಎಸ್‌ಟಿ ಆರ್-2 ನಮೂನೆ: ಫಾರ್ಮ್ ಜಿಎಸ್‌ಟಿ ಆರ್-2ಎನಲ್ಲಿ ಸೇರ್ಪಡೆ ಅಥವಾ ಬದಲಾವಣೆಗಳನ್ನು ಫಾರ್ಮ್ ಜಿಎಸ್‌ಟಿ ಆರ್-2ನಲ್ಲಿ (15ನೇ ದಿನಾಂಕದಂದು) ಸಲ್ಲಿಸಬೇಕು.
 • ಜಿಎಸ್‌ಟಿ ಆರ್-1ಎ ನಮೂನೆ: ಸ್ವೀಕೃತಿದಾರರಿಂದ ಹೊರಗಿನ ಪೂರೈಕೆಯ ಕುರಿತಾದ ಸೇರಿಸಿರುವ, ಸರಿಪಡಿಸಿರುವ ಅಥವಾ ಅಳಿಸಿರುವ ಮಾಹಿತಿಯನ್ನು ಫಾರ್ಮ್ ಜಿಎಸ್‌ಟಿ ಆರ್-2ನಲ್ಲಿ ಪೂರೈಕೆದಾರರಿಗೆ ಲಭಿಸುವಂತೆ (20ನೇ ತಾರೀಖಿಗೆ)ಭರ್ತಿ ಮಾಡಬೇಕು.
 • ಜಿಎಸ್‌ಟಿ ಆರ್-3 ನಮೂನೆ: 20ನೇ ತಾರೀಖಿನಂದ ಸ್ವಯಂ ಸೃಷ್ಟಿಯಾದ ಜಿಎಸ್‌ಟಿ ಆರ್-3 ಅನ್ನು ಸಲ್ಲಿಸಬೇಕು.
 • ಜಿಎಸ್‌ಟಿ ಆರ್-9 ನಮೂನೆ: ಐಟಿಸಿ ಪಡೆದಿರುವ ಮಾಹಿತಿ ಮತ್ತು ಸ್ಥಳೀಯ, ಅಂತರ್ ರಾಜ್ಯ ಮತ್ತು ಆಮದು/ರಫ್ತು ಸೇರಿದಂತೆ ಜಿಎಸ್‌ಟಿ ಪಾವತಿಸಿರುವ ವಾರ್ಷಿಕ ಆದಾಯ ಮಾಹಿತಿಪತ್ರವನ್ನು ತುಂಬಬೇಕು.

ಸಂಘಟಿತ ಮಧ್ಯವರ್ತಿ:ತ್ರೈಮಾಸಿಕದಲ್ಲಿ ತುಂಬುವುದು

 • ಜಿಎಸ್‌ಟಿ ಆರ್-4ಎ ನಮೂನೆ: ಪೂರೈಕೆದಾರರು ಸಲ್ಲಿಸಿರುವ ಜಿಎಸ್‌ಟಿ ಆರ್-1 ನಮೂನೆ ಮೂಲಕ ಆಂತರಿಕ ಪೂರೈಕೆಯ ಮಾಹಿತಿಯನ್ನು ಸ್ವೀಕೃತಿದಾರರಿಗೆ ಲಭಿಸುವಂತೆ ಸಂಘಟಿತ ಯೋಜನೆಯಡಿಯಲ್ಲಿ ನೋಂದಣಿ ಮಾಡಬೇಕು( ತ್ರೈಮಾಸಿಕವಾಗಿ)
 • ಜಿಎಸ್‌ಟಿ ಆರ್-4 ನಮೂನೆ: Fಸರಕು ಮತ್ತು ಸೇವೆಗಳ ಎಲ್ಲಾ ಬಾಹ್ಯಾ ಪೂರೈಕೆಯನ್ನು ಒದಗಿಸಿ. ಇದರಲ್ಲಿ ಸ್ವಯಂ ರಚನೆಯಾಗಿರುವ ಫಾರ್ಮ್ ಜಿಎಸ್‌ಟಿ ಆರ್-4ಎ ಮಾಹಿತಿ, ಪಾವತಿಸಬೇಕಿರುವ ತೆರಿಗೆ ಮತ್ತು ತೆರಿಗೆ ಪಾವತಿಯು ಇದರಲ್ಲಿ ಸೇರಿದೆ. (ಇದನ್ನು ತ್ರೈಮಾಸಿಕ ಅಂತ್ಯಗೊಂಡ 18ನೇ ತಾರೀಖಿಗೆ ಸಲ್ಲಿಸಿರಿ).
 • ಜಿಎಸ್‌ಟಿ ಆರ್-9ಎ ನಮೂನೆ: ತೆರಿಗೆ ಪಾವತಿಯ ವಿವರಗಳು ಸೇರಿದಂತೆ ತ್ರೈಮಾಸಿಕ ಆದಾಯ ವರದಿ ಸಲ್ಲಿಕೆ ಮಾಡಿರುವ ಒಟ್ಟುಗೂಡಿರುವ ಎಲ್ಲಾ ವಿವರಗಳನ್ನು ನೀಡಿರಿ. (ಮುಂದಿನ ಆರ್ಥಿಕ ವರ್ಷದ ಡಿಸೆಂಬರ್ 31ಕ್ಕೆ).

ಪಾವತಿ:

 • ಕಡ್ಡಾಯವಾಗಿ ಇ-ಪಾವತಿ ಮಾಡಬೇಕಾದ ಮೊತ್ತ> 10,000 ರೂಪಾಯಿ.
 • ಅಂತರ್ಜಾಲದ ಮೂಲಕ: ಎನ್ಇಎಫ್ಟಿ/ಆರ್ಟಿಜಿಎಸ್/ಐಎಂಪಿಎಸ್
 • ಬ್ಯಾಂಕಿಂಗ್ ಮೂಲಕ: ನಗದು/ ಚೆಕ್/ ಡಿಡಿ/ ಎನ್ ಇಎಫ್ಟಿ/ ಆರ್ ಟಿಜಿಎಸ್ ಇತ್ಯಾದಿ
 • ಸ್ವಯಂ ಸೃಷ್ಟಿಯಾದ(ಆಟೋ ಪಾಪ್ಯುಲೇಟೆಡ್) ಚಲನ್ ಅನ್ನು ಪಡೆದುಕೊಳ್ಳಿರಿ.

ಮರುಪಾವತಿ:

ಮರುಪಾವತಿ ಪ್ರಕ್ರಿಯೆಯು ಸ್ವಯಂಚಾಲಿತವಾಗಿರುತ್ತದೆ ಮತ್ತು ಯಾವುದೇ ಪರಿಶೀಲನೆ ಇಲ್ಲದೆ ಸಲ್ಲಿಕೆ ಮಾಡಿದರೆ ತಾತ್ಕಾಲಿಕವಾಗಿ 90% ರಷ್ಟು ರಿಫಂಡ್ ಆಗುತ್ತದೆ.

ಪ್ರಮುಖವಾಗಿ ಪರಿಣಾಮ ಬೀರುವ ಪ್ರದೇಶಗಳು:

 • ಸಂಬಂಧಪಟ್ಟ ತಂತ್ರಜ್ಞಾನಗಳ ಅಳವಡಿಕೆಯು ಕಡ್ಡಾಯವಾಗಿದೆ: ಎಲ್ಲಾ ಪ್ರಕ್ರಿಯೆಗಳು ಅಂತರ್ಜಾಲದಲ್ಲಿ ನಡೆಯಲಿದೆ ಮತ್ತು ಲಾಭಪತ್ರ ತುಂಬುವಿಕೆಯು ಹಲವು ಪ್ರಕ್ರಿಯೆಗಳನ್ನು (ಸರಕುಪಟ್ಟಿ ಇತ್ಯಾದಿ) ಹೊಂದಿರುತ್ತದೆ. ಇದಕ್ಕಾಗಿ ತೆರಿಗೆ ಪಾವತಿದಾರರು ಸೂಕ್ತವಾದ ತಂತ್ರಜ್ಞಾನವನ್ನು ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕಿದೆ. ಹಳೆಯ ಪೇಪರ್ ನಲ್ಲಿ ಲಾಭಪತ್ರ ವರದಿ ಸಲ್ಲಿಸುವಆಯ್ಕೆ ಇದರಲ್ಲಿ ಇರುವುದಿಲ್ಲ.
 • ಅಖಿಲ ಭಾರತ ಮಾರುಕಟ್ಟೆಗೆ ಪ್ರವೇಶ: ರಾಜ್ಯದೊಳಗೆ ಮತ್ತು ಅಂತರ್ ರಾಜ್ಯ ವಹಿವಾಟಿನಿಂದ ತೆರಿಗೆಯು ತಟಸ್ಥವಾಗಿರಲಿದೆ ಮತ್ತು ಅನುಸರಣೆ ತೊಂದರೆ ಇಲ್ಲದೆ ಮೂಲ ಮಾರಾಟಗಾರರು ಮತ್ತು ಗ್ರಾಹಕರಿಗೆ ದೇಶಾದ್ಯಂತ ಮಾರುಕಟ್ಟೆಯು ಮುಕ್ತವಾಗಿರಲಿದೆ.
 • ಹಣದ ಹರಿವಿನ ಯೋಜನೆ: ಖರೀದಿಗೆ ಸೇರಿದ ತೆರಿಗೆ ಪಾವತಿಯನ್ನು ಲಾಭಪತ್ರ ವರದಿಯ ಸಲ್ಲಿಕೆಯ ಸಮಯದಲ್ಲಿ ಮಾತ್ರ ತಾತ್ಕಾಲಿಕವಾಗಿ ನೀಡಿದರೆ ಸಾಕು ಮತ್ತು ಸಂಬಂಧಪಟ್ಟ ಮಾರಾಟದ ಮಾಹಿತಿಯನ್ನು ಭರ್ತಿ ಮಾಡಿದ ತರುವಾಯ ಖಚಿತಪಡಿಸಲಾಗುತ್ತದೆ ಮತ್ತು ನಂತರ ಪೂರೈಕೆದಾರರಿಗೆ ಬಾಧ್ಯತೆಯನ್ನು ನೀಡಲಾಗುತ್ತದೆ. ಈ ಸಮಯದಲ್ಲಿ ಹಣದ ಅಸಮರ್ಪಕತೆಯ ಮೇಲೆ ಹಣದ ಹರಿವು ಪರಿಣಾಮ ಬೀರುತ್ತದೆ. ಎಲ್ಲಾದರೂ ಯಾವುದೇ ಪೂರೈಕೆಗೆ ತೆರಿಗೆ ವಿಧಿಸಿದರೆ ಶಾಖೆಗಳಲ್ಲಿನ ಸಾಗಾಣೆಗೂ ತೆರಿಗೆ ಬಾಧ್ಯತೆ ಉಂಟಾಗಿ ಹಣದ ತಡೆ ಉಂಟಾಗುತ್ತದೆ. ಇಷ್ಟು ಮಾತ್ರವಲ್ಲದೆ ಜಿಎಸ್‌ಟಿ ಯು ಸರಕುಗಳ ವಿಸ್ತರಣೆಗೆ ಮುಂಗಡವಾಗಿ ಪಡೆದಿರುವುದಕ್ಕೆ ಮತ್ತು ವಾಪಸ್ ಶುಲ್ಕಕ್ಕೂ ಅನ್ವಯಿಸುತ್ತದೆ. ಹೀಗಾಗಿ ವ್ಯವಹಾರವನ್ನು ಪರಿಣಾಮಕಾರಿಯಾಗಿ ಮತ್ತು ಕ್ರಮಬದ್ಧವಾಗಿ ಮಾಡುವುದು ಹೇಗೆಂದು ವ್ಯಾಪಾರಿಗಳು ಮರು ಯೋಚನೆ ಮಾಡುವ ಅವಶ್ಯಕತೆ ಇರುತ್ತದೆ.
 • ಸುಲಭವಾಗಿ ಅನುಸರಣೆ:  ವ್ಯವಹಾರದ ಬಿಡಿಬಿಡಿಯಾದ ಮಾಹಿತಿ (ಸರಕುಪಟ್ಟಿ ಇತ್ಯಾದಿ) ನೀಡುವುದು ಜಿಎಸ್‌ಟಿ ಗೆ ಅಗತ್ಯವಾಗಿದೆ, ಇದನ್ನು ಎಚ್ಎಸ್ಎನ್ ರೂಪದಲ್ಲಿ ವರದಿ ಮಾಡುವ ಅಗತ್ಯವಿರುತ್ತದೆ. ಈ ಅನುಸರಣೆಯು ಜಿಎಸ್ ಟಿ ಜೊತೆ ಸುಲಭವಾಗಿ ಹೊಂದಿಕೊಳ್ಳುತ್ತದೆ ಮತ್ತು ತಂತ್ರಜ್ಞಾನದ ಬೆಂಬಲವನ್ನು ಪಡೆದುಕೊಳ್ಳುತ್ತದೆ ಹಾಗೂ ಹಲವು ಪರೋಕ್ಷ ತೆರಿಗೆಯನ್ನು ತೆಗೆದುಹಾಕುತ್ತದೆ ಎನ್ನುವುದು ಶುಭಸುದ್ದಿಯಾಗಿದೆ. ತಮ್ಮ ಆದಾಯಪತ್ರ ಸಲ್ಲಿಕೆ ವ್ಯಾಪಾರಿಗಳಿಂದ ಸರಕಾರಕ್ಕೆ ಉಂಟಾಗುವ ಕೊರತೆಯನ್ನು ಜಿಎಸ್‌ಟಿ ಹೋಗಲಾಡಿಸುತ್ತದೆ.
 • ಶಾಖೆ/ಪೂರೈಕೆ ಜಾಲದ ಮರು ನಿರ್ಮಾಣ: ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ತೆರಿಗೆ ಇದ್ದುದ್ದರಿಂದ ವ್ಯವಹಾರಗಳು ಹಲವು ರಾಜ್ಯಗಳಲ್ಲಿ ಭಿನ್ನಭಿನ್ನವಾಗಿರುತ್ತವೆ. ಆದರೆ, ಜಿಎಸ್‌ಟಿ ಯಿಂದಾಗಿ ಇವೆಲ್ಲ ತಮ್ಮ ಶಾಖೆ/ಪೂರೈಕೆ ಜಾಲವನ್ನು ಮರು ನಿರ್ಮಿಸಬೇಕಿದೆ. ಇನ್ಮುಂದೆ ಇವುಗಳು ರಾಜ್ಯಾವಾರು ಯೋಚಿಸದೆ ಏಕೀಕೃತವಾಗಿ ಯೋಜಿಸಬಹುದಾಗಿದೆ.
 • ದರ ಕಾರ್ಯತಂತ್ರ: ಒಂದಕ್ಕೊಂದುಸೇರಿಸುವಪರಿಣಾಮವನ್ನು ತೆಗೆದುಹಾಕುವುದರಿಂದ ಉತ್ಪನ್ನಗಳ ದರವು ಪ್ರಾಯಶಃ ಕಡಿಮೆಯಾಗುವ ಸಾಧ್ಯತೆಯಿದೆ. ಇದರಿಂದ ವ್ಯವಹಾರಗಳು ಹೊಸ ವಿಧಾನಕ್ಕಾಗಿ ಖರೀದಿ ಮತ್ತು ಮಾರಾಟವನ್ನು ಮರು ಧ್ರುವೀಕರಣ ಮಾಡಬೇಕಾದ ಅಗತ್ಯವಿರುತ್ತದೆ.
 • ಗುತ್ತಿಗೆಗಳ ಮರು ಚೌಕಾಶಿ: ಜಿಇಟಿ ದರಕ್ಕೆ ಅನುಗುಣವಾಗಿ ಕೆಲಸದ ಗುತ್ತಿಗೆಗಳು ಮತ್ತು ಇತರೆ ಹಲವು ವರ್ಷಗಳ ಪೂರೈಕೆ ಒಪ್ಪಂದಗಳಿಗೆ ಮರು ಚೌಕಾಶಿ ಮಾಡುವ ಅಗತ್ಯವಿರುತ್ತದೆ. ತೆರಿಗೆಯನ್ನು ಮುಂಗಡವಾಗಿ ಪಾವತಿಸಬೇಕಿದ್ದರೆ, ಇಂತಹ ಪರಿಸ್ಥಿತಿಯನ್ನು ಮರು ಅವಲೋಕಿಸಬೇಕಾಗುತ್ತದೆ.  

ಮುಂದೆ ಏನು?

ರಾಜ್ಯ ಸಭೆಯಲ್ಲಿ 122ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರಕಿರುವುದರಿಂದ, ತಕ್ಷಣ ತೆಗೆದುಕೊಳ್ಳುವ ಮುಂದಿನ ಪ್ರಕ್ರಿಯೆಗಳು ಈ ರೀತಿ ಇವೆ.

 • ಇದು ಸಾಂವಿಧಾನಿಕ ಮಸೂದೆಯಾಗಿರುವ ಕಾರಣ, ಕನಿಷ್ಠ 15 ರಾಜ್ಯ ಸಂಪುಟಗಳು ಅನುಮೋದಿಸುವ ಅಗತ್ಯವಿರುತ್ತದೆ.
 • ಈ ಮಸೂದೆಗೆ ರಾಷ್ಟ್ರಪತಿಗಳ ಒಪ್ಪಿಗೆಯ ಅಗತ್ಯವಿದೆ ಮತ್ತು ಅನುಮತಿ ಕೋರಿದ 60 ದಿನಗಳೊಳಗೆ ಜಿಎಸ್‍ಟಿ ಸಮಿತಿ ರಚಿಸುವ ಅಗತ್ಯವಿರುತ್ತದೆ.
 • ಸಿಜಿಎಸ್‍ಟಿ ಮತ್ತು ಐಜಿಎಸ್‍ಟಿ ಮಸೂದೆಯನ್ನು(ಇದನ್ನು ಹಣದ ಮಸೂದೆ ಎಂದೂ ಕರೆಯಬಹುದು) ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮತ್ತು 29 ರಾಜ್ಯಗಳ ವಿಧಾನಸಭೆಯಲ್ಲಿ ಎಸ್‍ಜಿಎಸ್‍ಟಿ ಬಿಲ್ ಅಂಕಿತ ಹಾಕುವುದು..
 • ಜನವರಿ 2017ರಲ್ಲಿ ಜಿಎಸ್‍ಟಿ ಜಾಲವನ್ನು ಹೊರತರಲಾಗುತ್ತದೆ.

ಈ ಕಾರ್ಯ ನೋಡಲು ಕಠಿಣವಾಗಿ ಕಂಡರೂ, ಸಾಧಿಸಬಹುದಾದದ್ದು ಆಗಿದೆ.

ನಮಗೆಲ್ಲರಿಗೂ ಮುಂದೆ ಏನು?

ಏಪ್ರಿಲ್ 1, 2017ರಿಂದ ಜಿಎಸ್‍ಟಿ ( ಸರಕು ಮತ್ತು ಸೇವಾ ತೆರಿಗೆ)ಯನ್ನು ಆರಂಭಿಸುವ ನಿರೀಕ್ಷೆಯಿದ್ದು, ತೆರಿಗೆ ಪಾವತಿದಾರರು ಇದಕ್ಕಾಗಿ ಹಲವು ಪ್ರಾಥಮಿಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಪರಿವರ್ತನೆಗೆ ಉತ್ತಮ ಆರಂಭಿಕ ಸಮತೋಲನದ ಅಗತ್ಯವಿದೆ.

 1. ಈಗ ಅಸ್ತಿತ್ವದಲ್ಲಿರುವುದರಿಂದ (ಕ್ಯಾನ್ ವ್ಯಾಟ್, ವ್ಯಾಟ್) ಆದಾನ ತೆರಿಗೆ ಪಾವತಿ (ಸಲ್ಲಿಕೆ/ಆದಾನ/ ಬಂಡವಾಳ ಸರಕುಗಳು)ಯನ್ನು ಜಿಎಸ್‍ಟಿ (ಸಿಜಿಎಸ್‍ಟಿ, ಎಸ್‍ಜಿಎಸ್‍ಟಿ)ಗೆ ಮುಂದುವರೆಸಲಾಗುತ್ತದೆ. ಇದಕ್ಕೆ ಪುಸ್ತಕಗಳ ನವೀಕರಣ ಕಡ್ಡಾಯವಾಗಿರುತ್ತದೆ. ಇದು ಮೌಲ್ಯಮಾಪನದ ಸಮಯದಲ್ಲಿ ನೆರವಾಗುತ್ತದೆ. ಈ ಕುರಿತು ಸ್ಪಷ್ಟ ಹಾದಿ/ ಸ್ಪಷ್ಟತೆ ಇಲ್ಲದ ವ್ಯವಹಾರಗಳು ಭವಿಷ್ಯದಲ್ಲಿ ಹಣಕಾಸಿಗೆ ಸಂಬಂಧಿಸಿದ ಮತ್ತು ಹಣಕಾಸಿಗೆ ಸಂಬಂಧಿಸಿರದೆ ಇರದ ಹಲವು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.
 2. ಲೆಕ್ಕಪತ್ರಪರಿಶೋಧಕರು ಸರಕುಗಳ ಮಾಹಿತಿಯನ್ನು ತುಂಬಲು ಇತ್ತೀಚಿನ ಮಾಹಿತಿಯನ್ನು ತಿಳಿದಿರಬೇಕು., ಹೀಗಿದ್ದರೆ ಮಾತ್ರ ಜಿಎಸ್‍ಟಿ ಸರಾಗವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಎಂದಿನಂತೆ, ಟ್ಯಾಲಿಯು ಶಾಸನಬದ್ಧ ಬದಲಾವಣೆಗಳನ್ನು ಅಳವಡಿಸಿಕೊಂಡು ವ್ಯವಹಾರಗಳಿಗೆ ನೆರವು ನೀಡುವುದನ್ನು ಮುಂದುವರೆಸಲಿದೆ. ಟ್ಯಾಲಿಯಲ್ಲಿ ಅತ್ಯದ್ಭುತವಾಗಿ ಸರಳೀಕೃತ ಪರಿಹಾರ ಇರುತ್ತದೆ. ಜಿಎಸ್‍ಟಿಗೆ ಅಗತ್ಯವಿರುವ ಸರಕುಗಳನ್ನು ಸುಲಭವಾಗಿ ನಿರ್ವಹಿಸಲು ಮತ್ತು ತಕ್ಷಣ ವಲಸೆ ಬರಲು ಇಆರ್‍ಪಿ 9 ನೆರವಾಗಲಿದೆ.

ಈ ವರದಿಯನ್ನು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಪರಿಶೀಲಿಸಿ ತಯಾರಿಸಲಾಗಿದೆ. ಹೀಗಿದ್ದರೂ, ನಿಜವಾದ ಜಿಎಸ್‍ಟಿ ದರ ಮತ್ತು ವ್ಯವಹಾರ ಪ್ರಕ್ರಿಯೆಯು ಜಿಎಸ್‍ಟಿ ಆರಂಭವಾದ ಸಮಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ಹೊಂದಿರುವ ನಿರೀಕ್ಷೆಯಿದೆ.

Are you GST ready yet?

Get ready for GST with Tally.ERP 9 Release 6

325,838 total views, 81 views today

Santosh HR

Author: Santosh HR

Product leader and GST expert with keen focus on the ever changing indirect taxation landscape of India.